Puttakkana Makkalu:TRPಯಲ್ಲಿ 'ಪುಟ್ಟಕ್ಕನ ಮಕ್ಕಳು' ಮತ್ತೆ ಟಾಪ್; ಕೈ ಹಿಡಿದ ಸಹನಾ ದಾಂಪತ್ಯ ಕಲಹ!
ಕನ್ನಡ ಕಿರುತೆರೆಯಲ್ಲಿ ಧಾರಾವಾಹಿಗಳಿಗೇನು ಕಮ್ಮಿಯಿಲ್ಲ. ಕನ್ನಡದಲ್ಲಿರುವ ಪ್ರಮುಖ ಮನರಂಜನಾ ವಾಹಿನಿಗಳು ಕಾಂಪಿಟೇಷನ್‌ಗೆ ಬಿದ್ದು ಧಾರಾವಾಹಿಗಳನ್ನು ಪ್ರಸಾರ ಮಾಡುತ್ತಿವೆ. ರಿಯಾಲಿಟಿ ಶೋಗಳಿಗಿಂತ ಧಾರಾವಾಹಿಗಳು ಹೆಚ್ಚು ಸಮಯವನ್ನು ಆಕ್ರಮಿಸಿಕೊಂಡಿವೆ. ಹೀಗಾಗಿ ಪ್ರತಿಯೊಂದು ಚಾನೆಲ್‌ನಲ್ಲೂ ಸೀರಿಯಲ್‌ಗಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗುತ್ತಿದೆ.
ಕನ್ನಡ ಪ್ರಮುಖ ಮನರಂಜನಾ ವಾಹಿನಿಗಳು ಪೈಪೋಟಿಗೆ ಬಿದ್ದು ಧಾರಾವಾಹಿಗಳನ್ನು ನಿರ್ಮಾಣ ಮಾಡುತ್ತಿವೆ. ಪ್ರತಿ ವಾರ ಬರುವ ಟಿಆರ್‌ಪಿ ಲಿಸ್ಟ್‌ನಲ್ಲಿ ನಂಬರ್ 1 ಸ್ಥಾನಕ್ಕೆ ಬರಲು ಹರಸಾಹಸ ಮಾಡುತ್ತಲೇ ಇರುತ್ತವೆ. ಮೇ 3ರಂದು ಕಳೆದ ವಾರದ ಟಿಆರ್‌ಪಿ ಲಿಸ್ಟ್ ಹೊರಬಿದ್ದಿದೆ. ಇದರಲ್ಲಿ ಯಾವ್ಯಾವ ಧಾರಾವಾಹಿಗಳು ಯಾವ್ಯಾವ ಸ್ಥಾನದಲ್ಲಿದೆ ಅನ್ನೋದನ್ನು ತಿಳಿಯಲು ಮುಂದೆ ಓದಿ.

ಮತ್ತೆ ಟಾಪ್ ಲಿಸ್ಟ್‌ನಲ್ಲಿ 'ಪುಟ್ಟಕ್ಕನ ಮಕ್ಕಳು'
ಜೀ ಕನ್ನಡದ ಜನಪ್ರಿಯ ಧಾರಾವಾಹಿ 'ಪುಟ್ಟಕ್ಕನ ಮಕ್ಕಳು' ಟಿಆರ್‌ಪಿ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ಜೀ ಕನ್ನಡದಲ್ಲಿ ಹೊಸ ಧಾರಾವಾಹಿ 'ಲಕ್ಷ್ಮಿ ನಿವಾಸ' ಆರಂಭ ಆದ ಕೆಲವು ದಿನಗಳಲ್ಲೇ 'ಪುಟ್ಟಕ್ಕನ ಮಕ್ಕಳು' ನಂಬರ್ ಒನ್ ಸ್ಥಾನದಿಂದ ಕೆಳಗೆ ಇಳಿದಿತ್ತು. ಆದ್ರೀಗ ಮತ್ತೆ ಟಾಪ್ ಸ್ಥಾನವನ್ನು ಅಲಂಕರಿಸಿದೆ. ಕಳೆದ ಕೆಲವು ದಿನಗಳಿಂದ ಸಹನಾ ದಾಂಪತ್ಯ ಕಲಹ ಪ್ರಸಾರ ಆಗುತ್ತಿದೆ.
ಸಹನಾ ದಾಂಪತ್ಯ ಕಲಹ ಹೈಲೈಟ್
'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಸದ್ಯ ಪುಟ್ಟಕ್ಕನ ಮಗಳು ಸಹನಾ ದಾಂಪತ್ಯ ಕಲಹ ಪ್ರಸಾರ ಆಗುತ್ತಿದೆ. ಸಹನಾ ಹಾಗೂ ಮುರಳಿ ನಡುವಿನ ವೈವಾಹಿಕ ಸಮಸ್ಯೆ ದಿನಕ್ಕೊಂದು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಹೀಗಾಗಿ ಟಿಆರ್‌ಪಿನಲ್ಲೂ ಏರಿಕೆಯಾಗಿದ್ದು, ಈ ವಾರ 7.6 ಅಂಕಗಳು ಬಂದಿವೆ. ಇದರ ಹಿಂದೆ 'ಲಕ್ಷ್ಮಿ ನಿವಾಸ' 7.5, ಸೀತಾರಾಮ 6.9 ಅಂಕಗಳನ್ನು ಪಡೆದು ಟಾಪ್ 3 ಸ್ಥಾನದಲ್ಲಿವೆ.
ಕಲರ್ಸ್‌ನಲ್ಲಿ 'ರಾಮಾಚಾರಿ' ಟಾಪ್
ಇನ್ನೂ ಕಲರ್ಸ್ ಕನ್ನಡದಲ್ಲೂ ಕಳೆದ ಕೆಲವು ವಾರಗಳಿಂದ ಸ್ಥಾನ ಪಲ್ಲಟ ಆಗಿದೆ. 'ರಾಮಾಚಾರಿ' ಧಾರಾವಾಹಿ ಕಲರ್ಸ್ ಕನ್ನಡದ ಟಾಪ್ ಸ್ಥಾನದಲ್ಲಿದೆ. 4.6 ಅಂಕಗಳೊಂದಿಗೆ ನಂಬರ್ ಒನ್ ಸ್ಥಾನದಲ್ಲಿದೆ. ಆನಂತರ 'ಭಾಗ್ಯಲಕ್ಷ್ಮಿ' ಧಾರಾವಾಹಿ 4.3 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಹಾಗೇ 'ಲಕ್ಷ್ಮಿ ಬಾರಮ್ಮ' 3.6 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

ಸ್ಟಾರ್ ಸುವರ್ಣದಲ್ಲಿ ಟಾಪ್ ಸೀರಿಯಲ್ ಯಾವುದು?
ಸ್ಟಾರ್ ಸುವರ್ಣ ಕೂಡ ವಿಭಿನ್ನ ಧಾರಾವಾಹಿಗಳನ್ನು ಪ್ರಸಾರ ಮಾಡುತ್ತಿದೆ. ಇದರಲ್ಲಿ ಪೌರಾಣಿಕ ಧಾರಾವಾಹಿಗಳಿಗೆ ಹೆಚ್ಚು ಜನಮನ್ನಣೆ ಸಿಕ್ಕಿದೆ. 'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ : ಮಹಾ ಸಂಚಿಕೆಗಳ ಮಹಾವಾರ'ಕ್ಕೆ ಉತ್ತರ ರೆಸ್ಪಾನ್ಸ್ ಸಿಕ್ಕಿದ್ದು, 3.7 ಅಂಕಗಳೊಂದಿಗೆ ಟಾಪ್ ಸ್ಥಾನದಲ್ಲಿದೆ. 'ಯಡಿಯೂರು ಸಿದ್ಧಲಿಂಗೇಶ್ವರ' 3.5 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. 'ನೀನಾದೆ ನಾ' 3 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
ಟಾಪ್ 3 ಚಾನೆಲ್‌ಗಳು ಟಿಆರ್‌ಪಿ ಎಷ್ಟು?
ಕನ್ನಡ ಟಾಪ್ 3 ಮನರಂಜನಾ ವಾಹಿನಿಗಳಲ್ಲಿ ಜೀ ಕನ್ನಡ, ಕಲರ್ಸ್ ಕನ್ನಡ ಹಾಗೂ ಸ್ಟಾರ್ ಸುವರ್ಣವಿದೆ. ಎಂದಿನಂತೆ ಮೂರೂ ವಾಹಿನಿಗಳು ಕಾಂಪಿಟೇಷನ್‌ಗೆ ಬಿದ್ದು, ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳನ್ನು ಪ್ರಸಾರ ಮಾಡುತ್ತಿದೆ. 629 ಅಂಕಗಳೊಂದಿಗೆ ಜೀ ಕನ್ನಡ ನಂ 1 ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಕಲರ್ಸ್ ಕನ್ನಡ ಇದ್ದು, 371 ಅಂಕ ಬಂದಿದೆ. ಅದೇ ಸ್ಟಾರ್ ಸುವರ್ಣ 310 ಅಂಕಗಳನ್ನು ಪಡೆದುಕೊಂಡಿದೆ.


Click it and Unblock the Notifications











