»   » ಜೂನ್ 12 ರಿಂದ ವಾರ ಪೂರ 'ಕಾಮಿಡಿ' ಕಿಲಾಡಿಗಳ ಕಲರವ

ಜೂನ್ 12 ರಿಂದ ವಾರ ಪೂರ 'ಕಾಮಿಡಿ' ಕಿಲಾಡಿಗಳ ಕಲರವ

Posted By:
Subscribe to Filmibeat Kannada

'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮ ಯಶಸ್ವಿಯಾಗಿ ಪೂರ್ಣಗೊಂಡ ಬಳಿಕ, ಅದರಿಂದ ಪ್ರೇರಿತಗೊಂಡ ಜೀ ಕನ್ನಡ ವಾಹಿನಿ ಸದ್ಯ ಅದೇ ಕಾಮಿಡಿ ಕಿಲಾಡಿಗಳ ಪ್ರತಿಭೆಯನ್ನೇ ಬಳಸಿಕೊಂಡು 'ಕಿಲಾಡಿ ಕುಟುಂಬ' ಎಂಬ ಹೊಸ ಪರಿಕಲ್ಪನೆಗೆ ಚಾಲನೆ ಕೊಟ್ಟಿದೆ. ಆ ಮೂಲಕ ಕಾಮಿಡಿ ಕಿಲಾಡಿಗಳೆಲ್ಲ 'ಕಿಲಾಡಿ ಕುಟುಂಬ'ದ ಮೂಲಕ ಮತ್ತೆ ಒಂದಾಗಿದ್ದಾರೆ.

ಈ ಹಿಂದೆ 'ಕಾಮಿಡಿ ಕಿಲಾಡಿಗಳು' ವಾರಾಂತ್ಯದಲ್ಲಿ ನಿಮ್ಮ ಮನೆಗೆ ಬಂದು ಹೊಟ್ಟೆ ಹುಣ್ಣಾಗುವಷ್ಟು ನಗಿಸುತ್ತಿದ್ದರು. ಆದ್ರೀಗ 'ಕಿಲಾಡಿ ಕುಟುಂಬ' ವಾರ ಪೂರ.. ಅಂದ್ರೆ.. ಸೋಮವಾರದಿಂದ ಶುಕ್ರವಾರ ನಿಮ್ಮನ್ನೆಲ್ಲ ನಕ್ಕು ನಲಿಸಲಿದ್ದಾರೆ.

'ಕಿಲಾಡಿ ಕುಟುಂಬ' ಶುರು ಯಾವಾಗ.?

ಜೂನ್ 12 ರಿಂದ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ 'ಕಿಲಾಡಿ ಕುಟುಂಬ' ಕಾರ್ಯಕ್ರಮ ಪ್ರಸಾರ ಅಗಲಿದೆ.

ಪ್ರೋಮೋ ನೋಡಿದ್ರಾ.?

'ಕಿಲಾಡಿ ಕುಟುಂಬ' ಕಾರ್ಯಕ್ರಮದ ಹೊಸ ಪ್ರೋಮೋ ನೀವಿನ್ನೂ ನೋಡಿಲ್ಲ ಅಂದ್ರೆ, ಈ ಲಿಂಕ್ ಕ್ಲಿಕ್ ಮಾಡಿ ನೋಡಿ...

ಅತ್ತೆ-ಸೊಸೆ ಜುಗಲ್ಬಂದಿ

ಅತ್ತೆ ಪಾತ್ರದಲ್ಲಿ ನಯನ ಸೊಸೆಯಾಗಿ ದಿವ್ಯ ಕಾಣಿಸಿಕೊಂಡಿರುವ 'ಕಿಲಾಡಿ ಕುಟುಂಬ'ದ ಮತ್ತೊಂದು ಪ್ರೋಮೋ ಇಲ್ಲಿದೆ. ಲಿಂಕ್ ಕ್ಲಿಕ್ ಮಾಡಿ, ನೋಡಿ ನಕ್ಕುಬಿಡಿ...

'ಕಿಲಾಡಿ' ಬ್ಯೂಟಿ

ಪಡ್ಡೆ ಹೈಕ್ಳು ಕಣ್ಣಿಗೆ ಎಣ್ಣೆ ಬಿಟ್ಕೊಂಡು ಕಾಯ್ತಿರೋ 'ಕಿಲಾಡಿ' ಬ್ಯೂಟಿ ಯಾರು ಅಂತ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ ನೋಡಿ...

ಇವೆಲ್ಲ ಸ್ಯಾಂಪಲ್ ಅಷ್ಟೇ

ಅಷ್ಟಕ್ಕೂ ಇವೆಲ್ಲ ಸ್ಯಾಂಪಲ್ ಅಷ್ಟೇ. 'ಕಿಲಾಡಿ ಕುಟುಂಬ' ಕಾರ್ಯಕ್ರಮದಲ್ಲಿ ಇನ್ನೂ ಮಸ್ತ್ ಮನರಂಜನೆ ಇದೆ. ಜೂನ್ 12 ರ ತನಕ ಕಾಯುತ್ತಿರಿ...[ಮತ್ತೆ ಬಂದ್ರು 'ಕಾಮಿಡಿ ಕಿಲಾಡಿಗಳು': ಅತಿ ಶೀಘ್ರದಲ್ಲಿ 'ಕಿಲಾಡಿ ಕುಟುಂಬ' ಶುರು.!]

English summary
'Khiladi Kutumba', New show in Zee Kannada Channel to telecast from June 12th, Monday to Friday at 7PM.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada