Kannada TV TRP Ratings: ಪುಟ್ಟಕ್ಕ ಟಾಪ್.. 'ಗಟ್ಟಿಮೇಳ', 'ಲಕ್ಷ್ಮಿಬಾರಮ್ಮ', 'ಭಾಗ್ಯಲಕ್ಷ್ಮಿ' ಕಥೆಯೇನು?
ಕನ್ನಡ ಮನರಂಜನಾ ವಾಹಿನಿಗಳಲ್ಲಿ ಧಾರಾವಾಹಿಗಳಿಗೆ ಕಾಂಪಿಟೇಷನ್ ಹೆಚ್ಚು. ಸೀರಿಯಲ್‌ಗಳನ್ನು ನೋಡುವವರ ಸಂಖ್ಯೆ ಹೆಚ್ಚಿರೋದರಿಂದ ಅತ್ಯುತ್ತಮವಾದ ಧಾರಾವಾಹಿಗಳನ್ನು ವೀಕ್ಷಕರಿಗೆ ನೀಡುವುದಕ್ಕೆ ಪೈಪೋಟಿಗೆ ಬೀಳುತ್ತವೆ. ಅಂತಿಮವಾಗಿ ಯಾವ ಧಾರಾವಾಹಿ ಕಡೆ ವಾಲುತ್ತಾರೆ ಅನ್ನೋದು ವೀಕ್ಷಕರಿಗೆ ಬಿಟ್ಟಿದ್ದು.
ಇಂದು (ಜುಲೈ 20) ಕನ್ನದ ಟಿಆರ್‌ಪಿ ಲಿಸ್ಟ್ ರಿಲೀಸ್ ಆಗಿದೆ. ಕನ್ನಡದ ಪ್ರಮುಖ ಮೂರು ಪ್ರಮುಖ ಎಂಟರ್‌ಟೈನ್ಮೆಂಟ್ ಚಾನೆಲ್‌ಗಳ ಯಾವ್ಯಾವ ಧಾರಾವಾಹಿಗೆ ಎಷ್ಟೆಷ್ಟು ರೇಟಿಂಗ್ ಸಿಕ್ಕಿದೆ ಅನ್ನೋದು ಲಿಸ್ಟ್ ಹೊರಬಿದ್ದಿದೆ.

ಕನ್ನಡದ ಮನರಂಜನಾ ವಾಹಿನಿಗಳಲ್ಲಿ ಜೀ ಕನ್ನಡ, ಕಲರ್ಸ್ ಕನ್ನಡ ಹಾಗೂ ಸ್ಟಾರ್ ಸುವರ್ಣ ಚಾನೆಲ್‌ಗಳು ಸ್ಪರ್ಧೆಗೆ ಇಳಿದಿವೆ. 'ಪುಟ್ಟಕ್ಕನ ಮಕ್ಕಳು', 'ಗಟ್ಟಿಮೇಳ', 'ಅಮೃತಧಾರೆ', 'ಲಕ್ಷ್ಮಿ ಬಾರಮ್ಮ', 'ಭಾಗ್ಯಲಕ್ಷ್ಮಿ', 'ನಮ್ಮ ಲಚ್ಚಿ' ಅಂತಹ ಧಾರಾವಾಹಿಗಳು ಟಿಆರ್‌ಪಿ ಲಿಸ್ಟ್‌ನಲ್ಲಿ ಇವೆ. ಈ ಎಲ್ಲಾ ಧಾರಾವಾಹಿಗಳ ಈ ವಾರದ ಟಿಆರ್‌ಪಿ ಹೇಗಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
'ಪುಟ್ಟಕ್ಕನ ಮಕ್ಕಳು' ಈ ವಾರವೂ ಟಾಪ್
ಜೀ ಕನ್ನಡ ಈ ವಾರವೂ ಟಾಪ್ ಸ್ಥಾನದಲ್ಲಿದೆ. ಇದರಲ್ಲೇ ಪ್ರಸಾರವಾಗುತ್ತಿರುವ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ನಂಬರ್ 1 ಸ್ಥಾನದಲ್ಲಿದೆ. ಕಳೆದ ನಾಲ್ಕೈದು ವಾರದಿಂದ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯನ್ನು ನೋಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕಳೆದ ವಾರ ಈ ಧಾರಾವಾಹಿಗೆ 11.5 ರೇಟಿಂಗ್ ಬಂದಿತ್ತು. ಈ ವಾರ 11.3 ರೇಟಿಂಗ್ ಬಂದಿದೆ.
ಹಾಗೇ 'ಡ್ಯಾನ್ ಕರ್ನಾಟಕ ಡ್ಯಾನ್ಸ್' 9.3 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. 'ಗಟ್ಟಿಮೇಳ' 8.3, 'ಭರ್ಜರಿ ಬ್ಯಾಚುಲರಸ್' 7.6, 'ಅಮೃತಧಾರೆ' 7.3 ರೇಟಿಂಗ್ ಪಡೆದುಕೊಂಡಿದೆ. ಈ ಮೂಲಕ ಬೇರೆ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳಿಗೆ ಟಫ್ ಕಾಂಪಿಟೇಷನ್ ನೀಡುತ್ತಿದೆ.

ಕಲರ್ಸ್ ಕನ್ನಡದಲ್ಲಿ ಅಕ್ಕನನ್ನು ಮೀರಿಸಿದ ತಂಗಿ
ಕಲರ್ಸ್ ಕನ್ನಡದ ಎರಡು ಧಾರಾವಾಹಿಗಳಲ್ಲಿ ಹಾವು ಏಣಿ ಆಟ ನಡೆಯುತ್ತಲೇ ಇದೆ. ಒಂದು ವಾರ 'ಭಾಗ್ಯಲಕ್ಷ್ಮಿ' ಟಾಪ್‌ನಲ್ಲಿದ್ರೆ, ಇನ್ನೊಂದು ವಾರ 'ಲಕ್ಷ್ಮಿ ಬಾರಮ್ಮ' ಟಾಪ್‌ನಲ್ಲಿರುತ್ತೆ. ಈ ವಾರ 'ಲಕ್ಷ್ಮಿ ಬಾರಮ್ಮ' 5.6 ರೇಟಿಂಗ್ ಜೊತೆ ಕಲರ್ಸ್ ಕನ್ನಡದ ನಂಬರ್ ಧಾರಾವಾಹಿ ಎನಿಸಿಕೊಂಡಿದೆ.
'ಲಕ್ಷ್ಮಿಬಾರಮ್ಮ' ಟಾಪ್ ಸ್ಥಾನದಲ್ಲಿದ್ದರೆ, 'ಭಾಗ್ಯಲಕ್ಷ್ಮಿ' 5.3 ರೇಟಿಂಗ್,' ಗೀತಾ', 'ರಾಮಾಚಾರಿ', 'ಕೆಂಪಸಂಪಿಗೆ' 4.5 ರೇಟಿಂಗ್ ಪಡೆದುಕೊಂಡಿದೆ. ಕಲರ್ಸ್ ಕನ್ನಡದ ಧಾರಾವಾಹಿಗಳು ಮತ್ತೆ ಟ್ರ್ಯಾಕ್‌ಗೆ ಮರಳಿದ್ದು, ಟಿಆರ್‌ಪಿ ರೇಟಿಂಗ್‌ನಲ್ಲಿ ಮತ್ತೆ ಏರಿಕೆಯಾಗಿದೆ.
ಸ್ಟಾರ್ ಸುವರ್ಣದ ಟಾಪ್ ಸೀರಿಯಲ್ ಯಾವುದು?
ಸ್ಟಾರ್ ಸುವರ್ಣ ಕೂಡ ಒಳ್ಳೊಳ್ಳೆ ಧಾರಾವಾಹಿಗಳನ್ನು ನಿರ್ಮಾಣ ಮಾಡುತ್ತಿದೆ. ಅದರಲ್ಲೂ ಭಕ್ತಿ ಪ್ರಧಾನ ಧಾರಾವಾಹಿಗಳು ವೀಕ್ಷಕರಿಗೆ ಇಷ್ಟ ಆಗುತ್ತಿದೆ. ಇದರೊಂದಿಗೆ 'ಉದೋ ಉದೋ ಶ್ರೀ ರೇಣುಕಾ ಯಲ್ಲಮ್ಮ', 'ನೀನಾದೆ ನಾ', 'ನಮ್ಮ ಲಚ್ಚಿ', 'ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ' ಹಾಗೂ 'ಕಥೆಯೊಂದು ಶುರುವಾಗಿದೆ' ಸ್ಟಾರ್ ಸುವರ್ಣದ ಟಾಪ್ 5 ಧಾರಾವಾಹಿಗಳು.

ಈ ವಾರ 'ಉದೋ ಉದೋ ಶ್ರೀ ರೇಣುಕಾ ಯಲ್ಲಮ್ಮ'ಗೆ 5.8 ರೇಟಿಂಗ್ ಸಿಕ್ಕಿದ್ರೆ, 'ನೀನಾದೆ ನಾ'ಗೆ 5.5, 'ನಮ್ಮ ಲಚ್ಚಿ'ಗೆ 5.3, 'ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ'ಗೆ 4.8 ರೇಟಿಂಗ್ ಸಿಕ್ಕಿದೆ. ಇದರೊಂದಿಗೆ ಈ ವಾರದ ಟಾಪ್ 10 ಧಾರಾವಾಹಿಗಳ ಲಿಸ್ಟ್ ಇಲ್ಲಿದೆ.
ಈ ವಾರದ ಟಾಪ್ 10 ಧಾರಾವಾಹಿ/ ರಿಯಾಲಿಟಿ ಶೋ
| ಧಾರಾವಾಹಿ/ ರಿಯಾಲಿಟಿ ಶೋ | ಟಿಆರ್‌ಪಿ | |
| 1 | ಪುಟ್ಟಕ್ಕನ ಮಕ್ಕಳು | 11.3 |
| 2 | ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ | 9.3 |
| 3 | ಗಟ್ಟಿಮೇಳ | 8.3 |
| 4 | ಭರ್ಜರಿ ಬ್ಯಾಚುಲರ್ಸ್ | 7.6 |
| 5 | ಅಮೃತಧಾರೆ | 7.3 |
| 6 | ಶ್ರೀರಸ್ತು ಶುಭಮಸ್ತು | 6.3 |
| 7 | ಸತ್ಯ | 5.9 |
| 8 | ಉದೋ ಉದೋ ಶ್ರೀ ರೇಣುಕಾ ಯಲ್ಲಮ್ಮ | 5.8 |
| 9 | ಲಕ್ಷ್ಮಿ ಬಾರಮ್ಮ | 5.6 |
| 10 | ನೀನಾದೆ ನಾ | 5.5 |


Click it and Unblock the Notifications











