ಅರಿಶಿಣ ಶಾಸ್ತ್ರದಲ್ಲಿ 'ಲಕ್ಷ್ಮಿ ಬಾರಮ್ಮ' ಸೀರಿಯಲ್ ಹೀರೋ ಶಮಂತ್ ಭಾವಿ ಪತ್ನಿ ಮೇಘನಾ; ಮದುವೆ ಯಾವಾಗ?
ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿದ್ದ ಜನಪ್ರಿಯ ಧಾರಾವಾಹಿ 'ಲಕ್ಷ್ಮಿ ಬಾರಮ್ಮ'. ಈ ಧಾರಾವಾಹಿಯ ಹೀರೋ ಕಿರುತೆರೆ ವೀಕ್ಷಕರ ಮನೆ ಮಾತಾಗಿದ್ದರು. ಅದಕ್ಕೂ ಮುನ್ನ ಶಮಂತ್ ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲೂ ಭಾಗವಹಿಸಿದ್ದರು. ಅಲ್ಲಿಂದಲೇ ಕಿರುತೆರೆ ವೀಕ್ಷಕರಿಗೆ ಶಮಂತ್ ಬ್ರೋ ಗೌಡ ಬಗ್ಗೆ ಚೆನ್ನಾಗಿಯೇ ಗೊತ್ತು. ಇದೇ ನಟ ಈಗ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ.
ಶಮಂತ್ ಬ್ರೋ ಗೌಡ ಕೆಲವು ದಿನಗಳ ಹಿಂದಷ್ಟೇ ಪ್ರೀತಿಸಿದ ಹುಡುಗಿ ಮೇಘನಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈಗ ಇದೇ ತಿಂಗಳು ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಶಮಂತ್ ಹಾಗೂ ಮೇಘನಾ ಪ್ರೀತಿ ಮಾಡುತ್ತಿದ್ದರು. ಇಬ್ಬರೂ ತಮ್ಮ ಕುಟುಂಬಸ್ಥರನ್ನು ಒಪ್ಪಿಸಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈಗಾಗಲೇ ಶಮಂತ್ ಗೌಡ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ.

ಬ್ಯಾಚುಲರ್ ಲೈಫ್‌ಗೆ ಗುಡ್ ಬೈ ಹೇಳಿ ಫ್ಯಾಮಿಲಿ ಮ್ಯಾನ್ ಆಗುವುದಕ್ಕೆ ಹೊರಟಿರುವ ಶಮಂತ್ ಬ್ರೋ ಗೌಡ ಮನೆಯಲ್ಲಿ ಹಳದಿ ಶಾಸ್ತ್ರ ನಡೆದಿದೆ. ಹಾಗೇ ಭಾವಿ ಪತ್ನಿ ಮೇಘನಾ ಅವರಿಗೂ ಅವರ ಮನೆಯಲ್ಲಿ ಹಳದಿ ಶಾಸ್ತ್ರ ನಡೆದಿದೆ. ಈ ಕಾರ್ಯಕ್ರಮದ ಫೋಟೊ ಹಾಗೂ ವೀಡಿಯೋವನ್ನು ಮೇಘನಾ ಹಾಗೂ ಶಮಂತ್ ಬ್ರೋ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಶಮಂತ್ ಬ್ರೋ ಗೌಡ ತಮ್ಮ ಮದುವೆಗೆ ಚಿತ್ರರಂಗದ ಗಣ್ಯರನ್ನು ಆಹ್ವಾನಿಸುತ್ತಿದ್ದಾರೆ. ಇತ್ತೀಚೆಗೆ ಸ್ಯಾಂಡಲ್‌ವುಡ್‌ನ ಯುವರಾಜ ನಿಖಿಲ್ ಕುಮಾರಸ್ವಾಮಿ ಅವರಿಗೆ ಮದುವೆ ಆಮಂತ್ರಣ ನೀಡಿದ್ದಾರೆ. ಆ ಫೋಟೊ ಹಾಗೂ ವಿಡಿಯೋವನ್ನು ತನ್ನ ಇನ್‌ಸ್ಟಾ ಸ್ಟೋರಿಯಲ್ಲಿ ಶೇರ್ ಮಾಡಿದ್ದಾರೆ. ಇದೇ ತಿಂಗಳು ಅಂದರೆ, ಮೇ 21ಕ್ಕೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಶಮಂತ್ ಈಗಾಗಲೇ ಕಿರುತೆರೆ ಹಾಗೂ ಸಿನಿಮಾ ಗಣ್ಯರಿಗೆ ಆಹ್ವಾನ ನೀಡಿದ್ದಾರೆ.
ಶಮಂತ್ ಬ್ರೋ ಕೇವಲ ನಟನಷ್ಟೇ ಅಲ್ಲ. ಸೋಶಿಯಲ್ ಮೀಡಿಯಾದಲ್ಲಿಯೂ ಸಿಕ್ಕಾಪಟ್ಟೆ ಫೇಮಸ್. ನಟ, ನಿರ್ದೇಶಕ ಒಂದು ಕಡೆಯಾದರೆ, ಇನ್ನೊಂದು ಕಡೆ ಗಾಯಕನಾಗಿಯೂ ಫೇಮಸ್. ಇಷ್ಟೇ ಅಲ್ಲ ಇವರು ಬೈಕರ್ ಕೂಡ. ಬೈಕ್ ರೈಡಿಂಗ್ ಅಂದರೆ ಬಲು ಇಷ್ಟ. ಲೈಫ್‌ನಲ್ಲಿ ಸಕ್ಸಸ್ ಕಂಡಿರುವ ಶಮಂತ್ ಈಗ ವೈಯಕ್ತಿಕ ಬದುಕಿನಲ್ಲಿಯೂ ಯಶಸ್ಸು ಕಾಣುವುದಕ್ಕೆ ಹೊರಟಿದ್ದಾರೆ.

ಇನ್ನು ಶಮಂತ್ ಮದುವೆಯಾಗುತ್ತಿರುವ ಹುಡುಗಿ ಪ್ರೊಫೆಷನಲ್ ಮೇಕಪ್ ಆರ್ಟಿಸ್ಟ್. ಮೇಘನಾ ಕುಟುಂಬದವರು ಮೂಲತ: ಮರಾಠಿಗರು. ಶಮಂತ್ ಕಾಲೇಜ್‌ನ ಇವೆಂಟ್ ಒಂದಕ್ಕೆ ಹೋಗಿದ್ದರು. ಆ ವೇಳೆ ಅಲ್ಲಿ ಶಮಂತ್‌ಗೆ ಮೇಘನಾ ಪರಿಚಯ ಆಗಿತ್ತು. ಆ ಪರಿಚಯ ಹಾಗೇ ಮುಂದುವರೆದು ಸ್ನೇಹಕ್ಕೆ ತಿರುಗಿತ್ತು. ಆ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ಇಬ್ಬರೂ ವೃತ್ತಿ ಬದುಕಿನಲ್ಲಿ ಯಶಸ್ಸು ಕಂಡಿದ್ದು, ಇಬ್ಬರೂ ಎರಡೂ ಕುಟುಂಬದವರನ್ನು ಒಪ್ಪಿಸಿ ಈಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಶಮಂತ್ ಬ್ರೋ ಗೌಡ ಮೂಲತ: ಉತ್ತರ ಕರ್ನಾಟಕ ಮೂಲದವರು. ಮೇಘನಾ ಮರಾಠಿಗರು. ಹೀಗಾಗಿ ಎರಡೂ ಕುಟುಂಬದ ಶೈಲಿಯಲ್ಲಿ ಮದುವೆ ನಡೆಯಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದೇ ಮೇ 21 ರಂದು ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದೆ. ಮದುವೆ ಸಮಯದಲ್ಲಿಯೇ ಶಮಂತ್ ನಟಿಸುತ್ತಿದ್ದ 'ಲಕ್ಷ್ಮಿ ಬಾರಮ್ಮ' ಸೀರಿಯಲ್ ಮುಗಿದಿದೆ. ಹೀಗಾಗಿ ಮದುವೆ ಕಾರ್ಯಕ್ರಮಗಳಿಗೆ ಹೆಚ್ಚು ಸಮಯ ಸಿಕ್ಕಂತಾಗಿದೆ. ಈ ಧಾರಾವಾಹಿಯ ಬಳಿಕ ಮುಂದಿನ ಧಾರಾವಾಹಿ ಯಾವುದು? ಯೋಜನೆ ಏನು? ಅನ್ನೋದನ್ನು ಇನ್ನೂ ರಿವೀಲ್ ಮಾಡಿಲ್ಲ.


Click it and Unblock the Notifications











