ವೇದಿಕೆಗೆ ಗಗನಗೆ ತಾಳಿ ಕಟ್ಟಿದ ಡ್ರೋನ್ ಪ್ರತಾಪ್; ಇತ್ತ ಛಾಯಾ ಸಿಂಗ್‌ಗೆ ಮತ್ತೆ ಮಾಂಗಲ್ಯಧಾರಣೆ

ಡ್ರೋನ್ ಪ್ರತಾಪ್ ಬಿಗ್ ಬಾಸ್ ಶೋಗೆ ಹೋಗಿ ಬರುತ್ತಿದ್ದಂತೆ ಮತ್ತೆ ಜನರ ದೃಷ್ಠಿಯಲ್ಲಿ ಅನುಕಂಪ ಗಿಟ್ಟಿಸಿಕೊಂಡಿದ್ದರು. ಡ್ರೋನ್ ಪ್ರತಾಪ್ ತನ್ನ ತಪ್ಪುಗಳನ್ನು ತಿದ್ದಿಕೊಂಡು ಒಳ್ಳೆಯ ಜೀವನ ನಡೆಸಲಿ ಎಂದು ಬಯಸಿದ್ದರು. ರಿಯಾಲಿಟಿ ಶೋನಲ್ಲಿ ಫೇಮಸ್ ಆಗುತ್ತಿದ್ದಂತೆ ಪ್ರತಾಪ್ ಕೃಷಿ ಹೊಂಡದಲ್ಲಿ ಸ್ಪೋಟ ಮಾಡಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ಕೆಲವು ದಿನಗ ಜೈಲು ಸೇರಿದ್ದರು. ಈಗ ಮತ್ತೊಂದು ರಿಯಾಲಿಟಿ ಶೋನಲ್ಲಿ ಸದ್ದು ಮಾಡುತ್ತಿದ್ದಾರೆ.

ಕೃಷಿ ಹೊಂಡದಲ್ಲಿ ಸ್ಟೋಟ ಪ್ರಕರಣದಲ್ಲಿ ಜೈಲು ಸೇರಿದ್ದ ಪ್ರತಾಪ್ ಜಾಮೀನು ಪಡೆದು ಹೊರಬಂದಿದ್ದಾರೆ. ಅದರ ಹಿಂದೆನೇ ಡ್ರೋನ್ ಪ್ರತಾಪ್ ಜೀ ಕನ್ನಡದ ಭರ್ಜರಿ ಬ್ಯಾಚುಲರ್ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದರು. ಈಗ ಅದೇ ಶೋದ ವೇದಿಕೆ ಮೇಲೆ ಸಹ ಸ್ಪರ್ಧಿ ಗಗನಾಗೆ ತಾಳಿ ಕಟ್ಟಿ ಸುದ್ದಿಯಾಗಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

Marriage mania in tv show Drone Pratha Gagana and Rajesh Nataranga and Chaya Singh tie the knot

ಹಾಗಂತ ಈ ಬಾರಿ ವಿವಾದವನ್ನೇನು ಮೈ ಮೇಲೆ ಎಳೆದುಕೊಂಡಿಲ್ಲ. 'ಭರ್ಜರಿ ಬ್ಯಾಚುಲರ್' ಶೋನಲ್ಲಿ ಸ್ಪರ್ಧಿಯಾಗಿರುವ ಡ್ರೋನ್ ಪ್ರತಾಪ್ ಹಾಗೂ ಗಗನಾ ಇಬ್ಬರೂ ಕ್ರೇಜಿ ಸ್ಟಾರ್ ಹಾಡಿಗೆ ಪರ್ಫಾಮ್ ಮಾಡುತ್ತಿದ್ದರು. ಈ ವೇಳೆ ಡ್ರೋನ್ ಪ್ರತಾಪ್ ತನ್ನ ಜೋಡಿಯಾಗಿರುವ ಗಗನಾಗೆ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಎದುರೇ ತಾಳಿ ಕಟ್ಟಿದ್ದಾರೆ. ಇನ್ನೊಂದ್ಕಡೆ ಅಮೃತಧಾರೆಯಲ್ಲಿ ರಾಜೇಶ್ ನಟರಂಗ ಛಾಯಾಸಿಂಗ್‌ಗೆ ಮತ್ತೆ ತಾಳಿ ಕಟ್ಟಿದ್ದಾರೆ. ಕಿರುತೆರೆಯಲ್ಲಿ ಮ್ಯಾರೇಜ್ ಮೇನಿಯಾ ನಡೆಯುತ್ತಿದೆ.

ಎಲ್ಲಾ ಕಡೆ ಡ್ರೋನ್ ಪ್ರತಾಪ್ ತಮ್ಮ ಸಹ ಸ್ಪರ್ಧಿ ಗಗನಾಗೆ ವೇದಿಕೆ ತಾಳಿ ಕಟ್ಟಿ ಮದುವೆ ಆಗಿದ್ದಾರೆ ಅಂತ ಸುದ್ದಿಯಾಗಿದೆ. ಹಾಗಂತ ಇದು ನಿಜವಲ್ಲ. ಭರ್ಜರಿ ಬ್ಯಾಚುಲರ್ ಶೋನಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾದ ಹಾಡಿಗೆ ಸ್ಪರ್ಧಿಗಳು ಪರ್ಫಾರ್ಮ್ ಮಾಡುತ್ತಿದ್ದಾರೆ. ಈ ಬಾರಿ ಡ್ರೋನ್ ಪ್ರತಾಪ್ ಹಾಗೂ ಗಗನಾ ರಾಮಾಚಾರಿ ಚಿತ್ರದ ಹಾಡಿಗೆ ಪರ್ಫಾಮೆನ್ಸ್ ಮಾಡುತ್ತಿದ್ದರು. ಈ ವೇಳೆ ಗಗನಾಗೆ ವೇದಿಕೆ ಡ್ರೋನ್ ಪ್ರತಾಪ್ ತಾಳಿ ಕಟ್ಟಿದ್ದಾರೆ.

Marriage mania in tv show Drone Pratha Gagana and Rajesh Nataranga and Chaya Singh tie the knot

'ರಾಮಾಚಾರಿ' ಸಿನಿಮಾದ ಹಾಡಿನಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಮಾಲಾಶ್ರೀಗೆ ತಾಳಿ ಕಟ್ಟುತ್ತಾರೆ. ಅದೇ ಹಾಡನ್ನು ಡ್ರೋನ್ ಪ್ರತಾಪ್ ಹಾಗೂ ಗಗನಾ ರಿ ಕ್ರಿಯೇಟ್ ಮಾಡಿದ್ದರು. ಕ್ರೇಜಿಸ್ಟಾರ್ ಪಾತ್ರದಲ್ಲಿ ಡ್ರೋನ್ ಪ್ರತಾಪ್ ಇದ್ದರೆ, ಕನಸಿನ ರಾಣಿ ಮಾಲಾಶ್ರೀ ಪಾತ್ರದಲ್ಲಿ ಗಗನಾ ಹೆಜ್ಜೆ ಹಾಕಿದ್ದರು. ಈ ವೇಳೆ ಕ್ರೇಜಿಸ್ಟಾರ್ ಅಂತೆಯೇ ಡ್ರೋನ್ ಪ್ರತಾಪ್ ಕೂಡ ವೇದಿಕೆ ತಾಳಿ ಕಟ್ಟಿದ್ದಾರೆ. ಆ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಡ್ರೋನ್ ಪ್ರತಾಪ್ ಹಾಗೂ ಗಗನಾ ಪರ್ಫಾಮೆನ್ಸ್‌ಗೆ ಸ್ವತ: ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ರಚಿತಾ ರಾಮ್ ಅವರೇ ಫಿದಾ ಆಗಿದ್ದಾರೆ.

ಡ್ರೋನ್ ಪ್ರತಾಪ್ ಹಾಗೂ ಗಗನಾ ಕಥೆ ಒಂದು ಕಡೆಯಾದರೆ, ಇನ್ನೊಂದೆಡೆ ರಾಜೇಶ್ ನಟರಂಗ ಹಾಗೂ ಛಾಯಾ ಸಿಂಗ್ ಮದುವೆ ಇನ್ನೊಮ್ಮೆ ನಡೆದಿದೆ. ಅಂದರೆ, 'ಅಮೃತಧಾರೆ' ಗೌತಮ್ ಪಾತ್ರದಲ್ಲಿ ನಟಿಸುತ್ತಿರುವ ರಾಜೇಶ್ ಹಾಗೂ ಭೂಮಿಕಾ ಪಾತ್ರದಲ್ಲಿ ಛಾಯಾ ಸಿಂಗ್ ನಟಿಸುತ್ತಿದ್ದಾರೆ. ಈ ಸೀರಿಯಲ್‌ನಲ್ಲಿ ಗೌತಮನಾಗಿ ರಾಜೇಶ್ ಭೂಮಿಕಾ ಅಂದರೆ ಛಾಯಾಸಿಂಗ್‌ಗೆ ತಾಳಿ ಕಟ್ಟಿದ್ದಾರೆ.

'ಅಮೃತಧಾರೆ' ಧಾರಾವಾಹಿಯಲ್ಲಿ ಶಾಕುಂತಲಾ ದೇವಿಯ ಕುತಂತ್ರಕ್ಕೆ ಭೂಮಿಕಾ ತಗಲಾಕಿಕೊಂಡಿದ್ದಳು. ಹೀಗಾಗಿ ತನ್ನ ಗಂಡನಿಗೆ ಇನ್ನೊಂದು ಮದುವೆ ಮಾಡಿಸುವುದಕ್ಕೆ ಮುಂದಾಗಿದ್ದಳು. ಗೌತಮ್ ಕೂಡ ಒತ್ತಡಕ್ಕೆ ಮಣಿದು ಮತ್ತೊಂದು ಮದುವೆ ಮುಂದಾಗಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ಹಸೆಮಣೆಯಿಂದ ಎದ್ದು ಮತ್ತೆ ಭೂಮಿಕಾಗೆ ತಾಳಿ ಕಟ್ಟಿದ್ದಾರೆ. ಈ ಪ್ರೋಮೊ ಕೂಡ ಟ್ರೆಂಡಿಂಗ್‌ನಲ್ಲಿದೆ. ಸದ್ಯ ಜೀ ಕನ್ನಡದ ಧಾರಾವಾಹಿ ಹಾಗೂ ರಿಯಾಲಿಟಿ ಶೋ ಎರಡರಲ್ಲೂ ಮ್ಯಾರೇಜ್ ಮೇನಿಯಾ ನಡೆಯುತ್ತಿದೆ.

More from Filmibeat

English summary
Marriage mania in tv show Drone Prathap Gagana and Rajesh Nataranga and Chaya Singh tie the knot
Read more about: tv show serial marriage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X