BBK 12:ಬಿಗ್ ಬಾಸ್ ಆರಂಭಕ್ಕೂ ಮುನ್ನ 19 ಸ್ಪರ್ಧಿಗಳ ಕೊನೆಯ ಸಂಭಾವ್ಯ ಪಟ್ಟಿ
ಬಿಗ್ ಬಾಸ್ ಕನ್ನಡ ಸೀಸನ್ 12 ರಿಯಾಲಿಟಿ ಶೋ ಆರಂಭಕ್ಕೆ ಇನ್ನೇನು ಕೆಲವೇ ನಿಮಿಷಗಳು ಉಳಿದಿವೆ. ಈಗಾಗಲೇ ಬಿಗ್ ಬಾಸ್ ಕೆಲವು ಗುಟ್ಟುಗಳನ್ನು ಬಿಟ್ಟು ಕೊಟ್ಟಿದೆ. ಆದರೆ, ಇನ್ನೂ ಬಹಳಷ್ಟು ಗುಟ್ಟುಗಳನ್ನು ತನ್ನೊಳಗೆ ಇಟ್ಟುಕೊಂಡಿದೆ. ಇದೆಲ್ಲವೂ ಇಂದು (ಸೆಪ್ಟೆಂಬರ್ 28) ಸಂಜೆ 6 ಗಂಟೆಯಿಂದ ಕಿಚ್ಚ ಸುದೀಪ್ ಒಂದೊಂದಾಗಿಯೇ ರಿವೀಲ್ ಮಾಡುತ್ತಾ ಹೋಗುತ್ತಾರೆ.
ಇಲ್ಲಿವರೆಗೂ ಬಿಗ್ ಬಾಸ್ ಮನೆಗೆ ಹೋಗುವ ಸಾಕಷ್ಟು ಹೆಸರುಗಳು ಚರ್ಚೆಯಲ್ಲಿ ಇದ್ದವು. ಕೆಲವು ಹೆಸರುಗಳು ಬಿಗ್ ಬಾಸ್ ಮನೆಗೆ ಹೋಗುವುದಕ್ಕೆ ಗ್ಯಾರಂಟಿ ಎಂದು ಹೇಳಲಾಗಿತ್ತು. ಅದಕ್ಕಾಗಿಯೇ ಅವರ ಧಾರಾವಾಹಿಗಳನ್ನೆಲ್ಲ ಮುಗಿಸಿದ್ದರು. ಆದ್ರೀಗ ಅವರು ಯಾರೂ ಬಿಗ್ ಬಾಸ್ ಮನೆಗೆ ಹೋಗುವುದಿಲ್ಲ. ಬೇರೊಂದು ಪಟ್ಟಿಯೇ ರೆಡಿಯಾಗಿದೆ ಅನ್ನೋ ಮಾತು ಕೇಳಿ ಬರುತ್ತಿವೆ.

ಇನ್ನೇನು ಬಿಗ್ ಬಾಸ್ ಆರಂಭಕ್ಕೆ ಕೊನೆಯ ಕ್ಷಣದಲ್ಲಿ ಸಂಪೂರ್ಣವಾಗಿ 19 ಮಂದಿ ಸ್ಪರ್ಧಿಗಳ ಪಟ್ಟಿಯೊಂದು ಓಡಾಡುತ್ತಿದ್ದೆ. ಈ ಪಟ್ಟಿಯಲ್ಲಿ ಇರುವವರೆಲ್ಲೂ ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಹೋಗೋದು ಕನ್ಫರ್ಮ್ ಎನ್ನಲಾಗಿದೆ. ಹಾಗಿದ್ದರೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಪಟ್ಟಿಯಲ್ಲಿರುವವರೇ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಡುತ್ತಾರಾ? ಆ 19 ಮಂದಿ ಯಾರು? ತಿಳಿಯುವುದಕ್ಕೆ ಮುಂದೆ ಓದಿ.
ಕೊನೆಯ 19 ಮಂದಿ ಸಂಭಾವ್ಯ ಸ್ಪರ್ಧಿಗಳ್ಯಾರು?
ಬಿಗ್ ಬಾಸ್ ಕನ್ನಡ 12 ಸಂಪೂರ್ಣ ವಿಭಿನ್ನವಾಗಿ ಬರುತ್ತಿದೆ. ಬಿಗ್ ಬಾಸ್ ಮನೆಯಿಂದ ಹಿಡಿದು ಎಲ್ಲವೂ ಕಂಪ್ಲೀಟ್ ಡಿಫ್ರೆಂಟ್. ಸಂಪೂರ್ಣ ಕನ್ನಡಮಯವಾಗಿರುತ್ತೆ. ಈ ಮಧ್ಯೆ ಸ್ಪರ್ಧಿಗಳು ಯಾರೆಲ್ಲ ಹೋಗಬಹುದು ಅನ್ನೋ ಕುತೂಹಲ ಬೇರೆ ಇದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಕೊನೆಯ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಹೀಗಿದೆ.
ಬಿಗ್ ಬಾಸ್ ಸಂಭಾವ್ಯ ಪಟ್ಟಿ
ಅಭಿಶೇಕ್ ಶ್ರೀಕಾಂತ್
ಅಶ್ವಿನಿ ಗೌಡ
ಚಂದ್ರಪ್ರಭ
ಕಾಕ್ರೋಚ್ ಸುಧಿ
ಧನುಷ್ ಗೌಡ
ಗಿಲ್ಲಿ ನಟ
ಜಾಹ್ನವಿ
ಕಾವ್ಯಾ ಶೈವ
ಮಲ್ಲಮ್ಮ
ಮಂಜು ಭಾಷಿಣಿ
ರಕ್ಷಿತಾ ಶೆಟ್ಟಿ
ಡಾಗ್ ಸತೀಶ್
ಸ್ಪಂದನಾ ಸೋಮಣ್ಣ
ಅಶ್ವಿನಿ ಎಸ್ಎನ್
ಕರಿಬಸಪ್ಪ
ಮಲ್ಲು ನಿಪನಾಲ್
ಅಮಿತ್ ಪವಾರ್
ಧ್ರುವಂತ್


Click it and Unblock the Notifications











