ಹಸಿವು ತಾಳಲಾರದೆ ಕಂಗಾಲಾಗಿದ್ದ ಬಿಗ್‌ಬಾಸ್‌ ಮಂದಿಗೆ ಕಿಚ್ಚನ ಕೈ ರುಚಿ: ಸುದೀಪ್ ಮೆನ್ಯೂನಲ್ಲಿ ಏನೇನಿದೆ?

ಬಿಗ್ ಬಾಸ್ ಕನ್ನಡ ಸೀಸನ್ 10ನಲ್ಲಿ ಕ್ಷಣ ಕ್ಷಣಕ್ಕೂ ಒಂದೊಂದು ಟ್ವಿಸ್ಟ್ ಅಂಡ್ ಟರ್ನ್ ಸಿಗುತ್ತಲೇ ಇದೆ. ಬಿಗ್ ಬಾಸ್ ಹೊಸ ಹೊಸ ಟಾಸ್ಕ್‌ಗಳನ್ನು ನೀಡುತ್ತಲೇ ಇದೆ. ಬಿಗ್ ಬಾಸ್ ಮನೆಯಲ್ಲಿ ಮುದ್ದೆ ಊಟದ ಎಫೆಕ್ಟ್ ಇರುವಾಗಲೇ ಸ್ಪರ್ಧಿಗಳ ನಡುವೆ ಅಸಮಧಾನದ ಹೊಗೆ ಓಡಾಡಿತ್ತು.

ಡ್ರೋನ್ ಪ್ರತಾಪ್ ಮೇಲೆ ಮನೆ ಮಂದಿಯೆಲ್ಲ ತಿರುಗಿಬಿದ್ದಿದ್ದರು. ನಮ್ರತಾ, ವಿನಯ್ ರಾತ್ರಿ ಊಟ ಬೇಕು ಎಂದು ಹಠ ಹಿಡಿದಿದ್ದರು. ಹಾಗಾದ್ರೆ ಮನೆಯೊಳಗೆ ನಡೆದಿದ್ದು ಏನು? ರಾಗಿ ಮುದ್ದೆ ಮಾಡಿದ್ದೇ ಅಪರಾಧವಾಯ್ತೆ? ಮನೆಮಂದಿ ಉಪವಾಸದಲ್ಲಿಯೇ ಮಲಗಬೇಕಾಯ್ತಾ? ಯಾಕಿ ಹೀಗಾಯ್ತು ಅಂತ ಅಂದುಕೊಳ್ಳುತ್ತಿರುವಾಗಲೇ ಖುಷಿ ವಿಷಯವೊಂದು ಸಿಕ್ಕಿದೆ.

Kichcha Sudeep cooking special food for Bigg Boss Kannada 10 contestants promo goes viral

ರಾತ್ರಿ ಹೊಟ್ಟೆಗೆ ಹಿಟ್ಟಿಲ್ಲದೆ ಮಲಗಬೇಕು ಅಂದುಕೊಳ್ಳುವಾಗಲೇ ಮನೆಯ ಸದಸ್ಯರಿಗೆ ಎಂದೆಂದೂ ಮರೆಯಲಾಗದಂಥ ಸಖತ್ ಸ್ಪೆಷಲ್ ಸರ್ಪೈಸ್‌ ಸಿಕ್ಕಿದೆ. ಆ ಸರ್ಪೈಸ್‌ ಏನು ಅನ್ನೋದನ್ನು ಜಿಯೋ ರಿಲೀಸ್ ಮಾಡಿದ ಪ್ರೋಮೊದಲ್ಲಿ ಜಾಗತ್‌ಜಾಹೀರಾಗಿದೆ.

ಹಸಿದವರಿಗೆ ಭರ್ಜರಿ ಊಟ ಸಿಕ್ಕರೆ ಹಿರಿ ಹಿರಿ ಹಿಗ್ಗಿ ಕುಣಿದುಬಿಡುತ್ತಾರೆ. ಇಂತಹದ್ದೇ ಖುಷಿಯೊಂದು ಬಿಗ್ ಬಾಸ್ ಸದಸ್ಯರಿಗೆ ಸಿಕ್ಕಿದೆ. ರಾತ್ರಿ ಊಟಕ್ಕೆ ಭರ್ಜರಿ ಭೋಜನ ಸಿಗುವ ಖುಷಿಯದು. ಸರ್ಪ್ರೈಸ್ ಅಂದರೆ ಅಂತಿಥದ್ದಲ್ಲ. ಬಿಗ್ ಬಾಸ್ ಸ್ಪರ್ಧಿಗಳೇ ಮನೆಯೊಳಗೆ ಇದೂವರೆಗೂ ಸವಿಯದ ರುಚಿಯದು.

ಬಿಗ್ ಬಾಸ್ ಮನೆಯೊಳಗೆ ಊಟ ಎಷ್ಟು ಮುಖ್ಯವೋ ಎಷ್ಟೋ ಸಲ ಅಡುಗೆ ಮಾಡಿದ ಕೈಗಳೂ ಅಷ್ಟೇ ಮುಖ್ಯವಾಗುತ್ತದೆ. ಯಾಕೆಂದರೆ ಅಡುಗೆ ಮಾಡುವವರ ಅಕ್ಕರೆ, ಪ್ರೀತಿ, ಅವರ ವ್ಯಕ್ತಿತ್ವವೂ ಅಡುಗೆಯಲ್ಲಿ ಸೇರಿರುತ್ತದೆ. ಹಾಗಾಗಿಯೇ ಬಿಗ್‌ಬಾಸ್‌ ಮನೆಯ ಸದಸ್ಯರಿಗೆ ಸಿಕ್ಕ ಅಡುಗೆ ಅಷ್ಟು ಸ್ಪೆಷಲ್ ಆಗಿದ್ದು ಯಾಕಂದ್ರೆ, ಅದು ಕಿಚ್ಚ.

Kichcha Sudeep cooking special food for Bigg Boss Kannada 10 contestants promo goes viral

ಬಿಗ್ ಬಾಸ್ ಮನೆಗೆ ಅಡುಗೆ ಮಾಡಿ ಕಳುಹಿಸುತ್ತಿರೋದು ಮತ್ಯಾರೂ ಅಲ್ಲ ಕಿಚ್ಚ ಸುದೀಪ್. ತಾವೇ ಕೈಯ್ಯಾರೆ ಅಡುಗೆ ಮಾಡಿ ಬಿಗ್ ಬಾಸ್ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ಕಳುಹಿಸಿದ್ದಾರೆ. ಇಷ್ಟೆಲ್ಲದೆ ಪ್ರತಿಯೊಬ್ಬರಿಗೂ ಊಟದ ಜೊತೆಗೆ ಪ್ರೀತಿಯಿಂದ ಒಂದೊಂದು ಪತ್ರವನ್ನು ಬರೆದಿದ್ದಾರೆ. ಅದರಲ್ಲಿ ಪ್ರತಿಯೊಬ್ಬರಿಗೂ ಕಿಚ್ಚನ ಸಂದೇಶವಿದೆ. ಅತ್ಯಮೂಲ್ಯವಾದ ಸಲಹೆಗಳಿವೆ.

ಜಿಯೋ ರಿಲೀಸ್ ಮಾಡುವ ಪ್ರೋಮೊದಲ್ಲಿ 'ಇದು ಸರ್ಪೈಸ್‌. ಈವತ್ತಿನ ಅಡುಗೆ, ಕಿಚ್ಚನ ಕೈಯಡುಗೆ' ಎಂದು ಹೇಳಿರುವ ಕಿಚ್ಚನ ಮಾತುಗಳಿವೆ. ಕಿಚ್ಚನ ಅಮೂಲ್ಯ ಸಲಹೆಗಳೊಂದಿಗೆ ಬಂದ ಅಡುಗೆಯನ್ನು ನೋಡಿ ಮನೆಯ ಮಂದಿಯೆಲ್ಲ ಅಕ್ಷರಶಃ ಕುಣಿದು ಕುಪ್ಪಳಿಸಿದ್ದಾರೆ. ಬಿಗ್ ಮನೆಯ ಪ್ರತಿಯೊಬ್ಬರು ಕ್ಯಾಮರಾ ಮುಂದೆ ಬಂದು ಕಿಚ್ಚನಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಅಷ್ಟಕ್ಕೂ ಕಿಚ್ಚ ಏನೇನು ಅಡುಗೆ ಮಾಡಿದ್ದಾರೆ. ಅವರ ಕೈ ರುಚಿ ಹೇಗಿದೆ ಅನ್ನೋದನ್ನು ಇಂದಿನ ಎಪಿಸೋಡ್‌ನಲ್ಲಿ ನೋಡುವುದಕ್ಕೆ ಸಿಗುತ್ತೆ.

More from Filmibeat

English summary
Like every season Kichcha Sudeep cooking for Bigg Boss Kannada 10 contestants
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X