ಅಗಸ್ತ್ಯ-ಕಾವೇರಿ ಇಬ್ಬರದ್ದೂ ಕೆಟ್ಟ ಪರಿಸ್ಥಿತಿ; ಪರಿಹಾರ ಕೊಡುತ್ತಾರಾ ಪ್ರಮೋದಾದೇವಿ?
'ಕಾವೇರಿ ಕನ್ನಡ ಮೀಡಿಯಂ'ನಲ್ಲೀಗ ಪ್ರಮೋದಾ ದೇವಿ ಮುಂದೆ ಬರಲೇಬೇಕಿದೆ. ಮೊಮ್ಮಗನನ್ನು ಉಳಿಸಲೇಬೇಕಿದೆ. ಅಜ್ಜಿಯ ಆಸೆಗಾಗಿ ಮೊಮ್ಮಗ ಕಾವೇರಿಯ ಕುತ್ತಿಗೆಗೆ ತಾಳಿ ಕಟ್ಟಿದ. ಆದರೆ, ಮನೆಯವರಿಗೆ ಈ ವಿಚಾರ ಗೊತ್ತಾಗದ ರೀತಿ ಪ್ರಮಾಣ ಮಾಡಿಸಿಕೊಂಡಿದ್ದಾನೆ. ಇದರಿಂದಾಗಿಯೇ ಹಲವು ಸಮಸ್ಯೆಗಳಿಗೆ ಸಿಲುಕುತ್ತಿದ್ದಾನೆ. ಕಷ್ಟಕಾಲದಲ್ಲಿ ಬಾಳು ಕೊಟ್ಟವರಿಗೆ, ಅಪ್ಪನನ್ನು ಉಳಿಸಿಕೊಟ್ಟಿದ್ದಕ್ಕಾಗಿ, ಕಾವೇರಿ ಋಣಿಯಾಗಿದ್ದಾಳೆ.
ಸಂಕ್ರಾಂತಿ ಹಬ್ಬ ಹತ್ತಿರ ಬರುತ್ತಿದೆ. ಈ ಹಬ್ಬವೇ ಅಗಸ್ತ್ಯನಿಗೆ ಗೊಂದಲದಲ್ಲಿಯೇ ಸಿಲುಕುವಂತೆ ಮಾಡಿದೆ. ಮನೆಯವರಿಗೆ ಸತ್ಯ ಗೊತ್ತಿಲ್ಲ. ಕಾವೇರಿ ಮನೆಯವರಿಗೆ ಸತ್ಯ ಗೊತ್ತಿದ್ದರೂ ಎಲ್ಲರ ಮುಂದೆ ಹೇಳುವಂತೆಯೂ ಇಲ್ಲ. ಕಾವೇರಿ ಅಪ್ಪನಿಗೆ ಅಳಿಯ ಎಂದು ಕರೆಯುವಾಸೆ. ಆದರೆ, ಅಗಸ್ತ್ಯನಿಗೆ ಈ ಪ್ರೀತಿಯೇ ಸಂಕಷ್ಟಕ್ಕೆ ಸಿಲುಕಿಸಿದೆ.

ಕಾವೇರಿ ತಂದೆಯಿಂದ ಆಹ್ವಾನ
ಮಗಳನ್ನು ಮದುವೆ ಮಾಡಿಕೊಟ್ಟ ಮೇಲೆ ಚಂದ್ರು ಸಿಟಿ ಕಡೆಗೆ ಬಂದಿರಲಿಲ್ಲ. ಯುಗಾದಿ ಹಬ್ಬಕ್ಕೆ ಕರೆದಾಗಲೂ ಏನೋ ಒಂದು ನೆಪ ಹೇಳಿ ಅಗಸ್ತ್ಯ ಮತ್ತು ಕುಟುಂಬಸ್ಥರು ತಪ್ಪಿಸಿಕೊಂಡಿದ್ದರು. ಈಗ ಸಂಕ್ರಾಂತಿ ಹಬ್ಬ ಹತ್ತಿರವಾಗುತ್ತಿದೆ. ಹೀಗಾಗಿ ಚಂದ್ರು ನೇರವಾಗಿ ಅಳಿಯನ ಮನೆಗೆ ಬಂದಿದ್ದಾರೆ. ಮಗಳನ್ನು ಕರೆದು ಅಳಿಯನ ಮನೆಯವರನ್ನು ಕರೆದುಕೊಂಡು ಹೋಗುವುದಕ್ಕೆ ಬಂದಿದ್ದಾರೆ. ಆತ್ಮೀಯವಾಗಿ, ಪ್ರೀತಿಯಿಂದ ಮನೆಯವರೆಲ್ಲರನ್ನು ಕರೆದಿದ್ದಾರೆ. ಈ ಬೆಳವಣಿಗೆ ಅಗಸ್ತ್ಯನ ಕುತ್ತಿಗೆಗೆ ಬಂದಿತ್ತು. ಅಲ್ಲಿಯೂ ಪ್ರಮೋದಾ ದೇವಿ ಬಚಾವ್ ಮಾಡಿದ್ದಾರೆ.
ವೃಂದಾ ಕಡೆಯಿಂದಾನೂ ಹಬ್ಬಕ್ಕೆ ಆಹ್ವಾನ
ಚಂದ್ರು ಆಡಿದ ಮಾತುಗಳು, ಹಬ್ಬಕ್ಕೆ ಒತ್ತಾಯಿಸಿದ ಕಾರಣ ಕೆಲವರಿಗೆ ಶಾಕ್ ಎನಿಸಿದೆ. ಇದೆ ವೇಳೆ ವೃಂದಾ ಕೂಡ ಒಂದು ಮನವಿ ಮಾಡಿದ್ದಾಳೆ. ಈ ಸಲದ ಸಂಕ್ರಾಂತಿಯನ್ನು ನಮ್ಮ ಮನೆಯಲ್ಲಿಯೇ ಯಾಕೆ ಆಚರಿಸಬಾರದು ಎಂದು ಕೇಳಿದ್ದಾಳೆ. ಅಗಸ್ತ್ಯನ ಅಮ್ಮ ನಮ್ಮ ಮನೆಗೆ ಬಂದು ಬಿಡು ವೃಂದಾ ಇಲ್ಲೆ ಆಚರಿಸೋಣಾ ಎಂದಾಗಲೂ ಅಗಸ್ತ್ಯನನ್ನು ಮದುವೆಯಾದ ಮೇಲಷ್ಟೇ ಆ ರೀತಿ ಬರುವುದು. ಈ ಬಾರಿ ನಮ್ಮನೆಗೆ ಬನ್ನಿ ಎಂದೇ ಮನವಿ ಮಾಡಿದ್ದಾಳೆ. ಇದಕ್ಕೆ ಮನೆಯವರೆಲ್ಲ ಒಪ್ಪಿಗೆ ನೀಡಿದ್ದು, ಅಜ್ಜಿ ಮಾತ್ರ ಏನು ಮಾತನಾಡಿಲ್ಲ.
ಕಾವೇರಿ ಆಸೆಗೆ ತಣ್ಣೀರು ಎರಚಿದ ಅಗಸ್ತ್ಯ
ಕಾವೇರಿ ಬಗ್ಗೆ ಅಗಸ್ತ್ಯನಿಗೆ ಕಾಳಜಿಯೂ ಇದೆ. ಮೊದಲೇ ಜ್ವರದಿಂದ ಬಳಲುತ್ತಿದ್ದ ಕಾವೇರಿ ಈಗ ಏನು ಮಾಡುತ್ತಿದ್ದಾಳೆಂದು ವಿಚಾರಿಸಿಕೊಂಡು ಹೋಗುವುದಕ್ಕೆ ಬಂದಿದ್ದಾನೆ. ಕಾವೇರಿಗೆ ಮಾತ್ರ ಅಗಸ್ತ್ಯನನ್ನು ಹೇಗಾದರೂ ಮಾಡಿ ಊರಿಗೆ ಕರೆದುಕೊಂಡು ಹೋಗಬೇಕೆನ್ನುವ ಆಸೆ ಇತ್ತು. ಅಗಸ್ತ್ಯ ಆರೋಗ್ಯ ವಿಚಾರಿಸುವುದಕ್ಕೆಂದು ಬಂದಾಗ, ಹಳ್ಳಿ ಜನ, ಶಾಲೆಯ ಮಕ್ಕಳು, ಮನೆಯವರು ನಿಮಗಾಗಿ ಕಾಯುತ್ತಿದ್ದಾರೆ. ಹೇಗಾದರೂ ಮಾಡಿ ಊರಿಗೆ ಬರುವುದಕ್ಕೆ ಆಗುತ್ತಾ ಎಂದು ಕೇಳಿದ್ದಾಳೆ.
ಪ್ರಮೋದಾ ದೇವಿಯೇ ಪರಿಹಾರ ಕೊಡುತ್ತಾರಾ..?
ಮೊದಲೇ ಅಗಸ್ತ್ಯನ ಸ್ಥಿತಿ ಅಡ್ಡಕತ್ತರಿಯಲ್ಲಿ ಸಿಲುಕಿದಂತೆ ಆಗಿದೆ. ಇತ್ತ ಅಕ್ಕನ ಮದುವೆಯಾಗಬೇಕೆಂದರೆ ವೃಂದಾಳನ್ನು ಒಪ್ಪಬೇಕಾಗಿದೆ. ಇತ್ತ ಕಾವೇರಿಯನ್ನಂತು ಬಿಡುವ ಪ್ರಶ್ನೆಯೇ ಇಲ್ಲ. ಪ್ರೀತಿ ಇಲ್ಲದೆ ಹೋದರೂ ಕಟ್ಟಿದ ತಾಳಿಗಾಗಿಯಾದರೂ ಕಾವೇರಿಯನ್ನು ಕಾಪಾಡುತ್ತಾನೆ. ಈಗ ಪರಿಸ್ಥಿತಿ ಸರಿ ಇಲ್ಲದೆ ಇರುವ ಕಾರಣ ಏನು ಮಾಡುವುದಕ್ಕೆ ಆಗುತ್ತಿಲ್ಲ. ಇತ್ತ ಕಾವೇರಿ ಬೇರೆ ಬಂದೇ ಬರಬೇಕು ಎಂದಾಗ ಅಗಸ್ತ್ಯನಿಗೆ ಕೋಪ ಬಂದಿದೆ. ಯಾಕೆ ನೀವೂ ನನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದಿಲ್ಲ ಎಂದು ಕೋಪ ಮಾಡಿಕೊಂಡು ಹೊರಟು ಹೋಗಿದ್ದಾನೆ. ಸಮಸ್ಯೆ ಎಂದು ಬಂದಾಗ ಪ್ರಮೋದಾ ದೇವಿಯೇ ಮುಂದೆ ನಿಲ್ಲುತ್ತಿದ್ದರು. ಈಗ ಅಗಸ್ತ್ಯನ ಈ ಸಮಸ್ಯೆಗೂ ಪರಿಹಾರ ಹುಡುಕುತ್ತಾರಾ ಅಂತ ನೋಡಬೇಕಿದೆ.


Click it and Unblock the Notifications











