ಪ್ರಪ್ರಥಮ ಬಾರಿಗೆ ಸುವರ್ಣದಲ್ಲಿ ಸಂಗೊಳ್ಳಿ ರಾಯಣ್ಣ

By Rajendra

ಸ್ಟಾರ್ ನೆಟ್ ವರ್ಕ್ ನ ಸುವರ್ಣ ವಾಹಿನಿಯು ತನ್ನ ವೀಕ್ಷಕರಿಗೆ ಸದಾ ವಿನೂತನ ಕಾರ್ಯಕ್ರಮಗಳನ್ನೇ ಉಣಬಡಿಸುತ್ತಾ ಬರುತ್ತಿದ್ದು ಈಗ ಪ್ರಪ್ರಥಮ ಬಾರಿಗೆ ಕಳೆದ ವರ್ಷದ ಅತ್ಯುತ್ತಮ ಕನ್ನಡ ಚಲನಚಿತ್ರ ಎಂದೇ ಖ್ಯಾತಿ ಆದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಲನಚಿತ್ರವನ್ನು ಇದೇ ಸೆಪ್ಟೆಂಬರ್ 8 ರ ಭಾನುವಾರದಂದು ಸಂಜೆ 5.30ಕ್ಕೆ ಪ್ರಸಾರ ಮಾಡುತ್ತಿದೆ.

2012ರಲ್ಲಿ ತೆರೆಕಂಡ ಐತಿಹಾಸಿಕ ಬ್ಲಾಕ್ ಬಸ್ಟರ್ ಚಿತ್ರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ. ಇದನ್ನು ನಾಗಣ್ಣ ಅವರು ನಿರ್ದೇಶನ ಮಾಡಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ, ಜಯಪ್ರದಾ ಮತ್ತು ನಿಖಿತಾ ತುಕ್ರಾಲ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. [ಚಿತ್ರ ವಿಮರ್ಶೆ ಓದಿ]

ಕನ್ನಡ ಚಿತ್ರರಂಗದಲ್ಲೇ ಇಲ್ಲಿಯವರೆಗೆ ಅತ್ಯಂತ ಅದ್ಧೂರಿಯಾಗಿ ತೆಗೆದ, ಬೃಹತ್ ಮೊತ್ತವನ್ನು ಹೂಡಿಕೆ ಮಾಡಿ ಚಿತ್ರೀಕರಿಸಿದ ಏಕೈಕ ಐತಿಹಾಸಿಕ ಚಿತ್ರ ಇದಾಗಿದೆ. 'ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ'ನ ಪಾತ್ರವನ್ನು ದರ್ಶನ್ ಅಭಿನಯಿಸಿದ್ದಾರೆ. ಪಾತ್ರಕ್ಕೆ ನ್ಯಾಯ ಒದಗಿಸಿಕೊಟ್ಟಿದ್ದು ನಾಯಕ ನಟನನ್ನು ಕೊಂಡಾಡಲಾಗುತ್ತಿದೆ.

ಒಟ್ಟಿನಲ್ಲಿ ಕುಟುಂಬ ಸಮೇತರಾಗಿ ಒಟ್ಟಾಗಿ ಕುಳಿತು ನೋಡುವಂತಹ ಜೊತೆಗೆ ಕ್ರಾಂತಿವೀರನ ಹೋರಾಟ, ದೇಶಪ್ರೇಮ, ಗೌರವ , ಅಭಿಮಾನ ಮುಂತಾದವುಗಳನ್ನು ಮೆರೆಯುವಂತಹ ಚಲನಚಿತ್ರ ಇದಾಗಿದೆ.

ಕನ್ನಡ ಚಲನಚಿತ್ರರಂಗದಲ್ಲೇ ಅತ್ಯಂತ ಅದ್ಧೂರಿ ಚಿತ್ರವನ್ನು ನಿರ್ದೆಶಿಸಿದ ನಾಗಣ್ಣ ಮತ್ತು ನಿರ್ಮಿಸಿದ ಆನಂದ ಬಿ ಅಪ್ಪುಗೋಳ ಅವರದು ಚಾಲೆಂಜಿಂಗ್ ಪ್ರಯತ್ನ ವಾಗಿದೆ. ಇಂತಹ ಅದ್ಭುತ ಸಿನೆಮಾ ಹಕ್ಕುಗಳನ್ನು ಸುವರ್ಣವಾಹಿನಿಯು ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ. ಈ ಐತಿಹಾಸಿಕ ಚಿತ್ರವನ್ನು ಮರೆಯದೇ ನೋಡಿ ಇದೇ ಭಾನುವಾರ ಸಂಜೆ 5-30ಕ್ಕೆ ನಿಮ್ಮ ನೆಚ್ಚಿನ ಸುವರ್ಣ ವಾಹಿನಿಯಲ್ಲಿ. (ಒನ್ಇಂಡಿಯಾ ಕನ್ನಡ)

More from Filmibeat

English summary
Challenging Star Darshan's blockbuster film Krantiveera Sangolli Rayanna for the first time will be air on 8th September, 2013 on Suvarna Channel at 5.30pm. It is a movie based on the freedom fighter of the same name with the Challenging Star Darshan performing the role of Sangolli Rayanna and veteran actress Jayaprada enacting the role of Kittur Chenamma. It is a must watch film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X