'ಲಕ್ಷ್ಮಿ ನಿವಾಸ'ದ ಸಂತೋಷ್ ರಿಯಲ್ ಲೈಫ್‌ನಲ್ಲಿಯೂ ಅಷ್ಟೇ ಜಿಪುಣನೇ? ರಿಯಲ್ ಲೈಫ್‌ನಲ್ಲಿ ಈ ನಟ ಹೇಗೆ?

ಪ್ರಸ್ತುತ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮಿ ನಿವಾಸ' ಧಾರಾವಾಹಿಯು ಹೊಂದಿರುವ ವಿಭಿನ್ನ ಕಥೆ, ಚಿತ್ರಣ ಮತ್ತು ನಟನೆಯಿಂದ ವೀಕ್ಷಕರ ಮನ ಗೆದ್ದಿದೆ. ಈಗಾಗಲೇ ಟಿಆರ್‌ಪಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿರುವ 'ಲಕ್ಷ್ಮಿ ನಿವಾಸ' ಧಾರಾವಾಹಿ ಬಹಳಷ್ಟು ಜನರಿಂದ ಮೆಚ್ಚುಗೆಯನ್ನು ಪಡೆದುಕೊಂಡಿದೆ.

ಈ ಧಾರಾವಾಹಿಯಲ್ಲಿ ಬರುವ ಕೆಲವೊಂದು ಪಾತ್ರಗಳ ಪಾಸಿಟಿವ್ ಆಗಿದ್ದು ಎಲ್ಲರೂ ಮೆಚ್ಚಿಕೊಳ್ಳುವಂತಿದೆ. ಇನ್ನು ಕೆಲವೊಂದು ಪಾತ್ರಗಳು ಸ್ವಲ್ಪ ನೆಗೆಟಿವ್ ಶೇಡ್‌ನಲ್ಲಿದ್ದು ಕಿರುತೆರೆ ವೀಕ್ಷಕರು ಈ ಪಾತ್ರಗಳನ್ನು ನೋಡಿ ಹಿಡಿ ಶಾಪ ಹಾಕುತ್ತಾರೆ. ಆದರೆ, ಆ ಪಾತ್ರಗಳು ಧಾರಾವಾಹಿ ವೀಕ್ಷಕರ ಮನಸ್ಸಿನಲ್ಲಿ ಗಟ್ಟಿಯಾಗಿ ನಿಲ್ಲುವುದಕ್ಕೆ ಸಾಕಷ್ಟು ಪ್ರಯತ್ನ ಪಟ್ಟಿದೆ.

Lakshmi Nivasa serial actor Madhu Hegde acting journey and other details

ಲಕ್ಷ್ಮಿ ಮತ್ತು ಶ್ರೀನಿವಾಸ್ ದಂಪತಿಗಳ ಹಿರಿಯ ಮಗನಾದ ಸಂತೋಷ್ ಎಂದಿಗೂ ಸಂತೋಷದಿಂದ ಇದ್ದಿದ್ದೇ ನೋಡಿಲ್ಲ. ಹಾಗೇ ಬೇರೆಯವರಿಗೂ ಸಂತೋಷದಿಂದಿರಲು ಬಿಡುತ್ತಿಲ್ಲ. ಸಂತೋಷನ ಇದೇ ವರ್ತನೆ ಕಂಡು ಕಿರುತೆರೆ ವೀಕ್ಷಕರಿ ಹಿಡಿಶಾಪ ಹಾಕುತ್ತಾರೆ.

ಸಂತೋಷ್ ಮಹಾ ಕೋಪಿಷ್ಟ, ಜಿಪುಣ, ಯಾವುದರಲ್ಲೂ ನೆಮ್ಮದಿ ಕಾಣದವನು. ತನ್ನ ಅಪ್ಪ ಆಟೋ ಓಡಿಸುವುದು ಇಷ್ಟವಿಲ್ಲವೆಂದು ಅಪ್ಪನನ್ನು ತೆಗಳುತ್ತಾನೆಯೇ ಹೊರತು ಅವರಿಗೆ ಕಿಂಚಿತ್ತು ಸಹಾಯವನ್ನು ಮಾಡುವುದಿಲ್ಲ. ಇಡೀ ದಿನ ಸೋಂಬೇರಿಯ ಹಾಗೆ ಮನೆಯಲ್ಲಿ ಕೂತು ಎಲ್ಲರಲ್ಲೂ ತಪ್ಪು ಹುಡುಕುವುದೇ ಇವನ ಕಸಬು.

Lakshmi Nivasa serial actor Madhu Hegde acting journey and other details

ಇಂತಹ ಒಂದು ಪಾತ್ರದಲ್ಲಿ ಜೀವ ತುಂಬ ಬೇಕಾದರೆ ನಟನೆಯಲ್ಲಿ ಹಿಡಿತ ಇರಬೇಕು. 'ಲಕ್ಷ್ಮಿ ನಿವಾಸ' ಧಾರಾವಾಹಿಯಲ್ಲಿ ಕುಟುಂಬದ ಹಿರಿ ಮಗನಾಗಿ ಅಭಿನಯಿಸುತ್ತಿರುವ ಸಂತೋಷ್ ಪಾತ್ರವನ್ನು ನಿರ್ವಹಿಸುತ್ತಿರುವುದು ಮಧು ಹೆಗಡೆ. ಇವರು ಮೂಲತಃ ಶಿವಮೊಗ್ಗ ಜಿಲ್ಲೆಯ ಹೊಸನಗರದವರು. ನೀನಾಸಂ ಸಂಸ್ಥೆಯಲ್ಲಿ ಬಹಳ ಶ್ರದ್ಧೆಯಿಂದ ನಟನೆಯನ್ನು ಕಲಿತವರು .

ಮಧು ಹೆಗ್ಡೆ 'ಮೌನರಾಗ' ಧಾರಾವಾಹಿ ಮೂಲಕ ಮನರಂಜನಾ ಲೋಕಕ್ಕೆ ಕಾಲಿಟ್ಟರು. ನಂತರ 'ಮಳೆಬಿಲ್ಲು', 'ಗುಪ್ತಗಾಮಿನಿ', 'ಮನ್ವಂತರ', 'ಗೆಜ್ಜೆಪೂಜೆ', 'ಜೋಗುಳ', 'ಪಲ್ಲವಿ ಅನುಪಲ್ಲವಿ' ಮುಂತಾದ ಹಿಟ್ ಧಾರಾವಾಹಿಗಳಲ್ಲಿ ನಟಿಸಿ ಹೆಸರುವಾಸಿಯಾದರು.

ವಿಷ್ಣುವರ್ಧನ್ ಅವರೊಂದಿಗೆ 'ಈ ಬಂಧನ' ಎಂಬ ಫೇಮಸ್ ಚಲನಚಿತ್ರಗಳಲ್ಲಿ ನಟಿಸಿದವರು. 'ನಾಯಿ ನೆರಳು', 'ಕವಚ', 'ಮೂರು ರಹಸ್ಯಗಳು', 'ನಮ್ ನಾಣಿ ಮದ್ವೆ' ಇಂತಹ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹೊಸ ಧಾರಾವಾಹಿ 'ಲಕ್ಷ್ಮೀ ನಿವಾಸ' ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಈ ಧಾರಾವಾಹಿಯು ಮಧ್ಯಮ ವರ್ಗದ ಕುಟುಂಬವನ್ನು ನಡೆಸುವ ದಂಪತಿಗಳ ಕಥೆಯಾಗಿದ್ದು, ಸಾಮಾನ್ಯ ಜನರ ದಿನನಿತ್ಯದ ಗೋಳಾಟಗಳನ್ನು ತೋರಿಸಿ ಜನಮನ್ನಣೆ ಗಳಿಸುವುದರಲ್ಲಿ ಖಂಡಿತವಾಗಿಯೂ ಯಶಸನ್ನು ಪಡೆದಿದೆ.

ಇನ್ನೂ ಮಧು ಹೆಗ್ಡೆರವರ ವಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ 'ಲಕ್ಷ್ಮಿ ನಿವಾಸ' ಧಾರಾವಾಹಿಯ ಸಂತೋಷ್ ಪಾತ್ರಕ್ಕೆ ತದ್ವಿರುದ್ಧವಾಗಿ ಇರುವವರಂತೆ. ಸಂತೋಷ್ ಪಾತ್ರವನ್ನು ಅಭಿನಯಿಸುವ ಮಧು ಹೆಗ್ಡೆಯವರು ನಿಜ ಜೀವನದಲ್ಲೂ ಕೂಡ ಜಿಪುಣರೇ ಎಂಬುವುದು ನೆಟ್ಟಿಗರ ಮನಸಲ್ಲಿ ಪ್ರಶ್ನೆಯಾಗಿ ಕುಳಿತು ಬಿಟ್ಟಿದೆ. ಆದರೆ, ಅವರ ಕುಟುಂಬದವರು ಮಧು ನಿಜ ಜೀವನದಲ್ಲಿ ಹಾಗೆಲ್ಲವೆಂದು ಸ್ಪಷ್ಟಪಡಿಸುತ್ತಿದ್ದಾರೆ. ಇವರು ಖರ್ಚು ಮಾಡುವಾಗ ಎಂದಿಗೂ ತಲೆ ಕೆಡಿಸಿಕೊಳ್ಳುವುದಿಲ್ಲವಂತೆ.

ಇವರಿಗೆ ನಟನೆಯನ್ನು ಹೊರತು ಪಡಿಸಿ ಸಂಗೀತ ಕ್ಷೇತ್ರದಲ್ಲಿ ಬಹಳ ಆಸಕ್ತಿ ಇದೆ. ಇವರು ಕೆಲವು ಚಿತ್ರಗಳಿಗೆ ಮ್ಯೂಸಿಕ್ ಡೈರೆಕ್ಟರ್ ಆಗಿದ್ದಿದ್ದೂ ಇದೆ. ಇವರ ಇನ್‌ಸ್ಟಾಗ್ರಾಂ ಖಾತೆಯ ಬಯೋನಲ್ಲಿ 'ಆಕ್ಟರ್ ಬೈ ಚಾಯ್ಸ್.. ಮ್ಯೂಸಿಕ್ ಡೈರೆಕ್ಟರ್ ಬೈ ಪ್ಯಾಷನ್ ' ಎಂದು ಬರೆದುಕೊಂಡಿದ್ದಾರೆ. ಇವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಆಗಾಗ ಸೀರಿಯಲ್ ಸೆಟ್ಟಿನ ಬ್ಯಾಕ್ ಸ್ಕ್ರೀನ್‌ನಲ್ಲಿ ಆಗುವಂತಹ ಮೋಜು ಮಸ್ತಿಗಳ ರೀಲ್ಸ್‌ ಅನ್ನು ಹಂಚಿಕೊಳ್ಳುತ್ತಿರುತ್ತಾರೆ.

More from Filmibeat

English summary
Lakshmi Nivasa serial actor Madhu Hegde acting journey and other details
Read more about: actor sandalwood filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X