ಶೂಟಿಂಗ್ ಸ್ಥಳದಿಂದಲೇ ನಟ ರವಿಚಂದ್ರನ್ ಕಿಡ್ನಾಪ್: ಅಪಹರಣ ಮಾಡಿದ್ದು ಯಾರು?
ಕ್ರೇಜಿಸ್ಟಾರ್ ಸ್ಯಾಂಡಲ್‌ವುಡ್‌ನಲ್ಲೀಗ ಸಿಕ್ಕಾ ಪಟ್ಟೆ ಬ್ಯುಸಿ. ಒಂದಾದ ಮೇಲೆ ಇನ್ನೊಂದು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇದರೊಂದಿಗೆ ಟಾಕ್ ಶೋ, ರಿಯಾಲಿಟಿ ಶೋಗಳಲ್ಲೂ ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ. ಇನ್ನೊಂದು ಕಡೆ ರವಿಚಂದ್ರನ್ ಪುತ್ರರು ಕೂಡ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಎಲ್ಲಾ ಆರಾಮಾಗಿ ನಡೆಯುತ್ತಿದೆ ಅನ್ನುವಾಗಲೇ ಕ್ರೇಜಿಸ್ಟಾರ್ ರವಿಚಂದ್ರನ್ ಅವರನ್ನು ಯಾರೋ ಅಪಹರಣ ಮಾಡಿದ್ದಾರೆ.
ಶೂಟಿಂಗ್ ಸ್ಥಳದಲ್ಲಿ ರವಿಚಂದ್ರನ್ ಪ್ರೋಮೊ ಶೂಟ್ ಮಾಡುತ್ತಿದ್ದರು. ಚಿತ್ರೀಕರಣ ಮಾಡುತ್ತಿರುವ ವೇಳೆನೇ ಕ್ರೇಜಿಸ್ಟಾರ್‌ಗೆ ಒಂದು ಫೋನ್ ಬಂದಿತ್ತು. ಫೋನ್‌ನಲ್ಲಿ ಮಾತಾಡುತ್ತಾ ಹಾಗೆ ಮುಂದೆ ಬಂದ ಕ್ರೇಜಿಸ್ಟಾರ್ ಅನ್ನು ಮಾರುತಿ ಓಮ್ನಿಯಲ್ಲಿ ನೋಡ ನೋಡುತ್ತಿದ್ದಂತೆ ಅಪರಣ ಮಾಡಿದ್ದಾರೆ.

ರವಿಚಂದ್ರನ್ ಅಪಹರಣ ಮಾಡಿದ್ಯಾರು?
ಇತ್ತೀಚೆಗಷ್ಟೇ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಹೊಸ ಸಿನಿಮಾ ಅನೌನ್ಸ್ ಆಗಿದೆ. ಟಾಕ್ ಶೋಗಳಿಗೆ ಜೈ ಅಂದಿದ್ದಾರೆ. 2022ರ ಆರಂಭದಲ್ಲಿ ಕ್ರೇಜಿಸ್ಟಾರ್‌ಗೆ ಕ್ರೇಜಿ ಸ್ಟಾರ್ಟ್ ಸಿಕ್ಕಿದೆ ಅಂತಲೇ ಹೇಳಬಹುದು. ಹೀಗಾಗಿ ರವಿಮಾಮ ಫುಲ್ ಖುಷಿಯಾಗಿ ಶೂಟಿಂಗ್ ಎಂಜಾಯ್ ಮಾಡುತ್ತಿದ್ದರು. ಬೆಂಗೂರಿನ ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ರವಿಚಂದ್ರನ್ ದಿಢೀರನೇ ಕಿಡ್ನಾಪ್ ಆಗಿದ್ದು ಚಿತ್ರರಂಗದಲ್ಲಿ ಹಲ್‌ಚಲ್ ಎಬ್ಬಿಸಿದೆ.

ಕ್ರೇಜಿಸ್ಟಾರ್ ಕಿಡ್ನಾಪ್ ಆಗಿದ್ದೇಕೆ?
ಕ್ರೇಜಿಸ್ಟಾರ್ ರವಿಚಂದ್ರನ್ ಕಿಡ್ನಾಪ್ ಆಗಿದ್ದಾರೆ ಅಂದಾಕ್ಷಣ ಆತಂಕಕ್ಕೆ ಒಳಗಾಗುವುದು ಬೇಡ. ಜೀ ಕನ್ನಡ ತಂಡ ಹೊಸ ಶೋಗೆ ಪ್ರೋಮೊ ಶೂಟ್ ಮಾಡಿದ್ದಾರೆ. ಆ ಪ್ರೋಮೊದ ಒಂದು ಭಾಗವಿದು. ಇಲ್ಲಿ ರಿಯಲ್ ಲೈಫ್‌ನಲ್ಲಿ ಬ್ಯುಸಿಯಾಗಿರುವಂತೆ ರವಿಚಂದ್ರನ್‌ರನ್ನು ಮನೆಯಿಂದ ಶೂಟಿಂಗ್‌ಗೆ ಹೊರಡುವುದು, ಅವರನ್ನು ಕೆಲ ಅಪಹರಣ ಮಾಡುವವರು ಫಾಲೋ ಮಾಡುವುದು, ರವಿಚಂದ್ರನ್ ಶೂಟಿಂಗ್ ಸ್ಪಾಟ್‌ಗೆ ತಲುಪಿ, ಅಲ್ಲಿ ಅಪಹರಣಕ್ಕೆ ಒಳಗಾಗುವುವಂತೆ ಪ್ರೋಮೊ ಶೂಟ್ ಮಾಡಲಾಗಿದೆ.

ರವಿಚಂದ್ರನ್ ಬಿಡುಗಡೆ ಇನ್ನೂ ಆಗಿಲ್ಲ
ಜೀ ಕನ್ನಡ ರಿಲೀಸ್ ಮಾಡಿರುವ ಫ್ರೋಮೊದಲ್ಲಿ ರವಿಚಂದ್ರನ್ ಅಪಹರಣ ಆಗಿದ್ದಾರೆ. ಆದರೆ, ಇನ್ನೂ ರಿಲೀಸ್ ಆಗಿಲ್ಲ. ಇದೇ ಮೊಲದ ಬಾರಿಗೆ ಪ್ರೋಮೊದಲ್ಲೂ ಮುಂದುವರೆಯಲಿದೆ ಅನ್ನುವ ಟೈಟಲ್ ಕಾರ್ಡ್ ಕಾಣಿಸುತ್ತಿದೆ. ಬಹುಶ: ಮುಂದಿನ ಪ್ರೋಮೊದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರನ್ನು ಅಪಹರಣ ಮಾಡಿದ್ದು ಯಾರು? ಯಾಕೆ ಕಿಡ್ನಾಪ್ ಮಾಡಿದರು? ಅನ್ನುವುದು ರಿವೀಲ್ ಆಗಲಿದೆ. ಅಲ್ಲಿವರೆಗೂ ಕ್ರೇಜಿಸ್ಟಾರ್ ಫ್ಯಾನ್ಸ್ ಕುತೂಹಲವನ್ನು ಹಿಡಿದಿಟ್ಟುಕೊಳ್ಳಬೇಕು.

ಡ್ರಾಮ ಜೂನಿಯರ್ಸ್ ಜಡ್ಜ್ ರವಿಚಂದ್ರನ್
ಕ್ರೇಜಿಸ್ಟಾರ್ ರವಿಚಂದ್ರನ್ ಜೀ ಕನ್ನಡದಲ್ಲಿ ಡ್ರಾಮ ಜೂನಿಯರ್ಸ್ ಕಾಮಿಡಿ ಶೋನಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಇದೇ ಕಾಮಿಡಿ ಶೋದಲ್ಲಿ ರವಿಚಂದ್ರನ್ ಮುಖ್ಯ ಅತಿಥಿಯಾಗಲಿದ್ದಾರೆ ಎನ್ನಲಾಗಿದೆ. ಹೀಗಾಗಿ ಇದು ಡ್ರಾಮ ಜೂನಿಯರ್ಸ್ ಶೋ ಪ್ರೋಮೊನಾ..? ಇಲ್ಲ ಬೇರೊಂದು ಕಾರ್ಯಕ್ರಮದ ಪ್ರೋಮೊನಾ ಅನ್ನುವುದು ಸದ್ಯಕ್ಕೆ ಜೀ ಕನ್ನಡ ವಾಹಿನಿ ರಿವೀಲ್ ಮಾಡಿಲ್ಲ. ಇನ್ನೊಂದು ಪ್ರೋಮೊ ರಿಲೀಸ್ ಆಗುತ್ತಿದ್ದಂತೆ ರವಿಚಂದ್ರನ್ ಕಿಡ್ನಾಪ್ ಮಾಡಿದ ಕಾರಣಕರ್ತರು ಯಾರು ಅನ್ನುವುದು ಗೊತ್ತಾಗಲಿದೆ.


Click it and Unblock the Notifications











