Don't Miss!
- Sports
WIPL Auction 2023: ಫೆ.13ರಂದು ಮುಂಬೈನಲ್ಲಿ ಮಹಿಳಾ ಐಪಿಎಲ್ ಹರಾಜು ನಡೆಯುವ ಸಾಧ್ಯತೆ
- News
Bill Pending: ಲಕ್ಷಾಂತರ ರೂ. ವಿದ್ಯುತ್ ಬಿಲ್ ಬಾಕಿ: ಕೆಸಿ ಜನರಲ್ ಆಸ್ಪತ್ರೆಗೆ ಬೆಸ್ಕಾಂ ನೋಟಿಸ್
- Finance
ಉದ್ಯೋಗಿಗಳಿಗೆ ಟೊಯೋಟಾ ಗ್ಲಾನ್ಜಾ ಗಿಫ್ಟ್ ನೀಡಿದ ರಮೇಶ್ ಮರಂದ್ ಯಾರು?
- Automobiles
ಭಾರತದಲ್ಲಿ ದುಬಾರಿ ಬೆಲೆಯ ಈ ಕಿಯಾ ಕಾರಿಗೆ ಭಾರೀ ಡಿಮ್ಯಾಂಡ್: ಇನೋವಾಗೆ ಹೆಚ್ಚಿದ ಪೈಪೋಟಿ
- Lifestyle
ಸುಖಿ ಸಂಸಾರ ಅಂತ ಇದ್ದರೂ ಗಂಡ ಅನೈತಿಕ ಸಂಬಂಧ ಬೆಳೆಸುವುದೇಕೆ?
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕಿರುತೆರೆ To ಬಾಲಿವುಡ್: ಮಂಗಳ ಗೌರಿ ಮದುವೆ ಖ್ಯಾತಿಯ ಕೃತಿ ಬೆಟ್ಟದ್ ಜರ್ನಿಯೇ ರೋಚಕ!
ರಂಗಭೂಮಿಯಿಂದ ಬಂದವರು ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂತ್ತಾರೆ. ಇದಕ್ಕೆ ಸಾಕಷ್ಟು ಉದಾಹರಣೆಗಳೂ ಕೂಡ ಇವೆ. ಇಂತಹದ್ದೇ ಒಂದು ಪ್ರತಿಭೆ ಕನ್ನಡದ ಕಿರುತೆರೆಯಿಂದ ಜರ್ನಿ ಆರಂಭಿಸಿ ಬಾಲಿವುಡ್ ವರೆಗೂ ಪಯಣ ಬೆಳೆಸಿ ಬಂದಿದೆ.
ಕನ್ನಡ ಕಿರುತೆರೆಯಿಂದ ಬಾಲಿವುಡ್‌ವರೆಗೆ ಪಯಣ ಬೆಳೆಸಿರುವ ಈ ನಟಿ ಕೃತಿ ಬೆಟ್ಟದ್. 'ಮಂಗಳಗೌರಿ ಮುದುವೆ' ಖ್ಯಾತಿಯ ಬಳ್ಳಿ ಅಥವಾ ಕೃತಿ ಬೆಟ್ಟದ್ ಮೂಲತ: ರಂಗಭೂಮಿ ಕಲಾವಿದೆ. ಬಿಬಿ ಎಂ ಮುಗಿಸಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಇವರಿಗೆ ಸಿನಿಮಾರಂಗ ಸೆಳೆದಿತ್ತು. ಆದರೆ, ನಟನೆ ಮೇಲಿನ ಆಸಕ್ತಿಯಿಂದ ಬ್ಯಾಂಕ್ ಉದ್ಯೋಗ ಗುಡ್ ಬೈ ಹೇಳಿ ಚಿತ್ರರಂಗದತ್ತ ಮುಖ ಮಾಡಿದರು.
ಕೃತಿ ಬೆಟ್ಟದ್ ಮೂಲತಃ ಗುಡಿಬಂಡೆಯವರು. ಮೂರು ವರ್ಷದವರಿದ್ದಾಗಲೇ ನಾಟಕಗಳಲ್ಲಿ ಅಭಿನಯಿಸಿ ಭೇಷ್ ಎನಿಸಿಕೊಂಡಿದ್ದರು. ಕೃತಿಗೆ ಬಾಲ್ಯದಿಂದಲೇ ನಟನೆ ರಕ್ತಗತವಾಗಿ ಬಂದುಬಿಟ್ಟಿದೆ. ಇವರ ಅಪ್ಪ-ಅಮ್ಮ ಇಬ್ಬರೂ ರಂಗಭೂಮಿಗೆ ತಮ್ಮದೇ ಆದ ಸೇವೆ ಸಲ್ಲಿಸಿದ್ದಾರೆ. ನಾಟಕಗಳಲ್ಲಿ ಕೃತಿ ಬೆಟ್ಟದ್ ಅಭಿನಯಕ್ಕೆ ಹತ್ತು ಹಲವು ಪ್ರಶಸ್ತಿಗಳು ಬಂದಿವೆ.
ಕೃತಿಗೆ ಮೊದಲು 'ರಾಧಾ' ಎಂಬ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟರು. 'ರಾಧಾ' ಧಾರಾವಾಹಿಯಲ್ಲಿ ಕೃತಿ ಬೆಟ್ಟದ್ ಡಾನ್ ಪಾತ್ರವನ್ನು ತುಂಬಾ ಸೊಗಸಾಗಿ ನಿಭಾಯಿಸಿದ್ದರು. ಇಲ್ಲಿ ಇವರ ಪ್ರತಿಭೆಯನ್ನು ಗುರುತಿಸಿದ ಬಳಿಕ 'ಕಲ್ಯಾಣ ರೇಖೆ' ಎಂಬ ಧಾರಾವಾಹಿಯಲ್ಲಿ ಮೇನಕ ಎಂಬ ಪಾತ್ರದಲ್ಲಿ ಮಿಂಚಿದರು. ಈ ಎರಡು ಧಾರಾವಾಹಿಗಳ ಬಳಿಕ ಒಂದೊಂದೇ ಧಾರಾವಾಹಿಗಳು ಇವರನ್ನು ಹುಡುಕಿಕೊಂಡು ಬಂದಿವೆ. ಆದರೆ, 'ಮಂಗಳಗೌರಿ ಮದುವೆ' ಧಾರಾವಾಹಿ ಕೃತಿ ಬೆಟ್ಟದ್‌ಗೆ ಬಿಗ್ ಬ್ರೇಕ್ ಕೊಟ್ಟಿತ್ತು. ಬಳ್ಳಿ ಎಂಬ ಪಾತ್ರ ಪ್ರೇಕ್ಷಕರ ಮನದಲ್ಲಿ ಇನ್ನೂ ಹಾಗೇ ಉಳಿದಿದೆ.
ಕಿರುತೆರೆಯಲ್ಲಿ ಮಿಂಚುತ್ತಿದ್ದ ಕೃತಿ ಬೆಟ್ಟದ್ ಅವರ ಪಯಣ ಕೇಲವ ಕಿರುತೆರೆಗಷ್ಟೇ ಮೀಸಲಾಗಿರಲಿಲ್ಲ. ಸಿನಿಮಾಗಳಲ್ಲೂ ಇವರಿಗೆ ಅವಕಾಶ ಸಿಕ್ಕಿತ್ತು. ಶಿವಣ್ಣ ಅಭಿನಯದ 'ಮೈಲಾರಿ', 'ಡೆಡ್ಲಿ-2' ,'ಝೂಮ್ ', 'ಕೂಲ್', 'ಡ್ರಾಮಾ', 'ವಿಕ್ಟರಿ -2', 'ಡ್ರಾಮಾ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವಕಾಶ ಸಿಕ್ಕಿತ್ತು. ಸಿನಿಮಾಗಳಲ್ಲೂ ತಮ್ಮ ಅಭಿನಯದ ಮೂಲಕ ಗಮನ ಸೆಳೆದಿದ್ದರು.
ಕಿರುತೆರೆ ಹಾಗೂ ಸಿನಿಮಾಗಳಲ್ಲಿ ನಟಿಸಿದ ಬಳಿಕ ಕೃತಿ ಬೆಟ್ಟದ್ ಅವರಿಗೆ ಬಾಲಿವುಡ್‌ನಲ್ಲಿ ನಟಿಸುವ ಅವಕಾಶ ಕೂಡ ಸಿಕ್ಕಿತ್ತು. 'ಜೋ ಬಿ ಕರ್ ವಾಲೇ' ಎಂಬ ಸಿನಿಮಾದಲ್ಲಿ ನಟಿಸಿ ಬಂದಿದ್ದರು. ಬಳಿಕ ಇವರಿಗೆ ಟಾಲಿವುಡ್ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ಅಲ್ಲೂ ಜನ ಮನಗೆದ್ದಿದ್ದಾರೆ.

ಸದ್ಯಕ್ಕೀಗ ಒಂದಷ್ಟು ಜಾಹೀರಾತುಗಳಲ್ಲಿಯೂ ಕಾಣಿಸಿಕೊಂಡಿರುವ ಕೃತಿ, ಕಾಮಿಡಿ ಪಾತ್ರಗಳಷ್ಟೇ ಅಲ್ಲದೆ ಬೇರೆ ಬೇರೆ ಪಾತ್ರಗಳನ್ನು ಮಾಡುವ ಕಾತರು-ಆತುರ ಅವರಲ್ಲಿದೆ. ಇತ್ತೀಚೆಗೆ ತೆರೆಕಂಡ ರಕ್ಷಿತ್ ಶೆಟ್ಟಿಯ '777 ಚಾರ್ಲಿ' ಸಿನೆಮಾದಲ್ಲೂ ಕೃತಿ ಬೆಟ್ಟದ್ ಅಭಿನಯಿಸಿದ್ದಾರೆ.