TRP Report: ಇದೇ ಕಳೆದ ವಾರ ಜನ ಮೆಚ್ಚಿದ ನಂಬರ್ 1 ಧಾರಾವಾಹಿ; 4 ವಾಹಿನಿಗಳ ಟಾಪ್ 5 ಶೋಗಳು ಇವೇ
ಕನ್ನಡ ಕಿರುತೆರೆಯಲ್ಲಿ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳ ವಿಚಾರದಲ್ಲಿ ಸಿಕ್ಕಾಪಟ್ಟೆ ಪೈಪೋಟಿಯಿದೆ. ಕನ್ನಡ ನಾಲ್ಕು ಪ್ರಮುಖ ವಾಹಿನಿಗಳು ಕಾಂಪಿಟೇಷನ್‌ಗೆ ಬಿದ್ದು ಧಾರಾವಾಹಿಗಳನ್ನು ಪ್ರಸಾರ ಮಾಡುತ್ತಿವೆ. ಜೀ ಕನ್ನಡ, ಕಲರ್ಸ್ ಕನ್ನಡ, ಸ್ಟಾರ್ ಸುವರ್ಣ ಹಾಗೂ ಉದಯ ಟಿವಿ ಈ ನಾಲ್ಕು ವಾಹಿನಿಗಳ ಸೀರಿಯಲ್ ಹಾಗೂ ರಿಯಾಲಿಟಿ ಶೋಗಳು ಪ್ರತಿವಾರ ಪ್ರೇಕ್ಷಕರನ್ನು ಸೆಳೆಯುತ್ತಲೇ ಇವೆ.
ಕಳೆದ ವಾರವೂ ಜೀ ಕನ್ನಡ ನಂಬರ್ ಒನ್ ಸ್ಥಾನದಲ್ಲಿದೆ. 'ಕರ್ಣ', 'ಅಣ್ಣಯ್ಯ', 'ಲಕ್ಷ್ಮಿ ನಿವಾಸ', 'ಅಮೃತಧಾರೆ' ಧಾರಾವಾಹಿಗಳನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಕೆಲ ಧಾರಾವಾಹಿಗಳ ಟಿಆರ್‌ಪಿಯಲ್ಲಿ ಕೊಂಚ ಮಟ್ಟಿಗೆ ಏರು-ಪೇರಾಗಿದ್ದರೂ ತೀರಾ ಕುಸಿತ ಕಂಡಿಲ್ಲ. ಹಾಗೇ ಕಲರ್ಸ್ ಕನ್ನಡದಲ್ಲೂ 'ನಂದಗೋಕುಲ', 'ಮುದ್ದು ಸೊಸೆ' ಧಾರಾವಾಹಿಗಳಿಗೆ ಉತ್ತಮ ಟಿಆರ್‌ಪಿ ಬಂದಿದೆ. 'ಪವಿತ್ರ ಬಂಧನ'ದಲ್ಲೂ ಏರಿಕೆ ಕಂಡಿದೆ.

ಹಾಗೇ ಸ್ಟಾರ್ ಸುವರ್ಣ ಎರಡನೇ ಸ್ಥಾನವನ್ನು ಕಾಯ್ದುಕೊಂಡಿದೆ. ಈ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಶಾರದೆ', 'ನಿನ್ನ ಜೊತೆ ನನ್ನ ಕಥೆ' ಹಾಗೂ 'ಜೈ ಲಲಿತಾ' ಧಾರಾವಾಹಿಯಲ್ಲಿ ಏರಿಕೆ ಕಂಡಿದೆ. ಉದಯ ಟಿವಿಯ ಒಟ್ಟು ಟಿಆರ್‌ಪಿಯಲ್ಲಿ ಇಳಿಕೆ ಕಂಡಿದ್ದರೂ, 'ಶಾಂಭವಿ'ಗೆ ಉತ್ತಮ ಟಿಆರ್‌ಪಿ ಬಂದಿದೆ. ಆದರೆ, 'ಸಿಂಧು ಭೈರವಿ', 'ಮೈನಾ' ಧಾರಾವಾಹಿಗಳಲ್ಲಿ ಇಳಿಕೆ ಕಂಡಿದೆ. ಹಾಗಿದ್ದರೆ, ಈ ವಾಹಿನಿಗಳ ಟಾಪ್ 5 ಸೀರಿಯಲ್‌ಗಳು ಯಾವುವು? ತಿಳಿಸಿ.
ಜೀ ಕನ್ನಡ- ಟಾಪ್ 5 ಸೀರಿಯಲ್
ಜೀ ಕನ್ನಡ 464 ಅಂಕಗಳೊಂದಿಗೆ ಟಾಪ್ ಸ್ಥಾನದಲ್ಲಿದೆ. ಹಿಂದಿನ ವಾರದ ಟಿಆರ್‌ಪಿಗೆ ಹೋಲಿಸಿದರೆ, 14 ಅಂಕಗಳು ಹೆಚ್ಚಾಗಿವೆ. ಜೀ ಕನ್ನಡ ಟಾಪ್ ಸೀರಿಯಲ್‌ಗಳೆಂದರೆ, 'ಕರ್ಣ', 'ಅಣ್ಣಯ್ಯ', 'ಲಕ್ಷ್ಮಿ ನಿವಾಸ', 'ಅಮೃತಧಾರೆ'. ಈ ಧಾರಾವಾಹಿಗಳ ಈ ವಾರದ ಟಿಆರ್‌ಪಿ ರಿಪೋರ್ಟ್ ಹೀಗಿದೆ.
ಕರ್ಣ 5.8
ಅಣ್ಣಯ್ಯ 5.5
ಲಕ್ಷ್ಮಿ ನಿವಾಸ 5.0
ಲಕ್ಷ್ಮಿ ನಿವಾಸ/ಆದಿ ಲಕ್ಷ್ಮಿ ಪುರಾಣ-ಮಹಾಸಂಗಮ 4.6
ಅಮೃತಧಾರೆ 4.4
ಶಾರದೆ 3.7
ನಿನ್ನ ಜೊತೆ ನನ್ನ ಕಥೆ 3.2
ಆಸೆ 3.2
ಜೈ ಲಲಿತಾ 2.9
ನೀ ಇರಲು ಜೊತೆಯಲಿ 2.7

ಕಲರ್ಸ್ ಕನ್ನಡ 292 ಅಂಕಗಳೊಂದಿಗೆ ಟಾಪ್ 3 ಸ್ಥಾನದಲ್ಲಿ ಇದೆ. ಈಗಾಗಲೇ ಪ್ರಸಾರ ಆಗುತ್ತಿರುವ 'ನಂದಗೋಕುಲ', 'ಮುದ್ದು ಸೊಸೆ', 'ಶ್ರೀಗಂಧದ ಗುಡಿ', 'ಪವಿತ್ರ ಬಂಧನ', 'ಗೌರಿ ಕಲ್ಯಾಣ' ಧಾರಾವಾಹಿಗಳು ಉತ್ತಮ ಪ್ರದರ್ಶನ ನೀಡಿವೆ.
ನಂದಗೋಕುಲ 4.3
ಮುದ್ದು ಸೊಸೆ 4.0
ಶ್ರೀಗಂಧದ ಗುಡಿ 4.0
ಪವಿತ್ರ ಬಂಧನ 3.8
ಗೌರಿ ಕಲ್ಯಾಣ 3.3
ಉದಯ ಟಿವಿ- ಟಾಪ್ 5 ಸೀರಿಯಲ್
ಇನ್ನು ನಾಲ್ಕನೇ ಸ್ಥಾನದಲ್ಲಿರುವ ಉದಯ ಟಿವಿ 184 ಅಂಕಗಳನ್ನು ಪಡೆದುಕೊಂಡಿವೆ. 'ಶಾಂಭವಿ', 'ಸಿಂಧು ಭೈರವಿ', 'ಮೈನಾ', 'ಕೃಷ್ಣ ವಂಶಿ' ಧಾರಾವಾಹಿಗಳು ಟಾಪ್ 5 ಸ್ಥಾನದಲ್ಲಿ ಇವೆ.
ಶಾಂಭವಿ 2.2
ಯುವರತ್ನ 2.0
ಸಿಂಧು ಭೈರವಿ 1.9
ಮೈನಾ 1.9
ಕೃಷ್ಣ ವಂಶಿ 1.8


Click it and Unblock the Notifications
