ಕೆಲಸ ಖಾಲಿ ಇದೆಯಾ ಎಂದು ಕೇಳುತ್ತಿದ್ದಾರೆ 'ಕನ್ನಡತಿ' ರಂಜನಿ ರಾಘವನ್
ಲಾಕ್‌ಡೌನ್ ಕಾರಣದಿಂದ ಲಕ್ಷಾಂತರ ಮಂದಿ ಕೆಲಸವಿಲ್ಲದೆ ಮನೆಯಲ್ಲಿಯೇ ಕೂರುವಂತಾಗಿದೆ. ಸೆಲೆಬ್ರಿಟಿಗಳು ಕೂಡ ಈಗ ಚಿತ್ರೀಕರಣವಿಲ್ಲದ ಕಾರಣ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳೊಂದಿಗೆ ಸಂವಹಿಸುವ ಕೆಲಸ ಮಾಡುತ್ತಿದ್ದಾರೆ. ಧಾರಾವಾಹಿಗಳ ಚಿತ್ರೀಕರಣ ನಡೆಯದೆ ಇರುವುದರಿಂದ ಹಳೆಯ ಕಂತುಗಳನ್ನೇ ಮರುಪ್ರಸಾರ ಮಾಡುವ ಮೂಲಕ ಸಮಯ ದೂಡುತ್ತಿವೆ.
Recommended Video
ಈಗ ಎಲ್ಲವೂ ಸರಿ ಹೋಗಿ ಮತ್ತೆ ಧಾರಾವಾಹಿಗಳ ಚಿತ್ರೀಕರಣ ಆರಂಭವಾದರೂ ಹೊಸದಾಗಿ ಚಿತ್ರೀಕರಣಗೊಂಡ ಸಂಚಿಕೆಗಳು ಪ್ರಸಾರ ಆರಂಭಿಸಲು ಕನಿಷ್ಠ ಒಂದು ವಾರದ ಸಮಯ ಬೇಕಾಗುತ್ತದೆ ಎನ್ನಲಾಗಿದೆ. ಅಂದರೆ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ನಂತರವೂ ಧಾರಾವಾಹಿ ಪ್ರಿಯರು ತಮ್ಮ ನೆಚ್ಚಿನ ಧಾರಾವಾಹಿಗಳ ಹೊಸ ಕಂತನ್ನು ನೋಡಲು ಆರೇಳು ದಿನ ಕಾಯುವುದು ಅನಿವಾರ್ಯ.
ಈ ನಡುವೆ 'ಪುಟ್ಟಗೌರಿ' ರಂಜನಿ ರಾಘವನ್ ಹೊಸ ಬೇಡಿಕೆ ಇರಿಸಿದ್ದಾರೆ. ಮುಂದೆ ಓದಿ...

ಕನ್ನಡತಿಗೆ ಸಮಯ ಕಳೆಯುವ ಕಷ್ಟ
ಧಾರಾವಾಹಿ ಮತ್ತು ಸಿನಿಮಾಗಳಲ್ಲಿನ ನಟನೆಯಲ್ಲಿ ಬಿಜಿಯಾಗಿದ್ದ ನಟಿ 'ಕನ್ನಡತಿ' ರಂಜನಿ ರಾಘವನ್ ಚಿತ್ರೀಕರಣ ಇಲ್ಲದಿರುವುದರಿಂದ ಮನೆಯಲ್ಲಿ ಹಾಗೂ ಹೀಗೂ ಟೈಂಪಾಸ್ ಮಾಡುತ್ತಿದ್ದಾರೆ. ಅವರ 'ಪುಟ್ಟಗೌರಿ ಮದುವೆ' ಮುಗಿದು ಇತ್ತೀಚೆಗಷ್ಟೇ 'ಕನ್ನಡತಿ' ಧಾರಾವಾಹಿ ಆರಂಭವಾಗಿತ್ತು. ಅವರ ಅಭಿನಯದ ಹೊಸ ಧಾರಾವಾಹಿ ಕೂಡ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು.

ಹಳೆಯ ಪದವಿ ಪತ್ರ
ಇದೀಗ ಸುಮ್ಮನೆ ಕುಳಿತಿರುವ ಅವರು ಕೆಲಸ ಇದೆಯಾ ಎಂದು ಕೇಳಲು ಆರಂಭಿಸಿದ್ದಾರೆ. ನಟನೆಗೆ ಬರುವ ವೇಳೆಗೆ ಪದವಿ ಪೂರ್ಣಗೊಳಿಸಿದ್ದ ರಂಜನಿ, ಓದಿದ್ದನ್ನು ವೃತ್ತಿಯನ್ನಾಗಿಸಿಕೊಳ್ಳಲಿಲ್ಲ. ಬದಲು ಬಣ್ಣದ ಲೋಕಕ್ಕೆ ಬಂದವರು. ಈಗ ಬಿಡುವಿನ ಅವಧಿಯಲ್ಲಿ ಅವರಿಗೆ ತಮ್ಮ ಪದವಿ ಪ್ರಮಾಣ ಪತ್ರ ಸಿಕ್ಕಿದೆ.

ಎಂಬಿಎ ಪದವಿ ಪಡೆದಿದ್ದ ರಂಜನಿ
ಮೂರು ವರ್ಷದ ಹಿಂದೆ ರಂಜನಿ ವಿಟಿಯುದಿಂದ ಮಾಸ್ಟರ್ ಆಫ್ ಬಿಜಿನೆಸ್ ಅಡ್ಮಿನಿಸ್ಟ್ರೇಷನ್ ಪದವಿ ಪಡೆದುಕೊಂಡಿದ್ದರು. ಮೊದಲ ದರ್ಜೆಯಲ್ಲಿ ಉತ್ತೀರ್ಣರಾಗಿದ್ದ ಅವರು, ಅದನ್ನು ಫೇಸ್‌ಬುಕ್‌ನಲ್ಲಿ ಆಗ ಹಂಚಿಕೊಂಡಿದ್ದರು. ಮೂರು ವರ್ಷದ ನಂತರ ಫೇಸ್‌ಬುಕ್ ಮೆಮೋರಿ ಅವರಿಗೆ ಅದನ್ನು ನೆನಪಿಸಿದೆ.

ಕೆಲಸ ಖಾಲಿ ಇದೆಯಾ?
ವಿಶ್ವವಿದ್ಯಾಲಯದ ಘಟಿಕೋತ್ಸವ ಪ್ರಮಾಣಪತ್ರವನ್ನು ಹಂಚಿಕೊಂಡಿರುವ ರಂಜನಿ ರಾಘವನ್, ಯಾವುದಾದರೂ ಕೆಲಸ ಖಾಲಿ ಇದೆಯಾ ಎಂದು ತಮಾಷೆಯಾಗಿ ಕೇಳಿದ್ದಾರೆ. ಅದಕ್ಕೆ ಕೆಲವರು ನಮ್ಮ ಊರಲ್ಲಿ ಕನ್ನಡ ಉಪನ್ಯಾಸಕರ ಖಾಲಿ ಇದೆ ಎಂದಿದ್ದರೆ, ಸೀರಿಯಲ್ ಬಿಟ್ಟು ನಿಮಗೇಕೆ ಕೆಲಸ ಹುಡುಕೋ ಉಸಾಬರಿ ಎಂದು ಕೆಲವರು ಪ್ರಶ್ನಿಸಿದ್ದಾರೆ.

ಇರುವುದರಿಂದಲೇ ಸಂತೋಷ ಸಿಗುತ್ತದೆ
ಮಾರ್ಚ್ 29 ರಂಜನಿ ಅವರ ಜನ್ಮದಿನ. ತಮ್ಮ ಹುಟ್ಟುಹಬ್ಬದ ಸಂಭ್ರಮವನ್ನೂ ಅವರು ಕ್ವಾರೆಂಟೀನ್‌ನಲ್ಲಿ ಕಳೆಯುವಂತಾಗಿದ್ದಕ್ಕೆ ಬೇಸರಪಟ್ಟುಕೊಂಡಿದ್ದರು. 'ಸಂತೋಷವಾಗಿರುವವರ ಹತ್ತಿರ ಇರುವುದೆಲ್ಲಾ ಉತ್ತಮವಾಗಿರುವುದಿಲ್ಲ. ಇರುವುದನ್ನು ಉತ್ತಮವಾಗಿಸಿಕೊಂಡು ಅವರು ಸಂತೋಷವಾಗಿರುತ್ತಾರೆ' ಎಂಬ ನುಡಿಯೊಂದನ್ನು ಹಂಚಿಕೊಂಡಿದ್ದರು.


Click it and Unblock the Notifications











