For Quick Alerts
  ALLOW NOTIFICATIONS  
  For Daily Alerts

  ಪಾರು ಅಖಾಡಕ್ಕೆ ಮತ್ತೆ ಎಸ್‌.ನಾರಾಯಣ್ ಎಂಟ್ರಿ: ಅಖಿಲಾಂಡೇಶ್ವರಿಗೆ ನಡುಕ!

  |

  ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಧಾರವಾಹಿಗಳು, ರಿಯಾಲಿಟಿ ಶೋಗಳು ಬಂದು ಪ್ರೇಕ್ಷಕರನ್ನು ರಂಜಿಸುತ್ತಿದೆ. ವೀಕೆಂಡ್‌ನಲ್ಲಿ ರಿಯಾಲಿಟಿ ಶೋಗಳು ನೋಡುಗರನ್ನು ರಂಜಿಸಿದರೆ, ಧಾರವಾಹಿಗಳು ವಾರವಿಡೀ ನೋಡುಗರನ್ನು ಹಿಡಿದಿಡುತ್ತೆ. ಅದರಲ್ಲೂ ಒಂದು ಧಾರವಾಹಿ ಹಿಟ್ ಆಯ್ತು ಅಂದರೇ ಸಾಕು ವೀಕ್ಷಕರು ಆ ಸೀರಿಯಲ್‌ನ ಬಿಡದೆ ನೋಡೋದು ಉಂಟು. ಕರ್ನಾಟಕವೇ ಒಪ್ಪಿ ಮನೆ ಮಗಳಂತೆ ಅಪ್ಪಿಕೊಂಡಿರುವ ಧಾರಾವಾಹಿ ಪಾರು. ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಈ ಧಾರವಾಹಿ ಟಿಆರ್‌ಪಿ ಯಲ್ಲಿ ಸದಾ ನಂ.1 ಸ್ಥಾನ ಪಡೆದಿರುತ್ತೆ. ಅಲ್ಲದೇ ದಿನಕ್ಕೊಂದು ಟ್ವಿಸ್ಟ್ ನೀಡೋ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದೆ. ಇದೀಗ ಸೀರಿಯಲ್‌ನಲ್ಲಿ ಮತ್ತೊಂದು ಟ್ವಿಸ್ಟ್ ಎದುರಾಗುತ್ತಿದೆ ಅದೇನು ಅಂತ ಮುಂದೆ ಓದಿ.

  "ಕರುಣೆಯ ಪೈರು ನಮ್ಮಿ ಪಾರು" ಎನ್ನುವ ಟ್ಯಾಗ್ ಹೊತ್ತುಕೊಂಡಿರುವ ಕನ್ನಡದ ಜನಪ್ರಿಯ ಧಾರಾವಾಹಿ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. ಅತ್ಯುತ್ತಮ ತಾರಾಬಳಗ ಹಾಗೂ ರೋಚಕ ತಿರುವುಗಳನ್ನು ಹೊಂದಿರುವ ಅದ್ಭುತ ಧಾರಾವಾಹಿ ವೀಕ್ಷಕರಿಗೆ ಹೊಸ ತಿರುವು ಕೊಟ್ಟು ರಂಜಿಸುತ್ತಿದೆ. 'ಪಾರು' ಧಾರಾವಾಹಿ ಹಲವು ವರ್ಷಗಳಿಂದ ಕಿರುತೆರೆಯ ಮೇಲೆ ವಿಜೃಂಭಿಸುತ್ತಿದೆ. ಹಿರಿಯ ನಟಿ ವಿನಯ ಪ್ರಸಾದ್ ಹಾಗೂ ಎಸ್‌.ನಾರಾಯಣ್ ನಟಿಸುತ್ತಿರುವ ಈ ಧಾರಾವಾಹಿ ಕನ್ನಡಿಗರ ಅಚ್ಚು ಮೆಚ್ಚಿನ ಧಾರಾವಾಹಿಗಳಲ್ಲೊಂದು.

  ಒಂದು ಗಂಟೆ ಮುಂಚೆನೇ ಜೀ ಕನ್ನಡದಲ್ಲಿ 'ಪಾರು' ಧಾರಾವಾಹಿ ಪ್ರಸಾರಒಂದು ಗಂಟೆ ಮುಂಚೆನೇ ಜೀ ಕನ್ನಡದಲ್ಲಿ 'ಪಾರು' ಧಾರಾವಾಹಿ ಪ್ರಸಾರ

  ವೀರಯ್ಯ ದೇವ ಎಂಬ ಪಾತ್ರವನ್ನು ಮಾಡಿರುವ ಎಸ್​. ನಾರಾಯಣ್​ ಅವರು ಆದಿತ್ಯ ಮತ್ತು ಪಾರುಗೆ ಸಹಾಯ ಮಾಡಲು ಇದೀಗ ಮತ್ತೆ ಪಾರು ಧಾರವಾಹಿಗೆ ಎಂಟ್ರಿ ನೀಡಿದ್ದಾರೆ. ವೀರಯ್ಯ ದೇವನ ಎಂಟ್ರಿಯಿಂದಾಗಿ ಅಖಿಲಾಂಡೇಶ್ವರಿಗೆ ಸಾಕಷ್ಟು ಆತಂಕ ಹೆಚ್ಚಾಗಿದೆ. ಆದಿ ಮತ್ತು ಯಾಮಿನಿ ಮದುವೆಗೆ ಸಕಲ ಸಿದ್ಧತೆ ನಡೆದಿತ್ತು. ಆದರೆ ಅದನ್ನು ತಡೆಯಲು ವೀರಯ್ಯ ದೇವ ಪಣ ತೊಟ್ಟಿದ್ದಾರೆ. ಅವರ ವಿರುದ್ಧ ಸೂಕ್ತ ಸಂಚು ರೂಪಿಸಲು ಅಖಿಲಾಂಡೇಶ್ವರಿ ಕೂಡ ತಯಾರಾಗುತ್ತಿದ್ದಾಳೆ. ಆದರೆ ಅಸಲಿ ಟ್ವಿಸ್ಟ್​ ಬೇರೆಯೇ ಇದೆ.

  ಜೊತೆ ಜೊತೆಯಲಿ ಸೀರಿಯಲ್‌ನ ಇದೊಂದು ಟ್ವಿಸ್ಟ್‌ಗೆ ವೀಕ್ಷಕರು ಬೇಸರ!ಜೊತೆ ಜೊತೆಯಲಿ ಸೀರಿಯಲ್‌ನ ಇದೊಂದು ಟ್ವಿಸ್ಟ್‌ಗೆ ವೀಕ್ಷಕರು ಬೇಸರ!

  ಹೌದು ಆದಿಯನ್ನು ಮದುವೆ ಆಗಲು ಹೊರಟಿರುವ ಯಾಮಿನಿ ಹಿಂದೆ ಕೆಟ್ಟ ಉದ್ದೇಶ ಇದೆ ಎಂಬುದು ಅಖಿಲಾಂಡೇಶ್ವರಿಗೆ ಈಗ ಗೊತ್ತಾಗಿದೆ. ಅರಸನಕೋಟೆ ವಂಶಕ್ಕೆ ಆಪತ್ತು ಇದೆ ಎಂಬುದರ ಸೂಚನೆ ಸಹ ಸಿಕ್ಕಿದೆ. ಹಾಗಾದರೆ ಅಖಿಲಾಂಡೇಶ್ವರಿ ಈಗೇನು ಮಾಡುತ್ತಾಳೆ ಎಂಬ ಕೌತುಕದೊಂದಿದೆ 'ಪಾರು' ಧಾರಾವಾಹಿ ಸಾಗುತ್ತಿದೆ. ಹೀಗಾಗಿಯ ವೀಕ್ಷಕರ ಬಳಗ ಕೂಡ ಪಾರು ಧಾರವಾಹಿಯಲ್ಲಿ ಈ ಮದುವೆ ಸಂಚಿಕೆ ಏನಾಗುತ್ತೆ ಎಂಬ ಬಗ್ಗೆ ಕಾತುರರಾಗಿದ್ದಾರೆ. ಮದುವೆ ನಿಲ್ಲುತ್ತಾ? ಅಖಿಲಾಂಡೇಶ್ವರಿಗೆ ಸತ್ಯ ಗೊತ್ತಾಗುತ್ತಾ? ಮುಂದೆ ಕಥೆ ಹೇಗೆ ಸಾಗುತ್ತೆ ಎಂಬ ಬಗ್ಗೆ ಎದುರುನೋಡುತ್ತಿದ್ದಾರೆ.

  Veerayya Deva make comeback to Paaru serial in Zee Kannada

  ಪಾರು' ಧಾರಾವಾಹಿ ಹಲವು ವರ್ಷಗಳಿಂದ ಕಿರುತೆರೆಯ ಮೇಲೆ ವಿಜೃಂಭಿಸುತ್ತಿದೆ. ಹಿರಿಯ ನಟಿ ವಿನಯ ಪ್ರಸಾದ್ ಹಾಗೂ ಎಸ್‌.ನಾರಾಯಣ್ ನಟಿಸುತ್ತಿರುವ ಈ ಧಾರಾವಾಹಿ ಕನ್ನಡಿಗರ ಅಚ್ಚು ಮೆಚ್ಚಿನ ಧಾರಾವಾಹಿಗಳಲ್ಲೊಂದು. ವಿನಯ ಪ್ರಸಾದ್ ಅವರು ಅಖಿಲಾಂಡೇಶ್ವರಿಯಾಗಿ, ಎಸ್ .ನಾರಾಯಣ್ ವೀರಯ್ಯದೇವ ಎಂಬ ಗತ್ತಿನ ಪಾತ್ರಗಳ ಮೂಲಕ ಕಿರುತೆರೆಯ ವೀಕ್ಷಕರ ಗಮನ ಸೆಳೆದಿದ್ದಾರೆ. ಸದ್ಯ ಈ ಎರಡೂ ಪಾತ್ರಗಳೂ ಮುಖಾ ಮುಖಿಯಾಗಿ ಸತ್ಯ ಬಯಲಾಗುವ ಸನ್ನಿವೇಶ ಬರಲಿದೆ. ಇಬ್ಬರೂ ಗತ್ತಿನಿಂದಲೇ ಪಾತ್ರಗಳನ್ನು ನಿರ್ವಹಿಸುತ್ತಿದ್ದು, ಕಿರುತೆರೆ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದೆ.

  ಅರಸನ ಕೋಟೆಯ ಆಳುವ ಅರಸಿಯಾಗಿ, ಪ್ರೀತಿ ತುಂಬಿದ ಅಮ್ಮನಾಗಿ ಅಖಿಲಾಂಡೇಶ್ವರಿ ಪಾತ್ರದಲ್ಲಿ ವಿನಯ ಪ್ರಸಾದ್ ಮೆಚ್ಚುಗೆ ಗಳಿಸಿದ್ದಾರೆ. ತಾಯಿಯ ಪ್ರೀತಿಯನ್ನೇ ಕಾಣದ ಮಕ್ಕಳಿಗೆ ತಾನೇ ಎಲ್ಲವೂ ಆಗಿರುವ ಹನುಮಂತು ಪಾತ್ರ, ಸದಾ ಬಡವರ ನೋವು ನಲಿವುಗಳಿಗೆ ಸ್ಪಂದಿಸುತ್ತ ನೊಂದವರ ಪಾಲಿನ ಭರವಸೆಯಾಗಿರುವ ವೀರಯ್ಯದೇವ, ಒಳ್ಳೆಯ ಗುಣಗಳೊಂದಿಗೆ ಸದಾ ಎಲ್ಲರಿಗೂ ಒಳಿತನ್ನೇ ಬಯಸುವ ಆದಿ ಹಾಗೂ ಪಾರು. ಈ ಎಲ್ಲಾ ಪಾತ್ರಗಳೂ ಕೂಡ ಜನ ಮೆಚ್ಚುಗೆಯನ್ನು ಗಳಿಸಿವೆ.

  English summary
  Paaru Serial S Narayan makes comeback to give new twist to the story.
  Friday, February 18, 2022, 16:04
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X