ರಿಷಬ್ ಶೆಟ್ಟಿಯ 'ಕಾಂತಾರ'ಗಾಗಿ ಮಂಗಳೂರಿನ ಕಲಾವಿದರಿಂದ ಮರಳಿನಲ್ಲಿ ಸ್ಯಾಂಡ್ ಆರ್ಟ್!
ಸ್ಯಾಂಡಲ್‌ವುಡ್‌ಗೆ ಹೊಸ ಇಮೇಜ್ ಕೊಟ್ಟ ಸಿನಿಮಾಗಳಲ್ಲಿ ರಿಷಬ್ ಶೆಟ್ಟಿಯ 'ಕಾಂತಾರ' ಕೂಡ ಒಂದು.ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲೂ ಕೊಳ್ಳೆ ಹೊಡೆದಿತ್ತು.
ಸದ್ಯ 'ಕಾಂತಾರ' ಸಿನಿಮಾಗೆ 100 ದಿನಗಳ ಸಂಭ್ರಮ.ಇದೇ ಬೆನ್ನಲ್ಲೇ ಸಂಕ್ರಾಂತಿ ಹಬ್ಬದಂದು ಕಿರುತೆರೆಯಲ್ಲೂ ಪ್ರಸಾರ ಆಗುತ್ತಿದೆ. ಸ್ಟಾರ್ ಸುವರ್ಣದಲ್ಲಿ ರಿಷಬ್ ಶೆಟ್ಟಿಯ ಕಾಂತಾರ ರಿಲೀಸ್ ಆಗುತ್ತಿದ್ದು, ಇದಕ್ಕಾಗಿ ಮಂಗಳೂರಿನ ಕಲಾವಿದರು 'ಕಾಂತಾರ'ದ ಸ್ಯಾಂಡ್ ಆರ್ಟ್ ಮಾಡಿದ್ದಾರೆ.
ಭಾರತದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲೂ 'ಕಾಂತಾರ' ಬೇಜಾನ್ ಸದ್ದು ಮಾಡಿದೆ.ಇದೀಗ ಕಿರುತೆರೆಯಲ್ಲಿ ಈ ಸಿನಿಮಾ ಪ್ರಸಾರ ಆಗುತ್ತಿದೆ. ಕನ್ನಡದ ಜನಪ್ರಿಯ ಮನರಂಜನ ವಾಹಿನಿ ಸ್ಟಾರ್ ಸುವರ್ಣದಲ್ಲಿ ಇಂದು ಸಂಜೆ 6 ಗಂಟೆಗೆ ಸುವರ್ಣ ವರ್ಲ್ಡ್ ಪ್ರೀಮಿಯರ್ ಆಗುತ್ತಿದೆ. ಇದೇ ವೇಳೆ 'ಕಾಂತಾರ' ಸುಮಾರು 100 ದಿನಗಳನ್ನು ಪೂರೈಸಿದ ಸಂಭ್ರಮದಲ್ಲಿದೆ.

'ಕಾಂತಾರ' ಇದೀಗ ಕಿರುತೆರೆಯಲ್ಲಿ ಪ್ರಸಾರ ಆಗುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರಿನ ಸ್ಯಾಂಡ್ ಆರ್ಟ್ ಕಲಾವಿದರು ಮರುಳಿನಲ್ಲಿ ಕೃತಿ ರಚಿಸಿದ್ದಾರೆ. ಮಂಗಳೂರಿನ ಕಲಾವಿದ ಹರೀಶ್ ಆಚಾರ್ಯ ಮರಳಿನಲ್ಲಿ ಶಿಲ್ಪ ಕೃತಿಯನ್ನು ರಚಿಸಿದ್ದಾರೆ.
ಮಂಗಳೂರಿನ ತಣ್ಣೀರುಬಾವಿಯ ಕಡಲ ತೀರದ ಮರಳುರಾಶಿಯಲ್ಲಿ 'ಕಾಂತಾರ' ಕೃತಿ ಮೂಡಿಬಂದಿದೆ.ಕಿರುತೆರೆಯಲ್ಲಿ ಸಿನಿಮಾ ಪ್ರಸಾರ ಆಗುತ್ತಿರುವ ಸಿನಿಮಾ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವುದರಿಂದ ಮೂಡಿದ ಈ ಕಲಾಕೃತಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಕಿರುತೆರೆಯ ಇತಿಹಾಸದಲ್ಲಿ ಕನ್ನಡ ಸಿನಿಮಾವೊಂದು ಈ ಮಟ್ಟಿಗೆ ಪ್ರಚಾರ ಪಡೆದುಕೊಂಡಿದ್ದು ಇದೇ ಮೊದಲು. ಒಂದು ದಿನಪೂರ್ತಿ ಕಷ್ಟ ಪಟ್ಟು ಈ ಕಲಾಕೃತಿಯನ್ನು ರಚಿಸಲಾಗಿದೆ. ಪಂಜುರ್ಲಿ ದೈವದ ಮುಖವರ್ಣಿಕೆಯ ಕಲರ್ ಫುಲ್ ಚಿತ್ರಣ ಮೂಡಿಬಂದಿದೆ.

ಸ್ಟಾರ್ ಸುವರ್ಣದಲ್ಲಿ 'ಕಾಂತಾರ' ಪ್ರಸಾರವಾಗುತ್ತಿರುವುದರಿಂದ ವಾಹಿನಿಗೆ ಕಲಾವಿದರು ಬರಹದ ಮೂಲಕ ಶುಭ ಕೋರಿದ್ದಾರೆ. ದೇಶದಾದ್ಯಂತ ಹೊಸ ಇತಿಹಾಸ ಸೃಷ್ಟಿಸಿದ 'ಕಾಂತಾರ' ಸಿನಿಮಾವು ಕಿರುತೆರೆಯಲ್ಲೂ ಹೊಸ ಛಾಪು ಮೂಡಿಸಲಿ ಎಂದು ತಿಳಿಸಿದ್ದಾರೆ.
ಕನ್ನಡ ಕಿರುತೆಯಲ್ಲಿ ಪ್ರಪ್ರಥಮ ಬಾರಿಗೆ 'ಕಾಂತಾರ' ಸಿನಿಮಾವು ಇಂದು ಸಂಜೆ 6 ಗಂಟೆಗೆ ನಿಮ್ಮ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.


Click it and Unblock the Notifications











