ಆದಿತ್ಯ, ರಂಜನಿ ರಾಘವನ್ ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್ ಮಾಡೋದ್ಯಾರು?

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ 'ಕನ್ನಡತಿ' ಮೂಲಕ ವೀಕ್ಷಕರಿಗೆ ಮತ್ತಷ್ಟು ಇಷ್ಟವಾಗಿದ್ದ ನಟಿ ರಂಜನಿ ರಾಘವನ್. ಇವರು ಧಾರಾವಾಹಿ ಜೊತೆ ಜೊತೆಗೆ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಈಗ ನಟ ಆದಿತ್ಯ ಜೊತೆ ಇವರ ಹೊಸ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಅದುವೇ 'ಕಾಂಗರೂ'.

ಇನ್ನು 'ಡೆಡ್ಲಿ ಸೋಮ' ಸಿನಿಮಾದ ಹೀರೊ ಆದಿತ್ಯ ಕೂಡ ಇದೇ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಮತ್ತೊಮ್ಮೆ ಖಾಕಿ ಧರಿಸಿ, ಥ್ರಿಲ್ಲರ್ ಸ್ಟೋರಿಯೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಇಬ್ಬರು ಅಭಿಮಾನಿಗಳಿಗೂ ಸಿನಿಪ್ರಿಯರಿಗೂ ಥ್ರಿಲ್ಲಿಂಗ್ ಅನುಭವ ನೀಡಲಿದೆಯಂತೆ.

Kannadati fame Ranjani Raghavan and Adithya

ಆದಿತ್ಯ, ರಂಜನಿ ರಾಘವನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ 'ಕಾಂಗರೂ' ಸಿನಿಮಾವನ್ನು ಕಿಶೋರ್ ಮೇಗಳಮನೆ ನಿರ್ದೇಶನ ಮಾಡಿದ್ದಾರೆ. ಸದ್ಯ 'ಕಾಂಗರೂ' ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದ್ದು, ಡಬ್ಬಿಂಗ್ ಸಹ ಪೂರ್ಣವಾಗಿದೆ.

'ಕಾಂಗರೂ' ಸಿನಿಮಾವನ್ನು ಬೆಂಗಳೂರು, ಚಿಕ್ಕಮಗಳೂರು, ಹೊರನಾಡು ಸೇರಿದಂತೆ ಹಲವೆಡೆ ಚಿತ್ರೀಕರಣ ನಡೆದಿದೆ. ಅಂದ್ಹಾಗೆ 'ಕಾಂಗರೂ' ಸಿನಿಮಾವನ್ನು ಕನ್ನಡ, ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ.

Kannadati fame Ranjani Raghavan and Adithya

ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ 'ಕಾಂಗರೂ' ಮೋಷನ್ ಪೋಸ್ಟರ್ ಸದ್ಯದಲ್ಲೇ ರಿಲೀಸ್ ಆಗಲಿದೆ. ಈ ಮೋಷನ್ ಪೋಸ್ಟರ್ ಅನ್ನು ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಒಬ್ಬರು ನಮ್ಮ ಚಿತ್ರದ ಮೋಷನ್ ಪೋಸ್ಟರ್ ಅನಾವರಣ ಮಾಡಲಿದ್ದಾರೆ. 'ಕಾಂಗರೂ' ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಿರುವ ಸೂಪರ್‌ಸ್ಟಾರ್ ಯಾರು ಅದನ್ನು ಚಿತ್ರತಂಡ ಇನ್ನೂ ರಿವೀಲ್ ಮಾಡಿಲ್ಲ.

ಆದಿತ್ಯ 'ಕಾಂಗರೂ' ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ರಂಜನಿ ರಾಘವನ್ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ರಂಜನಿ ಸೈಕಿಯಾಟ್ರಿಸ್ಟ್ ಡಾಕ್ಟರ್ ಪಾತ್ರ ನಿರ್ವಹಿಸಿದ್ದಾರೆ. ಇವರೊಂದಿಗೆ ಶಿವಮಣಿ, ಕರಿಸುಬ್ಬು, ನಾಗೇಂದ್ರ ಅರಸ್ ಸೇರಿದಂತೆ ಹಲವರು ನಟಿಸಿದ್ದಾರೆ. ಈ ಸಿನಿಮಾವನ್ನು ಚನ್ನಕೇಶವ ಬಿ.ಸಿ, ನರಸಿಂಹಮೂರ್ತಿ ಚಕ್ರಭಾವಿ, ರಮೇಶ್ ಬಂಡೆ, ಸ್ವಾಮಿ ಚಕ್ರಭಾವಿ, ರವಿ ಕೀಲರ ಮಂಡ್ಯ ಹಾಗೂ ಕೆ ಜಿ ರಾಮಚಂದ್ರಯ್ಯ ನಿರ್ಮಾಣ‌ ಮಾಡುತ್ತಿದ್ದಾರೆ.

'ಕಾಂಗರೂ' ಸಿನಿಮಾಗೆ ನಿರ್ದೇಶಕ ಕಿಶೋರ್ ಮೇಗಳಮನೆ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಬರೆದಿದ್ದಾರೆ. ಸಾಧುಕೋಕಿಲ ಸಂಗೀತ ನೀಡಿದ್ದಾರೆ. ಉದಯ್ ಲೀಲ ಛಾಯಾಗ್ರಹಣ ಹಾಗೂ ಅರ್ಜುನ್ ಕಿಟ್ಟು ಈ ಸಿನಿಮಾ ಎಡಿಟಿಂಗ್ ಮಾಡುತ್ತಿದ್ದಾರೆ.

More from Filmibeat

English summary
Kannadati fame Ranjani Raghavan and Adithya Movie Kagaroo Motion Poster
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X