ಮಾಡರ್ನ್ ಕ್ರೇಜಿಸ್ಟಾರ್ ಕಿಶನ್ ಬಿಳಗಲಿಗೆ ಅಭಿಮಾನಿಯಿಂದ ಬೆಸ್ಟ್ ಗಿಫ್ಟ್; ಏನದು?

By ಅನಿತಾ ಬನಾರಿ

ನಟ, ಡ್ಯಾನ್ಸರ್ ಕಿಶನ್ ಬಿಳಗಲಿ ಈಗಂತೂ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚಿರಪರಿಚಿತ. ಕಿರುತೆರೆ ಪ್ರೇಕ್ಷಕರಿಗೂ, ಸಾಮಾಜಿಕ ಜಾಲತಾಣದ ನೆಟ್ಟಿಗರಿಗೂ ಬಹಳ ಚೆನ್ನಾಗಿ ಪರಿಚಯವಿರುವ ಚಿಕ್ಕಮಗಳೂರಿನ ಈ ಯುವಕ ತಮ್ಮ ಡ್ಯಾನ್ಸ್‌ನಿಂದಲೇ ಇಡೀ ಕರ್ನಾಟಕ್ಕೆ ಬಹಳ ಚೆನ್ನಾಗಿ ಪರಿಚಯವಿದ್ದಾರೆ.

ಇತ್ತೀಚೆಗಷ್ಟೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಿರುವ ಕಿಶನ್ ಬಿಳಗಲಿಗೆ ಅಭಿಮಾನಿ ಒಬ್ಬರಿಂದ ಬಹಳ ದೊಡ್ಡ ಸರ್ಪ್ರೈಸ್ ಸಿಕ್ಕಿದೆ. ಹೌದು, ಅಭಿಮಾನಿಗಳು ತಾವು ಇಷ್ಟಪಡುವ ವ್ಯಕ್ತಿಯನ್ನು ಅವರ ವ್ಯಕ್ತಿತ್ವಯನ್ನು ಅದೆಷ್ಟು ಇಷ್ಟಪಡುತ್ತಾರೆ ಎಂದರೆ, ಕೆಲವೊಮ್ಮೆ ಯಾವ ಮಟ್ಟಿಗೆ ಬೇಕಾದರೂ ತಮ್ಮ ಅಭಿಮಾನವನ್ನು ತೋರಿಸಲು ಮುಂದಾಗುತ್ತಾರೆ.

Kishen Bilagali fan gave him a surprise on his birthday

ಇದೀಗ ಕಿಶನ್ ಬಿಳಗಲಿ ಅವರಿಗೆ ಒಬ್ಬ ಅಪ್ಪಟ ಅಭಿಮಾನಿ ಇದ್ದು ಬಹಳ ದೊಡ್ಡ ಸರ್ಪ್ರೈಸ್ ಅನ್ನು ನೀಡಿದ್ದಾರೆ. ತಮ್ಮ ಹುಟ್ಟುಹಬ್ಬವನ್ನು ಸೆಲೆಬ್ರೇಟ್ ಮಾಡಿಕೊಳ್ಳುವ ತಯಾರಿಯಲ್ಲಿದ್ದ ಕಿಶನ್ ಬಿಳಗಲಿಯನ್ನು ಮೀಟ್ ಆದ ಈ ಅಭಿಮಾನಿ ತಮ್ಮ ಸರ್ಪ್ರೈಸ್ ಅನ್ನು ತೋರಿಸಿದ್ದಾರೆ. ಇದರಿಂದ ಅಚ್ಚರಿ ಜೊತೆಗೆ ಭಾವುಕರಾಗಿದ್ದಾರೆ ಕಿಶನ್.

'ಸ್ನೇಹದ ಕಡಲಲ್ಲಿ' ಹೊಸ ಧಾರಾವಾಹಿಯಲ್ಲಿ ವಿಲನ್ ಲುಕ್ ಕೊಟ್ಟ ಅಭಿಜ್ಞಾ ಭಟ್; ಪಾತ್ರ ಯಾವುದು?
ಅಂದಹಾಗೆ, ಈ ಅಭಿಮಾನಿ ತಮ್ಮ ಒಂದು ಕೈ ಮೇಲೆ ಕಿಶನ್ ಅವರ ಭಾವಚಿತ್ರವನ್ನು ಹಚ್ಚೆಯಾಗಿ ಹಾಕಿಸಿಕೊಂಡಿದ್ದಾರೆ, ಇನ್ನೊಂದು ಕೈ ಮೇಲೆ ಕಿಶನ್ ಎಂದು ಬರೆಸಿಕೊಂಡಿದ್ದಾರೆ. ಇದನ್ನು ಕಿಶನ್ ಅವರ ಹುಟ್ಟುಹಬ್ಬದಂದು ಅವರನ್ನು ಭೇಟಿಯಾಗಿ ತೋರಿಸಿದ್ದಾರೆ. ಇದರಿಂದ ಬಹಳಷ್ಟು ಸರ್ಪ್ರೈಸ್ ಆದ ಕಿಶನ್ "ನಾನು ಇಂತಹ ದೊಡ್ಡ ಉಡುಗೊರೆಗೆ ಅರ್ಹನೂ ಇಲ್ಲವೋ ಗೊತ್ತಿಲ್ಲ. ಆದರೆ ನನಗೆ ಇದುವರೆಗೂ ಸಿಕ್ಕಿರುವ ಬಹುದೊಡ್ಡ ಬಹು ದುಬಾರಿ ಗಿಫ್ಟ್ ಗಳಲ್ಲಿ ಇದು ಒಂದು. ಇದಕ್ಕೆ ನನ್ನ ಹೃದಯ ಅಂತರಾಳದಿಂದ ಧನ್ಯವಾದಗಳು" ಎಂದು ಭಾವುಕರಾಗಿದ್ದಾರೆ.

ಇನ್ನು ಈ ಅಭಿಮಾನಿಯ ಹೆಸರು ನಿಂಗನ ಗೌಡ‌. ಬಹಳಷ್ಟು ವರ್ಷಗಳಿಂದ ಇವರು ಕಿಶನ್ ಬಿಳಗಲಿಯ ಅಭಿಮಾನಿಯಾಗಿದ್ದು ಈ ಬಾರಿ ಇಂತಹ ಅದ್ಭುತ ಸರ್ಪ್ರೈಸ್ ಮೂಲಕ ತಮ್ಮ ಹೀರೋಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.

ಅಂದ ಹಾಗೆ ಈ ವಿಚಾರವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ ನಟ ಕಿಶನ್. ಅಭಿಮಾನಿ ಹಾಕಿಸಿಕೊಂಡ ಹಚ್ಚೆಯ ಜೊತೆಗೆ ಅಭಿಮಾನಿಯೊಂದಿಗಿನ ಫೋಟೋ ಹಾಗೂ ಈ ಅಪ್ಪಟ ಅಭಿಮಾನಿ ನಿಂಗನ ಗೌಡ ಅವರ ಕೈಗೆ ಮುತ್ತಿಡುತ್ತಿರುವ ಫೋಟೋವನ್ನು ಶೇರ್ ಮಾಡಿದ್ದಾರೆ ಕಿಶನ್ ಬೆಳಗಲಿ. ಹುಟ್ಟುಹಬ್ಬದ ಪ್ರಯುಕ್ತ ಕಿಶನ್ ಬೆಳಗಲಿ ಅವರ ನೂರಾರು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶುಭ ಆಶೀರ್ವಾದವನ್ನು ತಿಳಿಸಿದ್ದಾರೆ.

ಬಿಗ್ ಬಾಸ್‌ನಲ್ಲಿ ಸ್ಪರ್ಧೆಯಾಗಿ ಮೊದಲ ಬಾರಿಗೆ ಖ್ಯಾತಿ ಪಡೆದ ಕಿಶನ್ ಬಿಳಗಲಿ, ಬಹಳಷ್ಟು ಡ್ಯಾನ್ಸ್ ರಿಯಾಲಿಟಿ ಶೋಗಳಿಂದಲೇ ಫೇಮಸ್ಸು. ಮೂಲತಃ ಡ್ಯಾನ್ಸರ್ ಹಾಗೂ ಕೊರಿಯೋಗ್ರಾಫರ್ ಆಗಿರುವ ಇವರು ತಮ್ಮ ವಿಭಿನ್ನ ಅದ್ಭುತ ಡ್ಯಾನ್ಸ್ ಮೂವ್ಸ್ ಗಳಿಂದಲೇ ಬಹುದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಂತೂ 7 ಲಕ್ಕಕ್ಕೂ ಹೆಚ್ಚು ಫಾಲೋವರ್ಸ್ ಅನ್ನು ಹೊಂದಿರುವ ಇವರು 1700ಕ್ಕೂ ಹೆಚ್ಚು ಪೋಸ್ಟ್‌ಗಳನ್ನು ಶೇರ್ ಮಾಡಿದ್ದಾರೆ.

ಇವರ ಪ್ರತಿ ಪೋಸ್ಟ್ ಕೂಡ ಕಣ್ಣಿಗೆ ಹಬ್ಬವಿದ್ದಂತೆ. ಡ್ಯಾನ್ಸು, ಕಾಸ್ಟ್ಯೂಮ್, ಸೆಟ್ಟಿಂಗ್, ಎಲ್ಲವೂ ಒಂದಕ್ಕಿಂತ ಒಂದು ಚೆಂದ. ಡ್ಯಾನ್ಸ್ ಅಷ್ಟೇ ಅಲ್ಲದೆ ಇತ್ತೀಚೆಗೆ 'ನಿನಗಾಗಿ' ಧಾರಾವಾಹಿಯಲ್ಲಿಯೂ ಒಂದು ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು 'ಗತವೈಭವ' ಎನ್ನುವ ಸಿನಿಮಾದಲ್ಲಿಯೂ ನಟಿಸಲಿದ್ದಾರೆ. ಹೀಗೆ ನಾನಾ ರೀತಿಯ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿ ಇರುವ ಕಿಶನ್ ಬಿಳಗಲಿ, ಕಲಾವಿದರಾದ ನಮ್ರತಾ ಗೌಡ, ಚೈತ್ರ ಆಚಾರ್, ಧನ್ಯ ರಾಮ್ ಕುಮಾರ್ ಮುಂತಾದವರೊಂದಿಗೆ ಬಹಳಷ್ಟು ಹಾಡುಗಳಿಗೆ ಅದ್ಭುತವಾಗಿ ಸ್ಟೆಪ್ ಹಾಕಿದ್ದಾರೆ.

ಆಗಾಗ ಹಲವು ದೇಶಗಳನ್ನು ಸುತ್ತುತ್ತಾ, ಶ್ರೀರಾಮ ಈಶ್ವರ, ಶ್ರೀ ಕೃಷ್ಣ, ಹೀಗೆ ಹಲವು ದೇವರಗಳ ಕಾಸ್ಟ್ಯೂಮ್ ಅನ್ನು ಧರಿಸಿ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಾ ತಮ್ಮ ಫಾಲೋವರ್ಸ್ ಅನ್ನು ಸದಾ ಹೆಂಗೆ ಮಾಡಿರುತ್ತಾರೆ. ಇತ್ತೀಚೆಗಷ್ಟೇ ಕ್ಯಾಂಡಲ್ ಮೇಣವನ್ನು ಭುಜದ ಮೇಲೆಲ್ಲಾ ಸುರಿಸಿಕೊಂಡು ಹೊಸ ರೀತಿಯ ವಿಭಿನ್ನ ಫೋಟೋಶೂಟ್ ಮಾಡಿ ಸುದ್ದಿ ಆಗಿದ್ದರು. ಇದೀಗ ಇವರ ಅಪ್ಪಟ ಅಭಿಮಾನಿಯಿಂದ ಸಿಕ್ಕ ಸರ್ಪ್ರೈಸ್‌ಗೆ ಬಹಳ ಅಚ್ಚರಿಯಾಗುವುದಷ್ಟೇ ಅಲ್ಲದೆ ಭಾವುಕರಾಗಿದ್ದಾರೆ ಕಿಶನ್ ಬಿಳಗಲಿ.

More from Filmibeat

English summary
Kishen Bilagali fan gave him a surprise on his birthday:
Read more about: dancer actor birthday
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X