Bigg Boss 10: "ನನ್ನಿಂದಲೇ ಕಾರ್ತಿಕ್, ಸಂಗೀತಾ, ಪ್ರತಾಪ್ ಟಾಪ್‌ 3ಗೆ ಹೋದ್ದು"- ವಿನಯ್ ಗೌಡ

ಬಿಗ್‌ಬಾಸ್ ಕನ್ನಡ ಸೀಸನ್ 10ರಲ್ಲಿ ವಿನಯ್ ಗೌಡ ಮೂರನೇ ರನ್ನರ್ ಅಪ್ ಆಗಿ ಹೊರಬಿದ್ದಿದ್ದಾರೆ. ಅವರ ನೇರಮಾತು, ನಿಷ್ಠುರದ ನಡತೆ, ಏಟಿಗೆ ಎದುರೇಟು ಕೊಟ್ಟು ಬಿಗ್‌ಬಾಸ್ ಮನೆಯಲ್ಲಿ ವಿನಯ್ ಗೌಡ ಅಬ್ಬರಿಸಿದ್ದರು. ಮನೆಯೊಳಗಿದ್ದ ಬಿಗ್‌ಬಾಸ್ ಸ್ಪರ್ಧಿಗಳಿಗೆ ನಿರ್ಭಯವಾಗಿ ಟಕ್ಕರ್ ಕೊಡುತ್ತಿದ್ದರು.

ಬಿಗ್‌ಬಾಸ್ ಕನ್ನಡ ಸೀಸನ್ 10ರ ಫಿನಾಲೆ ತಲುಪಿದ ವಿನಯ್ ಗೌಡ ನಿರೀಕ್ಷೆ ಮಾಡದ ರೀತಿ ಹೊರಬಿದ್ದಿದ್ದರು. ಬಿಗ್‌ಬಾಸ್‌ನಿಂದ ಹೊರಬರುತ್ತಿದ್ದಂತೆ ವಿನಯ್ ಗೌಡ ಪರೋಕ್ಷವಾಗಿ ಅಸಮಧಾನ ಹೊರಹಾಕಿದ್ದರು. ಈಗ ಜಿಯೋ ಸಿನಿಮಾಗೆ ನೀಡಿದ ಸಂದರ್ಶನದಲ್ಲಿ ವಿನಯ್ ಗೌಡ ಓಪನ್ ಆಗಿ ಮಾತಾಡಿದ್ದಾರೆ.

Karthik Sangeetha Prathap came top 3 because of me said bigg boss Kannada 10 Vinay

"ಬಿಗ್‌ಬಾಸ್ ಮನೆಯಿಂದ ಮೂರನೇ ರನ್ನರ್ ಅಪ್‌ ಆಗಿ ಹೊರಗೆ ಬಂದಿದ್ದೀನಿ. ಚೆನ್ನಾಗಿ ಅನಿಸುತ್ತಿದೆ ಎಂದು ಖಂಡಿತ ಹೇಳುವುದಕ್ಕೆ ಸಾಧ್ಯವಿಲ್ಲ. ಯಾಕೆಂದರೆ, ನಾನು ಕನಿಷ್ಠ ಪಕ್ಷ ಟಾಪ್‌ 3ನಲ್ಲಿ ಇರುತ್ತೇನೆ ಎಂದುಕೊಂಡಿದ್ದೆ. ಆದರೆ, ನಮ್ಮ ಜನರೇ ವೋಟ್ ಮಾಡಿರುವುದು. ಇಲ್ಲಿ ತನಕ ಕರೆದುಕೊಂಡು ಬಂದವರಿಗೆ ಥ್ಯಾಂಕ್ಸ್ ಹೇಳುವುದಕ್ಕೆ ಇಷ್ಟಪಡ್ತೀನಿ." ಎಂದು ವಿನಯ್ ಗೌಡ ಅಭಿಪ್ರಾಯ ಪಟ್ಟಿದ್ದಾರೆ.

ಬಿಗ್‌ಬಾಸ್ ಗೆಲ್ಲದೇ ಇದ್ದಿದ್ದಕ್ಕೆ ಬೇಸರ ಹೊರಹಾಕಿದ್ದಾರೆ. ಆದರೆ, ಜನರ ದೃಷ್ಟಿಯಲ್ಲಿ ಚಾಂಪಿಯನ್ ಆಗಿದ್ದಾಗಿ ಖುಷಿ ವ್ಯಕ್ತಪಡಿದ್ದಾರೆ. "ಮನೆಯೊಳಗೆ ಅಗ್ರೆಸಿವ್ ಆಗಿ ಆಡುತ್ತಿದ್ದೆ. ಆದರೆ, ಅದು ಬೇಕು ಬೇಕಂತ ಮಾಡಿದ್ದಲ್ಲ. ಆ ಮೊಮೆಂಟ್‌ಗೆ, ಆ ಟಾಸ್ಕ್‌ಗೆ ಏನು ಬೇಕಾಗಿತ್ತೋ ಅದನ್ನು ಮಾಡಿದ್ದೀನಿ. ಮತ್ತೆ ಡೇ ಒನ್‌ನಿಂದ ಬಿಗ್‌ಬಾಸ್ ಸ್ಟಾರ್ಟ್‌ ಆಯ್ತು ಅಂದ್ರೆ ಈ ಹಿಂದೆ ಇದ್ದ ಹಾಗೆಯೇ ಇರ್ತೀನಿ. ಹಾಗಾಗಿ ನಾನು ನಡೆದುಕೊಂಡ ರೀತಿಗೆ ಯಾವ ರಿಗ್ರೆಟ್ಸ್ ಕೂಡ ಇಲ್ಲ" ಎಂದು ವಿನಯ್ ಜಿಯೋ ಸಿನಿಮಾ ಸಂದರ್ಶನದಲ್ಲಿ ಹೇಳಿದ್ದಾರೆ.

Karthik Sangeetha Prathap came top 3 because of me said bigg boss Kannada 10 Vinay

ಬಿಗ್‌ಬಾಸ್‌ ಮನೆಯಲ್ಲಿ ವಿನಯ್ ಮೇಲೆ ಗಂಭೀರ ಆರೋಪವಿತ್ತು. ಯಾರೆಲ್ಲ ವಿನಯ್‌ಗೆ ಸಪೋರ್ಟ್ ಮಾಡಿದ್ದಾರೋ ಅವರೆಲ್ಲ ಮನೆಯಿಂದ ಹೊರಗೆ ಹೋಗಿದ್ದಾರೆಂದು ಆರೋಪಿಸಿದ್ದರು. "ಬ್ಯಾಡ್‌ಲಕ್ ನನ್ನ ಜೊತೆಗೆ ಇರುವವರೇ ಒಬ್ಬೊಬ್ಬರಾಗಿ ಎಲಿಮಿನೇಟ್ ಆಗಿ ಹೊರಗೆ ಹೋದರು. ಆದರೆ, ನಾವು ಮನೆಯೊಳಗಿದ್ದರೂ ಹೊರಗಿದ್ದರೂ ನಾವು ಫ್ರೆಂಡ್ಸ್ ಆಗಿಯೇ ಇದ್ದೆವು. ಆದರೆ, ಆ ಇನ್ನೊಂದು ಗುಂಪು ಅಲ್ಲೇ ಕಿತ್ತಾಡ್ಕೊಂಡು, ಹೊಡೆದಾಟ್ಕೊಂಡು, ಪರಚಾಡ್ಕೊಂಡು ಬೇರೆಯಾಗಿಬಿಟ್ಟರು. ಹೊರಗೆ ಬಂದ್ಮೇಲೆ ಇನ್ನು ಏನೇನು ಆಗುತ್ತೋ ಗೊತ್ತಿಲ್ಲ." ಎಂದು ಹೇಳಿದ್ದಾರೆ.

ಬಿಗ್‌ಬಾಸ್ ಮನೆಯೊಳಗೆ ತಾನೆಂದು ಫೇಕ್ ಆಟ ಆಡಿಲ್ಲ ಎಂದು ಒತ್ತಿ ಹೇಳಿದ್ದಾರೆ. "ನೂರಕ್ಕೂ ಹೆಚ್ಚು ದಿನಗಳ ಕಾಲ ಆಕ್ಟಿಂಗ್ ಮಾಡೋದಕ್ಕೆ ಆಗುವುದಿಲ್ಲ. ನೂರಕ್ಕೂ ಹೆಚ್ಚು ದಿನ ಆಕ್ಟ್ ಮಾಡಿದ್ರೂ ಆ ಆಕ್ಟಿಂಗ್‌ನ ಲೈಫ್‌ಲಾಂಗ್ ಹಾಗೇ ಮಾಡಿಕೊಂಡು ಹೋಗಬೇಕು. ಇಷ್ಟರಲ್ಲೇ ಆ ಆಕ್ಟಿಂಗ್ ಮುಗಿಯತ್ತೆ. ಮನೆಯೊಳಗೆ ಯಾರೆಲ್ಲ ಫೇಕ್ ಆಗಿದ್ರು ಅನ್ನೋದು ನಿಮಗೆ ಗೊತ್ತಾಗತ್ತೆ. ಯಾಕೆಂದರೆ, ಜೀವನ ಪರ್ಯಂತ ಆಕ್ಟಿಂಗ್ ಮಾಡಿಕೊಂಡು ಇರೋಕೆ ಸಾಧ್ಯವಿಲ್ಲ. ಆಕ್ಟಿಂಗ್ ಕಂಟಿನ್ಯೂ ಮಾಡಿ ಲೈಫ್‌ನಲ್ಲಿ ಚೆನ್ನಾಗಿರಿ" ಎಂದಿದ್ದಾರೆ.

"ನಾನು ಎಲ್ಲಿಗೂ ಫೇಕ್ ಆಗಿಲ್ಲ. ಯಾರಿಗೆ ಎಷ್ಟು ಬೇಜಾರಾದ್ರೂ ಪರವಾಗಿಲ್ಲ. ಯಾರು ಎಷ್ಟೇ ಅಹಂಕಾರ ಎಂದು ಹೇಳಿದರೂ ಪರವಾಗಿಲ್ಲ. ಯಾರು ಎಷ್ಟೇ ವಿಲನ್ ಅಂದ್ರೂ ಪರವಾಗಿಲ್ಲ... ನಾನದನ್ನು ಒಪ್ಕೋತೀನಿ. ನಾನು ವಿಲನ್ನೇ. ಕಾರ್ತಿಕ್, ಸಂಗೀತಾ ಹಾಗೂ ಪ್ರತಾಪ್ ಟಾಪ್‌ 3ಗೆ ಹೋಗಿದ್ದಾರೆ ಅಂದ್ರೆ ಅದರ ಕ್ರೆಡಿಟ್ ನನಗೇ ಸಲ್ಲಬೇಕು. ಆ ಮೂವರೂ ನನ್ನ ಜೊತೆಗೆ ಜಗಳ ಮಾಡಿಕೊಂಡೇ, ಫೈಟ್ ಮಾಡಿಕೊಂಡೇ ಅಲ್ಲಿಗೆ ತಲುಪಿರುವುದು." ಎಂದು ವಿನಯ್ ಹೇಳಿದ್ದಾರೆ.

More from Filmibeat

English summary
Bigg Boss Kannada 10; Yes I'm villain said Vinay
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X