Kannada Serial TRP List: 'ಪುಟ್ಟಕ್ಕನ ಮಕ್ಕಳು' ಬೆಂಬಲಕ್ಕೆ ನಿಂತ ವೀಕ್ಷಕರು.. ಈ ವಾರದ ಟಾಪ್ 10 ಸೀರಿಯರ್‌ಗಳ್ಯಾವುವು?
ಗುರುವಾರ ಬಂದರೆ ಯಾವ್ಯಾವ ಸೀರಿಯಲ್‌ಗೆ ಎಷ್ಟೆಷ್ಟು ಟಿಆರ್‌ಪಿ ಬಂದಿದೆ ಅನ್ನೋ ಲೆಕ್ಕಾಚಾರ ಶುರುವಾಗುತ್ತೆ. ಕಿರುತೆರೆ ಲೋಕದಲ್ಲಿ ಧಾರಾವಾಹಿಗಳು, ರಿಯಾಲಿಟಿ ಶೋಗಳು, ಸಂದರ್ಶನಗಳಿಗೆ ಪ್ರತಿವಾರ ಪೈಪೋಟಿ ನಡೆಯುತ್ತೆ. ಈ ಟಿಆರ್‌ಪಿ ಯುದ್ಧದಲ್ಲಿ ಗೆದ್ದವರು ಯಾರು? ಅನ್ನೋದಕ್ಕೆ ಉತ್ತರ ಪ್ರತಿ ಗುರುವಾರ ಸಿಗುತ್ತೆ.
ಇಂದು ಗುರುವಾರ (ಜುಲೈ 13) ಕಳೆದ ವಾರದ ಟಿಆರ್‌ಪಿ ಪಟ್ಟಿ ರಿಲೀಸ್ ಆಗಿದೆ. ಜುಲೈ 3ನೇ ತಾರೀಕಿನಿಂದ ಜುಲೈ 9ರವರೆಗೆ ಯಾವ್ಯಾವ ಧಾರಾವಾಹಿಯನ್ನು ಜನರು ಹೆಚ್ಚು ವೀಕ್ಷಿಸಿದ್ದಾರೆ? ಯಾವ ರಿಯಾಲಿಟಿ ಶೋ ಎಷ್ಟು ಟಿಆರ್‌ಪಿ ಬಂದಿದೆ? ಅನ್ನೋದು ಹೊರಬಿದ್ದಿದೆ.

ಕನ್ನಡದ ಎಂಟರ್‌ಟೈನ್ಮೆಂಟ್ ಚಾನೆಲ್‌ಗಳಲ್ಲಿ ಧಾರಾವಾಹಿಗಳನ್ನು ಹೆಚ್ಚು ಪ್ರಸಾರ ಮಾಡುತ್ತವೆ. ಇದಕ್ಕೆ ವೀಕ್ಷಕರ ಸಂಖ್ಯೆ ಕೂಡ ದೊಡ್ಡದೇ ಇದೆ. ಇದರ ಜೊತೆನೇ ರಿಯಾಲಿಟಿ ಶೋ ಕೂಡ ಪೈಪೋಟಿ ಮಾಡುತ್ತವೆ. ಹಾಗಿದ್ದರೆ ಈ ವಾರ ಯಾವ್ಯಾವ ಧಾರಾವಾಹಿಗೆ ಎಷ್ಟೆಷ್ಟು ರೇಟಿಂಗ್ ಬಂದಿದೆ? ಟಾಪ್ 10ನಲ್ಲಿರುವ ಯಾವ್ಯಾವ ಚಾನೆಲ್‌ನ ಧಾರಾವಾಹಿಗಳಿವೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಈ ವಾರನೂ ಪುಟ್ಟಕ್ಕನ ಮಕ್ಕಳದ್ದೇ ದರ್ಬಾರ್
ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಹಲವು ವಾರಗಳಿಂದ ವೀಕ್ಷಕರ ಅಚ್ಚು ಮೆಚ್ಚು ಎನಿಸಿಕೊಂಡಿದೆ. ಕಳೆದ ವಾರ ಕೂಡ ಈ ಧಾರಾವಾಹಿ ನಂಬರ್ 1 ಸ್ಥಾನದಲ್ಲಿತ್ತು. ಕಳೆದ ವಾರ 10.8 ಟಿಆರ್‌ಪಿ ರೇಟಿಂಗ್ ಬಂದಿತ್ತು. ಈ ವಾರ ಮತ್ತೆ ಏರಿಕೆಯಾಗಿದ್ದು, 11.5 ಟಿಆರ್‌ಪಿ ಗಿಟ್ಟಿಸಿಕೊಂಡಿದೆ.
ಸದ್ಯ ಈ ಧಾರಾವಾಹಿಯಲ್ಲಿ ಸ್ನೇಹ ಹಾಗೂ ಕಂಠಿಯ ಎಪಿಸೋಡ್ ನಡೆಯುತ್ತಿದೆ. ಇದು ಪ್ರೇಕ್ಷಕರನ್ನು ಸೆಳೆಯುತ್ತಿದೆ. ಇನ್ನು 'ಪುಟ್ಟಕ್ಕನ ಮಕ್ಕಳು' ಜೊತೆಗೆ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್', 'ಗಟ್ಟಿಮೇಳ', 'ಅಮೃತಧಾರೆ'ಯಂತಹ ಧಾರಾವಾಹಿಗಳು ಪ್ರೇಕ್ಷಕರನ್ನು ಸೆಳೆಯುತ್ತಿವೆ. ರಾಜೇಶ್ ನಟರಂಗ ಹಾಗೂ ಛಾಯಾ ಸಿಂಗ್ ನಟಿಸುತ್ತಿರುವ 'ಅಮೃತಧಾರೆ' ಕಳೆದ ವಾರದಂತೆ ನಾಲ್ಕನೇ ಸ್ಥಾನವನ್ನು ಕಾಯ್ದುಕೊಂಡಿದೆ.
ಕಲರ್ಸ್ ಕನ್ನಡದಲ್ಲಿ ಈ ವಾರ ಅಕ್ಕನೇ ಟಾಪ್
ಕಲರ್ಸ್ ಕನ್ನಡದಲ್ಲಿ ಪ್ರತಿವಾರ ವಿಚಿತ್ರವಾದ ಕಾಂಪಿಟೇಷನ್ ನಡೆಯುತ್ತಿರುತ್ತೆ. 'ಭಾಗ್ಯಲಕ್ಷ್ಮಿ' ಹಾಗೂ 'ಲಕ್ಷ್ಮೀ ಬಾರಮ್ಮ' ಎರಡು ಧಾರಾವಾಹಿಗಳ ನಡುವೆ ಕಾಂಪಿಟೇಷನ್ ಇರುತ್ತೆ. ಕಳೆದ ವಾರ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಗೆ 5.6 ಟಿಆರ್‌ಪಿ ಇತ್ತು. ಅದೇ ಈ ವಾರ 5.3 ರೇಟಿಂಗ್ ಮೂಲಕ ಎರಡನೇ ಸ್ಥಾನಕ್ಕೆ ಕುಸಿದಿದೆ. 'ಭಾಗ್ಯಲಕ್ಷ್ಮಿ' 5.5 ಟಿಆರ್‌ಪಿ ಮೂಲಕ ಕಲರ್ಸ್ ಕನ್ನಡದ ನಂಬರ್ ಧಾರಾವಾಹಿ ಎನಿಸಿಕೊಂಡಿದೆ.
ಈ ಎರಡು ಧಾರಾವಾಹಿಗಳ ಜೊತೆಗೆ 'ಗೀತಾ', 'ಕೆಂಡಸಂಪಿಗೆ', 'ರಾಮಾಚಾರಿ' ಅಂತಹ ಧಾರಾವಾಹಿಗಳು ಕೂಡ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಆದರೆ, ಕಲರ್ಸ್ ಕನ್ನಡದಲ್ಲಿ ಈ ವಾರ 'ಲಕ್ಷ್ಮಿ ಬಾರಮ್ಮ'ಗಿಂತ ಭಾಗ್ಯಲಕ್ಷ್ಮಿ ಧಾರವಾಹಿಯನ್ನೇ ಹೆಚ್ಚು ಮಂದಿ ನೋಡಿದ್ದಾರೆ.

2ನೇ ಸ್ಥಾನಕ್ಕೆ ಕುಸಿದ 'ನಮ್ಮ ಲಚ್ಚಿ'
ಸ್ಟಾರ್ ಸುವರ್ಣ ಕೂಡ ಧಾರಾವಾಹಿಯಲ್ಲಿ ಕಾಂಪಿಟೇಷನ್‌ಗೆ ಬಿದ್ದಿದೆ. ಕಳೆದ ಎರಡು ಮೂರು ವಾರಗಳಿಂದ 'ನಮ್ಮ ಲಚ್ಚಿ' ಟಾಪ್‌ನಲ್ಲಿತ್ತು. ಈ ವಾರ 5.6 ಟಿಆರ್‌ಪಿ ರೇಟಿಂಗ್ ಮೂಲಕ ಎರಡನೇ ಸ್ಥಾನಕ್ಕೆ ಕುಸಿದಿದೆ. ವಿಜಯ್ ಸೂರ್ಯ ನಟಿಸುತ್ತಿರೋ ಈ ಧಾರಾವಾಹಿಗೆ ವೀಕ್ಷಕರ ಸಂಖ್ಯೆ ಹೆಚ್ಚಿದ್ದರು.
ಇನ್ನು ಮೊದಲನೇ ಸ್ಥಾನದಲ್ಲಿ 'ಉದೋ ಉದೋ ಶ್ರೀ ರೇಣುಕಾ ಯಲ್ಲಮ್ಮ' ಧಾರಾವಾಹಿ ಬಂದಿದೆ. ಈ ವಾರ ಈ ಧಾರಾವಾಹಿಗೆ 6.1 ಟಿಆರ್‌ಪಿ ರೇಟಿಂಗ್ ಸಿಕ್ಕಿದೆ. ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ 'ನೀನಾದೆ ನಾ' ಹಾಗೂ 'ಯಡಿಯೂರು ಸಿದ್ಧಲಿಂಗೇಶ್ವರ' ಕ್ರಮವಾಗಿ ಇದೆ. ಹಾಗಿದ್ದರೆ, ಈ ವಾರದ ಟಾಪ್ 10 ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳ ಪಟ್ಟಿ ಇಲ್ಲಿದೆ.

ಈ ವಾರದ ಟಾಪ್ 10 ಧಾರಾವಾಹಿ/ ರಿಯಾಲಿಟಿ ಶೋ
ಧಾರಾವಾಹಿ/ ರಿಯಾಲಿಟಿ ಶೋ ಟಿಆರ್‌ಪಿ
| No. | ಧಾರಾವಾಹಿ/ ರಿಯಾಲಿಟಿ ಶೋ | ಟಿಆರ್‌ಪಿ |
| 1 | ಪುಟ್ಟಕ್ಕನ ಮಕ್ಕಳು | 11.5 |
| 2 | ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ | 8.8 |
| 3 | ಭರ್ಜರಿ ಬ್ಯಾಚುಲರ್ಸ್ | 8.2 |
| 4 | ಗಟ್ಟಿಮೇಳ | 8.1 |
| 5 | ಅಮೃತಧಾರೆ | 7.1 |
| 6 | ಉದೋ ಉದೋ ಶ್ರೀ ರೇಣುಕಾ ಯಲ್ಲಮ್ಮ | 6.1 |
| 7 | ಶ್ರೀರಸ್ತು ಶುಭಮಸ್ತು | 6.1 |
| 8 | ನಮ್ಮ ಲಚ್ಚಿ | 5.6 |
| 9 | ಭಾಗ್ಯಲಕ್ಷ್ಮಿ | 5.5 |
| 10 | ಲಕ್ಷ್ಮಿ ಬಾರಮ್ಮ/ಸತ್ಯ /ನೀನಾದೆ ನಾ | 5.3 |


Click it and Unblock the Notifications











