ಥಿಯೇಟರ್ ಆಯ್ತು.. ಓಟಿಟಿನೂ ಆಯ್ತು.. ಈಗ 'ವಿಕ್ರಾಂತ್ ರೋಣ' ಟಿವಿಗೆ ಎಂಟ್ರಿ: ಯಾವಾಗ?
'ವಿಕ್ರಾಂತ್ ರೋಣ' ಕನ್ನಡದ ಮತ್ತೊಂದು 3ಡಿ ಸಿನಿಮಾ. ಬಹಳ ದಿನಗಳ ಬಳಿಕ ಭಾರತೀಯ ಚಿತ್ರರಂಗಕ್ಕೆ ಮತ್ತೆ 3D ಅನುಭವ ನೀಡಿದಂತ ಸಿನಿಮಾ. ಇದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವೃತ್ತಿ ಬದುಕಿನಲ್ಲಿಯೇ ಒಂದು ವಿಭಿನ್ನ ಸಿನಿಮಾ.
ಕಿಚ್ಚ ಸುದೀಪ್ ಸಸ್ಪೆನ್ಸ್, ಥ್ರಿಲ್ಲರ್ ಕಥೆಯ ಮೂಲಕ ಹೊಸತೊಂದು ಪ್ಯಾಂಟಸಿ ಲೋಕಕ್ಕೆ ಪ್ರೇಕ್ಷಕರನ್ನು ಕರೆದುಕೊಂಡು ಹೋಗಿದ್ದರು. ಇದು ಸುದೀಪ್ ಅಭಿಮಾನಿಗಳಿಗೆ ವಿಶಿಷ್ಟ ಅನುಭವವನ್ನು ನೀಡಿತ್ತು.
ಥಿಯೇಟರ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದ 'ವಿಕ್ರಾಂತ್ ರೋಣ' ಕೆಲವು ದಿನಗಳ ಹಿಂದಷ್ಟೇ ಓಟಿಟಿಗೆ ಲಗ್ಗೆ ಇಟ್ಟಿತ್ತು. ಈಗ ಟಿವಿಯಲ್ಲಿ ಪ್ರಸಾರ ಆಗಲಿದೆ. ಇದೇ ಅಕ್ಟೋಬರ್ 15 ಶನಿವಾರದಂದು ರಾತ್ರಿ 7.30ಕ್ಕೆ ಈ ಸಿನಿಮಾ ಜೀ ಕನ್ನಡದಲ್ಲಿ ಅದ್ಧೂರಿಯಾಗಿ World Television premiere ಆಗಲಿದೆ.

'ವಿಕ್ರಾಂತ್ ರೋಣ' ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ರಿಲೀಸ್ ಆಗಿತ್ತು. ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾ ತೆರೆಕಂಡು ಅದ್ಭುತ ಯಶಸ್ಸು ಗಳಿಸಿತ್ತು. 'ಕೆಜಿಎಫ್', '777 ಚಾರ್ಲಿ' ಬಳಿಕ ಕನ್ನಡ ಚಿತ್ರರಂಗ ತಾಕತ್ತು ತೋರಿಸಿದ ಸಿನಿಮಾ ಎನಿಸಿಕೊಂಡಿದೆ.
'ರಂಗಿತರಂಗ' ಸಿನಿಮಾದ ನಿರ್ದೇಶಕ ಅನೂಪ್ ಭಂಡಾರಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಇದು ಅನುಪ್ ಭಂಡಾರಿ ಹಾಗೂ ಕಿಚ್ಚ ಸುದೀಪ್ ಕಾಂಬಿನೇಷನ್‌ನ ಮೊದಲ ಸಿನಿಮಾ. ಹೀಗಾಗಿ ಈ ಸಿನಿಮಾ ಬಗ್ಗೆ ನಿರೀಕ್ಷೆಗಳು ಗರಿಗೆದರಿದ್ದವು. ಅದರಂತೆ 'ವಿಕ್ರಾಂತ್ ರೋಣ' ಸಖತ್ ಸೌಂಡ್ ಮಾಡಿತ್ತು.
'ವಿಕ್ರಾಂತ್ ರೋಣ' ಸಿನಿಮಾಗೆ ಟ್ರೆಂಡ್ ಸೆಟ್ಟಿಂಗ್ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಟ್ಯೂನ್ ಹಾಕಿದ್ದಾರೆ. ಹಾಗೇ ವಿಲಿಯಮ್ ಡೇವಿಡ್ ಕಣ್ಮನ ಸೆಳೆಯುವ ಛಾಯಾಗ್ರಹಣವಿದೆ. ಬಹುಕೋಟಿ ವೆಚ್ಚದ ಈ ಚಿತ್ರವನ್ನು ಮನರಂಜನಾ ಸಂಸ್ಥೆ ಜೀ ಸ್ಟುಡಿಯೋಸ್ ವಹಿಸಿಕೊಂಡಿತ್ತು.

ಇನ್ನು 'ವಿಕ್ರಾಂತ್ ರೋಣ' ಸಿನಿಮಾದಲ್ಲಿ ಕಿಚ್ಚ ಸುದೀಪ್ ಜೊತೆ ನಿರೂಪ್ ಭಂಡಾರಿ , ನೀತಾ ಅಶೋಕ್, ಬಾಲಿವುಡ್ ನಟಿ ಜಾಕ್ವಲಿನ್ ಫರ್ನಾಂಡಿಸ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದರು. ವಿಶ್ವದ ಅತಿದೊಡ್ಡ ಕಟ್ಟಡವಾದ ಬುರ್ಜ್ ಖಲೀಫಾದ ಮೇಲೆ ಕನ್ನಡದ ಬಾವುಟ ಹಾರಿಸಿದ್ದು, ಈ ಸಿನಿಮಾದ ವಿಶೇಷ.
ಎಲ್ಲಕ್ಕಿಂತ ಹೈಲೈಟ್ ಅಂದ್ರೆ, ಕಿಚ್ಚ ಸುದೀಪ್ ಹಾಗೂ ಜಾಕ್ವಲಿನ್ ಫರ್ನಾಂಡಿಸ್ ಕಾಂಬಿನೇಷನ್‌ನಲ್ಲಿ ಬಂದ "ರಾ..ರಾ.. ರಕ್ಕಮ್ಮ" ಸಾಂಗ್. ಈ ಹಾಡು ಇಡೀ ದೇಶದಲ್ಲೇ ಹೊಸ ಸಂಚಲನ ಮೂಡಿಸಿದ್ದು, ಈಗಲೂ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.


Click it and Unblock the Notifications











