BBK 12: ಗಿಲ್ಲಿ ನಟ-ರಕ್ಷಿತಾ ಪಂಚಿಂಗ್ ಡೈಲಾಗ್‌ಗಳಿಗೆ ರ‍್ಯಾಪ್ ಟಚ್; ವಿಡಿಯೋ ಫುಲ್ ವೈರಲ್
ಬಿಗ್ ಬಾಸ್ ಕನ್ನಡ 12 ರಿಯಾಲಿಟಿ ಶೋ ದಿನ ಕಳೆದಂತೆ ಸ್ಪರ್ಧಿಗಳು ಒಬ್ಬೊಬ್ಬರಾಗಿಯೇ ತಮ್ಮ ಆಟ ತೋರಿಸುವುದಕ್ಕೆ ಶುರು ಮಾಡಿದ್ದಾರೆ. ಮೊದಲನೇ ದಿನದಿಂದಲೂ ಅಶ್ವಿನಿ ಗೌಡ ಜಾಹ್ನವಿ ಹಾಗೂ ಗಿಲ್ಲಿ ನಟ ನಡುವೆ ಶೀತಲ ಸಮರ, ವಾಗ್ಯುದ್ಧ ನಡೆಯುತ್ತಲೇ ಇರುತ್ತೆ. ಇನ್ನೊಂದು ಕಡೆ ಇದೇ ಅಶ್ವಿನಿ ಗೌಡ, ಜಾಹ್ನವಿ ಹಾಗೂ ರಕ್ಷಿತಾ ಮಧ್ಯೆನೂ ಕಿತ್ತಾಟ ನಡೆದಿತ್ತು. ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡ ಬಳಿಕ ರಕ್ಷಿತಾ ವಿರುದ್ಧ ಸಮರ ಸಾರುವುದು ನಿಂತಿದೆ.
ಆದರೆ, ಬಿಗ್ ಬಾಸ್ ಮನೆಯಲ್ಲಿರುವ ಸದಸ್ಯರಲ್ಲಿ ಎಲ್ಲರ ಫೇವರಿಟ್ ಅಂತಿರೋದು ಗಿಲ್ಲಿ ನಟ ಹಾಗೂ ರಕ್ಷಿತಾ ಶೆಟ್ಟಿ. ಇವರಿಬ್ಬರಿಗೂ ಸೋಶಿಯಲ್ ಮೀಡಿಯಾದಲ್ಲಿ ಅತೀ ಹೆಚ್ಚು ಫ್ಯಾನ್ಸ್ ಹುಟ್ಟಿಕೊಂಡಿದ್ದಾರೆ. ಪ್ರತಿ ದಿನ ಗಿಲ್ಲಿ ನಟನ ಪಂಚಿಂಗ್ ಡೈಲಾಗ್ ಹಾಗೂ ರಕ್ಷಿತಾ ಶೆಟ್ಟಿಯ ಅರ್ಧಂಬರ್ಧ ಕನ್ನಡ ವೀಕ್ಷಕರಿಗೆ ಇಷ್ಟ ಆಗುತ್ತಿದೆ. ಪ್ರತಿ ದಿನದ ಎಪಿಸೋಡ್‌ನಲ್ಲಿ ಇವರಿಬ್ಬ ಪಂಚ್ ಡೈಲಾಗ್‌ಗಳನ್ನು ವೈರಲ್ ಮಾಡುತ್ತಿದ್ದಾರೆ.

ಈಗ ಒಂದು ಹೆಜ್ಜೆ ಮುಂದೆ ಹೋಗಿ ಗಿಲ್ಲಿ ನಟ ಹಾಗೂ ರಕ್ಷಿತಾ ಸೆಟ್ಟಿಯ ಡೈಲಾಗ್‌ಗಳನ್ನೇ ಇಟ್ಕೊಂಡು ರ‍್ಯಾಪ್ ಸಾಂಗ್ ಮಾಡಲಾಗಿದೆ. ಆ ಹಾಡುಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಕೆಲವರು ಈ ರ‍್ಯಾಪ್ ಸಾಂಗ್‌ಗಳನ್ನೇ ಇಟ್ಕೊಂಡು ರೀಲ್ಸ್ ಕೂಡ ಮಾಡುವುದಕ್ಕೆ ಶುರು ಮಾಡಿದ್ದಾರೆ. ಹಾಗಿದ್ದರೆ, ಆ ರ‍್ಯಾಪ್ ಸಾಂಗ್‌ಗಳು ಹೇಗಿವೆ? ರೀಲ್ಸ್‌ಗೆ ವೀವ್ಸ್ ಎಷ್ಟಾಗಿದೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಗಿಲ್ಲಿ ನಟನ ಪಂಚಿಂಗ್ ರ‍್ಯಾಪ್
ಬಿಗ್ ಬಾಸ್‌ನಲ್ಲಿ ಸದ್ಯ ಟ್ರೆಂಡಿಂಗ್‌ನಲ್ಲಿರೋ ಸ್ಪರ್ಧಿ ಗಿಲ್ಲಿ ನಟ. ಇಲ್ಲಿವರೆಗೂ ಎಲ್ಲರ ಬಾಯಲ್ಲೂ ಗಿಲ್ಲಿ ನಟನ ಹೆಸರೇ ಕೇಳಿ ಬರುತ್ತಿದೆ. ತನ್ನ ಪಂಚಿಂಗ್ ಡೈಲಾಗ್‌ನಿಂದ ಎಲ್ಲರನ್ನೂ ತಮಾಷೆಯಾಗಿಯೇ ಕಾಲೆಳೆಯುತ್ತಿದ್ದಾರೆ. ಇದು ಕಿರುತೆರೆ ವೀಕ್ಷಕರ ಮನ ಗೆದ್ದಿದೆ. ಸದ್ಯ ವೀಕ್ಷಕರಿಗೆ ಮನರಂಜನೆ ನೀಡುತ್ತಿರುವ ನೆಚ್ಚಿನ ನಟನಾಗಿ ಗಿಲ್ಲಿ ನಟ ಮೊದಲ ಸ್ಥಾನದಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿಯೂ ಇವರ ಪಂಚಿಂಗ್ ಡೈಲಾಗ್‌ಗಳದ್ದೇ ಕ್ರೇಜ್. ಅದರಲ್ಲೂ ಯುವ ಮ್ಯೂಸಿಕ್ ಪ್ರಡ್ಯೂಸರ್ ಐನ್‌ಸ್ಟನ್ ಫರ್ನಾಂಡಿಸ್ ಕಂಪೋಸ್ ಮಾಡಿರುವ ಈ ರ‍್ಯಾಪ್ ಸಾಂಗ್ ಅಂತೂ ನೆಟ್ಟಿಗರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿವೆ.
ರಕ್ಷಿತಾ ಶೆಟ್ಟಿಯ ರ‍್ಯಾಪ್
ಬಿಗ್ ಬಾಸ್‌ನಲ್ಲಿ ಟ್ರೆಂಡಿಂಗ್‌ನಲ್ಲಿರುವ ಮತ್ತೊಬ್ಬ ಸ್ಪರ್ಧಿ ರಕ್ಷಿತಾ ಶೆಟ್ಟಿ. ಇವರ ಮುಗ್ಧತೆ, ಪ್ರಾಮಾಣಿಕತೆ ಪ್ರೇಕ್ಷಕರಿಗೆ ಇಷ್ಟ ಆಗಿದೆ. ಏಕಾಂಗಿಯಾಗಿ ಮನೆಯವರನ್ನು ಎದುರಿಸಿದ್ದನ್ನು ಇಷ್ಟ ಪಟ್ಟಿದ್ದಾರೆ. ಆಗಾಗ ಇವರೂ ಆಡುವ ಮಾತುಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಅದನ್ನು ಐನ್‌ಸ್ಟನ್ ಫರ್ನಾಂಡಿಸ್ ರ‍್ಯಾಪ್ ರೂಪ ಕೊಟ್ಟಿದ್ದಾರೆ. ರಕ್ಷಿತಾ ಅಭಿಮಾನಿಗಳು ರ‍್ಯಾಪ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ.
ಗಿಲ್ಲಿ ರ‍್ಯಾಪ್ ಫುಲ್ ಟ್ರೆಂಡಿಂಗ್
ಇನ್ನು ಗಿಲ್ಲಿ ನಟ ಹಾಡಿಗೆ ರ‍್ಯಾಪ್ ರೂಪ ಕೊಟ್ಟ ಸಾಂಗ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಜನರು ಈ ರ‍್ಯಾಪ್ ಸಾಂಗ್ ಅನ್ನೇ ಇಟ್ಟುಕೊಂಡು ರೀಲ್ಸ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಈ ಹಾಡು 4.10 ಲಕ್ಷದಷ್ಟು ಲೈಕ್ಸ್ ಪಡೆದುಕೊಂಡಿದೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಆಗುತ್ತಿದೆ. ನೆಟ್ಟಿಗರು ಈ ವಿಡಿಯೋಗೆ ಸಾವಿರಾರು ಕಾಮೆಂಟ್‌ಗಳನ್ನು ಪಾಸ್ ಮಾಡಿದ್ದಾರೆ.
ನೆಟ್ಟಿಗರ ಕಮೆಂಟ್ ಏನು?
ನೆಟ್ಟಿಗರು ಮಾಡುತ್ತಿರೋ ಕಮೆಂಟ್‌ಗಳು ಹೀಗಿವೆ. "ಇದು ಟ್ರೆಂಡ್ ಆಯ್ತು.. ಈಗ ಬಿಗ್ ಬಾಸ್ ಅಲ್ಲಿ ಗಿಲ್ಲಿಗೋಸ್ಕರ ವೀಕೆಂಡ್ ಅಲ್ಲಿ ತೋರಿಸಬೇಕು" ಅಂತ ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು "ಬಿಗ್ ಬಾಸ್ ಮನೆಯಲ್ಲಿ ಈ ಸಾಂಗ್ ಅನ್ನು ಪ್ಲೇ ಮಾಡಿ" ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ಗಿಲ್ಲಿ ಸಾಂಗ್ ಇತರ ಟ್ರೆಂಡ್ ಆಗ್ತದೆ ಅಂತ ಗೊತ್ತಿರಲಿಲ್ಲ" ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.


Click it and Unblock the Notifications











