ಮಜಾ ಟಾಕೀಸ್ ಬಿಟ್ಟು ಹೊರಬಂದ ಮುತ್ತು ಮಣಿ ಖ್ಯಾತಿಯ ತರಂಗ ವಿಶ್ವ; ಏನು ಕಾರಣ?
ವೀಕೆಂಡ್‌ನಲ್ಲಿ ನಗುವಿನ ಕಿಕ್ ಕೊಡುವ ಶೋ ಮಜಾ ಟಾಕೀಸ್. ಈ ಶೋನಲ್ಲಿ ಬರುವ ಅತಿಥಿಗಳಿಗೆ. ಕಿರುತೆರೆ ವೀಕ್ಷಕರಿಗೆ ಮಸ್ತ್ ಮನರಂಜನೆ ನೀಡುವ ಇದು. ಸೃಜನ್ ಲೋಕೇಶ್ ನಿರೂಪಣೆಯಿಂದಲೇ ಕಿರುತೆರೆ ವೀಕ್ಷಕರನ್ನು ಸೆಳೆಯುತ್ತಿದ್ದಾರೆ. ಇದೇ ಶೋನಲ್ಲಿ ಸಾಕಷ್ಟು ಕಲಾವಿದರು ಕೂಡ ಹಾಸ್ಯದ ಹೊಳೆಯನ್ನೇ ಹರಿಸಿದ್ದನ್ನು ನೋಡುತ್ತಲೇ ಬಂದಿದ್ದೇವೆ. ಅದರಲ್ಲಿ ಕುರಿ ಪ್ರತಾಪ್, ತರಂಗ ವಿಶ್ವ ಪ್ರಮುಖರಾಗಿ ಕಾಣಿಸಿಕೊಳ್ಳುತ್ತಾರೆ.
ಅದರಲ್ಲೂ ಮುತ್ತು ಮಣಿ ಪಾತ್ರದ ಮೂಲಕ ಕಿರುತೆರೆ ವೀಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತಿದ್ದವರು ತರಂಗ ವಿಶ್ವ. ಇವರ ಡೈಲಾಗ್‌ಗಳಿಗೆ ಉರುಳಾಡಿಕೊಂಡು ನಕ್ಕವರಿಗೇನು ಕಮ್ಮಿಯಿಲ್ಲ. ಆದರೆ, ಕಳೆದ ಕೆಲವು ದಿನಗಳಿಂದ ತರಂಗ ವಿಶ್ವ ಮಜಾ ಟಾಕೀಸ್ ಶೋನಲ್ಲಿ ಕಾಣಿಸಿಕೊಂಡಿಲ್ಲ. ವೀಕ್ಷಕರು ಕುರಿ ಪ್ರತಾಪ್ ಹಾಗೂ ತರಂಗ ವಿಶ್ವ ಕಾಂಬಿನೇಷನ್ ಅನ್ನು ಮಿಸ್ ಮಾಡಿಕೊಳ್ಳುತ್ತಿದ್ದರು.

ಇದೇ ವೇಳೆ ತರಂಗ ವಿಶ್ವದ ಈ ಕಾಮಿಡಿ ಶೋಗೆ ಗುಡ್ ಬೈ ಹೇಳಿದ್ದಾರೆಂದು ಗೊತ್ತಾಗುತ್ತಿದೆ. ಸ್ವತ: ಮಜಾ ಟಾಕೀಸ್‌ನ ಮುತ್ತು ಮಣಿ ಅಲಿಯಾಸ್ ತರಂಗ ವಿಶ್ವ ಅವರೇ ಈ ವಿಷಯವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಸಲಿಗೆ ಮಜಾ ಟಾಕೀಸ್ ಬಿಟ್ಟು ಬರುವುದಕ್ಕೆ ಏನು ಕಾರಣ? ಅಂತಹದ್ದು ಏನಾಯ್ತು? ತಿಳಿಯುವುದಕ್ಕೆ ಮುಂದೆ ಓದಿ..
ಮಜಾ ಟಾಕೀಸ್‌ನ ಮುತ್ತು ಮಣಿ ಪಾತ್ರ ಹಾಸ್ಯ ಪ್ರಿಯರಿಗೆ ಮಸ್ತ್ ಮಜಾ ಕೊಡುತ್ತಿತ್ತು. ಪ್ರತಿಯೊಂದು ಡೈಲಾಗ್ ಅನ್ನು 'ತ' ಅಕ್ಷರದಿಂದ ಶುರು ಮಾಡಿ ಮಾತಾಡುತ್ತಿದ್ದ ಮುತ್ತು ಮಣಿ ಡೈಲಾಗ್‌ಗಳಿಗೆ ಬಿದ್ದು ಬಿದ್ದು ನಗುತ್ತಿದ್ದರು. ಅದರಲ್ಲೂ ಆ ಮ್ಯಾರಿಸಂಗೆ ಡೈಲಾಗ್ ಡಿಲೇವರಿಗೆ ವೀಕ್ಷಕರು ಶಿಳ್ಳೆ, ಚಪ್ಪಾಳೆಗಳನ್ನು ಹಾಕುತ್ತಿದ್ದರು. ಆದ್ರೀಗ ತರಂಗ ವಿಶ್ವ ಮಜಾ ಟಾಕೀಸ್‌ಗೆ ಗುಡ್ ಬೈ ಹೇಳಿದ್ದಾಗಿ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಮಜಾ ಟಾಕೀಸ್ ಖ್ಯಾತಿಯ ತರಂಗ ವಿಶ್ವ ಶೋದಿಂದ ಹೊರ ಬಂದಿದ್ದಕ್ಕೆ ವೀಕ್ಷಕರಿಗೆ ಬೇಸರ ಆಗಿದೆ. ಅದರಲ್ಲೂ ಅಧಿಕೃತವಾಗಿ ಮಜಾ ಟಾಕೀಸ್‌ನಿಂದ ಹೊರ ಬಂದಿರುವ ವಿಷಯವನ್ನು ಸ್ವತ: ತರಂಗ ವಿಶ್ವ ಅವರೇ ತನ್ನ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಮೇಲಂತೂ ನೆಟ್ಟಿಗರು ಮಜಾ ಟಾಕೀಸ್ ಶೋ ಬಿಡದಂತೆ ಮನವಿ ಮಾಡಿಕೊಂಡಿದ್ದಾರೆ. ಮತ್ತೆ ಶೋಗೆ ಬರುವಂತೆ ಕೇಳಿಕೊಳ್ಳುತ್ತಿದ್ದಾರೆ.
"ಎಲ್ಲಾ ನನ್ನ ಕಲಾಭಿಮಾನಿಗಳಿಗೆ ಹೃತ್ಪೂರಕವಾದ ಧನ್ಯವಾದಗಳು. ಇಷ್ಟು ವರ್ಷ ಈ ತರಂಗ ವಿಶ್ವನನ್ನು ಮಜಾ ಟಾಕೀಸ್ ಮುತ್ತುಮಣಿಯಾಗಿ ಸ್ವೀಕರಿಸಿದಕ್ಕೆ. ಇನ್ನು ಮುಂದೆ ಮುತ್ತುಮಣಿಯಾಗಿ ಕಾಣುವುದಿಲ್ಲ. ಧನ್ಯವಾದಗಳು, ಲೋಕೇಶ್ ಪ್ರೊಡಕ್ಷನ್, ನನ್ನ ಸಹ-ನಟರಿಗೂ ಹಾಗೂ ತಾಂತ್ರಿಕ ವರ್ಗದವರಿಗೂ. ಮಿಸ್ ಯು ಆಲ್. ಬೈ ಬೈ ಮಜಾ ಟಾಕೀಸ್. ಲವ್ ಯು ಆಲ್" ಎಂದು ಬರೆದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ, ಮಜಾ ಟಾಕೀಸ್‌ನಿಂದ ಹೊರಬಂದಿದ್ದಕ್ಕೆ ಕಾರಣವೇನು? ಅನ್ನೋದನ್ನು ಬಹಿರಂಗಪಡಿಸಿಲ್ಲ. ವೈಯಕ್ತಿಕ ಕಾರಣಗಳಿಂದ ಮಜಾ ಟಾಕೀಸ್ ಬಿಟ್ಟಿದ್ದಾರೆಂದು ವರದಿಗಳಾಗಿವೆ. 2021ರಲ್ಲೂ ಮಜಾ ಟಾಕೀಸ್‌ನಿಂದ ತರಂಗ ವಿಶ್ವ ಅವರು ಏಕಾಏಕಿ ಕಾಣಿಯಾಗಿದ್ದನ್ನು ನೆನಪಿಸಿಕೊಳ್ಳಬಹುದು.
ಆದರೆ, ಅವರ ಅಭಿಮಾನಿಗಳು ಮಾತ್ರ ಬೇಸರದಿಂದ ಕಮೆಂಟ್ ಮಾಡುತ್ತಿದ್ದಾರೆ. "ಮಿಸ್ ಯು ವಿಶ್ವ ಅಣ್ಣಾ. ಮುತ್ತು ಮಣಿ ಮುಂದೆ ತುಜಾ ಬಾರ್ ಅನಾಥವಾಗಿದೆ." ಎಂದಿದ್ದಾರೆ. ಇನ್ನೊಬ್ಬರು "ಟಾಕೀಸ್ ಅಲ್ಲಿ ಗಿಚ್ಚಿಗಿಲಿಗಿಲಿ ಕಲಾವಿದರಿಗೆ ಅವಕಾಶ ಜಾಸ್ತಿ ಕೊಟ್ಟು ಇವರಿಗೆಲ್ಲ ಕೊಡ್ತಾನೆ ಇಲ್ಲ. ಮತ್ಯಾಕೆ ಇರಬೇಕು. ಬಿಟ್ಟಿದು ಒಳ್ಳೆಯದೇ ಆಯ್ತು. ಈಗೀಗ ಮಜಾ ಟಾಕೀಸ್ ಸಂತೆ ಆಗಿದೆ. ಸ್ವಲ್ಪನೂ ಚಂದ ಇಲ್ಲ" ಎಂದು ಬೇಸರ ಹೊರ ಹಾಕಿದ್ದಾರೆ. "ಯಾಕೆ ಏನಾಯ್ತು ಸರ್, ನಿಮ್ಮ ಮನರಂಜನೆ ನಮಗೆ ಬಹಳ ಇಷ್ಟ, ಮುತ್ತುಮಣಿ ನಮಗೆ ಬೇಕು, ತಪ್ಪು ನಿರ್ಧಾರ" ಎಂದು ಮತ್ತೊಬ್ಬರು ಹೇಳಿದ್ದಾರೆ.


Click it and Unblock the Notifications











