ಅಬ್ಬಬ್ಬಾ ಲಾಟ್ರಿ..'ಪುಟ್ಟಕ್ಕನ ಮಕ್ಕಳು' ಶಾನೇ ಟಾಪ್‌ನಲ್ಲಿ ಅವ್ರೆ: ಈ ವಾರ ಯಾವ್ಯಾವ ಸೀರಿಯಲ್ TRP ಹೇಗಿದೆ?

ಮತ್ತೊಂದು ಗುರುವಾರ ಬಂದಿದೆ. ಕಿರುತೆರೆ ಲೋಕದಲ್ಲಿ ಧಾರಾವಾಹಿಗಳು, ರಿಯಾಲಿಟಿ ಶೋಗಳು TRP ಮಾಕ್ಸ್‌ಶೀಟ್ ಬಂದಿದೆ. ಕಳೆದ ವಾರಕ್ಕೂ ಈ ವಾರಕ್ಕೂ ಯಾವ್ಯಾವ ಸೀರಿಯಲ್ ಟಿಆರ್‌ಪಿ ಪಟ್ಟಿಯಲ್ಲಿ ಯಾವ್ಯಾವ ಸ್ಥಾನದಲ್ಲಿದೆ? ರಿಯಾಲಿಟಿ ಶೋಗಳ ಕಥೆಯೇನು? ಅನ್ನೋದು ಗೊತ್ತಾಗೋ ಸಮಯ.

ಮನರಂಜನಾ ವಾಹಿನಿಗಳು ಪ್ರತಿವಾರವೂ ತಮ್ಮದೇ ಧಾರಾವಾಹಿಗಳು, ರಿಯಾಲಿಟಿ ಶೋಗಳು ಟಾಪ್‌ನಲ್ಲಿ ಇರಬೇಕು ಅಂತ ಪೈಪೋಟಿಗೆ ಬೀಳುತ್ತವೆ. ಆದರೆ, ರಿಮೋಟ್ ಮಾತ್ರ ಕಿರುತೆರೆ ವೀಕ್ಷಕರ ಕೈಯಲ್ಲಿ ಇರುತ್ತೆ. ಅವರು ಯಾವುದನ್ನು ಇಷ್ಟ ಪಡುತ್ತಾರೋ ಅದೇ ಟಾಪ್ ಸ್ಥಾನದಲ್ಲಿ ಇರುತ್ತೆ.

Kannada Serial TRP Ratings

ಈ ವಾರ (ಜೂನ್ 29)ರಂದೂ ಕೂಡ TRP ಪಟ್ಟಿ ರಿಲೀಸ್ ಆಗಿದೆ. ಜೀ ಕನ್ನಡ, ಕಲರ್ಸ್ ಕನ್ನಡ, ಸ್ಟಾರ್ ಸುವರ್ಣ ಮಧ್ಯೆ ಪ್ರತಿವಾರದಂತೆ TRPಗಾಗಿ ಸಿಕ್ಕಾಪಟ್ಟೆ ಫೈಟ್ ನಡೆದಿದೆ. ಈ ವಾರದಲ್ಲಿ ಜೀ ಕನ್ನಡಕ್ಕೆ ಕಲರ್ಸ್ ಕನ್ನಡ, ಸ್ಟಾರ್ ಸುವರ್ಣದ ಧಾರಾವಾಹಿಗಳು ಪ್ರಬಲ ಪೈಪೋಟಿ ನೀಡಿವೆ. ಹಾಗಿದ್ದರೆ, ಯಾವ್ಯಾವ ಚಾನೆಲ್‌ನಲ್ಲಿ ಯಾವ್ಯಾವ ಧಾರಾವಾಹಿ ಟಾಪ್‌ನಲ್ಲಿದೆ? ಅನ್ನೋ ಡಿಟೈಲ್ಸ್ ಇಲ್ಲಿದೆ.

'ಪುಟ್ಟಕ್ಕನ ಮಕ್ಕಳು'ಗೆ ಬಂಪರ್ ಲಾಟ್ರಿ

ಪ್ರತಿ ವಾರದಂತೆ ಈ ವಾರವೂ ಕೂಡ ಮನರಂಜನಾ ವಾಹಿನಿಯಲ್ಲಿ ಜೀ ಕನ್ನಡ ನಂಬರ್ ಒನ್ ಸ್ಥಾನದಲ್ಲಿದೆ. ಇದರಲ್ಲೇ ಪ್ರಸಾರ ಆಗುವ 'ಪುಟ್ಟಕ್ಕನ ಮಕ್ಕಳು' ಕೂಡ ಟಾಪ್‌ನಲ್ಲಿದೆ. ಕಳೆದ ವಾರ ಕೂಡ ಇದೇ ಧಾರಾವಾಹಿ ಎಲ್ಲದಕ್ಕಿಂತ ಹೆಚ್ಚು ಟಿಆರ್‌ಪಿ ರೇಟಿಂಗ್ ಪಡೆದಿತ್ತು.

Kannada Serial TRP Ratings

ಉಮಾಶ್ರೀ, ಸಂಜನಾ ಬುರ್ಲಿ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ 'ಪುಟ್ಟಕ್ಕನ ಮಕ್ಕಳು' ಕಳೆದ ವಾರಕ್ಕಿಂತ ಹೆಚ್ಚು ಟಿಆರ್‌ಪಿ ಗಳಿಸಿದೆ. ಕಳೆದ ವಾರ 9.8 ರೇಟಿಂಗ್ ಸಿಕ್ಕಿದ್ರೆ, ಈ ವಾರ 10.8 ಟಿಆರ್‌ಪಿ ಅಂಕ ಪಡೆದುಕೊಂಡಿದೆ. ಇದರ ಹಿಂದೆನೇ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್', 'ಗಟ್ಟಿಮೇಳ' ಧಾರಾವಾಹಿಗಳು ಇವೆ. ಅಮೃತಧಾರೆ 4ನೇ ಸ್ಥಾನದಲ್ಲಿದೆ.

ಕಲರ್ಸ್ ಕನ್ನಡದಲ್ಲಿ ಅಕ್ಕನನ್ನು ಹಿಂದಿಕ್ಕಿದ ತಂಗಿ

ಕಲರ್ಸ್ ಕನ್ನಡದಲ್ಲಿ ಎರಡು ಸೂಪರ್‌ ಹಿಟ್ ಧಾರಾವಾಹಿಗಳು ಪ್ರತಿವಾರ ಪೈಪೋಟಿ ನೀಡುತ್ತವೆ. ಒಂದು 'ಭಾಗ್ಯಲಕ್ಷ್ಮಿ'. ಇನ್ನೊಂದು 'ಲಕ್ಷ್ಮಿ ಬಾರಮ್ಮ'. ಈ ಎರಡೂ ಧಾರಾವಾಹಿಗಳ ಮಧ್ಯೆ ಸಿಕ್ಕಾಪಟ್ಟೆ ಕಾಂಪಿಟೇಷನ್ ಇದೆ. ಕಳೆದ ವಾರ 5.6 ಟಿಆರ್‌ಪಿಯೊಂದಿಗೆ ಭಾಗ್ಯಲಕ್ಷ್ಮಿ ಟಾಪ್‌ನಲ್ಲಿತ್ತು. ಆದರೆ, ಈ ವಾರ ಉಲ್ಟಾಗಿದೆ.

Kannada Serial TRP Ratings

'ಭಾಗ್ಯಲಕ್ಷ್ಮಿ'ಯನ್ನು ಹಿಂದಿಕ್ಕಿ 'ಲಕ್ಷ್ಮಿ ಬಾರಮ್ಮ' ಧಾರಾವಾಹಿ ಟಾಪ್ ಸ್ಥಾನಕ್ಕೇರಿದೆ. ಈ ವಾರ 'ಲಕ್ಷ್ಮಿ ಬಾರಮ್ಮ'ಕ್ಕೆ 5.6 ಟಿಆರ್‌ಪಿ ಹಾಗೂ ಭಾಗ್ಯಲಕ್ಷ್ಮಿಗೆ 5.2 ಸಿಕ್ಕಿದೆ. ಇದರ ಹಿಂದೆ ಫ್ಯಾಮಿಲಿ ಗ್ಯಾಂಗ್‌ಸ್ಟರ್ 5.1 ಟಿಆರ್‌ಪಿ ಹಾಗೂ 'ಕೆಂಡ ಸಂಪಿಗೆ' 4.3 ಟಿಆರ್‌ಪಿ ಇದೆ.

ಸುವರ್ಣದಲ್ಲಿ 'ನಮ್ಮ ಲಚ್ಚಿ'ಯೇ ಸ್ಟಾರ್

ಸ್ಟಾರ್ ಸುವರ್ಣದಲ್ಲಿ ಫ್ಯಾಮಿಲಿ ಧಾರಾವಾಹಿಗಳು ಅಷ್ಟಾಗಿ ಸದ್ದು ಮಾಡುತ್ತಿರಲಿಲ್ಲ. ಭಕ್ತಪ್ರಧಾನ ಧಾರಾವಾಹಿಗಳೇ ನಂಬರ್ 1 ಸ್ಥಾನದಲ್ಲಿ ಇರುತ್ತಿದ್ದವು. ಆದ್ರೀಗ 'ನಮ್ಮ ಲಚ್ಚಿ' ಧಾರಾವಾಹಿ ಆ ದಾಖಲೆಯನ್ನು ಬ್ರೇಕ್ ಮಾಡಿದೆ. ಕಳೆದ ಕೆಲವು ವಾರಗಳಿಂದ ಸ್ಟಾರ್ ಸುವರ್ಣದಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ಹಾಗೇ ಈ ವಾರ 'ನಮ್ಮ ಲಚ್ಚಿ' 5.8 ಟಿಆರ್‌ಪಿ ಬಂದಿದೆ.

'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ' ಹಾಗೂ ಹೊಸ ಧಾರಾವಾಹಿ 'ನೀನಾದೆ ನಾ' ಎರಡಕ್ಕೂ 5.0 ಟಿಆರ್‌ಪಿ ಬಂದಿದೆ. ಇದರ ಹಿಂದೆ 'ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ' 4.4 ಟಿಆರ್‌ಪಿ ಪಡೆದುಕೊಂಡಿದೆ. ಹಾಗಿದ್ರೆ ಟಾಪ್ 10 ಸ್ಥಾನದಲ್ಲಿರೋ ಟಿಆರ್‌ಪಿಗಳ ಪಟ್ಟಿ ಇಲ್ಲಿದೆ.

ಈ ವಾರದ ಟಾಪ್ 10 ಧಾರಾವಾಹಿ/ ರಿಯಾಲಿಟಿ ಶೋ

ಕ್ರಮ ಸಂಖ್ಯೆ ಧಾರಾವಾಹಿ/ ರಿಯಾಲಿಟಿ ಶೋ ಟಿಆರ್‌ಪಿ
1 ಪುಟ್ಟಕ್ಕನ ಮಕ್ಕಳು 10.8
2 ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ 8.2
3 ಗಟ್ಟಿಮೇಳ 7.2
4 ಅಮೃತಧಾರೆ 6.1
5 ಶ್ರೀರಸ್ತು ಶುಭಮಸ್ತು 6
6 ನಮ್ಮ ಲಚ್ಚಿ 5.8
7 ಸತ್ಯ 5.7
8 ಲಕ್ಷ್ಮಿ ಬಾರಮ್ಮ 5.6
9 ಭಾಗ್ಯಲಕ್ಷ್ಮಿ 5.2
10 ಫ್ಯಾಮಿಲಿ ಗ್ಯಾಂಗ್‌ಸ್ಟರ್ 5.1

More from Filmibeat

English summary
Kannada Serial TRP Ratings for the Week (June 19th- 25th June 2023): Zee Kannada's Puttakkana Makkalu at the top position with 10.8 Rating
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X