Namratha Gowda: ಜಲಪಾತದಲ್ಲಿ ಮೈಚಳಿ ಬಿಟ್ಟು ನಿಂತ 'ನಾಗಿಣಿ 2' ನಟಿ: ಎಲ್ಲಿದೆ? ಹೋಗೋದೆ ಹೇಗೆ?
ಬ್ಯಾಕ್ ಟು ಬ್ಯಾಕ್ ಶೂಟ್, ನೂರೆಂಟು ಕೆಲಸಗಳ ಮಧ್ಯೆ ಒಂದು ವಾರ ಬ್ರೇಕ್ ಸಿಕ್ಕರೂ ಸಾಕು. ನಮ್ಮ ಕನ್ನಡದ ನಟಿಯರು ಒಂದು ಪ್ರವಾಸ ಮುಗಿಸಿ ಬರುತ್ತಾರೆ. ಬಂದ್ಮೇಲೆ ಅಲ್ಲಿನ ಫೋಟೊಗಳನ್ನು ಶೇರ್ ಮಾಡುತ್ತಾರೆ. ಇದು ಸೋಶಿಯಲ್ ಮೀಡಿಯಾ ಬಂದಾಗಿನಿಂದಲೂ ಹುಟ್ಟುಕೊಂಡಿರೋ ಹವ್ಯಾಸ.
ಈಗ ಕನ್ನಡ ಕಿರುತೆರೆಯಲ್ಲಿ ಸಂಚಲ ಸೃಷ್ಟಿಸಿದ್ದ 'ನಾಗಿಣಿ 2' ಧಾರಾವಾಹಿಯ ನಮ್ರತಾ ಗೌಡ ಹಾಗೂ ಐಶ್ವರ್ಯಾ ಸಿಂಧೋಗಿ ಇಬ್ಬರೂ ಪ್ರವಾಸದಲ್ಲಿದ್ದಾರೆ. ಪ್ರವಾಸಿಗರ ನೆಚ್ಚಿನ ತಾಣ ಇಂಡೋನೇಷಿಯಾದ ಬಾಲಿಯಲ್ಲಿ ಮಸ್ತ್ ಆಗಿ ಎಂಜಾಯ್ ಮಾಡುತ್ತಿದ್ದಾರೆ. ಅಲ್ಲಿಂದ ಒಂದರ ಹಿಂದೊಂದು ಫೋಟೊ, ವಿಡಿಯೋ ಪೋಸ್ಟ್ ಮಾಡಿ ಹುಡುಗ ಕದಿಯುತ್ತಿದ್ದಾರೆ.

ಅದರಲ್ಲೂ ನಟಿ ನಮ್ರತಾ ಗೌಡ ಬಾಲಿಯ ಕಾಂಟೊ ಲ್ಯಾಂಪೊ ಜಲಪಾತದಲ್ಲಿ ಬಿಕಿನಿಯಲ್ಲಿ ನಿಂತು ಪೋಸ್ ಕೊಟ್ಟ ಫೋಟೊಗಳನ್ನು ಕಂಡು ಹುಡುಗರು ನಿದ್ದೆಯನ್ನೇ ಕಳೆದುಕೊಂಡಿದ್ದಾರೆ. ನೇಸರದ ಮಧ್ಯೆ ಹಸಿರು ಬಿಕಿನಿ ತೊಟ್ಟು "ಸೀಸನ್ 2 ಕಮಿಂಗ್" ಎಂದು ಬರೆದು ಪೋಸ್ಟ್ ಮಾಡಿದ್ದು ನೆಟ್ಟಿಗರಲ್ಲಿ ಕುತೂಹಲ ಹೆಚ್ಚಿಸಿದೆ. ಅಷ್ಟಕ್ಕೂ ಕಾಂಟೊ ಲ್ಯಾಂಪೊ ಜಲಪಾತ ವಿಶೇಷತೆ ಏನು? ಅಲ್ಲೇನು ಸ್ಪೆಷಲ್ ? ಅನ್ನೋದನ್ನು ತಿಳಿಯಲು ಮುಂದೆ ಓದಿ.
"ಸೀಸನ್ 2 ಕಮಿಂಗ್"
ನಮ್ರತಾ ಗೌಡ ಜಾಲಿ ಮೂಡ್‌ನಲ್ಲಿ ಇದ್ದಾರೆ. ವರ್ಕ್‌ಔಟ್, ಧಾರಾವಾಹಿ, ನಟನೆಗೆ ಕೊಂಚ ಬ್ರೇಕ್ ಕೊಟ್ಟಿದ್ದಾರೆ. ಗೆಳತಿ ಜೊತೆ ಬಾಲಿಯಲ್ಲಿ ಬಿಂದಾಸ್ ಆಗಿ ಎಂಜಾಯ್ ಮಾಡುತ್ತಿದ್ದಾರೆ. ಅದರ ಒಂದು ಭಾಗವೇ ಈ ಬಿಕಿನಿ ಫೋಟೊಗಳು. ಈ ಫೋಟೊಗಳನ್ನು ನೋಡಿ ನೆಟ್ಟಿಗರೇ ಶಾಕ್ ಆಗಿದ್ದಾರೆ. ಬಿಕಿನಿ ಫೋಟೊ ಪೋಸ್ಟ್ ಮಾಡಿದ ಕೇವಲ 3 ಗಂಟೆಗಳಲ್ಲಿಯೇ 20 ಸಾವಿರದಷ್ಟು ಮಂದಿ ಲೈಕ್ ಮಾಡಿದ್ದಾರೆ.
ಹಾಗಂತ ನಮ್ರತಾ ಇಷ್ಟೊಂದು ಹಾಟ್ ಆಗಿ ಕಂಡಿದ್ದು ಇದೇ ಮೊದಲು. ಈ ಹಿಂದೆನೂ ಬಿಕಿನಿಯಲ್ಲಿ ಪೋಸ್ ಕೊಟ್ಟಿದ್ದರೂ, ಈ ಮಟ್ಟಿಗೆ ಗ್ಲಾಮರಸ್ ಅಂತ ಅನಿಸಿರಲಿಲ್ಲ. ಸದ್ಯ ಈ ಫೋಟೊಗಳಿಗೆ ಕೆಲವರು ಮೆಚ್ಚುಗೆ ಸೂಚಿಸಿದ್ದಾರೆ. ಮತ್ತೆ ಕೆಲವರಿಗೆ ಈ ಜಾಗ ಹೇಗಿದೆ? ಇದರ ವಿಶೇಷತೆ ಏನು? ಅನ್ನೋ ಕುತೂಹಲ ಇದ್ದೇ ಇರುತ್ತೆ. ಅದರ ಡಿಟೈಲ್ಸ್‌ಗೆ ಮುಂದೆ ಓದಿ.
ಕಾಂಟೊ ಲ್ಯಾಂಪೊ ಜಲಪಾತದ ವಿಶೇಷತೆ ಏನು?
ಬಾಲಿಯ ಕೆಲೊಡ್ ಕಂಗಿನ್ ಅನ್ನೋ ಕುಗ್ರಾಮದಲ್ಲಿದೆ. ಕಾಂಟೊ ಲ್ಯಾಂಪೊ ನದಿಪಾತ್ರದಲ್ಲಿ ಬಿದ್ದ ಹಿಮಪಾತದಿಂದ ಈ ಜಲಪಾತ ಸೃಷ್ಟಿಯಾಗಿದೆ ಎಂದು ಹೇಳಲಾಗುತ್ತೆ. ಇದು ಇಂಡೋನೇಷ್ಯಾದ ಅತ್ಯುತ್ತಮ ಜಲಪಾತ ಅಲ್ಲದೇ ಹೋದರೂ, ಒಂದು ದಿನ ಟ್ರಿಪ್‌ಗೆ ಬೆಸ್ಟ್ ಅನ್ನೋ ಅಭಿಪ್ರಾಯವಿದೆ. ಹಾಗೇ ಕುಗ್ರಾಮ ಆದರೂ ಇಲ್ಲಿಗೆ ತಲುಪುವುದು ತುಂಬಾನೇ ಸುಲಭ ಹಾಗಾಗಿ ಪ್ರವಾಸಿಗರು ಹೆಚ್ಚಾಗಿ ಇಲ್ಲಿಗೆ ವಿಸಿಟ್ ಹಾಕುತ್ತಿದ್ದಾರೆ.
ಕಾಂಟೊ ಲ್ಯಾಂಪೊ ಜಲಪಾತ ವಿದೇಶಿ ಪ್ರವಾಸಿಗರನ್ನು ಇತ್ತೀಚೆಗೆ ಹೆಚ್ಚಾಗಿ ಆಕರ್ಷಿಸುತ್ತಿದೆ. ಇಲ್ಲಿನ ಪ್ರಕೃತಿ, ಜಲಪಾತ ಸುಂದರವಾಗಿದೆ. ಅಲ್ಲದೆ ಫೋಟೊ, ಸೆಲ್ಫಿ ಪ್ರಿಯರಿಗೆ ಈ ಜಲಪಾತ ಪರ್ಫೆಕ್ಟ್. ಎಲ್ಲಕ್ಕಿಂತ ಹೆಚ್ಚಾಗಿ ಇಲ್ಲಿಗೆ ತಲುಪಲು ಹೆಚ್ಚು ಸಮಯ ಹಿಡಿಯೋದಿಲ್ಲ. ಜಿಯಾನ್ಯಾರ್ ಎಂಬಲ್ಲಿಂದ ಇಲ್ಲಿಗೆ ತಲುಪಲು ಕೇವಲ 15 ನಿಮಿಷ ಸಾಕಷ್ಟೇ. ಅಲ್ಲಿದೆ ಬೆಟ್ಟ, ಗುಟ್ಟ ಏರಬೇಕಾಗಿಲ್ಲ. ಹೀಗಾಗಿ ಪ್ರವಾಸಿಗರು ಇಲ್ಲಿಗೆ ಬರಲು ಹೆಚ್ಚು ಇಷ್ಟ ಪಡುತ್ತಾರೆ.
ಕಾಂಟೊ ಲ್ಯಾಂಪೊ ಜಲಪಾತ ತಲುಪೋದು ಹೇಗೆ?
ಕಾಂಟೊ ಲ್ಯಾಂಪೊ ಜಲಪಾತ ಬಾಲಿಯ ಜಿಯಾನ್ಯಾರ್‌ನ ಬೆಂಗ್ ಎಂಬ ಹಳ್ಳಿಯ ಕೇಲೋಡ್ ಕಂಗಿನ್ ಎಂಬ ಕುಗ್ರಾಮದಲ್ಲಿದೆ. ಡೆನ್ಪಸರ್ ನ್ಗುರಾ ರೈ ಅಂತರಾಷ್ಟ್ರೀಯ ಏರ್‌ಪೋರ್ಟ್‌ನಿಂದ ಇಲ್ಲಿಗೆ ತಲುಪಲು 1 ರಿಂದ 1.5 ಗಂಟೆ ಹಿಡಿಯಬಹುದು. ಹಾಗೇ ಉಬುದ್ ಎಂಬಲ್ಲಿಂದಲೂ ಇಲ್ಲಿಗೆ ಒಂದು ಗಂಟೆಯ ಅಂತರದಲ್ಲಿ ತಲುಪಬಹುದು.
ಈ ಜಲಪಾತಕ್ಕೆ ಪ್ರವೇಶಿಸಲು ಎಂಟ್ರಿ ಫೀ ಇದೆ. ಕಡಿಮೆ ಮೊತ್ತದಲ್ಲೇ ಒಂದು ದಿನ ಆರಾಮಾಗಿ ಎಂಜಾಯ್ ಮಾಡಿ ಬರಬಹುದು. ಬಾಲಿಗೆ ಹೋದವರು ಒಂದು ದಿನ ಇಲ್ಲಿಗೂ ಟ್ರಿಪ್ ಹಾಕಿಕೊಳ್ಳುತ್ತಾರೆ. ಇಲ್ಲಿಗೆ ತಲುಪಲು ಸ್ಕೂಟರ್‌ಗಿಂತ ಟ್ಯಾಕ್ಸಿ ಉತ್ತಮ ಎನ್ನುತ್ತಾರೆ ಪ್ರವಾಸಿಗರು.


Click it and Unblock the Notifications











