BBK 11:"ಇರಿ ಅಂತಾನೂ ಹೇಳಲ್ಲ.. ಬನ್ನಿ ಅಂತಾನೂ ಹೇಳಲ್ಲ"; ಲಾಯರ್ ಜಗದೀಶ್ ಪತ್ನಿ ಸೌಮ್ಯಾ ಹೀಗ್ಯಾಕೆ ಅಂದ್ರು?

ಬಿಗ್‌ಬಾಸ್ ಕನ್ನಡ ಸೀಸನ್ 11 ರಿಯಾಲಿಟಿ ಶೋ ಪ್ರತಿ ದಿನವೂ ಚರ್ಚೆಯಾಗುತ್ತಿದೆ. ಮೊದಲ ದಿನದಿಂದಲೇ ಲಾಯರ್ ಜಗದೀಶ್ ಬಿಗ್‌ಬಾಸ್ ಮನೆಯಲ್ಲಿ ಹವಾ ಇಟ್ಟುಕೊಂಡಿದ್ದಾರೆ. ಒಂದಲ್ಲ ಒಂದು ಕಾರಣಕ್ಕೆ ಜಗದೀಶ್ ಸ್ಪರ್ಧಿಗಳ ಮೇಲೆ ಮುನಿಸಿಕೊಳ್ಳುತ್ತಿದ್ದರು. ಅವರ ವಿರುದ್ಧ ರೇಗಾಡುತ್ತಿದ್ದರು. ಬಳಿಕ ತಕ್ಷಣವೇ ಕ್ಷಮೆ ಕೂಡ ಕೇಳುತ್ತಿದ್ದರು. ಮೊದಲ ವಾರ ಹೀಗೆ ಕಳೆದು ಹೋಗಿತ್ತು.

ಎರಡನೇ ವಾರ ಜಗದೀಶ್ ಕಂಪ್ಲೀಟ್ ಆಗಿ ಬದಲಾಗಿದ್ದರು. ರೇಗುವುದು ಕಡಿಮೆ ಮಾಡಿಕೊಂಡಿದ್ದರು. ಹಾಗೇ ರೊಮ್ಯಾಂಟಿಕ್ ಮೂಡಿಗೆ ಜಾರಿದ್ದರು. ಹಂಸ ಹಾಗೂ ಲಾಯರ್ ಜಗದೀಶ್ ನಡುವಿನ ಜುಗಲ್‌ಬಂಧಿ ಕಿರುತೆರೆ ವೀಕ್ಷಕರಿಗೆ ಕಿಕ್ ಕೊಟ್ಟಿತ್ತು. ಕೆಲವೊಮ್ಮೆ ಕಾಮಿಡಿ ಮಾಡುತ್ತಾ ಕಿರುತೆರೆ ವೀಕ್ಷಕರನ್ನು ನಗಿಸಿದ್ದೂ ಇದೆ. ಮತ್ತೆ ಕ್ಷಣ ಮಾತ್ರದಲ್ಲಿ ಕೋಪ ಮಾಡಿಕೊಂಡಿದ್ದೂ ಇದೆ.

Lawyer Jagadish out of Bigg Boss Kannada season 11 here is his wife Soumya reaction

ಮೂರನೇ ವಾರ ಬಿಗ್‌ಬಾಸ್ ಮನೆಯ ಸ್ಪರ್ಧಿಗಳ ನಡುವೆ ಜಗದೀಶ್ ಮತ್ತೆ ಮುಖ ಕೆಡಿಸಿಕೊಂಡಿದ್ದರು. ಇಂದಿನ ಪ್ರೋಮೊದಲ್ಲಿ ಲಾಯರ್ ಜಗದೀಶ್ ಹಾಗೂ ರಂಜಿತ್ ನಡುವೆ ಕಿತ್ತಾಟ ನಡೆದು, ಇಬ್ಬರೂ ಕೈ ಕೈ ಮಿಲಾಯಿಸಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಬಿಗ್‌ಬಾಸ್ ಮನೆಯಿಂದ ಇಬ್ಬರೂ ಹೊರ ಹಾಕಲಾಗಿದೆ ಅನ್ನೋದು ಸುದ್ದಿ. ಈ ಬಗ್ಗೆ ಲಾಯರ್ ಜಗದೀಶ್ ಅವರ ಪತ್ನಿ ಸೌಮ್ಯಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. "ಅಲ್ಲಿ ಇರಿ ಅಂತಾನೂ ಹೇಳಲ್ಲ.. ಬನ್ನಿ ಅಂತಾನೂ ಹೇಳಲ್ಲ" ಎಂದು ಪ್ರತಿಕ್ರಿಯಿಸಿದ್ದಾರೆ. ಈ ಘಟನೆ ಬಗ್ಗೆ ಸೌಮ್ಯಾ ಜಗದೀಶ್ ಹೇಳಿದ್ದೇನು? ತಿಳಿಯಲು ಮುಂದೆ ಓದಿ.

ಕಲರ್ಸ್ ಕನ್ನಡದ ಬೆಳಗ್ಗೆ ಇಬ್ಬರೂ ಹೈ ವೋಲ್ಟೇಜ್ ಪ್ರೋಮೊವನ್ನು ರಿಲೀಸ್ ಮಾಡಿದ್ದರು. ಅಲ್ಲಿಂದ ಈ ಸುದ್ದಿ ಹರಿದಾಡುವುದಕ್ಕೆ ಶುರು ಮಾಡಿದೆ. ಲಾಯರ್ ಜಗದೀಶ್ ಒಂದು ಕಡೆಯಾದರೆ, ಉಳಿದವರು ಇನ್ನೊಂದು ಕಡೆ. ಈ ಮಧ್ಯೆ ಜಗದೀಶ್ ಹಾಗೂ ರಂಜಿತ್ ಮಧ್ಯೆ ಕೈ ಕೈ ಮಿಲಾಯಿಸುವ ಹಂತಕ್ಕೂ ಹೋಗಿದೆ. ಹೀಗಾಗಿ ಇಬ್ಬರನ್ನು ಬಿಗ್‌ಬಾಸ್ ಮನೆಯಿಂದ ಹೊರ ಹಾಕಿದ್ದಾರೆ ಅನ್ನೋದು ಸುದ್ದಿ. ಅದು ಇಂದಿನ ಎಪಿಸೋಡ್‌ನಲ್ಲಿ ಹೊರಬೀಳಲಿದೆ.

Lawyer Jagadish out of Bigg Boss Kannada season 11 here is his wife Soumya reaction

ಬಿಗ್‌ಬಾಸ್ ಮನೆಯಿಂದ ಲಾಯರ್ ಜಗದೀಶ್ ಹೊರಬಿದ್ದಿದ್ದಾರೆ ಅನ್ನೋ ಸುದ್ದಿ ಬಗ್ಗೆ ಅವರ ಪತ್ನಿ ಸೌಮ್ಯಾ ಮಾಧ್ಯಮಗಳಿಗೆ ಪ್ರತಿಕ್ರಿಯ ನೀಡಿದ್ದಾರೆ. ಅವರು ಹೊರಬಂದಿದ್ದಾರೋ ಇಲ್ಲವೋ ತನಗೆ ಈ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಸೋಶಿಯಲ್ ಮೀಡಿಯಾ ಪೋಸ್ಟ್‌ಗಳನ್ನು ನೋಡಿದ ಮೇಲೆ ಈ ಬಗ್ಗೆ ಹೇಗೆ ಪ್ರತಿಕ್ರಿಯೆ ಕೊಡಬೇಕು ಅನ್ನೋದು ಗೊತ್ತಾಗುತ್ತಿಲ್ಲ. ಜಗದೀಶ್ ಅವರಿಂದಲೂ ಕರೆ ಬಂದಿಲ್ಲ. ಹಾಗೇ ಬಿಗ್ ಬಾಸ್‌ ಕಡೆಯಿಂದಲೂ ಕರೆ ಬಂದಿಲ್ಲ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಇದೇ ವೇಳೆ ಲಾಯರ್ ಜಗದೀಶ್ ಮನೆಯಲ್ಲೂ ಹೀಗೆ ಕೋಪಗೊಳ್ಳುತ್ತಾರಾ? ಎಂಬ ಪ್ರಶ್ನೆ ಕೂಡ ಎದುರಾಗಿತ್ತು. ಆಗ ಬಿಗ್‌ ಬಾಸ್ ಮನೆಯಲ್ಲಿ ಎಲ್ಲರೂ ಲಾಯರ್ ಜಗದೀಶ್ ಅವರನ್ನು ಟಾರ್ಗೆಟ್ ಮಾಡುತ್ತಿದ್ದರು. ಆದರೂ, ಅವರಿಂದಲೇ ಟಿಆರ್‌ಪಿ ಬರುತ್ತಿದೆ. ಬಿಗ್‌ ಬಾಸ್‌ ರಿಯಾಲಿಟಿ ಶೋಗೆ ಕಂಟೆಂಟ್ ಕೊಡುತ್ತಿದ್ದಿದ್ದೇ ಅವರು ಎಂದು ಲಾಯರ್ ಜಗದೀಶ್ ಅವರ ಪತ್ನಿ ಸೌಮ್ಯಾ ಹೇಳಿದ್ದಾರೆ.

ಇನ್ನು ಲಾಯರ್ ಜಗದೀಶ್ ಹೊರಬಂದಿದ್ದಾರೆ ಅನ್ನೋ ವಿಷಯ ಹೊರಬೀಳುತ್ತಿದ್ದಂತೆ ಫೋಟೋವೊಂದು ಹರಿದಾಡಿತ್ತು. ಬಿಗ್‌ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಲಾಯರ್ ಜಗದೀಶ್ ಯಾರಿಗೋ ಸೆಲ್ಫಿ ಕೊಟ್ಟ ಫೋಟೋ ಓಡಾಡುತ್ತಿತ್ತು. ಆದರೆ, ಅವರ ಪತ್ನಿ ಸೌಮ್ಯಾ ಕ್ಲಾರಿಟಿ ಕೊಟ್ಟಿಲ್ಲ. ಪತಿ ಹೊರಬಂದಿರುವ ಸಂಗತಿ ತನಗೆ ಯಾರೂ ತಿಳಿಸಿಲ್ಲ ಎಂದು ಪ್ರತಿಕ್ರಿಯೆ ಕೊಟ್ಟಿದ್ದಾರೆ. ಹೀಗಾಗಿ ಜಗದೀಶ್ ಹೊರಬಂದಿದ್ದಾರೋ? ಇಲ್ಲವೋ ಅನ್ನೋದು ಇನ್ನೂ ಗೊಂದಲ ಗೂಡಾಗಿದೆ.

More from Filmibeat

English summary
Lawyer Jagadish out of Bigg Boss Kannada season 11 here is his wife Soumya reaction
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X