For Quick Alerts
  ALLOW NOTIFICATIONS  
  For Daily Alerts

  ಪಡೆದರು ದುನಿಯಾ ವಿಜಯ್ ಆಶೀರ್ವಾದ, ಸೇರಿದರು ಶಿವನ ಪಾದ.!

  By Harshitha
  |

  'ಇದು ದುಸ್ಸಾಹಸ' ಅಂತ ಗೊತ್ತಿದ್ದರೂ, ಹೆಲಿಕಾಫ್ಟರ್ ನಿಂದ ತಿಪ್ಪಗೊಂಡನಹಳ್ಳಿ ಕೆರೆಗೆ ಧುಮುಕಲು ನಟ ಅನಿಲ್ ಮತ್ತು ಉದಯ್ ಕಣ್ಮುಚ್ಚಿ ಒಪ್ಪಿಕೊಳ್ಳಲು ಕಾರಣ 'ಬ್ಲ್ಯಾಕ್ ಕೋಬ್ರಾ' ದುನಿಯಾ ವಿಜಯ್.!

  ಅನಿಲ್ ಮತ್ತು ಉದಯ್...ಇಬ್ಬರೂ ಬಣ್ಣದ ಬದುಕಿಗೆ ಕಾಲಿಟ್ಟಿದ್ದು ನಟ ದುನಿಯಾ ವಿಜಯ್ ರವರ ಕೃಪಾಕಟಾಕ್ಷದಿಂದ. [ದುರಂತ ಸಾವಿಗೀಡಾದ ಅನಿಲ್ ಯಾರು.? ನಿಜ ಬದುಕಿನ ಕಥೆ ಇಲ್ಲಿದೆ...]

  ಅನಿಲ್ ಹಾಗೂ ಉದಯ್ ಗೆ ತಮ್ಮ ಚಿತ್ರಗಳಲ್ಲೇ ಸಣ್ಣ-ಪುಟ್ಟ ಪಾತ್ರಗಳನ್ನ ನೀಡುತ್ತಿದ್ದ ದುನಿಯಾ ವಿಜಯ್, 'ಮಾಸ್ತಿ ಗುಡಿ' ಚಿತ್ರದಲ್ಲಿ ಇಬ್ಬರು 'ದೋಸ್ತ್'ಗಳಿಗೆ ಪ್ರಮುಖ ವಿಲನ್ ಗಳ ಪಾತ್ರ ಪೋಷಿಸುವ ಸುವರ್ಣಾವಕಾಶ ಕೊಟ್ಟರು.

  ಸಿಕ್ಕ ಚಾನ್ಸ್ ನ ಸದುಪಯೋಗ ಪಡಿಸಿಕೊಳ್ಳಲು ಕಠಿಣ ಪಥ್ಯ ಅನುಸರಿಸಿ, ಅನಿಲ್ ಮತ್ತು ಉದಯ್ ಸಿಕ್ಸ್ ಪ್ಯಾಕ್ ಮಾಡಿದ್ದರು. ಮೇನ್ ವಿಲನ್ ಆಗಿರುವುದರಿಂದ 'ಮಾಸ್ತಿ ಗುಡಿ' ಚಿತ್ರಕ್ಕಾಗಿ ಎಂತಹ ಸಾಹಸ ಮಾಡಲೂ ಇಬ್ಬರೂ ರೆಡಿಯಿದ್ದರು. ['ಮಾಸ್ತಿ ಗುಡಿ' ದುರಂತ ಸಂಭವಿಸಲು ಪ್ರಮುಖ ಕಾರಣ ಇದೇ.!]

  ಇನ್ನೂ ''ಮಾಸ್ತಿ ಗುಡಿ' ನೈಜ ಘಟನೆ ಆಧಾರಿತ ಸಿನಿಮಾ ಆಗಿರುವುದರಿಂದ, ಎಲ್ಲವನ್ನೂ ನ್ಯಾಚುರಲ್ ಆಗಿ ಚಿತ್ರೀಕರಣ ಮಾಡಬೇಕು'' ಎಂಬ ಕಾರಣಕ್ಕೆ ಹೆಲಿಕಾಫ್ಟರ್ ನಿಂದ ಜಿಗಿಯುವ ದೃಶ್ಯದಲ್ಲೂ ರೋಪ್ ಬಳಕೆ ಇಲ್ಲ, ಡ್ಯೂಪ್ ಹಾಕಲ್ಲ, ಲೈಫ್ ಜಾಕೆಟ್ ನೀಡಲ್ಲ ಅಂತ ಗೊತ್ತಿದ್ದರೂ, 100ಕ್ಕೂ ಹೆಚ್ಚು ಅಡಿಯಿಂದ ಧುಮುಕಲು ಅನಿಲ್ ಮತ್ತು ಉದಯ್ ಸಿದ್ಧವಾದರು. ['ಮಾಸ್ತಿ ಗುಡಿ' ಖಳನಟರ ದುರಂತ ಸಾವು: ದುರ್ಘಟನೆಯ ಸಂಪೂರ್ಣ ವಿವರ]

  ಕನ್ನಡ ಚಿತ್ರರಂಗದಲ್ಲಿ ಬೆಳೆಯಲು ದುನಿಯಾ ವಿಜಯ್ ಕಾರಣಕರ್ತ ಎಂಬ ಒಂದೇ ಒಂದು ಕಾರಣಕ್ಕೆ 'ನಮ್ ಬಾಸ್, ನಮ್ ಬಾಸ್' ಅಂತ ಹೇಳ್ಕೊಂಡು ಓಡಾಡುತ್ತಿದ್ದ ಅನಿಲ್ ಮತ್ತು ಉದಯ್, ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಹೆಲಿಕಾಫ್ಟರ್ ಏರುವ ಮುನ್ನ ಅದೇ 'ಬಾಸ್' ಕಾಲು ಮುಟ್ಟಿ, ಆಶೀರ್ವಾದ ಪಡೆದರು. ಆದ್ರೆ, ಮುಂದೆ ನಡೆದದ್ದು ಮಾತ್ರ ಘೋರಾತಿಘೋರ. [ನಿಮಗೆಲ್ಲಾ ಗೊತ್ತಿಲ್ಲದ 'ಮಾಸ್ತಿ ಗುಡಿ' ವಿಲನ್ ಉದಯ್ ಅಸಲಿ ಕಹಾನಿ]

  'ಮಾಸ್ತಿ ಗುಡಿ' ಕ್ಲೈಮ್ಯಾಕ್ಸ್ ಶೂಟಿಂಗ್ ಸ್ಪಾಟ್ ನಲ್ಲಿ ನಡೆದ ದುರಂತಕ್ಕೂ ಮುನ್ನ ಅನಿಲ್ ಮತ್ತು ಉದಯ್ 'ಬಾಸ್' ಆಶೀರ್ವಾದ ಪಡೆದ ವಿಡಿಯೋ ಇಲ್ಲಿದೆ ನೋಡಿ....

  English summary
  Tragedy Strikes Kannada Movie 'Maasti Gudi'. 2 Actors Drown in Tippagondanahalli Lake while shooting Climax scene on November 7th. Before tragedy took place, Anil and Uday took blessings of Duniya Vijay. Watch the video here.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X