ವೀಕ್ಷಕರಿಗೆ ಸಿಹಿ ಸುದ್ದಿ: ಕನ್ನಡದಲ್ಲಿಯೂ ಪ್ರಸಾರವಾಗಲಿದೆ ಮಹಾಭಾರತ
ಕನ್ನಡದಲ್ಲಿ ಡಬ್ಬಿಂಗ್ ಪರ ಹೋರಾಟ ಮತ್ತೊಂದು ಮಜಲಿಗೆ ತಲುಪುತ್ತಿದೆ. ಕನ್ನಡಕ್ಕೆ ಡಬ್ ಆದ ಅನೇಕ ಸಿನಿಮಾಗಳು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದ್ದವು. ಇವುಗಳಲ್ಲಿ ಕೆಲವು ಸಿನಿಮಾಗಳನ್ನು ಉದಯ ಟಿವಿ ಪ್ರಸಾರಮಾಡಿತ್ತು. ಈಗ ಧಾರಾವಾಹಿಗಳು, ವೆಬ್ ಸರಣಿಗಳು ಕೂಡ ಕಿರುತೆರೆಗೆ ಕನ್ನಡ ಅವತರಣಿಕೆಯಲ್ಲಿ ಕಾಲಿರಿಸಲು ಆರಂಭಿಸಿವೆ.
ಜನರ ಮೆಚ್ಚುಗೆಗೆ ಪಾತ್ರವಾಗಿದ್ದ 'ರಾಮಾಯಣ' ಮತ್ತು 'ಮಹಾಭಾರತ' ಧಾರಾವಾಹಿಗಳನ್ನು ದೂರದರ್ಶನ ಮರು ಪ್ರಸಾರ ಮಾಡುತ್ತಿದೆ. ಬೇರೆ ಅನೇಕ ಧಾರಾವಾಹಿಗಳೂ ಪ್ರಸಾರವಾಗುತ್ತಿವೆ. ಆದರೆ ಇದು ಹಿಂದಿಯಲ್ಲಿ ಮಾತ್ರ ಲಭ್ಯವಿದ್ದು, ಬೇರೆ ಭಾಷೆಗಳ ಜನರಿಗೆ ತಲುಪುವುದು ಕಷ್ಟ. ಈ ನಡುವೆ ಮಹಾಭಾರತ ಕೂಡ ಕನ್ನಡದ ವೀಕ್ಷಕರಿಗೆ ಲಭ್ಯವಾಗುವ ದಿನಗಳು ಹತ್ತಿರವಾಗುತ್ತಿದೆ. ಮುಂದೆ ಓದಿ...

ಕನ್ನಡದಲ್ಲಿ ಬರುತ್ತಿದೆ ಮಹಾಭಾರತ
ಹಿಂದಿಯಲ್ಲಿ ಪ್ರಸಾರವಾಗುತ್ತಿದ್ದ ಮಹಾಭಾರತ ಪುರಾಣವನ್ನು ಆಧರಿಸಿದ ಧಾರಾವಾಹಿ ಇನ್ನು ಕನ್ನಡದಲ್ಲಿಯೂ ಪ್ರಸಾರವಾಗಲಿದೆ. ಸುವರ್ಣ ವಾಹಿನಿಯಲ್ಲಿ ಏಪ್ರಿಲ್ 13ರಿಂದ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ಹೀಗಾಗಿ ಕನ್ನಡದ ವೀಕ್ಷಕರೂ ಮಹಾಭಾರತವನ್ನು ತಮ್ಮ ಭಾಷೆಯಲ್ಲಿಯೇ ನೋಡಬಹುದಾಗಿದೆ.
ನಮ್ಮ ನುಡಿಯಲ್ಲಿಯೇ ಸವಿಯಬಹುದು
ತುಂಬಾ ವರ್ಷಗಳಿಂದ ಕನ್ನಡ ಕಿರುತೆರೆ ನೋಡುಗರು ಮಿಸ್ ಮಾಡಿಕೊಂಡಿದ್ದ ಮಹಾಭಾರತ ಸೀರಿಯಲ್ ಅನ್ನು ಇವಾಗ ಕನ್ನಡಿಗರು ತಮ್ಮ ನುಡಿಯಲ್ಲಿಯೇ ಸವಿಯಬಹುದು. ಇದನ್ನು ಕನ್ನಡ ಕಿರುತೆರೆಗೆ ತರುತ್ತಿರುವ ಸುವರ್ಣ ವಾಹಿನಿ ತಂಡಕ್ಕೆ ನನ್ನಿ- ಶುಕಮುನಿ
ಒಂದು ವಾರ ತಡ್ಕೊಳ್ಳಿ
ಮಹಾಭಾರತ ಬರ್ತಿದೆ ನೋಡೋಣ ಅಂದ್ಕೊಂಡಿದಿರಾ? ಇನ್ನೊಂದು ವಾರ ತಡ್ಕೊಳ್ಳಿ! ಯಾಕಂದ್ರೆ ಅದು ಕನ್ನಡದಲ್ಲೇ ಬರ್ತಿದೆ ಅದುಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಬರ್ತಿದೆ ಮಹಾಭಾರತ. ಏಪ್ರಿಲ್ 13ರಿಂದ ರಾತ್ರಿ 9ಕ್ಕೆ! ಯಾವುದೋ ನಮ್ಮದಲ್ಲದ ನುಡಿಯಲ್ಲಿ ನೋಡೋದಕ್ಕಿಂತ ಕನ್ನಡದಲ್ಲೇ ನೋಡೋಣ, ಅಲ್ವಾ!- ವಿಜಯ್


Click it and Unblock the Notifications











