BBK11:ಈ ಬಾರಿ RRR ಕಾನ್ಸೆಪ್ಟ್ ಅಲ್ಲ; ಬಿಗ್‌ಬಾಸ್ 11ರಲ್ಲಿ ಸ್ವರ್ಗ ಮತ್ತು ನರಕ ಪರಿಕಲ್ಪನೆ?

ಬಹುನಿರೀಕ್ಷಿತ ರಿಯಾಲಿಟಿ ಶೋ ಬಿಗ್‌ಬಾಸ್ ಕನ್ನಡ ಸೀಸನ್ 11 ಆರಂಭಕ್ಕೆ ಇನ್ನೇನು ದಿನಗಣನೆ ಶುರುವಾಗಿದೆ. ಈ ಬಾರಿನೂ ಕಿಚ್ಚ ಸುದೀಪ್ ನಿರೂಪಣೆ ಮಾಡೋದು ಬಹುತೇಕ ಕನ್ಪರ್ಮ್ ಆಗಿತ್ತು. ಅದಕ್ಕೆ ತಕ್ಕಂತೆ ಈಗ ಬಿಗ್‌ಬಾಸ್ ಕನ್ನಡ 11ರ ಪ್ರೋಮೊ ಕೂಡ ರಿಲೀಸ್ ಆಗಿದೆ. ಇದೇ ಸೆಪ್ಟೆಂಬರ್ 29ರಿಂದ ಬಿಗ್‌ ಬಾಸ್ ಕನ್ನಡ ಅದ್ಧೂರಿಯಾಗಿ ಆರಂಭ ಆಗಲಿದೆ.

ಬಿಗ್‌ಬಾಸ್ ಕನ್ನಡ ಸೀಸನ್ 11ರ ಬಗ್ಗೆ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಲು ಕಲರ್ಸ್ ಕನ್ನಡ ಪ್ರೋಮೊವನ್ನು ರಿಲೀಸ್ ಮಾಡಿದೆ. ಕಿಚ್ಚ ಸುದೀಪ್ ಮತ್ತೆ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೋಮೊ ಕಾನ್ಸೆಪ್ಟ್ ಬೇರೆ. ಕಿಚ್ಚ ಲುಕ್, ಖದರ್ ಮಾತ್ರ ಹಾಗೇ ಇದೆ. ಸದ್ಯ ಪ್ರೋಮೊಗೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Kichcha Sudeep hints at the heaven and hell concept in the Bigg Boss Kannada 11 promo

ಬಿಗ್‌ಬಾಸ್ ಕನ್ನಡ 11ರ ಲೋಗೋ ಬಿಡುಗಡೆಯಾದಾಗ ಈ ಬಾರಿ ಕಾನ್ಸೆಪ್ಟ್ ಬಗ್ಗೆ ಚರ್ಚೆಯಾಗಿತ್ತು. ರಾಜಮೌಳಿ ನಿರ್ದೇಶಿಸಿದ RRR ಸಿನಿಮಾದಂತೆ ನೀರು ಹಾಗೂ ಬೆಂಕಿ ಕಲ್ಪನೆಯಂತೆ ಈ ಬಾರಿಯ ಟಾಸ್ಕ್‌ಗಳನ್ನು ಪ್ಲ್ಯಾನ್ ಮಾಡಿರಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದ್ರೀಗ ಪ್ರೋಮೊ ಬೇರೆನೇ ಹಿಂಟ್ ಕೊಟ್ಟಿದೆ. ಆ ಸುಳಿವು ಏನು? ಈ ಬಾರಿಯ ಬಿಗ್‌ ಬಾಸ್ ಹೇಗಿರುತ್ತೆ? ಪ್ರೋಮೊದಲ್ಲಿ ಏನಿರುತ್ತೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಸ್ವರ್ಗ ನರಕದ ಪರಿಕಲ್ಪನೆ

ಕಿಚ್ಚ ಸುದೀಪ್ ಕಾಣಿಸಿಕೊಂಡಿರುವ ಬಿಗ್‌ಬಾಸ್ ಕನ್ನಡ 11ರ ಪರಿಕಲ್ಪನೆ ಇಂಟ್ರೆಸ್ಟಿಂಗ್ ಆಗಿದೆ. ಲೋಗೊದಲ್ಲಿ ನೀಲಿ ಮತ್ತು ಕಡು ಕೇಸರಿ ಬಣ್ಣದ ಕಾನ್ಸೆಪ್ಟ್ ಕಿಕ್ ಕೊಟ್ಟಿತ್ತು. ಆದರೆ, ಪ್ರೋಮೊ ರಿಲೀಸ್ ಆದ ಬಳಿಕ RRR ಕಲ್ಪನೆ ಅಲ್ಲ. ಈ ಬಾರಿ ಬೇರೆಯದ್ದೇ ಥೀಮ್‌ನೊಂದಿಗೆ ವೀಕ್ಷಕರ ಮುಂದೆ ಬರುತ್ತಿದೆ. ಪ್ರೋಮೊ ನೋಡಿದಾಗ ಈ ಬಾರಿ ಸ್ವರ್ಗ ಮತ್ತು ನರಕದ ಪರಿಕಲ್ಪನೆಯಲ್ಲಿ ಟಾಸ್ಕ್‌ಗಳು ಇರಬಹುದು ಎಂದು ನಿರೀಕ್ಷಿಸಲಾಗಿದೆ. ಅಲ್ಲದೆ ಹೊಸ ಅದ್ಯಾಯದಲ್ಲೂ ಅದೇ ಕಿಚ್ಚು ಅಂತ ಬೇರೆ ಹೇಳುತ್ತಿರೋ ವೀಕ್ಷಕರಿಗೆ ಕಿಕ್ ಕೊಟ್ಟಿದೆ.

ಕಿಚ್ಚ ಸುದೀಪ್ ಹೇಳಿದ್ದೇನು?

"ಬೆಳಕು, ಸಂತೋಷ, ಸುಖ, ನೆಮ್ಮದಿ ಇದು ಸ್ವರ್ಗ. ಕತ್ತಲು, ನೋವು, ಕಷ್ಟ, ಹಿಂಸೆ ಇದು ನರಕ. ಸ್ವರ್ಗದಲ್ಲಿ ಇರಬೇಕಾದವರು ನರಕದಲ್ಲಿ ಇರಬಹುದು. ನರಕದಲ್ಲಿ ಇರಬೇಕಾದವರು ಸ್ವರ್ಗದಲ್ಲಿ ಇರಬಹುದು. ಬೆನ್ನಿಗೆ ಚೂರಿ ಹಾಕುತ್ತಾರೆ ಅಂದ್ಕೊಂಡವರು ಮುಂದೆ ಹೋಗಿ ಸ್ನೇಹಿತರಾಗಬಹುದು. ಸ್ನೇಹಿತರಾಗಿರುತ್ತಾರೆ ಅಂದುಕೊಂಡುವರು ಮುಂದೆ ಹೋಗಿ.. ಇದು ಬಿಗ್ ಬಾಸ್‌ನ ಹೊಸ ಅದ್ಯಾಯ. ಸ್ವರ್ಗ, ನರಕ ಎರಡೂ ಇದೆ. ಎರಡರಲ್ಲೂ ಕಿಚ್ಚು ಅಷ್ಟೇ ಇದೆ. " ಎಂದು ಕಿಚ್ಚ ಸುದೀಪ್ ಈ ಬಾರಿಯ ರಿಯಾಲಿಟಿ ಶೋ ಮತ್ತಷ್ಟು ಕಠಿಣವಾಗಿರುತ್ತೆ ಅನ್ನೋ ಸುಳಿವು ಕೊಟ್ಟಿದ್ದಾರೆ.

ಎಷ್ಟೊತ್ತಿಗೆ ಪ್ರಸಾರ ಆರಂಭ

ಬಿಗ್ ಬಾಸ್​ ಕನ್ನಡ ಸೀಸನ್​ 11 ಇದೇ ಸೆಪ್ಟೆಂಬರ್ 29ರಂದ ಅದ್ದೂರಿಯಾಗಿ ಓಪನಿಂಗ್ ಪಡೆದುಕೊಳ್ಳಲಿದೆ. ಸೆಪ್ಟೆಂಬರ್ 30ರಿಂದ 100 ದಿನಗಳ ಕಾಲ ರಾತ್ರಿ 9.30ಕ್ಕೆ ಬಿಗ್​ ಬಾಸ್ ಕಾರ್ಯಕ್ರಮ ಒಂದೂವರೆ ಗಂಟೆಗಳ ಕಾಲ ಪ್ರಸಾರ ಆಗಲಿದೆ. 29ನೇ ತಾರೀಕು ಸ್ಪರ್ಧಿಗಳನ್ನು ಪರಿಚಯ ಮಾಡಿಸಿ ಮನೆಯೊಳಗೆ ಕಳಿಸಲಾಗಿತ್ತೆ. ಈ ಬಾರಿಯ ಬಿಗ್‌ ಬಾಸ್ ಮನೆ ಹೇಗಿರುತ್ತೆ? ಯಾರೆಲ್ಲ ಬರುತ್ತಾರೆ? ಅನ್ನೋ ಕುತೂಹಲವಿದೆ.

ನೆಟ್ಟಿಗರ ಕಾಮೆಂಟ್ ಏನು?

ಬಿಗ್‌ಬಾಸ್ ಪ್ರೋಮೊದಲ್ಲಿ ಕಿಚ್ಚನನ್ನು ನೋಡಿ ಫಿದಾ ಆಗಿದ್ದಾರೆ. ನೆಟ್ಟಿಗರಯ "ಕಿಚ್ಚ, ನೀವೇಕೆ ಹಚ್ಚುವಿರೀ ಕಿಚ್ಚು" ಎಂದು ಪ್ರಶ್ನೆ ಮಾಡಿದ್ದಾರೆ. ಅದೇ ಇನ್ನೊಬ್ಬರು "ಕನ್ನಡಿಗರ ಹೃದಯ ಸಿಂಹಾಸನದಲ್ಲಿ ನೆಲೆಸಿರುವ ಮಾಣಿಕ್ಯ" ಎಂದಿದ್ದಾರೆ. "ಅದೇನೇ ಆಗಿರಲಿ ನಾವು ಬಿಗ್‌ಬಾಸ್ ನೋಡೋದು ಕಿಚ್ಚನ ಪಂಚಾಯಿತಿಗೋಸ್ಕರ", "ಕಿಚ್ಚು ಏನೇ ಇರಲಿ ನಾವು ನೋಡೊದು ಮಾತ್ರ ಕಿಚ್ಚನಿಗೊಸ್ಕರ", "ಸ್ವರ್ಗ ನರಕ ಇರೋ ಮನೆನೇ Big boss", "ಇದು ಕಿಚ್ಚನ ಹೊಸಾ ಅಧ್ಯಾಯ ಬಿಗ್ ಬಾಸ್" ಅಂತ ಸಾಲು ಸಾಲು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

More from Filmibeat

English summary
Kichcha Sudeep hints at the heaven and hell concept in the Bigg Boss Kannada 11 promo
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X