Actor Pawan Death: ಸ್ಪಂದನಾ ಬಳಿಕ ಮತ್ತೊಬ್ಬ ನಟ ಹೃದಯಾಘಾತದಿಂದ ನಿಧನ.. ಚಿತ್ರರಂಗಕ್ಕೆ ಮತ್ತೆ ಶಾಕ್!

ಕನ್ನಡ ಸಿನಿಮಾ ಮಂದಿಗೆ ಮತ್ತೊಂದು ಶಾಕ್ ಎದುರಾಗಿದೆ. ಇತ್ತೀಚೆಗಷ್ಟೇ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನರಾಗಿದ್ದರು. ಈಗ ಕನ್ನಡ ಮೂಲದ ಮತ್ತೊಬ್ಬ ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಹೃದಯಾಘಾತ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದೆ. ಅದರಲ್ಲೂ ಚಿತ್ರರಂಗಕ್ಕೆ ಸಂಬಂಧ ಪಟ್ಟವರೇ ಹೆಚ್ಚಾಗಿ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಸ್ಪಂದನಾ ಸಾವಿನ ನೋವಿನಿಂದ ಚಿತ್ರರಂಗ ಹೊರಬರುತ್ತಿರುವಾಗಲೇ ಮತ್ತೊಬ್ಬ ನಟ ಹಾರ್ಟ್‌ ಅಟ್ಯಾಕ್‌ನಿಂದ ಕೊನೆಯುಸಿರೆಳೆದಿದ್ದು ಆತಂಕಕ್ಕೆ ಎಡೆ ಮಾಡಿ ಕೊಟ್ಟಿದೆ.

Pawan-Heart Attack-Spandana

ಮಂಡ್ಯ ಮೂಲದ ನಟ ಪವನ್ ಹೃದಯಾಘಾತದಿಂದ ಮುಂಬೈನಲ್ಲಿ ಕೊನೆಯುಸಿರೆಳೆದಿದ್ದಾರೆ. ಮೂಲ ಮಂಡ್ಯ ಆಗಿದ್ದರೂ, ಮುಂಬೈನಲ್ಲಿ ತಂದೆ ತಾಯಿಯೊಂದಿಗೆ ನೆಲೆಸಿದ್ದರು. ಕನ್ನಡಕ್ಕಿಂತ ಹಿಂದಿ ಹಾಗೂ ತಮಿಳು ಭಾಷೆಯ ಕಿರುತೆರೆಯಲ್ಲಿಯೇ ಹೆಚ್ಚಾಗಿ ನಟಿಸುತ್ತಿದ್ದರು. ಹೀಗಾಗಿ ಮುಂಬೈನಲ್ಲಿಯೇ ವಾಸವಿದ್ದರು.

ಈ ಉದಯೋನ್ಮುಖ ನಟ ಪವನ್‌ಗೆ ಕೇವಲ 25 ವರ್ಷ ವಯಸ್ಸಾಗಿತ್ತು. ಇದು ಸಿನಿಮಾ ಮಂದಿಯ ಆತಂಕಕ್ಕೆ ಕಾರಣವಾಗಿದೆ. ಇತ್ತೀಚೆಗಷ್ಟೇ ಸ್ಪಂದನಾ ಕೂಡ ಹೃದಯಾಘಾತದಿಂದ ಕೊನೆಯುಸಿರೆಳಿದ್ದರು. ಆ ಬಗ್ಗೆ ಇನ್ನೂ ಚರ್ಚೆಯಾಗುತ್ತಿರುವಾಗಲೇ ಮತ್ತೊಬ್ಬ ನಟ ಸಾವನ್ನಪ್ಪಿದ್ದ ಚಿತ್ರರಂಗ ಶೋಕಸಾಗರದಲ್ಲಿ ಮುಳುಗಿದೆ.

ಆಗಸ್ಟ್ 16ರಂದೇ ಪವನ್ ಹೃದಯಾಘಾತದಿಂದ ಮೃತ ಪಟ್ಟಿದ್ದರು. ಮಂಡ್ಯದ ಕೆ ಆರ್‌ ಪೇಟೆ ಹುಟ್ಟೂರು ಆಗಿದ್ದರಿಂದ ಅವರ ಮೃತದೇಹವನ್ನು ಹುಟ್ಟೂರಿಗೆ ತೆಗೆದುಕೊಂಡು ಬರಲಾಗಿದೆ. ಇಂದು (ಆಗಸ್ಟ್ 18) ಹುಟ್ಟಿದೂರಿನಲ್ಲೇ ಅಂತ್ಯಕ್ರಿಯೆ ನೆರವೇರಲಿದೆ.

More from Filmibeat

English summary
Mandya Based Hindi Tamil serial actor Pawan died due to heart attack
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X