ಅಪ್ಪನ ವಾಚ್ ಕೊಡುವುದಾಗಿ ನಂಬಿಸಿ ಅಪರಿಚಿತನಿಂದ ಅನುಚಿತ ವರ್ತನೆ; ನಡುಗಿ ಹೋಗಿದ್ದ ನೇಹಾ ಗೌಡ

'ಲಕ್ಮೀ ಬಾರಮ್ಮ' ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದ ನಟಿ ನೇಹಾ ಗೌಡ. ಈ ಧಾರಾವಾಹಿಯಲ್ಲಿ ಈ ನಟಿಯನ್ನು ನೋಡಿ ವೀಕ್ಷಕರು ಪ್ರೀತಿಯಿಂದ ಗೊಂಬೆ ಎಂದು ಕರೆಯುವುದಕ್ಕೆ ಆರಂಭಿಸಿದ್ದರು. ಕಿರಿತೆರೆಯಲ್ಲಿ ಬ್ಯುಸಿಯಿದ್ದ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಸ್ವಲ್ಪ ಚೂಸಿಯಾಗಿದ್ದರು. ಈಗ ಹೆಣ್ಣು ಮಗುವಿಗೆ ಜನ್ಮ ನೀಡಿ ತಾಯ್ತನದ ಖುಷಿಯನ್ನು ಅನುಭವಿಸುತ್ತಿದ್ದಾರೆ.

ಕನ್ನಡ ಕಿರುತೆರೆಯಲ್ಲಿ ಇತಿಹಾಸವನ್ನೇ ನಿರ್ಮಿಸಿದ್ದ 'ಲಕ್ಷ್ಮಿ ಬಾರಮ್ಮ' ಧಾರಾವಾಹಿ ನೇಹಾ ಗೌಡ ವೃತ್ತಿ ಬದುಕಿಗೆ ಟರ್ನಿಂಗ್ ಪಾಯಿಂಟ್. ಇಲ್ಲಿಂದ ಇವರಿಗೆ ಹಿನ್ನೆಡೆ ಅನ್ನೋದು ಆಗೇ ಇಲ್ಲ. ಕಿರಿತೆರೆಯಲ್ಲಿ ಸ್ಟಾರ್ ಪಟ್ಟಕ್ಕೆ ಏರಿದ್ದ ನಟಿಯೀಕೆ. ಚಂದನ್ ಗೌಡ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಆಯ್ಕೆ ಮಾಡಿಕೊಂಡು ನಟನೆ ಮಾಡುತ್ತಿದ್ದಾರೆ.

Lakshmi Baramma serial fame Neha Gowda shared her shocking childhood experience

ಇತ್ತೀಚೆಗೆ ನೇಹಾ ಗೌಡ ತನ್ನ ಬದುಕಿನಲ್ಲಿ ನಡೆದ ಒಂದೇ ಒಂದು ಕಹಿ ಘಟನೆಯನ್ನು ಓಪನ್ ಆಗಿ ಹೇಳಿಕೊಂಡಿದ್ದಾರೆ. ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ನೇಹಾ ಗೌಡ ಬಾಲ್ಯದಲ್ಲಿ ತಮ್ಮ ಮೇಲಾದ ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದಾರೆ. ನೇಹಾ ಬದುಕಿನ ಆ ಕರಾಳ ದಿನ ಯಾವುದು? ಆ ದಿನ ನಡೆದಿದ್ದು ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಸಮಾಜದ ಕೆಟ್ಟು ಹೋಗಿದೆ. ಮಹಿಳೆಯರ ಮೇಲೆ ಎಷ್ಟು ದೌರ್ಜನ್ಯಗಳು ಆಗುತ್ತಿವೆಯೋ ಅಷ್ಟೇ ಮಕ್ಕಳ ಮೇಲೂ ಆಗುತ್ತಿದೆ. ಇಂತಹ ಸಾಕಷ್ಟು ಘಟನೆಗಳು ಪ್ರತಿದಿನ ನೋಡುತ್ತಲೇ ಇದ್ದೇವೆ. ಇಂತಹದ್ದೇ ಒಂದು ಅನುಭವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯ ನಟಿ ನೇಹಾ ಗೌಡ ಕೂಡ ಬಾಲ್ಯದಲ್ಲೂ ನಡೆದಿತ್ತು. ಅದು ಅವರ ಬದುಕಿನ ಅತ್ಯಂತ ಕರಾಳ ಅನುಭವ. ಆ ವಿಷಯವನ್ನು ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.

Lakshmi Baramma serial fame Neha Gowda shared her shocking childhood experience

"ನಾನು ತುಂಬಾನೇ ಚೂಟಿಯಾಗಿದ್ದೆ. ನಾನು ನಾಲ್ಕನೇ ತರಗತಿ ಓದುವಾಗ ನನಗೆ ಮಕ್ಕಳ ಮೇಲೆ ದೌರ್ಜನ್ಯ ಆಗುವಂತಹ ಘಟನೆ ನಡೀತು. ಅದಾದ್ಮೇಲೆ ಪುಲ್ ಡಿಫ್ರೆಷನ್. ಫುಲ್ ಸಣ್ಣಗೆ ಆಗಿ ಹೋದೆ. ಆಮೇಲೆ ನಾನು ಯಾರ ಜೊತೆನೂ ಜಾಸ್ತಿ ಮಾತಾಡುತ್ತಿರಲಿಲ್ಲ. ನಾನು ಇದನ್ನು ಯಾರೊಂದಿಗೂ ಶೇರ್ ಮಾಡಿಕೊಂಡಿರಲಿಲ್ಲ. ನಾನು ನನ್ನ ಅಮ್ಮನ ಜೊತೆ ಶೇರ್ ಮಾಡಿಕೊಂಡಿದ್ದೇ ಎಷ್ಟೋ ವರ್ಷಗಳಾದ್ಮೇಲೆ." ಎನ್ನುತ್ತಾರೆ ನೇಹಾ ಗೌಡ.

ನೇಹಾ ಗೌಡ ನಾಲ್ಕನೇ ತರಗತಿ ಓದುತ್ತಿದ್ದರು. ಆ ವೇಳೆ ಅವರನ್ನು ಮನೆಯಲ್ಲಿ ಮಲಗಿಸಿ, ಅಜ್ಜಿಯನ್ನು ನೋಡಿಕೊಳ್ಳುವಂತೆ ಹೇಳಿ ಪಕ್ಕದಲ್ಲೇ ಇದ್ದ ಸಂಬಂಧಿ ಮನೆಗೆ ಹೋಗಿದ್ದರು. ನೇಹಾ ಗೌಡ ನಿದ್ದೆಯಿಂದ ಎದ್ದಾಗ ಅವರ ಕಣ್ಮುಂದೆ ಅಮ್ಮ ಇಲ್ಲದ್ದನ್ನು ನೋಡಿ ಹಠ ಮಾಡುವುದಕ್ಕೆ ಶುರು ಮಾಡಿದ್ದರು. ಅಜ್ಜಿ ಸಮಾಧಾನ ಮಾಡಿದರೂ ಕೇಳಲ್ಲಿ. ಹೀಗಾಗಿ ಅಮ್ಮನನ್ನು ಹುಡುಕಿಕೊಂಡು ಪಕ್ಕದ ಬೀದಿಯಲ್ಲಿದ್ದ ಸಂಬಂಧಿ ಮನೆಗೆ ಹೊರಟಿದ್ದರು.

ಆ ವೇಳೆ ದಾರಿಯಲ್ಲಿ ಯಾರೋ ಕಿರಾತಕ ಎದುರಾಗಿದ್ದ. ನೇಹಾ ಗೌಡಗೆ ಅವರ ತಂದೆ ವಾಚ್ ರಿಪೇರಿಗೆ ಕೊಟ್ಟಿದ್ದು, ಅದನ್ನು ಕೊಡುವುದಾಗಿ ವಾಚ್ ಅಂಗಡಿಗೆ ಕರೆದುಕೊಂಡು ಹೋದ. ಈ ವೇಳೆ ನೇಹಾ ಜೊತೆ ಅಸಭ್ಯವಾಗಿ ವರ್ತಿಸ ತೊಡಗಿದ್ದ. ಇಲ್ಲೇನೋ ಆಗುತ್ತಿದೆ ಎಂದು ಅರಿತು ನೇಹಾ ಅಳುವುದಕ್ಕೆ ಶುರು ಮಾಡಿದ್ದರು. ಆಗ ಚಾಕು ತೋರಿಸಿ ಅಳದಂತೆ ಬೆದರಿಸಿದ್ದ. ಬೆರಳಚ್ಚು ಬೀಳುವಂತೆ ಕೆನ್ನೆಗೆ ಬಾರಿಸಿದ. ಬಳಿಕ ಅಲ್ಲಿಂದ ತಪ್ಪಿಸಿಕೊಂಡು ಬಂದೆ ಎಂದು ನೇಹಾ ಸಂದರ್ಶನದ ವೇಳೆ ಹೇಳಿಕೊಂಡಿದ್ದಾರೆ.

"ಇದನ್ನು ನಾನು ಯಾರೊಂದಿಗೂ ಹೇಳಿಕೊಳ್ಳಬಾರದು. ನಾನು ಹೇಳಿಕೊಂಡರೆ ನೋಡುವ ರೀತಿ ಬದಲಾಗುತ್ತೆ. ಹಾಗಂದುಕೊಂಡು ನಮ್ಮ ಅಮ್ಮನೊಂದಿಗೆ ಎಷ್ಟೋ ದಿನಗಳು ಹೇಳಿಕೊಂಡಿರಲಿಲ್ಲ. ಆದರೆ, ನಮ್ಮ ಅಮ್ಮನಿಗೆ ಇವಳು ಯಾಕಿಷ್ಟು ಡಲ್ ಆಗಿರುತ್ತಾಳೆ ಅಂತ ಡೌಟ್ ಇರುತ್ತಿತ್ತು. ಎಷ್ಟೋ ವರ್ಷಗಳು ಆದ್ಮೇಲೆ ನಾನು ಓಪನ್‌ ಅಪ್ ಆಗಿದ್ದು. ಆಗ ನಮ್ಮ ಅಮ್ಮನೂ ಶಾಕ್ ಆಗಿದ್ದರು. ಅವರೂ ಬೇಜಾರು ಮಾಡಿಕೊಂಡಿದ್ದರು. ಅವರು ಬಂದು ನಮ್ಮ ಅಪ್ಪನಿಗೆ ಹೇಳಿದ್ದರು. ಅದನ್ನು ನಮ್ಮ ಅಪ್ಪ ಡೀಲ್ ಮಾಡಿದ ರೀತಿ ಚೆನ್ನಾಗಿತ್ತು." ಎಂದಿದ್ದಾರೆ.

ನೇಹಾ ಗೌಡ ಈ ಕೆಟ್ಟ ಗಳಿಗೆಯನ್ನು ಮರೆಯಲು ಆಗದ ಮಂಕಾಗಿ ಹೋಗಿದ್ದರು. ಆಗ ಟೀಚರ್ ಒಬ್ಬರು ಗುಡ್ ಚಟ್ ಹಾಗೂ ಬ್ಯಾಡ್ ಟಚ್ ಬಗ್ಗೆ ಹೇಳಿದಾಗ ನೇಹಾ ಗೌಡ ಜೋರಾಗಿ ಅತ್ತು ಬಿಟ್ಟಿದ್ದರು. ಆ ಬಳಿಕವೇ ಕರಾಳ ಘಟನೆಯನ್ನು ಮರೆತು ಅಲ್ಲಿಂದ ಹೊರ ಬಂದಿದ್ದರು.

More from Filmibeat

English summary
Lakshmi Baramma serial fame Neha Gowda shared her shocking childhood experience in an interview
Read more about: actress serial interview
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X