For Quick Alerts
  ALLOW NOTIFICATIONS  
  For Daily Alerts

  ಸ್ಟಾರ್ ಸುವರ್ಣದಲ್ಲಿ ಮತ್ತೆ 'ಗಾನ ಬಜಾನ' ಶುರು: 'ಕಾಂತಾರ' ತಂಡದಿಂದ ಮಸ್ತ್ ಮಸ್ತಿ!

  |

  ಈಗಂತೂ ಎಲ್ಲಿ ನೋಡಿದರೂ 'ಕಾಂತಾರ' ತಂಡವೇ ಕಾಣಿಸುತ್ತಿದೆ. ರಿಷಬ್ ಶೆಟ್ಟಿ, ಸಪ್ತಮಿ ಗೌಡ ಅಭಿನಯದ ಈ ಸಿನಿಮಾ ದೇಶಾದ್ಯಂತ ಬೇಜಾನ್ ಸದ್ದು ಮಾಡುತ್ತಿದೆ. ಇನ್ನೇನು ಸಿನಿಮಾ ಬಿಡುಗಡೆಯಾಗಿ 50 ದಿನಗಳ ಯಶಸ್ವಿಯಾಗಿ ಪೂರೈಸಲಿದೆ. ಆದರೂ, ಬಾಕ್ಸಾಫೀಸ್‌ನಲ್ಲಿ ಮಾತ್ರ ಇನ್ನೂ ಸದ್ದು ಮಾಡುವುದನ್ನು ಮಾತ್ರ ನಿಲ್ಲಿಸಿಲ್ಲ.

  ಈ ಮಧ್ಯೆ ರಿಷಬ್ ಶೆಟ್ಟಿ ಎಲ್ಲಾ ಕಡೆ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಸದ್ಯಕ್ಕೀಗ ಸ್ಟಾರ್ ಸುವರ್ಣದಲ್ಲೂ ರಿಷಬ್ ಶೆಟ್ಟಿ ಸಪ್ತಮಿಗೌಡ ಹಾಗೂ ತಂಡ ಕಾಣಿಸಿಕೊಂಡಿದೆ. 'ಕಾಂತಾರ' ತಂಡ 'ಗಾನ ಬಜಾನ' ಮಾಡಿದ ಮಸ್ತಿಯ ಝಲಕ್ ಕಿಕ್ ಕೊಡುತ್ತಿದೆ.

  ಸ್ಟಾರ್ ಸುವರ್ಣದ ಫೇಮಸ್ ರಿಯಾಲಿಟಿ ಶೋಗಳಲ್ಲಿ 'ಗಾನಬಜಾನ' ಕೂಡ ಒಂದು. ಈ ಹಿಂದೆ ಬಂದಿದ್ದ ಎರಡೂ ಸೀಸನ್‌ಗೂ ಯಶಸ್ವಿಯಾಗಿದ್ದವು. ಈಗ 'ಗಾನಬಜಾನ' ಮೂರನೇ ಸೀಸನ್ ಆರಂಭ ಆಗಲಿದೆ. ಈಗಾಗಲೇ ಶೋ ಲಾಂಚ್‌ಗೆ ಭರ್ಜರಿಯಾಗಿ ತಯಾರಿ ಕೂಡ ನಡೆದಿದೆ.

  'ಗಾನ ಬಜಾನ' ಸೀಸನ್‌ನ ಫೋಮೊ ಈಗಾಗಲೇ ರಿಲೀಸ್ ಆಗಿದ್ದು, ಈ ಬಾರಿ ಕೂಡ ಮಾತಿನ ಮಲ್ಲ ಸ್ಟಾರ್ ಆ್ಯಂಕರ್ ಅಕುಲ್ ಬಾಲಾಜಿ ನಿರೂಪಣೆ ಮಾಡುತ್ತಿದ್ದಾರೆ. ಈ ಹಿಂದೆ ಸುವರ್ಣ ವಾಹಿನಿಯ ಅನೇಕ ಸೂಪರ್ ಡೂಪರ್ ಹಿಟ್ ಶೋಗಳನ್ನು ನಿರೂಪಣೆ ಮಾಡಿ ವೀಕ್ಷಕರ ಮನಗೆದ್ದಾರೆ. ಈಗ ಮತ್ತೊಮ್ಮೆ 'ಗಾನ ಬಜಾನ' ಮೂಲಕ ವೀಕ್ಷಕರನ್ನು ನಕ್ಕು ನಗಿಸಲು ಬರುತ್ತಿದ್ದಾರೆ.

  'ಗಾನ ಬಜಾನ' ಕಾರ್ಯಕ್ರಮದಲ್ಲಿ ಸಂಗೀತದ ಜೊತೆ ಜೊತೆಗೆ ತಮಾಷೆ, ಕುಣಿತ, ಆಟ ಎಲ್ಲವೂ ಇರಲೇಬೇಕು. ಈ ಶೋನಲ್ಲಿ ಸೆಲೆಬ್ರಿಟಿಗಳನ್ನು ಎರಡು ತಂಡಗಳಾಗಿ ವಿಂಗಡಿಸಿ, ಗಾಯನದ ಜೊತೆ ಜೊತೆಗೆ ಕೆಲವು ಗೇಮ್‌ಗಳನ್ನೂ ನೀಡಲಾಗುತ್ತೆ. ಇಲ್ಲಿ ಯಾರು ಹೆಚ್ಚು ಸ್ಕೋರ್ ಮಾಡ್ತಾರೋ ಅವರನ್ನು ವಿನ್ನರ್ ಎಂದು ಘೋಷಿಸಲಾಗುತ್ತದೆ.

  Kantara Team Participating Gaana Bajaana Reality Show Season 3 First Episode

  'ಗಾನ ಬಜನಾ' ಕಾರ್ಯಕ್ರಮದ ಗ್ರ್ಯಾಂಡ್ ಓಪನಿಂಗ್ ಶೋಗೆ 'ಕಾಂತಾರ' ತಂಡ ಭಾಗವಹಿಸಿದೆ. ರಿಷಬ್ ಶೆಟ್ಟಿ , ಸಪ್ತಮಿ ಗೌಡ, ಸ್ವರಾಜ್ ಶೆಟ್ಟಿ, ರಂಜನ್ ಸೇರಿದಂತೆ ಇನ್ನು ಅನೇಕರು 'ಗಾನಬಜಾನ ಸೀಸನ್ 3' ಸೆಟ್ ನಲ್ಲಿ ಮಸ್ತ್ ಮಜಾ ಮಾಡಿ ಬೊಂಬಾಟ್ ಮನೋರಂಜನೆ ನೀಡಿದ್ದಾರೆ.

  'ಗಾನಬಜಾನ ಸೀಸನ್ 3' ಮೊದಲ ಎಪಿಸೋಡ್ ಮೂಲಕವೇ ಸಖತ್ ಮಜಾ ಕೊಡೋದು ಪಕ್ಕಾ ಆಗಿದೆ. ಇದೇ ನವೆಂಬರ್ 13 ರಂದು ಸಂಜೆ ಆರು ಗಂಟೆಗೆ ರಿಷಬ್ ಶೆಟ್ಟಿ ಅಂಡ್ ಟೀಮ್ ಗಾನ ಬಜಾನದಲ್ಲಿ ಮಸ್ತ್ ಮನರಂಜನೆ ನೀಡಲಿದ್ದಾರೆ.

  English summary
  Kantara Team Participating Gaana Bajaana Reality Show Season 3 First Episode , Know More.
  Monday, November 7, 2022, 23:40
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X