Bigg Boss 12:ಮೈ ನವಿರೇಳಿಸೋ ಟಾಸ್ಕ್ಸ್, ಪ್ರತಿವಾರ ಟ್ವಿಸ್ಟ್ಸ್ ಆಂಡ್ ಟರ್ನ್ಸ್; ಬಿಗ್ ಬಾಸ್ 12ರ ವಿಶೇಷತೆಯೇನು?

ಕನ್ನಡದ ಅತೀ ದುಬಾರಿ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡದ ಮತ್ತೊಂದು ಸೀಸನ್ ಆರಂಭ ಆಗುತ್ತಿದೆ. ಇನ್ನೇನು ಮೂರು ದಿನಗಳಲ್ಲಿ ಗ್ರ್ಯಾಂಡ್ ಆಗಿ ಆರಂಭ ಆಗುತ್ತಿದೆ. 11ನೇ ಸೀಸನ್ ಯಶಸ್ಸು ಕಂಡ ಬೆನ್ನಲ್ಲೇ 12ನೇ ಸೀಸನ್ ಬಗ್ಗೆ ಸಹಜವಾಗಿ ಕುತೂಹಲ ಹುಟ್ಟಿಕೊಂಡಿದೆ. ಕಳೆದ ಹನ್ನೊಂದು ಸೀಸನ್‌ನಿಂದ ಕನ್ನಡಿಗರನ್ನು ರಂಜಿಸುತ್ತಿರುವ 'ಬಿಗ್‌ಬಾಸ್' ರಿಯಾಲಿಟಿ ಶೋ ಈ ಬಾರಿ "Expect the Unexpected" ಎಂಬ ಥೀಮ್‌ನಲ್ಲಿ ಹಲವು ಅನಿರೀಕ್ಷಿತಗಳನ್ನು ಇಟ್ಟುಕೊಂಡು ವೀಕ್ಷಕರಿಗೆ ಮನರಂಜನೆ ನೀಡುವುದಕ್ಕೆ ಮುಂದಾಗಿದೆ.

ಬಿಗ್ ಬಾಸ್‌ ಕನ್ನಡದ 11ನೇ ಸೀಸನ್‌ ನೋಡಿ ಥ್ರಿಲ್ ಆಗಿದ್ದ ವೀಕ್ಷಕರಿಗೆ 12ನೇ ಸೀಸನ್ ಹೇಗಿರಬಹುದು? ಏನೆಲ್ಲಾ ಇರುತ್ತೆ? ಯಾರೆಲ್ಲ ಮನೆಯೊಳಗೆ ಬರಬಹುದು ಅನ್ನೋ ಕುತೂಹಲವಿದ್ದೇ ಇದೆ. ಈ ಸೀಸನ್‌ನಲ್ಲಿ ವಿಭಿನ್ನ ವ್ಯಕ್ತಿತ್ವದ ಸ್ಪರ್ಧಿಗಳನ್ನು ಬಿಗ್ ಬಾಸ್ ಅಖಾಡಕ್ಕೆ ಇಳಿಸುತ್ತಿದೆ. ಹಾಗೇ ವೀಕ್ಷಕರು ನಿರೀಕ್ಷೆಯನ್ನೇ ಮಾಡದಂತಹ ಟಾಸ್ಕ್‌ಗಳನ್ನು ಹೊತ್ತು ನವರಾತ್ರಿ ಹಬ್ಬದ ಸಂಭ್ರಮದಲ್ಲಿ ವೀಕ್ಷಕರ ಮುಂದೆ ಬರಲಿದೆ. ಅಂದರೆ, ಬಿಗ್ ಬಾಸ್ ಸ್ಪರ್ಧಿಗಳು ಈ ಬಾರಿ ಮನೆಯೊಳಗೆ ದಸರಾ ಹಬ್ಬವನ್ನು ಆಚರಣೆ ಮಾಡಲಿದ್ದಾರೆ.

Kichcha Sudeep Hosted Bigg Boss Kannada 12 show highlights when and where to watch

ಬಿಗ್ ಬಾಸ್ ಕನ್ನಡದ ತಂಡ ಹಾಗೂ ಕಿಚ್ಚ ಸುದೀಪ್ ಈಗಾಗಲೇ ವೀಕ್ಷಕರಲ್ಲಿ ಕುತೂಹಲವನ್ನು ಕೆರಳಿಸಿದ್ದಾರೆ. ಈ ಬಾರಿ ಅನಿರೀಕ್ಷಿತವಾದದನ್ನು ನಿರೀಕ್ಷೆ ಮಾಡಿ ಅಂತ ಹೇಳಿದೆ. ಈಗಾಗಲೇ ಪ್ರೋಮೊದಲ್ಲಿ ರಿವೀಲ್ ಆದಂತೆ ಬಿಗ್‌ ಬಾಸ್ ಅಂದ್ರೆ 'Expect the Unexpected' ಅಂತ ಹೇಳಾಗಿದೆ. ಹಾಗಿದ್ದರೆ, 12ನೇ ಸೀಸನ್‌ನಲ್ಲಿ ಏನೇನು ವಿಶೇಷತೆಗಳು ಇರುತ್ತವೆ? ತಿಳಿಯುವುದಕ್ಕೆ ಮುಂದೆ ಓದಿ.

"ಓಹ್.. ಭ್ರಮೆ!"

ಬಿಗ್ ಬಾಸ್ ಪ್ರತಿಯೊಂದು ಸೀಸನ್ ಆರಂಭ ಆಗುವುದಕ್ಕೂ ಮುನ್ನ ಒಂದಷ್ಟು ಹೆಸರುಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇರುತ್ತವೆ. ಹಾಗೇ ಮಾಧ್ಯಮಗಳು ಕೂಡ ಒಂದು ಪಟ್ಟಿಯನ್ನು ರಿಲೀಸ್ ಮಾಡುತ್ತಲೇ ಇರುತ್ತವೆ. ಆದರೆ, ಈ ಬಾರಿ ಬಿಗ್ ಬಾಸ್ ಸ್ಪರ್ಧಿಗಳ ಲಿಸ್ಟ್ ಅನ್ನು ನಿರೀಕ್ಷೆ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಲಾಗಿದೆ. ಅದಕ್ಕೆ ಕಿಚ್ಚ ಸುದೀಪ್ ಕೂಡ ಪ್ರೋಮೊದಲ್ಲಿ "ಓಹ್.. ಭ್ರಮೆ!" ಎಂದು ಹೇಳಿದ್ದರು. ಈ ಪ್ರೋಮೋ ಸೋಶಿಯಲ್ ಮೀಡಿಯಾದಲ್ಲಿ 10 ಮಿಲಿಯನ್ ಅಧಿಕ ವೀಕ್ಷಣೆ ಕಂಡು ಬಿಗ್ ಬಾಸ್ ಕ್ರೇಜ್ ಅನ್ನು ಜೀವಂತವಾಗಿರಿಸಿದೆ.

ಕಿಚ್ಚನ ಬಿಗ್ ಬಾಸ್ ಕಾಸ್ಟ್ಯೂಮ್

ಕರ್ನಾಟಕದ ಕಿರುತೆರೆ ವೀಕ್ಷಕರು ಬಿಗ್ ಬಾಸ್ ನೋಡುವುದಕ್ಕೆ ಕಾಯುತ್ತಿದ್ದಾರೆ. ಅದರಲ್ಲೂ ಕಿಚ್ಚ ಸುದೀಪ್ ಪ್ರತಿ ಬಾರಿ ತಮ್ಮ ನಿರೂಪಣೆಯ ಶೈಲಿ ಹಾಗೂ ಕಾಸ್ಟ್ಯೂಮ್‌ನಿಂದಲೇ ಗಮನ ಸೆಳೆಯುತ್ತಾರೆ. ಈ ಬಾರಿ ಕೂಡ ಕಿಚ್ಚ ಸುದೀಪ್‌ ಮನ ಸೆಳೆಯುವ ನಿರೂಪಣೆಯನ್ನು ನೋಡಲು, ಅವರ ಕಾಸ್ಯೂಮ್‌ ಅನ್ನು ನೋಡುವುದಕ್ಕೆ ವೀಕ್ಷಕರು ಕಾಯುತ್ತಿದ್ದಾರೆ. ಈ ಸಲವೂ ಬಿಗ್ ಬಾಸ್ ಚುಕ್ಕಾಣಿ ಹಿಡಿದು, ತಮ್ಮ ಐಕಾನಿಕ್ ಧ್ವನಿ, ಮೊನಚು ವ್ಯಕ್ತಿತ್ವ, ನಿಬ್ಬೆರಗಾಗಿಸೋ ವೈಖರಿ, ಕಣ್ಸೆಳೆಯೋ ನಗು, ಸಮಸ್ಯೆಗಳನ್ನು ಪರಿಹರಿಸೋ ಚಾಣಾಕ್ಷತೆ, ತಪ್ಪಿದೋರನ್ನ ತಿದ್ದೋ ಗಟ್ಟಿತನ, ಪ್ರತಿ ಬಾರಿ ಅವರು ನೀಡೋ ಸಂದೇಶ ಇವೆಲ್ಲವನ್ನೂ ನೋಡಬಹುದು.

Kichcha Sudeep Hosted Bigg Boss Kannada 12 show highlights when and where to watch

ಬಿಗ್ ಬಾಸ್ 12 ರ ಹೈಲೈಟ್ ಏನು?

ಬಿಗ್ ಬಾಸ್ ಕನ್ನಡದ 12ನೇ ಸೀಸನ್ ಕಳೆದ ಸೀಸನ್‌ಗಿಂತ ಮಜವಾಗಿರುತ್ತೆ ಅನ್ನೋ ಭರವಸೆಯನ್ನು ಕಲರ್ಸ್ ಕನ್ನಡ ಈಗಾಗಲೇ ಕೊಟ್ಟಿದೆ. ಮೈ ನವಿರೇಳಿಸೋ ಟಾಸ್ಕ್ಸ್, ಅನಿರೀಕ್ಷಿತ ಎಮೋಷನ್ಸ್ , ವಾರದಿಂದ ವಾರಕ್ಕೆ ಸಿಗುವ ಟ್ವಿಸ್ಟ್ಸ್ ಆಂಡ್ ಟರ್ನ್ಸ್ ಇವು ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಹೊಸ ಪ್ರಪಂಚವನ್ನೇ ಸೃಷ್ಟಿಸೋಕೆ ಸಜ್ಜಾಗುತ್ತಿವೆಯಂತೆ.

ಯಾರೆಲ್ಲ ಮನೆಯೊಳಗೆ ಎಂಟ್ರಿ ಕೊಡ್ತಾರೆ?

ಈ ಬಾರಿ 'ಬಿಗ್‌ ಬಾಸ್' ಮನೆಯ ಪ್ರತಿಯೊಂದು ಜಾಗವೂ ವಿಭಿನ್ನವಾಗಿರುತ್ತೆ. ಬಿಗ್ ಬಾಸ್ ಮನೆಯಂತೆ ಸದಸ್ಯರೂ ಕೂಡ ಈ ಸಲ ಡಿಫರೆಂಟ್ ಅಂತೆ. ಆಕ್ಟರ್ಸ್, ಸಿಂಗರ್ಸ್, ಕಾಮಿಡಿಯನ್ಸ್, ಕುಕ್ಸ್, ಹೀಗೆ ಬೇರೆ ಬೇರೆ ಕ್ಷೇತ್ರದ ಇಂಟ್ರೆಸ್ಟಿಂಗ್ ವ್ಯಕ್ತಿಗಳನ್ನು ಒಟ್ಟಾಗಿ ಸೇರಿಸಿ ಬಿಗ್ ಬಾಸ್ ಮನೆಯ ರಂಗು ಹೆಚ್ಚಿಸಲಿದ್ದಾರೆ.

More from Filmibeat

English summary
Kichcha Sudeep Hosted Bigg Boss Kannada 12 show highlights, when and where to watch.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X