Karna Serial: ಸಡಗರದ ನಡುವೆ ಅಪಾಯ; ಇತ್ತ ರಮೇಶ್-ಕರ್ಣನ ನಡುವಿನ ಒಪ್ಪಂದ ಬಯಲು.. ಮುಂದೇನು?
ಕಿರುತೆರೆಯಲ್ಲಿ ದಿನಕ್ಕೊಂದು ಹೊಸ ಧಾರಾವಾಹಿ ಶುರುವಾಗುತ್ತಲೇ ಇರುತ್ತೆ. ಹೀಗೆ ಶುರುವಾದ ಧಾರಾವಾಹಿಯೊಂದು ಟಿವಿಯಲ್ಲಿ ಭಾರಿ ಸದ್ದು ಮಾಡುತ್ತಿದೆ. ಅದುವೇ ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ 'ಕರ್ಣ'. ಕಿರಣ್ ರಾಜ್, ಭವ್ಯಾ ಗೌಡ, ನಮ್ರತಾ ಗೌಡ, ನಾಗಾಭರಣ ಸೇರಿದಂತೆ ದೊಡ್ಡ ಸ್ಟಾರ್‌ಕಾಸ್ಟ್ ಇರುವ ಈ ಸೀರಿಯಲ್ ವೀಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.
'ಕರ್ಣ' ಸೀರಿಯಲ್ ಶುರುವಾದ ದಿನದಿಂದಲೇ ಮೂರು ಟ್ರ್ಯಾಕ್‌ಗಳಲ್ಲಿ ಕಥೆ ಸಾಗುತ್ತಿದೆ. ಅದರಲ್ಲಿ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದ್ದು ಅಪ್ಪ-ಮಗನ ನಡುವಿನ ಅಗ್ರಿಮೆಂಟ್. ಟಿ.ಎಸ್.ನಾಗಾಭರಣ ಅವರ ರಮೇಶನ ಪಾತ್ರ ಹಾಗೂ ಕಿರಣ್ ರಾಜ್ ಅವರ ಕರ್ಣನ ಪಾತ್ರಗಳು ವೀಕ್ಷಕರನ್ನು ಪ್ರತಿದಿನ ಈ ಧಾರಾವಾಹಿಯನ್ನು ವೀಕ್ಷಿಸುವಂತೆ ಮಾಡುತ್ತಿದೆ. ಸದ್ಯ ಇಂದಿನ ಎಪಿಸೋಡ್‌ನಲ್ಲಿ ಈ ಅಗ್ರಿಮೆಂಟ್ ಸೀಕ್ರೆಟ್ ಅಜ್ಜಿಗೆ ಗೊತ್ತಾಗಿದೆ.

ಹೌದು, 'ಕರ್ಣ' ಧಾರಾವಾಹಿಯಲ್ಲಿ ಇನ್ಮುಂದೆ ರೋಚಕ ತಿರುವುಗಳು ಸಿಗುವ ಸೂಚನೆ ಸಿಗುತ್ತಿದೆ. ಕರ್ಣ ಹಾಗೂ ರಮೇಶನ ಸಂಬಂಧ, ಕರ್ಣ ಹಾಗೂ ನಿತ್ಯಾಳ ಲವ್ ಸ್ಟೋರಿ, ನಮ್ರತಾ ಗೌಡ ಮದುವೆ ಟ್ಯಾಕ್ ಎಲ್ಲದರೂ ಮುಂದಿನ ದಿನಗಳಲ್ಲಿ ಮತ್ತಷ್ಟು ರೋಚಕ ಟ್ವಿಸ್ಟ್‌ಗಳು ಸಿಗುವ ಸಾಧ್ಯತೆ ಇವೆ. ಸದ್ಯ ಇವತ್ತಿನ ಎಪಿಸೋಡ್‌ನಲ್ಲಿ ಕರ್ಣ ಹಾಗೂ ರಮೇಶನ ನಡುವಿನ ಅಗ್ರಿಮೆಂಟ್ ರಹಸ್ಯ ಬಯಲಾಗಿದೆ. ಮಗನ ಕೆನ್ನೆಗೆ ಬಾರಿಸಿ, ಮೊಮ್ಮಗಳ ಮದುವೆ ಮಾಡಿಸುವುದಕ್ಕೆ ಅಜ್ಜಿ ಹೊರಟಿದ್ದಾರೆ. ಇತ್ತ ನಮ್ರತಾ ಮದುವೆ ಸಂಭ್ರಮ ನಡೆಯುತ್ತಿದೆ. ಅಲ್ಲಿ ಅಪಾಯದ ಮುನ್ಸೂಚನೆ ಸಿಕ್ಕಿದೆ.
'ಕರ್ಣ' ಸಾಕು ಮಗ ಅನ್ನೋದು ಈಗೇನು ರಹಸ್ಯವಾಗಿ ಉಳಿದಿಲ್ಲ. ಈ ಕಾರಣಕ್ಕೆ ರಮೇಶ ಹಾಗೂ ನಯನತಾರಾ ಇಬ್ಬರಿಗೆ 'ಕರ್ಣ'ನನ್ನು ಕಂಡರೆ ಆಗುವುದಿಲ್ಲ. ರಮೇಶ ನೇರವಾಗಿ ದ್ವೇಷ ಮಾಡಿದರೆ, ನಯನತಾರಾ ಹಿಂದೆಯಿಂದ ಪಿತೂರಿ ಮಾಡುತ್ತಿದ್ದಾಳೆ. ಕರ್ಣನಿಗೆ ಮಾನಸಿಕ ಹಿಂಸೆ ಕೊಡುತ್ತಿದ್ದಾರೆ. ಈ ಮಧ್ಯೆ ಕರ್ಣನಿಂದ ರಮೇಶ್ ಮದುವೇ ಆಗುವುದಿಲ್ಲ ಎಂದು ಅಗ್ರಿಮೆಂಟ್ ಬೇರೆ ಮಾಡಿಸಿಕೊಂಡಿದ್ದಾನೆ. ಅದೇ ಅಗ್ರಿಮೆಂಟ್ ಈಗ ಬಟಾಬಯಲಾಗಿದೆ. ಅಜ್ಜಿಗೆ ಸಿಕ್ಕು, ರಮೇಶನ ಕೆನ್ನೆಗೆ ಒಂದು ಏಟು ಕೊಟ್ಟು, ಅಗ್ರಿಮೆಂಟ್ ಅನ್ನು ಹರಿದುಹಾಕಿದ್ದೂ ಆಗಿದೆ. ಈಗ ಮುಂದೇನು? ಅನ್ನೋದೇ ಪ್ರಶ್ನೆ.

ಮನೆಯಲ್ಲಿ ಎಲ್ಲರೂ ಕರ್ಣನಿಗೆ ಹಿಂಸೆ ನೀಡುತ್ತಿದ್ದರೆ, ಒಂದಿಬ್ಬರು ಮಾತ್ರ 'ಕರ್ಣ'ನ ಜೊತೆ ನಿಂತಿದ್ದಾರೆ. ಅದರಲ್ಲಿ ಬಂಗಾರಿ ಅಂದ್ರೆ, ಕರ್ಣನ ಅಜ್ಜಿ ಕೂಡ ಒಬ್ಬರು. ಅವರಿಗೆ ಕರ್ಣ ಹಾಗೂ ರಮೇಶನ ನಡುವೆ ಮಾಡಿಕೊಂಡ ಒಪ್ಪಂದ ಬಗ್ಗೆ ಗೊತ್ತಾಗಿ ಹೋಗಿದೆ. ಅದಕ್ಕೆ ಕೋಪಗೊಂಡು ತನ್ನ ಮಗ ರಮೇಶನಿಗೆ ಎಲ್ಲರ ಎದುರು ಕೆನ್ನೆಗೆ ಬಾರಿಸಿ, ಕರ್ಣನಿಗೆ ಮದುವೆ ಮಾಡಿಸಿಯೇ ಮಾಡಿಸುತ್ತೇನೆ ಎಂದು ಹೇಳಿದ್ದಾರೆ. ಹಾಗೇ ಅಗ್ರಿಮೆಂಟ್ ಪೇಪರ್ ಅನ್ನು ಹರಿದು ರಮೇಶನ ಮುಂದೆನೇ ಬಿಸಾಕಿದ್ದಾರೆ.
ಜೀ ಕನ್ನಡ ರಿಲೀಸ್ ಮಾಡಿರುವ 'ಕರ್ಣ' ಸೀರಿಯಲ್‌ನ ಇವತ್ತಿನ ಪ್ರೋಮೊದಲ್ಲಿ ಈ ಟ್ವಿಸ್ಟ್ ಅನ್ನಷ್ಟೇ ರಿವೀಲ್ ಮಾಡಿದ್ದಾರೆ. ಆದರೆ, ಧಾರಾವಾಹಿಯಲ್ಲಿ ಕರ್ಣ ಏನು ಹೇಳುತ್ತಾನೆ? ಅಜ್ಜಿಯ ಮಗ ರಮೇಶ ಅಗ್ರಿಮೆಂಟ್ ಅನ್ನು ಏನಂತ ಸಮರ್ಥಿಸಿಕೊಳ್ಳುತ್ತಾನೆ? ನಯನತಾರಾ ಈ ಸನ್ನಿವೇಶವನ್ನು ಹೇಗೆ ಹ್ಯಾಂಡಲ್ ಮಾಡುತ್ತಾಳೆ? ಅಜ್ಜಿ ಕರ್ಣನನ್ನು ಮದುವೆ ಮಾಡಿತ್ತಾರಾ? ಈ ಎಲ್ಲಾ ಪ್ರಶ್ನೆಗಳಿಗೆ ಇವತ್ತಿನ ಎಪಿಸೋಡ್‌ನಲ್ಲಿ ಉತ್ತರ ಸಿಗಬಹುದು.
ಇತ್ತ ನಿಧಿಯ ಅಕ್ಕನ ಮದುವೆ ಸಮಾರಂಭ ನಡೆಯುತ್ತಿದೆ. ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಹೀಗಾಗಿ ನಿಧಿ ಅಕ್ಕನ ಮದುವೆಗೆ 'ಕರ್ಣ'ನ ಮನೆಯ ಸದಸ್ಯರು ಕೂಡ ಬಂದು ಸಂಭ್ರಮಿಸಿದ್ದಾರೆ. ಎಲ್ಲರೂ ಪಕ್ಕಾ ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸುತ್ತಿದ್ದಾರೆ. ಈ ವೇಳೆ ನಮ್ರತಾಗೆ ಒಂದು ಕರೆ ಬರುತ್ತೆ. ಅದನ್ನು ರಿಸೀವ್ ಮಾಡುವ ಸಂದರ್ಭದಲ್ಲಿ ತಲೆಯ ಮೇಲೆ ತೂಗಾಡುತ್ತಿದ್ದ ದೀಪ ಬಿಳುವುದರಲ್ಲಿ ಇರುತ್ತೆ. ಆಗ ಕರ್ಣ ಅವಳನ್ನು ಕಾಪಾಡವ ಸನ್ನಿವೇಶವಿದೆ. ಇದೆಲ್ಲ ಯಾಕೆ ಆಗುತ್ತಿದೆ? ಅನ್ನೋದು ಇವತ್ತಿನ ಎಪಿಸೋಡ್‌ನಲ್ಲಿ ಗೊತ್ತಾಗಲಿದೆ.


Click it and Unblock the Notifications











