ಥಿಯೇಟರ್ ಆಯ್ತು.. ಓಟಿಟಿ ಆಯ್ತು.. ಈಗ ಟಿವಿಯಲ್ಲಿ 'ಲವ್ ಬರ್ಡ್ಸ್': ಯಾವಾಗ?

ಸ್ಯಾಂಡಲ್‌ವುಡ್‌ನ ಕ್ಯೂಟ್ ಜೋಡಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್. ರಿಯಲ್ ಲೈಫ್‌ನಲ್ಲೂ ಈ ಜೋಡಿ ಕ್ಯೂಟ್. ತೆರೆಮೇಲೆ ಇವರಿಬ್ಬರನ್ನೂ ನೋಡುವುದಕ್ಕೆ ಪ್ರೇಕ್ಷಕರು ಇಷ್ಟ ಪಡುತ್ತಾರೆ. ಲವ್‌ ಬರ್ಡ್ಸ್‌ನಿಂದ ಈ ಜೋಡಿ ತುಂಬಾನೇ ಇಷ್ಟ ಆಗೋಕೆ ಶುರುವಾಗಿದ್ದಾರೆ.

ಇತ್ತೀಚೆಗೆ ಈ ಜೋಡಿ ನಟಿಸಿದ 'ಲವ್ ಬರ್ಡ್ಸ್' ಸಿನಿಮಾ ಥಿಯೇಟರ್‌ಗೆ ಲಗ್ಗೆ ಇಟ್ಟಿತ್ತು. ಈ 'ಲವ್‌ ಬರ್ಡ್ಸ್' ಪ್ರೇಕ್ಷಕರಿಗೆ ಇಷ್ಟನೂ ಆಗಿದ್ದರು. ಆ ಬಳಿಕ ಓಟಿಟಿಗೂ ಲಗ್ಗೆ ಇಟ್ಟಿದೆ. ಆ ಬಳಿಕ ಈಗ ಕಿರೆತೆರೆಯಲ್ಲಿ ಪ್ರಸಾರವಾಗುತ್ತಿದೆ.

Krishna And Milana Nagaraj Starrer Love Birds telecasting On April 23rd

ಕನ್ನಡದ ಜನಪ್ರಿಯ ವಾಹಿನಿ 'ಸ್ಟಾರ್ ಸುವರ್ಣ' ಇದೀಗ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಅಭಿನಯದ 'ಲವ್ ಬರ್ಡ್ಸ್' ಸಿನಿಮಾವನ್ನು ಪ್ರಸಾರ ಮಾಡಲು ಸಜ್ಜಾಗಿದೆ. 'ಕಾಂತಾರ'ದಂತಹ ಹಿಟ್ ಬ್ಲಾಕ್ ಬಸ್ಟರ್ ಸಿನಿಮಾವನ್ನು ಪ್ರಸಾರ ಮಾಡಿದ ಬಳಿಕ ಈಗ 'ಲವ್ ಬರ್ಡ್ಸ್' ಅನ್ನು ಪ್ರಸಾರ ಮಾಡುತ್ತಿದೆ.

'ಲವ್ ಬರ್ಡ್ಸ್' ಸಿನಿಮಾ ಇದು ಮದುವೆಯ ಬಳಿಕ ದಂಪತಿಯ ಜೀವನ. ಅವರ ಖುಷಿ, ಆಸೆ-ಆಕಾಂಕ್ಷೆ, ಕಿತ್ತಾಟ ಎಲ್ಲವನ್ನು ತೆರೆಮೇಲೆ ಬಿಂಬಿಸಲಾಗಿದೆ. ಇಂದಿನ ಯುವ ಪೀಳಿಗೆಗೆ ಹೇಳಿ ಮಾಡಿಸಿದಂತಿದೆ. ಹೀಗಾಗಿ ಇದು ಪಕ್ಕಾ ಫ್ಯಾಮಿಲಿ ಓರಿಯೆಂಟೆಡ್ ಸಿನಿಮಾ.

'ಲವ್ ಬರ್ಡ್' ಸಿನಿಮಾದ "ಪಳ ಪಳ.." ಅನ್ನೋ ಹಾಡು‌ ಸೋಶಿಯಲ್‌ ಮೀಡಿಯಾದಲ್ಲಿ ಅತೀ ಹೆಚ್ಚು ವೈರಲ್‌ ಆಗಿತ್ತು. ಸಂಗೀತ ಪ್ರಿಯರು ಈ ಹಾಡನ್ನು ಹೊಗಳಿಕೊಂಡಾಡಿದ್ದರು. ಇನ್ನು ಡಾರ್ಲಿಂಗ್ ಕೃಷ್ಣ ಈ ಸಿನಿಮಾದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ನಟಿಸಿದ್ದಾರೆ. ಹಾಗೇ ಫ್ಯಾಶನ್ ಡಿಸೈನರ್ ಪಾತ್ರದಲ್ಲಿ ಮಿಲನಾ ನಾಗರಾಜ್ ನಟಿಸಿದ್ದು, ಇಬ್ಬರ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಇಷ್ಟ ಆಗಿತ್ತು.

Krishna And Milana Nagaraj Starrer Love Birds telecasting On April 23rd

ರಿಯಲ್ ಲೈಫ್ ಜೋಡಿಯ ಸಿನಿಮ್ಯಾಟಿಕ್ ಸ್ಟೋರಿಗೆ ಪಿ ಸಿ ಶೇಖರ್ ಆಕ್ಷನ್ ಕಟ್ ಹೇಳಿದ್ದರು. ಕಡ್ಡಿಪುಡಿ ಚಂದ್ರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಇದರಲ್ಲಿ ರಂಗಾಯಣ ರಘು, ಸಾಧು ಕೋಕಿಲ, ವೀಣಾ ಸುಂದರ್ ಮತ್ತು ಯೂಟ್ಯೂಬರ್ ಗೌರವ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 'ಲವ್ ಬರ್ಡ್ಸ್' ಸಿನಿಮಾಗೆ ಅರ್ಜುನ್ ಜನ್ಯ ಮ್ಯೂಸಿಕ್ ನೀಡಿದ್ದು, ಶಕ್ತಿ ಶೇಖರ್ ಕ್ಯಾಮರಾ ಹಿಡಿದಿದ್ದಾರೆ.

'ಲವ್‌ ಬರ್ಡ್ಸ್' ಸಿನಿಮಾವನ್ನು ಸ್ಟಾರ್ ಸುವರ್ಣದಲ್ಲಿ ಏಪ್ರಿಲ್ 23ರಂದು ರಾತ್ರಿ 7 ಗಂಟೆಗೆ ಅಕ್ಷಯ ತೃತೀಯದಂದು ವರ್ಲ್ಡ್ ಪ್ರೀಮಿಯರ್ ಆಗಲಿದೆ. ಕಾಮಿಡಿ, ಲವ್‌ಸ್ಟೋರಿ ಹಾಗೂ ಎಮೋಷನಲ್ ಸನ್ನಿವೇಶಗಳ ಮೂಲಕ 'ಲವ್ ಬರ್ಡ್ಸ್' ವೀಕ್ಷಕರನ್ನು ಸೆಳೆಯುತ್ತಾರಾ ನೋಡಬೇಕಿದೆ.

More from Filmibeat

English summary
Krishna And Milana Nagaraj Starrer Love Birds telecasting On April 23rd, Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X