ಈ ಯೂಟ್ಯೂಬ್ ಸೆನ್ಸೇಷನ್ ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಇರ್ತಾರಾ? ಲೈವ್‌ನಲ್ಲಿ ಡಾ.ಬ್ರೋ ಹೇಳಿದ್ದೇನು?

ನಮಸ್ಕಾರ ದೇವ್ರು.. ಈ ಡೈಲಾಗ್ ಬಗ್ಗೆ ನೆಟ್ಟಿಗರಿಗೆ ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಯೂಟ್ಯೂಬ್‌ನಲ್ಲಿ ಟ್ರಾವೆಲ್ ವಿಡಿಯೋಗಳನ್ನು ಮಾಡುತ್ತಾ ಸಂಚಲನ ಸೃಷ್ಟಿಸಿರುವ ಆ ಯುವಕ ಮತ್ಯಾರೂ ಅಲ್ಲ ಡಾ. ಬ್ರೋ. ದೇಶ-ವಿದೇಶಗಳನ್ನು ಸುತ್ತುತ್ತಾ, ಕನ್ನಡಿಗರಿಗೆ ಬೇರೆ ದೇಶದ ಜನ ಜೀವನವನ್ನು ತೋರಿಸಿಕೊಡುತ್ತಿರುವ ಡಾ. ಬ್ರೋ ಮತ್ತೆ ಸುದ್ದಿಯಲ್ಲಿದ್ದಾರೆ.

ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್‌ ಬಾಸ್ ಕನ್ನಡಕ್ಕೆ ಡಾ. ಬ್ರೋ ಹೋಗುತ್ತಾರೆ ಅನ್ನೋದ ಸುದ್ದಿ ಓಡಾಡುತ್ತಿತ್ತು. ಈ ಬಗ್ಗೆ ಯೂಟ್ಯೂಬ್ ಲೈವ್ ಬಂದು ಕ್ಲಾರಿಟಿ ಕೊಟ್ಟಿದ್ದಾರೆ. ಶೀಘ್ರದಲ್ಲಿಯೇ ಕಲರ್ಸ್ ಕನ್ನಡದಲ್ಲಿ ಮತ್ತೊಂದು ಬಿಗ್ ಬಾಸ್ ಕನ್ನಡ ಸೀಸನ್ ಶುರುವಾಗುತ್ತಿದೆ. ಈಗಾಗಲೇ 11ನೇ ಸೀಸನ್‌ಗೆ ಸ್ಪರ್ಧಿಗಳ ಬಗ್ಗೆ ಚರ್ಚೆನೂ ಶುರುವಾಗಿದೆ.

Kannada Youtube Sensation Dr Bro clarity about Bigg Boss Kannada season 11

ಒಂದಿಷ್ಟು ಸಂಭಾವನೀಯರ ಪಟ್ಟಿಯಲ್ಲಿ ಡಾ. ಬೋ ಹೆಸರು ಕೂಡ ಕೇಳಿ ಬರುತ್ತಿತ್ತು. ವಿದೇಶಗಳಿಗೆ ಹೋಗಿ ವಿಡಿಯೋ ಮಾಡುವುದಕ್ಕೆ ಬ್ರೇಕ್ ಕೊಟ್ಟು ಬಿಗ್‌ಬಾಸ್ ಮನೆಯೊಳಗೆ ಹೋಗುತ್ತಾರಾ? ಅನ್ನೋ ಪ್ರಶ್ನೆಗೆ ಲೈವ್‌ನಲ್ಲೇ ಉತ್ತರ ಕೊಟ್ಟಿದ್ದಾರೆ. ಹಾಗೇ ಈಗಾಗಲೇ ಯಾವ ದೇಶಕ್ಕೆ ಹೋಗಿ ಬಂದಿದ್ದಾರೆ? ಮುಂದೆ ಹೋಗುತ್ತಿರುವ ದೇಶ ಯಾವುದು? ಅನ್ನೋದನ್ನು ಡಾ.ಬ್ರೋ ಲೈವ್‌ನಲ್ಲಿ ರಿವೀಲ್ ಮಾಡಿದ್ದಾರೆ.

ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ರಿಯಾಲಿಟಿ ಶೋ ಬಿಗ್‌ಬಾಸ್‌ ಕನ್ನಡ ಸೀಸನ್‌ 11ರಲ್ಲಿ ಡಾ.ಬ್ರೋ ಇರ್ತಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ ಕನ್ನಡಿಗ ಡಾ.ಬ್ರೋ ಅಲಿಯಾಸ್ ಗಗನ್ ಬಿಗ್‌ಬಾಸ್ ಮನೆಯೊಳಗೆ ಬರಬೇಕು ಅನ್ನೋದು ಅವರ ಫ್ಯಾನ್ಸ್ ಆಸೆ ಕೂಡ. ಆದರೆ, ಬಿಗ್‌ಬಾಸ್ ಮನೆಗೆ ಹೋಗುತ್ತೇನೋ..? ಇಲ್ಲವೋ? ಅನ್ನೋದನ್ನು ಯೂಟ್ಯೂಬ್ ಲೈವ್‌ನಲ್ಲಿ ರಿವೀಲ್ ಮಾಡಿದ್ದಾರೆ.

Kannada Youtube Sensation Dr Bro clarity about Bigg Boss Kannada season 11

ಇದೇ ಮೊದಲ ಬಾರಿಗೆ ಯೂಟ್ಯೂಬ್ ಲೈವ್ ಬಂದಿದ್ದ ಡಾ.ಬ್ರೋ ಮೊದಲು ಟ್ರಾವೆಲ್ ಬ್ಲಾಗ್ ಮಾಡುವುದು ಎಷ್ಟು ಕಷ್ಟ ಅನ್ನೋದನ್ನು ಹೇಳಿಕೊಂಡಿದ್ದಾರೆ. ಬೇರೆ ಬೇರೆ ದೇಶಕ್ಕೆ ಹೋದಾಗ ಏನೆಲ್ಲ ಚಾಲೆಂಜ್‌ಗಳನ್ನು ಎದುರಿಸಬೇಕಾಗುತ್ತೆ ಅನ್ನೋದನ್ನು ತಮ್ಮ ಫಾಲೋವರ್ಸ್‌ಗೆ ಹೇಳಿದ್ದಾರೆ. ಇದೇ ವೇಳೆ ಬಿಗ್‌ಬಾಸ್‌ಗೆ ಹೋಗುತ್ತೀರ? ಅನ್ನೋ ಪ್ರಶ್ನೆನೂ ಎದುರಾಗಿತ್ತು. ಅದಕ್ಕೂ ಡಾ.ಬ್ರೋ ಉತ್ತರ ಕೊಟ್ಟಿದ್ದಾರೆ.

"ಮೂರು ತಿಂಗಳು ಒಂದು ಮನೆಯಲ್ಲಿ ಇರುವುದಕ್ಕೆ ಸಿಕ್ಕಾಪಟ್ಟೆ ಕಷ್ಟ ಆಗುತ್ತೆ. ಮೂರು ತಿಂಗಳಲ್ಲಿ ಐದು ದೇಶ ನೋಡಬಹುದು. ಅದೇ ಕಷ್ಟ ಆಗುತ್ತೆ" ಎಂದು ಹೇಳುತ್ತಾ ಬಿಗ್‌ ಬಾಸ್‌ಗೆ ಹೋಗುವ ವಿಚಾರವನ್ನು ಡಾ. ಬ್ರೋ ತಳ್ಳಿ ಹಾಕಿದ್ದಾರೆ. ಈ ಮೂಲಕ ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಡಾ. ಬ್ರೋ ಕಾಣಿಸಿಕೊಳ್ಳುವುದು ಬಹುತೇಕ ಅನುಮಾನ.

ಇದೇ ವೇಳೆ ಡಾ.ಬ್ರೋಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡಬೇಕು ಎಂದು ಹೇಳಿದ್ದಾರೆ. ಅದಕ್ಕೂ ಡಾ.ಬ್ರೋ ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನೂ 30 ರಿಂದ 40 ವರ್ಷ ಸಾಧನೆ ಮಾಡಬೇಕು ಎಂದು ಹೇಳಿದ್ದಾರೆ. ಹಾಗೇ ಮುಂದೆ ಯಾವ ದೇಶಕ್ಕೆ ಪ್ರವಾಸ ಮಾಡುತ್ತಿದ್ದೀರ? ಎಂದು ಪ್ರವಾಸ ಮಾಡಿದ್ದಾರೆ. ಅದಕ್ಕೆ ವಿಯೆಟ್ನಾಂ ಹೋಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ ಶೀಘ್ರದಲ್ಲಿಯೇ ಸಿರಿಯಾ ದೇಶದ ಬಗೆಗಿನ ವಿಡಿಯೋವನ್ನು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡುತ್ತಿದ್ದಾರೆ.

More from Filmibeat

English summary
Youtube Sensation Dr.Bro clarity about Bigg Boss Kannada 11:
Read more about: dr bro youtube filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X