'ಹಳ್ಳಿಕಾರ್ ಒಡೆಯ'ಗೆ ಕಿಚ್ಚ ಕೊಟ್ಟ ಗಿಫ್ಟ್ ಏನು? ಇನ್ನೊಂದು ಉಡುಗೊರೆಗೆ ವರ್ತೂರು ಸಂತೋಷ್ ಬೇಡಿಕೆ ಇಟ್ಟಿದ್ದೇಕೆ?
ಬಿಗ್‌ಬಾಸ್ ಕನ್ನಡ ಸೀಸನ್ 10 ಸ್ಪರ್ಧಿ ವರ್ತೂರು ಸಂತೋಷ್ ಫುಲ್ ಜೋಷ್‌ನಲ್ಲಿ ಇದ್ದಾರೆ. ಬಿಗ್‌ಬಾಸ್‌ನಿಂದ ಹೊರಬಂದ್ಮೇಲೆ ಹಳ್ಳಿಕಾರ್ ರೇಸ್ ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಇದನ್ನು ವೇದಿಕೆ ಮೇಲೆ ಕಿಚ್ಚ ಸುದೀಪ್ ಮುಂದೆ ವರ್ತೂರು ಸಂತೋಷ್ ಹೇಳಿದ್ದರು. ನುಡಿದಂತೆ ಈಗ ಹಳ್ಳಿಕಾರ್ ರೇಸ್ ಮಾಡುವುದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಬಿಗ್‌ಬಾಸ್ ಕನ್ನಡ ಸೀಸನ್ 10 4ನೇ ರನ್ನರ್ ಅಪ್ ಆಗಿ ವರ್ತೂರು ಸಂತೋಷ್ ಹೊರಬಂದಿದ್ದರು. ಬಿಗ್‌ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ಅಭಿಮಾನಿಗಳು ಕೂಡ ಅವರನ್ನು ಭೇಟಿ ಮಾಡುವುದಕ್ಕೆ ಕ್ಯೂನಲ್ಲಿ ನಿಂತಿದ್ದಾರೆ. ದಿನ ಬೆಳಗಾದರೆ, ವರ್ತೂರು ಮನೆ ಮುಂದೆ ಅಭಿಮಾನಿಗಳ ಸಹಸ್ರಾರು ಸಂಖ್ಯೆಯಲ್ಲಿ ಸೇರುತ್ತಿದ್ದಾರೆ.

ಇತ್ತ ಕಿಚ್ಚ ಸುದೀಪ್ ಕೂಡ ಬಿಗ್‌ಬಾಸ್ ಮುಗಿದ ಮೇಲೆ ಸ್ಪರ್ಧಿಗಳನ್ನು ಮೀಟ್ ಮಾಡಿದ್ದಾರೆ. ಕೆಲವರಿಗೆ ವಿಶೇಷವಾದ ಉಡುಗೊರೆ ಕಳುಹಿಸಿ ಕೊಟ್ಟಿದ್ದಾರೆ. ಹಾಗೇ ವರ್ತೂರು ಸಂತೋಷ್ ಅವರಿಗೂ ಸ್ಪೆಷಲ್ ಗಿಫ್ಟ್‌ವೊಂದನ್ನು ಕಳುಹಿಸಿಕೊಟ್ಟಿದ್ದಾರೆ. ಅದನ್ನು ಸ್ವತ: ವರ್ತೂರು ಸಂತೋಷ್ ಅವರೇ ಯೂಟ್ಯೂಬ್ ಚಾನೆಲ್‌ಗೆ ಮಾಹಿತಿ ಕೊಟ್ಟಿದ್ದಾರೆ. ಅಷ್ಟಕ್ಕೂ ಕಿಚ್ಚ ಕೊಟ್ಟ ಗಿಫ್ಟ್ ಬಗ್ಗೆ ವರ್ತೂರು ಸಂತೋಷ್ ಹೇಳಿದ್ದೇನು? ಮತ್ತೊಂದು ಉಡುಗೊರೆಗೆ ಬೇಡಿಕೆ ಇಟ್ಟಿದ್ದೇಕೆ? ತಿಳಿಯಲು ಮುಂದೆ ಓದಿ..
ಬಿಗ್‌ಬಾಸ್ ಕನ್ನಡ ಸೀಸನ್ 10 ಸ್ಪರ್ಧಿ ವರ್ತೂರು ಸಂತೋಷ್‌ಗೆ ಕಿಚ್ಚ ಸುದೀಪ್ ಜಾಕೆಟ್ ಅನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ವಿಶೇಷ ಅಂದರೆ, ಈ ಜಾಕೆಟ್ ಅನ್ನು ಕಿಚ್ಚ ಸುದೀಪ್ ಬಿಗ್‌ಬಾಸ್ ಶೋ ನಡೆಸುವಾಗ ಧರಿಸಿದ್ದರು. "ನಾನು ಇನ್ನು ಇದನ್ನು ಹಾಕಿಲ್ಲ. ಫಂಕ್ಷನ್‌ಗೆ ಒಂದು ದಿನ ಹಾಕೋಣ ಅಂತ. ಸುದೀಪಣ್ಣ ಬಂದ ದಿನ ಹಾಕಿಕೊಳ್ಳೋಣ ಅಂತ ಇದ್ದೀನಿ. ತುಂಬಾ ಚೆನ್ನಾಗಿದೆ. ಅವರೇ ಹಾಕಿರುವಂತಹ ಜಾಕೆಟ್ ಇದು. ಕಲರ್ ತುಂಬಾ ಚೆನ್ನಾಗಿದೆ. ಸುದೀಪಣ್ಣ ನನಗೆ ಕೊಟ್ಟಿರುವ ಗಿಫ್ಟ್." ಎಂದು ವರ್ತೂರು ಸಂತೋಷ್ ಹೇಳಿದ್ದಾರೆ.

ಕಿಚ್ಚ ಸುದೀಪ್ ಅವರನ್ನು ಅವರ ಮನೆಗೆ ಹೋಗಿ ಮತ್ತೊಮ್ಮೆ ಭೇಟಿ ಮಾಡುತ್ತೇನೆ. ಅವರಿಂದ ನೆನಪಿನಲ್ಲಿ ಉಳಿಯುವಂತಹ ಗಿಫ್ಟ್ ಕೇಳುತ್ತೇನೆ ಅಂತಿದ್ದಾರೆ. "ಎಲ್ಲರಿಗೂ ಬೇರೆ ಬೇರೆ ಗಿಫ್ಟ್ ಕೊಟ್ಟಿದ್ದಾರೆ. ಮನೆಯಲ್ಲಿ ಮೀಟ್ ಆಗಿದ್ದಾರೆ. ಕಾರಣಾಂತರಗಳಿಂದ ನನಗೆ ಸಾಧ್ಯವಾಗಿರಲಿಲ್ಲ. ಅದು ತುಂಬಾನೇ ಜನ ಇದ್ದರು. ಹೊರಗಡೆ ಸಿಕ್ಕಾಪಟ್ಟೆ ಜನ ಇದ್ದರು. ಅದಕ್ಕೆ ನಾನು ಬಂದ್ಬಿಟ್ಟೆ. ಅಣ್ಣನ್ನ ಮನೆಗೆ ಹೋಗಿ ಮೀಟ್ ಮಾಡುತ್ತೇನೆ. ನೋಡೋಣ ಅಣ್ಣ ಗಿಫ್ಟ್ ಮಾಡುತ್ತಾರೋ ನೋಡೋಣ ಕಾಯುತ್ತಿದ್ದೇನೆ." ಎಂದು ವರ್ತೂರು ಹರ್ಷ ವ್ಯಕ್ತಪಡಿಸಿದ್ದಾರೆ.
ಕಿಚ್ಚ ಸುದೀಪ್‌ಗೆ ಬಿಗ್‌ಬಾಸ್ ಫಿನಾಲೆ ವೇದಿಕೆ ಮೇಲೆ ಹಳ್ಳಿಕಾರ್ ರೇಸ್‌ಗೆ ಆಹ್ವಾನ ನೀಡಿದ್ದರು. ಅದಕ್ಕೆ ಕಿಚ್ಚ ಸುದೀಪ್ ಕೂಡ ಸಮ್ಮತಿ ಕೊಟ್ಟಿದ್ದರು. ಆದರೂ, ಮತ್ತೊಮ್ಮೆ ಸುದೀಪ್ ಅವರನ್ನು ಭೇಟಿ ಮಾಡಿ ಆಹ್ವಾನ ನೀಡುವುದಕ್ಕಾಗಿ ಹೇಳಿದ್ದಾರೆ. "ಅವರು ಏನು ಕೊಟ್ಟರೂ ಖುಷಿನೇ.. ನಮ್ಮ ರೇಸ್‌ಗೆ ಬರ್ತೀನಿ ಅಂದಿದ್ದೇ ಖುಷಿ. ಆದರೆ, ಅಣ್ಣನ ಕೈಯಿಂದ ಮನೆಯಲ್ಲಿ ಇಡುವಂತಹದ್ದು ಏನಾದರೂ ಗಿಫ್ಟ್ ಕೊಟ್ಟರೆ ನನಗೆ ಇನ್ನೂ ತುಂಬಾನೇ ಖುಷಿ." ಎಂದಿದ್ದಾರೆ.
ವರ್ತೂರು ಸಂತೋಷ್ ಹಳ್ಳಿಕಾರ್ ರೇಸ್‌ಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇನ್ನೊಂದು ಕಡೆ 'ಹಳ್ಳಿಕಾರ್ ಒಡೆಯ' ಅನ್ನುವ ಬಿರುದಿನ ಬಗ್ಗೆ ವಿವಾದ ನಡೆಯುತ್ತಿದೆ. ತಮ್ಮನ್ನು ವಿರೋಧಿಸುವ ಬಗ್ಗೆನೂ ವರ್ತೂರು ಸಂತೋಷ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ವಿರೋಧಿಸುವವರಿಗೆ ಎಚ್ಚರಿಕೆಗಳನ್ನು ಕೊಡುತ್ತಿದ್ದಾರೆ.


Click it and Unblock the Notifications











