ತೆಲುಗು ಬಿಗ್‌ಬಾಸ್ ಸೀಸನ್ 8 ಗ್ರ್ಯಾಂಡ್ ಫಿನಾಲೆ; ಗೆದ್ದು ಬೀಗದ ಈ ಕನ್ನಡಿಗ ಯಾರು? ಸಿಕ್ಕಿದ ಹಣವೆಷ್ಟು?
ಎಲ್ಲಾ ಕಡೆ ಬಿಗ್‌ಬಾಸ್ ರಿಯಾಲಿಟಿ ಶೋ ಬಗ್ಗೆನೇ ಚರ್ಚೆಯಾಗುತ್ತಿದೆ. ಕನ್ನಡ ಸೇರಿದಂತೆ ದಕ್ಷಿಣ ಭಾರತದಲ್ಲಿ ತೆಲುಗು ಹಾಗೂ ತಮಿಳಿನಲ್ಲೂ ಬಿಗ್‌ಬಾಸ್ ನಡೆಯುತ್ತಿದೆ. ಇನ್ನೊಂದು ಕಡೆ ಹಿಂದಿಯಲ್ಲೂ ಬಿಗ್ ಬಾಸ್ ಹವಾ ಜೋರಾಗಿದೆ. ಈ ಮಧ್ಯೆ ನಾಗಾರ್ಜುನ ನಡೆಸಿಕೊಡುತ್ತಿರುವ ತೆಲುಗು ಬಿಗ್‌ಬಾಸ್ ಸೀಸನ್ 11 ನಿನ್ನೆ (ಡಿಸೆಂಬರ್ 15) ಕೊನೆಗೊಂಡಿದೆ.
ಅಕ್ಕಿನೇನಿ ನಾಗಾರ್ಜುನ್ ನಡೆಸಿಕೊಡುವ ತೆಲುಗು ಬಿಗ್ ಬಾಸ್ ಸೀಸನ್ 8 ಕನ್ನಡಿಗರ ಮಗನ ಸೆಳೆದಿತ್ತು. ಯಾಕಂದ್ರೆ, ಈ ಬಾರಿ ಸೀಸನ್‌ನಲ್ಲಿ ಹೆಚ್ಚು ಕನ್ನಡಿಗರೇ ಭಾಗವಹಿಸಿದ್ದರು. ನಿನ್ನೆ (ಡಿಸೆಂಬರ್ 15) ತೆಲುಗು ಬಿಗ್‌ಬಾಸ್ ಸೀಸನ್ 8ರ ಗ್ರ್ಯಾಂಡ್ ಫಿನಾಲೆ ನಡೆದಿದ್ದು ಮೈಸೂರು ಮೂಲದ ಕನ್ನಡಿಗ ನಿಖಿಲ್ ಮಲಿಯಕ್ಕಲ್ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ. ತೆಲುಗಿನ ಮೆಗಾ ಪವರ್‌ಸ್ಟಾರ್ ರಾಮ್ ಚರಣ್ ಕೈಯಿಂದ ಟ್ರೋಫಿಯನ್ನು ಪಡೆದುಕೊಂಡಿದ್ದಾರೆ.

ನಿಖಿಲ್ ಮಲಿಯಕ್ಕಲ್ ಮೂಲತ: ಮೈಸೂರಿನವರು. ತೆಲುಗಿನ ಧಾರಾವಾಹಿಗಳಲ್ಲಿ ಹೆಚ್ಚಾಗಿ ನಟಿಸುತ್ತಿದ್ದಾರೆ. ಕನ್ನಡಕ್ಕಿಂತ ಹೆಚ್ಚಾಗಿ ಅವರಿಗೆ ತೆಲುಗಿನಲ್ಲಿ ಜನಪ್ರಿಯತೆ ಸಿಕ್ಕಿತ್ತು. ಇದೇ ಕಾರಣಕ್ಕೆ ತೆಲುಗು ಬಿಗ್‌ಬಾಸ್ ಮನೆಗೆ ಪ್ರವೇಶ ಸಿಕ್ಕಿತ್ತು. ಈಗ ಬಿಗ್ ಬಾಸ್ ಟೈಟಲ್ ಅನ್ನು ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಹಾಗಿದ್ದರೆ, ತೆಲುಗು ಬಿಗ್‌ಬಾಸ್ ಗೆದ್ದಿದ್ದಕ್ಕೆ ಇವರಿಗೆ ಸಿಕ್ಕ ಮೊತ್ತವೆಷ್ಟು? ಹಣದ ಜೊತೆಗೆ ಮತ್ತೆ ಏನೆಲ್ಲ ಸಿಕ್ಕಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
105 ದಿನಗಳ ಕಾಲ ನಡೆದ ತೆಲುಗು ಬಿಗ್‌ಬಾಸ್ ಸೀಸನ್ 8ರಲ್ಲಿ ನಿಖಿಲ್ ಮಲಿಯಕ್ಕಲ್ ತೆಲುಗು ಮಂದಿಯ ಫೇವರಿಟ್ ಆಗಿದ್ದರು. ಮೊದಲಿನಿಂದಲೂ ಬಿಗ್‌ಬಾಸ್ ಮನೆಯೊಳಗೆ ವೀಕ್ಷಕರ ಗಮನವನ್ನು ಸೆಳೆಯುತ್ತಲೇ ಬಂದಿದ್ದರು. ಫಿನಾಲೆಯಲ್ಲಿ ನಿಖಿಲ್ ಮಲಿಯಕ್ಕಲ್ ಹಾಗೂ ಗೌತಮ್ ಕೃಷ್ಣ ಇಬ್ಬರ ಮಧ್ಯೆ ಸ್ಪರ್ಧೆ ಏರ್ಪಟ್ಟಿತ್ತು. ಇಲ್ಲಿ ನಾಗಾರ್ಜುನ ಇಬ್ಬರೂ ಅಭ್ಯರ್ಥಿಗಳಿಗೂ ಆಫರ್ ಅನ್ನು ಇಟ್ಟಿದ್ದರು.

ಟೈಟಲ್ ಅನೌನ್ಸ್ ಮಾಡುವುದಕ್ಕೂ ಮುನ್ನ ನಾಗಾರ್ಜುನ ಇಬ್ಬರು ಸ್ಪರ್ಧಿಗಳಿಗೂ ಒಂದು ಆಫರ್ ಕೊಟ್ಟಿದ್ದರು. 40 ಲಕ್ಷ ರೂಪಾಯಿಯ ಸೂಟ್‌ಕೇಸ್ ಮುಂದಿಟ್ಟು. ಟೈಟಲ್‌ಗೆ ಸ್ಪರ್ಧೆ ಮಾಡುವುದಿಲ್ಲ ಎಂದಾದರೆ ಈ ಹಣವನ್ನು ತೆಗೆದುಕೊಂಡು ಹೋಗಬಹುದು ಎಂದಿದ್ದರು. ಆರಂಭದಲ್ಲಿ ನಿಖಿಲ್ ಮಲಿಯಕ್ಕಲ್ 40 ಲಕ್ಷ ರೂ. ಸೂಟ್‌ಕೇಸ್ ತೆಗೆದುಕೊಳ್ಳುವುದಕ್ಕೆ ಮುಂದಾಗಿದ್ದರೂ ಬಳಿಕ ಕುಟುಂಬದವರ ಸಲಹೆ ಮೇರೆಗೆ ಹಿಂದೆ ಸರಿದಿದರು.
ಆ ವೇಳೆ ನಿಖಿಲ್ ಮಲಿಯಕ್ಕಲ್ ತೆಗೆದುಕೊಂಡು ನಿರ್ಧಾರ ಸರಿಯಾಗಿತ್ತು. ತೆಲುಗು ಬಿಗ್‌ಬಾಸ್ ಸೀಸನ್ 8ರ ಟೈಟಲ್ ಜೊತೆಗೆ 55 ಲಕ್ಷ ರೂಪಾಯಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಹಾಗೇ ಇವರಿಗೆ ಐಷಾರಾಮಿ ಕಾರು ಕೂಡ ಸಿಗಲಿದೆ. ಅದರ ಬೆಲೆ ಸುಮಾರು 6 ಲಕ್ಷ ರೂಪಾಯಿಗೂ ಅಧಿಕ ಎಂದು ಹೇಳಲಾಗಿದೆ. ಇನ್ನು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್‌ಬಾಸ್ ಮನೆಗೆ ಪ್ರವೇಶ ಮಾಡಿದ್ದ ಗೌತಮ್ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದಾರೆ.
ಇನ್ನು ನಿಖಿಲ್ ಮಲಿಯಕ್ಕಲ್ ಕನ್ನಡದಲ್ಲಿ 'ಮನೆಯೇ ಮಂತ್ರಾಲಯ' ಅನ್ನುವ ಧಾರಾವಾಹಿಯಲ್ಲಿ ನಟಿಸಿದ್ದರು. ಬಳಿಕ ತೆಲುಗು ಧಾರಾವಾಹಿಗಳಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ತೆಲುಗು ಬಿಗ್‌ಬಾಸ್ ಸೀಸನ್ 8ರ ಫಿನಾಲೆಯಲ್ಲಿ ಉಪೇಂದ್ರ ಹಾಗೂ ರೀಷ್ಮಾ ನಾಣಯ್ಯ ಕೂಡ ಭಾಗವಹಿಸಿದ್ದರು. ತಮ್ಮ 'ಯುಐ' ಸಿನಿಮಾವನ್ನು ಬಿಗ್‌ಬಾಸ್ ಮನೆಯಲ್ಲಿ ಪ್ರಚಾರ ಮಾಡಿದ್ದರು.


Click it and Unblock the Notifications











