Kannada Serial TRP: 'ಪುಟ್ಟಕ್ಕನ ಮಕ್ಕಳು' ಹವಾ ಜೋರು.. 'ಗಟ್ಟಿಮೇಳ','ಸೀತಾರಾಮ' ಕಥೆಯೇನು?

ಪ್ರತಿ ವಾರದಂತೆ ಈ ವಾರ ಕೂಡ ಟಿಆರ್‌ಪಿ ಲಿಸ್ಟ್ ಹೊರಬಿದ್ದಿದೆ. ಕನ್ನಡ ಕಿರುತೆರೆಯಲ್ಲಿ ನೂರಾರು ಧಾರಾವಾಹಿಗಳು ಪ್ರಸಾರ ಆಗುತ್ತಿವೆ. ಅವುಗಳಲ್ಲಿ ಕೆಲವನ್ನು ಆಯ್ದು ವೀಕ್ಷಕರು ಧಾರಾವಾಹಿಗಳನ್ನು ವೀಕ್ಷಣೆ ಮಾಡುತ್ತಿದ್ದಾರೆ. ಅಂತಹ ಧಾರಾವಾಹಿಗಳು ಪ್ರತಿವಾರ ಟಾಪ್ ಲಿಸ್ಟ್‌ನಲ್ಲಿ ಇರುತ್ತವೆ.

ಪ್ರತಿ ಗುರುವಾರದಂತೆ ಈ ವಾರ ಕೂಡ ಟಿಆರ್‌ಪಿ ಲಿಸ್ಟ್ ಹೊರಬಿದ್ದಿದೆ. ಕಳೆದ ವಾರವಿದ್ದ ಧಾರಾವಾಹಿಗಳು ಈ ವಾರ ಯಾವ್ಯಾವ ಸ್ಥಾನದಲ್ಲಿವೆ? ಹೊಸ ಧಾರಾವಾಹಿಗಳ ಹಣೆಬರಹ ಏನಾಗಿದೆ? ಅನ್ನೋದು ಈಗ ರಿವೀಲ್ ಆಗಿದೆ.

kannada-serial-trp-ratings-top-10-serials

ಕಳೆದ ವಾರ 'ಪುಟ್ಟಕ್ಕನ ಮಕ್ಕಳು', 'ಗಟ್ಟಿಮೇಳ', 'ಲಕ್ಷ್ಮಿಬಾರಮ್ಮ', 'ನೀನಾದೇ ನಾ', 'ಅಮೃತಧಾರೆ', 'ನಮ್ಮ ಲಚ್ಚಿ', 'ಸೀತಾ ರಾಮ'ದಂತಹ ಧಾರಾವಾಹಿಗಳು ಸದ್ದು ಮಾಡಿದ್ದವು. ಈ ವಾರ ಅವುಗಳ ಭವಿಷ್ಯ ಏನಾಗಿದೆ ಅನ್ನೋದನ್ನು ತಿಳಿಯಲು ಮುಂದೆ ಓದಿ.

ಈ ವಾರನೂ ಗೆದ್ದ 'ಪುಟ್ಟಕ್ಕನ ಮಕ್ಕಳು'

ಜೀ ಕನ್ನಡ ಈ ವಾರ ಬಂದ ಟಿಆರ್‌ಪಿ ಲಿಸ್ಟ್‌ನಲ್ಲಿ ನಂಬರ್ 1 ಸ್ಥಾನದಲ್ಲಿದೆ. ಅದರಲ್ಲೂ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಜೀ ಕನ್ನಡಕ್ಕೆ ಅತೀ ಹೆಚ್ಚು ಟಿಆರ್‌ಪಿ ಅಂಕಗಳನ್ನು ತಂದುಕೊಟ್ಟಿದೆ. ಕಳೆದ ಆರೇಳು ವಾರಗಳಿಂದ ಈ ಧಾರಾವಾಹಿ ಟಿಆರ್‌ಪಿ ಹೆಚ್ಚಾಗುತ್ತಲೇ ಇದೆ. ಕಳೆದ ವಾರ ಪುಟ್ಟಕ್ಕನ ಮಕ್ಕಳಿಗೆ 11.7 ರೇಟಿಂಗ್ ಬಂದರೆ, ಈ ವಾರ 12.6 ಅಂಕ ಗಳಿಸಿ ಟಾಪ್‌ನಲ್ಲಿದೆ. ಅದರಂತೆ, ಎರಡನೇ ಸ್ಥಾನದಲ್ಲಿ 'ಗಟ್ಟಿಮೇಳ', ಮೂರನೇ ಸ್ಥಾನದಲ್ಲಿ 'ಸೀತಾ ರಾಮ', ನಾಲ್ಕನೇ ಸ್ಥಾನದಲ್ಲಿ 'ಅಮೃತಧಾರೆ' ಧಾರಾವಾಹಿಯಿದೆ.

kannada-serial-trp-ratings-top-10-serials

ಹೊಸ ಧಾರಾವಾಹಿ 'ಸೀತಾ ರಾಮ'ಗೆ ಬಂಪರ್

ಜೀ ಕನ್ನಡ ಹೊಸ ಧಾರಾವಾಹಿಯನ್ನು ಪ್ರಸಾರ ಮಾಡುತ್ತಿದೆ. ಅದುವೇ 'ಸೀತಾ ರಾಮ' ಆರಂಭದಿಂದಲೇ ಈ ಧಾರಾವಾಹಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವೈಷ್ಣವಿಗೌಡ ನಟಿಸುತ್ತಿರುವ ಈ ಧಾರಾವಾಹಿಗೆ ಕಿರುತೆರೆ ವೀಕ್ಷಕರು ಕ್ಲೀನ್ ಬೋಲ್ಡ್ ಆಗಿದ್ದಾರೆ. ಕಳೆದ ವಾರ 'ಸೀತಾ ರಾಮ'ಗೆ 7.5 ಟಿಆರ್‌ಪಿ ಬಂದಿತ್ತು. ಅದೇ ಈ ವಾರ ಇದೇ ಧಾರಾವಾಹಿ 8.5 ಟಿಆರ್‌ಪಿ ಗಳಿಸಿದ ಮೂರನೇ ಸ್ಥಾನದಲ್ಲಿದೆ.

ಕಲರ್ಸ್ ಕನ್ನಡದಲ್ಲಿ 'ಭಾಗ್ಯಲಕ್ಷ್ಮಿ' ನಂ. 1

ಕಲರ್ಸ್ ಕನ್ನಡದ ಎರಡು ಜನಪ್ರಿಯ ಧಾರಾವಾಹಿಗಳು 'ಲಕ್ಷ್ಮಿಬಾರಮ್ಮ' ಹಾಗೂ 'ಭಾಗ್ಯಲಕ್ಷ್ಮಿ'. ಅಕ್ಕ ಹಾಗೂ ತಂಗಿಯರ ಕಥೆ ಹೇಳುವ ಈ ಧಾರಾವಾಹಿ ಪ್ರತಿವಾರ ಪೈಪೋಟಿಗೆ ಬೀಳುತ್ತವೆ. ಒಂದು ವಾರ 'ಲಕ್ಷ್ಮಿ ಬಾರಮ್ಮ' ಟಾಪ್‌ನಲ್ಲಿದ್ರೆ, ಇನ್ನೊಂದು ವಾರ 'ಭಾಗ್ಯಲಕ್ಷ್ಮಿ' ಟಾಪ್‌ನಲ್ಲಿ ಇರುತ್ತೆ. ಈ ವಾರ 6.3 ಟಿಆರ್‌ಪಿಯೊಂದು ಕಲರ್ಸ್ ಕನ್ನಡದಲ್ಲಿ ಟಾಪ್ ಸ್ಥಾನದಲ್ಲಿದೆ. ಲಕ್ಷ್ಮಿಬಾರಮ್ಮ 6.1 ಅಂಕದೊಂದು ಎರಡನೇ ಸ್ಥಾನದಲ್ಲಿದೆ. ಇದರ ಹಿಂದೆನೇ 'ರಾಮಾಚಾರಿ' 4.9 ಟಿಆರ್‌ಪಿ ಜೊತೆ ಮೂರನೇ ಸ್ಥಾನದಲ್ಲಿದೆ.

kannada-serial-trp-ratings-top-10-serials

ಸ್ಟಾರ್ ಸುವರ್ಣದ ಟಾಪ್ 3 ಸೀರಿಯಲ್ಸ್ ಯಾವುದು?

ಸ್ಟಾರ್ ಸುವರ್ಣ ಕೂಡ ಧಾರಾವಾಹಿಗಳ ಮೂಲಕ ಪೈಪೋಟಿಗೆ ಬಿದ್ದಿದೆ. ಪ್ರತಿವಾರದಂತೆ ಈ ವಾರ ಭಕ್ತಿ ಪ್ರಧಾನ ಧಾರಾವಾಹಿ 'ಉದೋ ಉದೋ ಶ್ರೀ ರೇಣುಕಾ ಯಲ್ಲಮ್ಮ'ಗೆ ಮೊದಲ ಸ್ಥಾನ. ಕಳೆದ ವಾರ ಈ ಧಾರಾವಾಹಿಗೆ 6.3 ಟಿಆರ್‌ಪಿ ಸಿಕ್ಕಿತ್ತು. ಈ ವಾರ 5.5ಕ್ಕೆ ಇಳಿಕೆಯಾಗಿದೆ. ಹಾಗೇ 'ನೀನಾದೆ ನಾ' 5.8 ಯಿಂದ 5.1 ಹಾಗೂ 'ನಮ್ಮ ಲಚ್ಚಿ' 5.2 ಯಿಂದ 5.0 ಟಿಆರ್‌ಪಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.

ಈ ವಾರದ ಟಾಪ್ 10 ಧಾರಾವಾಹಿ/ ರಿಯಾಲಿಟಿ ಶೋ:

ಕ್ರಮ ಸಂಖ್ಯೆ ಧಾರಾವಾಹಿ/ ರಿಯಾಲಿಟಿ ಶೋ ಟಿಆರ್‌ಪಿ
1 ಪುಟ್ಟಕ್ಕನ ಮಕ್ಕಳು 12.6
2 ಗಟ್ಟಿಮೇಳ 9.8
3 ಸೀತಾರಾಮ 8.5
4 ಅಮೃತಧಾರೆ 8.1
5 ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ 7.7
6 ಸತ್ಯ 6.8
7 ಭರ್ಜರಿ ಬ್ಯಾಚುಲರ್ 6.7
8 ಶ್ರೀರಸ್ತು ಶುಭಮಸ್ತು 6.6
9 ಹಿಟ್ಲರ್ ಕಲ್ಯಾಣ 6.4
10 ಭಾಗ್ಯಲಕ್ಷ್ಮಿ 6.3

More from Filmibeat

English summary
Explore the TRP Ratings of 10 top Kannada Serials and Reality Shows
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X