'ಕ್ಲಾಸ್ಟೋಪೋಬಿಯಾ'ದಿಂದ ಬಳಲುತ್ತಿದ್ದ ದಿವಂಗತ ನಟಿ ಸೌಂದರ್ಯಾ: ಏನಿದು ಸಮಸ್ಯೆ?
ಸೌಂದರ್ಯಾ ಹೆಸರಿಗೆ ತಕ್ಕಂತೆ ಇದ್ದ ಸುಂದರವಾಗಿದ್ದ ನಟಿ. ದಕ್ಷಿಣ ಭಾರತದ ಜನಪ್ರಿಯ ನಟಿ. ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಕನ್ನಡದ ನಟಿಯಾಗಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಮಿಂಚಿದ ನಟಿಯೀಕೆ.
ದಕ್ಷಿಣ ಭಾರತದ ಅದೆಷ್ಟೋ ಹಿಟ್ ಸಿನಿಮಾಗಳಲ್ಲಿ ಸೌಂದರ್ಯಾ ನಾಯಕಿಯಾಗಿ ನಟಿಸಿದ್ದಾರೆ. ಅದರಲ್ಲೊಂದು 'ಆಪ್ತಮಿತ್ರ'. ಸಾಹಸ ಸಿಂಹ ವಿಷ್ಣುವರ್ಧನ್, ರಮೇಶ್ ಅರವಿಂದ್ ಜೊತೆ ಸೌಂದರ್ಯಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾಗಳಲ್ಲಿ ಒಂದಾಗಿತ್ತು.

ಅದರಲ್ಲೂ ನಾಗವಲ್ಲಿಯಾಗಿ ಸೌಂದರ್ಯಾ ನಟನೆಯನ್ನು ಕಂಡು ಸಿನಿ ಪ್ರಿಯರು ಕಳೆದು ಹೋಗಿದ್ದರು. ಈ ಸಿನಿಮಾದ ಕ್ಲೈಮ್ಯಾಕ್ಸ್ ಸನ್ನಿವೇಶವನ್ನು ಚಿತ್ರೀಕರಿಸುವ ವೇಳೆ ನಡೆದ ಘಟನೆಯನ್ನು ರಮೇಶ್ ಅರವಿಂದ್ ನೆನಪಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಸೌಂದರ್ಯಾಗೆ 'ಕ್ಲಾಸ್ಟೋಪೋಬಿಯಾ' ಸಮಸ್ಯೆಯಿತ್ತು ಎಂದಿದ್ದಾರೆ. ಅಷ್ಟಕ್ಕೂ ಕ್ಲಾಸ್ಟೋಪೋಬಿಯಾ ಎಂದರೆ ಏನು?
'ಆಪ್ತಮಿತ್ರ' ಕ್ಲೈಮ್ಯಾಕ್ಸ್ ಸೀನ್ ಶೂಟಿಂಗ್ ವೇಳೆ ಸೌಂದರ್ಯಾ ಹೇಗಿದ್ದರು? ನಾಗವಲ್ಲಿಯ ಪಾತ್ರದೊಳಗೆ ಹೊಕ್ಕು ನಟನೆ ಮಾಡುತ್ತಿದ್ದರು. ಆ ಸಂದರ್ಭವನ್ನು ಜೀ ಕನ್ನಡದ 'ಮಹಾನಟಿ' ರಿಯಾಲಿಟಿ ಶೋನಲ್ಲಿ ನೆನಪಿಸಿಕೊಂಡಿದ್ದಾರೆ.
"ಆಪ್ತಮಿತ್ರ ಮಾಡುತ್ತಿದ್ದೆವು. ಕ್ಲೈಮ್ಯಾಕ್ಸ್ ಸೀನ್ ನಡೀತಾ ಇದೆ. ನಾಗವಲ್ಲಿ ಪರ್ಫಾಮೆನ್ಸ್ ಅದು. ಆ ರಂಗೋಲಿಯನ್ನೆಲ್ಲ ಹಾಕಿ ಸೌಂದರ್ಯಾ ಆಕ್ಟ್ ಮಾಡುತ್ತಿದ್ದಾರೆ. ಅವರು ಸೌಂದರ್ಯಾನೇ ಅಲ್ಲ. ನಾಗವಲ್ಲಿ ಒಳಗೆ ಬಂದುಬಿಟ್ಟಿದ್ದಾಳೆ ಅನಿಸಿತು. ಅಷ್ಟು ಪಾತ್ರದೊಳಗೆ ಹೊಕ್ಕು ಸೌಂದರ್ಯಾ ನಟನೆ ಮಾಡುತ್ತಿದ್ದಿದ್ದು, ನಾವು ದೂರದಿಂದ ನೋಡಿ ಡಿಸ್ಟರ್ಬ್ ಮಾಡುವುದೇ ಬೇಡ ಅಂತ ಬಂದು ಬಿಟ್ಟಿದ್ದೆವು. ಹಾಗೆ ಪಾತ್ರದ ಒಳಗೆ ಹೋಗಿಬಿಡೋರು." ಎಂದು ರಮೇಶ್ ಅರವಿಂದ್ 'ಮಹಾನಟಿ' ವೇದಿಕೆಯಲ್ಲಿ ರಿವೀಲ್ ಮಾಡಿದ್ದಾರೆ.
'ಆಪ್ತಮಿತ್ರ' ಸಿನಿಮಾದಲ್ಲಿನ ಸೌಂದರ್ಯಾ ಅಭಿನಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಅವ್ರಿಗೆ 'ಕ್ಲಾಸ್ಟೋಪೋಬಿಯಾ' ಇತ್ತು ಎಂಬ ಮಾಹಿತಿ ಹೊರಹಾಕಿದ್ದಾರೆ. "ಅವರಿಗೆ ಕ್ಲಾಸ್ಟೋಪೋಬಿಯಾ ಇದೆಯಂತೆ. ಅವರಿಗೆ ಸಣ್ಣ ರೂಮಿನಲ್ಲಿ, ಲಿಸ್ಟ್‌ನಲ್ಲಿ ಇರುವುದಕ್ಕೆ ಆಗುವುದಿಲ್ಲವಂತೆ. ಆ ತರ ಮನ:ಸ್ಥಿತಿ ಇರುವ ಹುಡುಗಿ ಆ ಚಿಕ್ಕ ಹೆಲಿಕಾಪ್ಟರ್ ಒಳಗೆ ಹೇಗೆ ಕೂತುಕೊಂಡ್ರು? ಅಂತಹದ್ದೇನಾಯ್ತು?" ಎಂದು ಸೌಂದರ್ಯಾಗಿದ್ದ ಸಮಸ್ಯೆ ಬಗ್ಗೆ ರಮೇಶ್ ಅರವಿಂದ್ 'ಮಹಾನಟಿ' ವೇದಿಕೆಯಲ್ಲಿ ಹೇಳಿಕೊಂಡಿದ್ದಾರೆ.
ಅಷ್ಟಕ್ಕೂ ಕ್ಲಾಸ್ಟೋಫೋಬಿಯಾ ಅಂದರೇನು ಗೊತ್ತೇ? ಈ ಸಮಸ್ಯೆಯಿಂದ ಬಳಲುತ್ತಿದ್ದವರು ಬಾಕ್ಸ್‌ನೊಳಗೆ, ಕೋಣೆಯೊಳಗೆ, ಲಿಸ್ಟ್‌ನಲ್ಲಿ ಹೀಗೆ ಇಂತಹ ಚಿಕ್ಕ ಸ್ಳಳವಿರುವ ಓಡಾಡಲು ಬಯಸುವುದಿಲ್ಲ. ಇಂತಹ ಜಾಗಗಳಲ್ಲಿ ಅವ್ರಿಗೆ ಭಯ ಹೆಚ್ಚಾಗುತ್ತೆ. ಈ ಸಮಸ್ಯೆ ನಟಿ ಸೌಂದರ್ಯಾಗೆ ಇತ್ತು.
ಈ ಸಂದರ್ಭದಲ್ಲಿ ರಮೇಶ್ ಅರವಿಂದ್ 'ಪಂಚತಂತ್ರಂ' ಸಿನಿಮಾ ಶೂಟ್ ಮಾಡುತ್ತಿದ್ದರು. ಆಗ ಸೌಂದರ್ಯಾ ಸಾವಿನ ಸುದ್ದಿ ಅವರ ಕಿವಿಗೆ ಬಿದ್ದಿತ್ತು. "ನಾನು ಪಂಚತಂತ್ರಂ ಶೂಟ್ ಮಾಡುತ್ತಿದ್ದೇನೆ. ಟಿವಿಯಲ್ಲಿ ನ್ಯೂಸ್ ಬರುತ್ತಿದೆ. ನನಗೆ ನಂಬುದಕ್ಕೆ ಆಗುತ್ತಿಲ್ಲ. ಮತ್ತೆ ಮತ್ತೆ ಅವರ ನಂಬರ್‌ಗೆ ಫೋನ್ ಮಾಡುತ್ತಿದ್ದೇನೆ ತೆಗೆಯುತ್ತಾರೆ ಅಂತ. ಆದರೆ, ರೆಸ್ಪಾನ್ಸ್ ಬರಲೇ ಇಲ್ಲ." ಎಂದು ರಮೇಶ್ ಅರವಿಂದ ಹೇಳಿಕೊಂಡಿದ್ದಾರೆ.


Click it and Unblock the Notifications











