Karna Serial:'ಕರ್ಣ' ಧಾರಾವಾಹಿಯ ಮೊದಲ ಎಪಿಸೋಡ್ ಹೇಗಿತ್ತು? ಅಯ್ಯೋ ಪಾಪ ಅನ್ನೋ ಫೀಲಿಂಗ್..?

ಜೀ ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಧಾರಾವಾಹಿಗಳು ಮನರಂಜನೆಯನ್ನ ಕೊಡ್ತಾ ಇದ್ದಾವೆ. ಆದರೆ, ಕರ್ಣನಿಗೆ ವೀಕ್ಷಕರು ಕಾದಿದ್ದು ಕೊಂಚ ಜಾಸ್ತಿಯೇ ಸರಿ. ಎಲ್ಲಾ ಅಡೆತಡೆಗಳನ್ನು ಮೀರಿ ನಿನ್ನೆಯಿಂದ ಕರ್ಣ ಎಲ್ಲರ ಮನೆಗಳಿಗೆ ಬಂದಿದ್ದಾನೆ. ಪ್ರೋಮೋ ನೋಡಿ ಕುತೂಹಲ, ಕಾತುರ, ಮನಸ್ಸಿನಲ್ಲಿ ಹುಟ್ಟಿಸಿಕೊಂಡ‌ ನಿರೀಕ್ಷೆಗಳೆಲ್ಲವೂ ಮೊದಲ ಎಪಿಸೋಡ್ ನೋಡಿಯೇ ಖುಷಿ ಕೊಟ್ಟಿದೆ.

ಆರಂಭದಲ್ಲಿಯೇ ನಮ್ಮ ಹೀರೋ ಇಂಟ್ರುಡಕ್ಷನ್ ಅದ್ಧೂರಿಯಾಗಿದೆ. ಅಬ್ಬಬ್ಬಾ ಆ ಮನೆ, ಮನೆಯೊಳಗಿನ ಇಂಟಿರಿಯರ್ ನೋಡಿ ಮಿಡಲ್ ಕ್ಲಾಸ್ ವೀಕ್ಷಕರು ದಂಗು ಬಡಿದೋಗಿದ್ದಾರೆ. ಕರ್ಣನದ್ದು ಏನ್ ಮನೆ ಗುರು. ಆ ಅರಮನೆಯನ್ನ ಕಣ್ಣಾರೆ ಕಂಡು, ಯಾವುದೋ ದೊಡ್ಡ ಬಜೆಟ್ ಸಿನಿಮಾ ಅಂತ ಫೀಲ್ ಮಾಡುತ್ತಿರುವಾಗಲೇ ಹೆಣ್ಣು‌ಮಕ್ಕಳ ಮನಸ್ಸು ಗೆಲ್ಲುವಂತಹ ಬೆಳಗಿನ ಜಾಗಿಂಗ್ ಶುರು ಮಾಡಿದ್ದ ಕರ್ಣ. ಕರ್ಣ ಮೊದಲೇ ಡಾಕ್ಟರ್. ಹೀರೋ ಬೇರೆ. ನಡು ರಸ್ತೆಯಲ್ಲಿಯೇ ದೊಡ್ಡ ಸಮಸ್ಯೆಯನ್ನ ಬಗೆಹರಿಸಿ, ಜನಸಾಮಾನ್ಯರ ಹೀರೋ ಆಗಿ ಬಿಟ್ಟ. ಹೇಗೆ ಗೊತ್ತಾ..?

Kiran Raj Bhavya Gowda starrer Karna serial first episode review in Kannada

ಮಾಮೂಲಿ ಲೈಫ್‌ನಲ್ಲಿ ಮಿನಿಸ್ಟರ್ಸ್ ಬರುವಾಗ ಹೇಗೆ ಜೀರೋ ಟ್ರಾಫಿಕ್ ಮಾಡ್ತಾರೋ ಇಲ್ಲೂ ಅದೇ ಮಾಡಿದ್ರು. ಆದರೆ ರಿಯಲ್ ಲೈಫ್‌ನಲ್ಲಿ ಆಂಬುಲೆನ್ಸ್ ನಿಲ್ಲಿಸೋದಿಲ್ಲ. ಗರ್ಭಿಣಿ ಮಹಿಳೆ ಆಂಬ್ಯುಲೆನ್ಸ್‌ನಲ್ಲಿ ಇದ್ದರೂ ಅಷ್ಟೇ. ಅದು ಎರಡು ಜೀವದ ಪ್ರಶ್ನೆ. ಇದು ಸೀರಿಯಲ್ ಅಲ್ವಾ. ಹಾಗಾಗಿ ಆಂಬುಲೆನ್ಸ್ ಕೂಡ ಟ್ರಾಫಿಕ್‌ನಲ್ಲಿ ಸಿಲುಕಿತ್ತು. ಇಷ್ಟಾದರೂ ಕ್ರಿಯೇಟಿವ್ ಫ್ರೀಡಂ ಇರಲೇಬೇಕು. ಅದಕ್ಕೆ ನೋ ಕಮೆಂಟ್ಸ್.

ಇನ್ನು ಡಾಕ್ಟರ್ ಕರ್ಣ ಬ್ಯಾರಿಕೇಡ್ ಮೇಲಿಂದ ಎಗರಿ, ಆಂಬುಲೆನ್ಸ್‌ನಲ್ಲಿದ್ದ ಗರ್ಭಿಣಿಗೆ ಹೆರಿಗೆ ಮಾಡಿಸಿದ್ದಾರೆ. ಆಹಾ ಇದನ್ನೆಲ್ಲ ನೋಡಿದ ಅಲ್ಲಿ‌ನ ಜನರು ಶಿಳ್ಳೆ, ಚಪ್ಪಾಳೆ ತಟ್ಟಿದ್ರು. ಮೀಡಿಯಾದವ್ರು ಅಲ್ಲಿಯೇ ಇದ್ದ ಕಾರಣ ಡಾಕ್ಟರ್ ಕರ್ಣ ಬಳಿ, ಇಂಥ ಸಾಹಸಕ್ಕೆ ನಿಮಗ್ಯಾರು ಸ್ಪೂರ್ತಿ ಅಂದ್ರು. ಖುಷಿಯಲ್ಲಿದ್ದ ಕರ್ಣ ಮನೆಯವರೆಲ್ಲರ ಹೆಸರು ಹೇಳಿದ್ದರು. ಇಷ್ಟೆಳಿದ್ದೇ ತಡ ಮನೆಯಲ್ಲಿ ತಂದೆಯ ಎದೆಯಲ್ಲಿ ಬೆಂಕಿ ಹೊತ್ತಿ ಉರಿಯಿತು. ಟಿವಿಯನ್ನೇ ಒಡೆದು ಹಾಕಿ ಆಕ್ರೋಶ ಹೊರ ಹಾಕಿದ್ದೂ ಆಗಿದೆ.

Kiran Raj Bhavya Gowda starrer Karna serial first episode review in Kannada

ತಂದೆಯ ನಡುವಳಿಕೆ ನೋಡುಗರಿಗೆ ಅಯ್ಯೋ ಪಾಪ ಅನ್ನೋ ಫೀಲಿಂಗ್. ಮೊದಲ ಎಪಿಸೋಡ್‌ನಲ್ಲಿಯೇ ಕರ್ಣ ವೀಕ್ಷಕರ ಮನಸ್ಸು ಗೆದ್ದಿದ್ದಾಗಿದೆ. ಇಂತಹ ಕರ್ಣನನ್ನ ನಾವೂ ನೋಡಿಲ್ಲ ಅನ್ನೋ ಭಾವ. ಆದರೆ, ಈ ಕರ್ಣ ತಂದೆಯ ಪ್ರೀತಿಗಾಗಿ ಎಷ್ಟೆಲ್ಲಾ ಒದ್ದಾಡ್ತಾ ಇದ್ದಾನಲ್ವಾ ಅನ್ನಿಸಿದೆ. ಹಾಗೇ ಕುತೂಹಲವೂ ಹುಟ್ಟಿಕೊಂಡಿದೆ. ಮಗನ ಮೇಲೆ ತಂದೆಗೆ ಯಾಕಿಷ್ಟು ದ್ವೇಷ? ಕರ್ಣ ಅಂತಹದ್ದೇನು ಮಾಡಿದ್ದಾನೆ? ಮದುವೆ ಬಗ್ಗೆ ಏನಿದು ಅಗ್ರಿಮೆಂಟ್? ತಲೆಯಲ್ಲಿ ಏನೇನೋ ಓಡುತ್ತಿದೆ.

ಕರ್ಣನಿಗೆ ತಂದೆ ಪ್ರೀತಿ ಸಿಗದಿದ್ದರೆ ಏನಂತೆ? ಈ ಬೇಸರದ ನಡುವೆ ಒಂದು ಬ್ಯೂಟಿಫುಲ್ ಲವ್ ಸ್ಟೋರಿ ಹುಟ್ಟಿಕೊಂಡಿದೆ. ಕರ್ಣನನ್ನು ಇಷ್ಟ ಪಡುವ ಒನ್ ವೇ ಲವ್ ಅದು. ಭವ್ಯಾ ಅಲಿಯಾಸ್ ನಿಧಿ ಹೃದಯದಲ್ಲಿ ಕರ್ಣ ಎಂಟ್ರಿ ಕೊಟ್ಟಾಕಿದೆ. ನಿಧಿಗೆ ಡಾಕ್ಟರ್‌ ಮೇಲೆ ಲವ್ ಹುಟ್ಟಿದೆ. ಆದರೆ, ಏನು ಮಾಡೋದು ಹೇಳೋಕೆ ಧೈರ್ಯ ಇಲ್ಲ. ಅಕ್ಕ‌ ನಿತ್ಯಾಳ ಮದುವೆಯಾದ್ರೆ ತಾನೂ ಬೇಗ ಮದುವೆಯಾಗಬಹುದು. ಎಂಬಿಬಿಎಸ್ ಡಿಗ್ರಿ ಜೊತೆಗೆ ಕರ್ಣನನ್ನೂ ಎತ್ತಾಕೊಂಡು ಹೋಗಬಹುದು ಅನ್ನೋ ಆಸೆ.

ಹಾಗಂತ ಕರ್ಣ, ನಿಧಿ ಲವ್ ಸ್ಟೋರಿ ನೂರಾರು ಎಪಿಸೋಡ್ ಬರುತ್ತೆ. ಅಷ್ಟು ಬೇಗ ಮದುವೆ ಮಾಡಿಸೋಕೆ ಆಗಲ್ಲ ಅಂತ ನಿಮಗೂ ಗೊತ್ತು. ಅದಕ್ಕೆ ಆರಂಭದಲ್ಲಿಯೇ ಅಗ್ರಿಮೆಂಟ್ ಅನ್ನೋ ಸಂಚನ್ನು ಸೇರಿಸಿದ್ದಾಗಿದೆ. ಒಂದ್ಕಡೆ ಲವ್ ಸ್ಟೋರಿ ನಡೆದರೆ, ಇನ್ನೊಂದು ಕಡೆ ಮದುವೆನೇ ಆಗಬಾರದು ಅನ್ನೋ ಪ್ಲಾನ್ ನಡೀತಿದೆ. ಇದೆಲ್ಲ ನೋಡಿದರೆ, ವೀಕ್ಷಕರಿಗೆ ಮುಂದಿನ ದಿನಗಳಲ್ಲಿ ಟ್ವಿಸ್ಟ್ ಅಂಡ್ ಟರ್ನ್ ಇರುತ್ತೆ ಅಂತ ಗೆಸ್ ಮಾಡಬಹುದು.

ಇನ್ನು ನಿಧಿ, ಶಾಂತಿ, ನಿತ್ಯಾ ಈ ಮೂರು ಜನರದ್ದೊಂದು ಪುಟ್ಟ ಫ್ಯಾಮಿಲಿ. ಈ ಪುಟ್ಟ ಕುಟುಂಬ ಕೂಡ ವೀಕ್ಷಕರಿಗೆ ಖುಷಿ ಕೊಟ್ಟಿದೆ. ಒಟ್ಟಾರೆ ಮೊದಲ ಎಪಿಸೋಡ್‌ನಲ್ಲಿ ಹುಟ್ಟಿಸಿದ ನಿರೀಕ್ಷೆಗೆ ಮೋಸ ಏನು ಆಗಿಲ್ಲ. ಮುಂದಿನ ದಿನಗಳಲ್ಲಿ 'ಕರ್ಣ' ಕಥೆ ಹೇಗೆ ಸಾಗುತ್ತೆ? ಅನ್ನೋದೇ ದೊಡ್ಡ ಕುತೂಹಲವಂತೂ ಇದ್ದೇ ಇದೆ.

More from Filmibeat

English summary
Kiran Raj, Bhavya Gowda starrer Karna serial first episode review in Kannada.
Read more about: serial tv show bhavya
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X