For Quick Alerts
  ALLOW NOTIFICATIONS  
  For Daily Alerts

  ಭವ್ಯಗೌಡ ಜೊತೆಗೆ ಪೋಸ್ ಕೊಟ್ಟ 'ನಾಗಿಣಿ 2' ನಮ್ರತಾ: ಐಶ್ವರ್ಯಾಗ್ಯಾಕೆ ಕೋಪ?

  |

  ಜೀ ಕನ್ನಡ ವಾಹಿನಿಯಲ್ಲಿ 'ನಾಗಿಣಿ 2' ಧಾರಾವಾಹಿ ಪ್ರಸಾರ ಆಗುತ್ತಿದೆ. ಆ ಧಾರಾವಾಹಿಯನ್ನು ಎಲ್ಲರೂ ನೋಡಿಯೇ ನೋಡಿರುತ್ತಾರೆ. ನಾಗಮಣಿಗಾಗಿ ಹೋರಾಟ ನಡೆಸುತ್ತಿದ್ದ ಶಿವಾನಿಗೆ ಸಾಕಷ್ಟು ಸಂಕಷ್ಟಗಳು ಎದುರಾಗುತ್ತಲೇ ಇದೆ. ನಾಗಮಣಿ ಎಲ್ಲಿದೆ ಅಂತ ಗೊತ್ತಾದ ಮೇಲೂ ಅದನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತಿಲ್ಲ.

  ಶತ್ರುಗಳು ಯಾರೆಂದು ಗೊತ್ತಾದ ಮೇಲೂ ಅವರನ್ನು ನಾಶ ಮಾಡುವುದಕ್ಕೆ ಆಗುತ್ತಿಲ್ಲ. ಈಗ ಆದಿಶೇಷ ಕೂಡ ಅಪಾಯದಲ್ಲಿದ್ದಾನೆ. ಈ ಎಲ್ಲಾ ತೊಂದರೆಗೂ ಮಾಯಾಂಗನೆ ಕೂಡ ಕಾರಣಳಾಗಿದ್ದಾಳೆ.

  ಆದಿಶೇಷನನ್ನು ಪಡೆಯುವುದಕ್ಕೆ ಮಾಯಾಂಗನೇ ತುದಿಗಾಲಿನಲ್ಲಿ ನಿಂತಿದ್ದಾಳೆ. ಶಿವಾನಿ ಮತ್ತು ಆದಿಶೇಷ ಇಬ್ಬರು ಜನ್ಮ ಜನ್ಮದ ಪ್ರೇಮಿಗಳು ಎಂಬುದು ಮಾಯಾಂಗನೆಗೂ ಗೊತ್ತು. ಆದರೆ ಆತನನ್ನು ಪಡೆಯಲು ಶಿವಾನಿಗೆ ತೊಂದರೆ ಕೊಡುತ್ತಾಳೆ. ಇದು ಧಾರಾವಾಹಿ. ಶಿವಾನಿ ಎಷ್ಟೋ ವರ್ಷಗಳ ಬಳಿಕ ಭೂಮಿಗೆ ಬಂದಿರುವ ವಿಚಾರ ಮಾಯಾಂಗನೆಗೂ ಗೊತ್ತಿದೆ. ಆದರೂ ರಿಯಲ್ ಲೈಫ್‌ನಲ್ಲಿ ಇಬ್ಬರು ಬಿಟ್ಟಿರಲಾರದ ಫ್ರೆಂಡ್ಸ್.

  ಶಿವಾನಿ & ಮಾಯಾಂಗನೆ ಹೇಗಿರುತ್ತಾರೆ ಗೊತ್ತಾ..?

  ಶಿವಾನಿ & ಮಾಯಾಂಗನೆ ಹೇಗಿರುತ್ತಾರೆ ಗೊತ್ತಾ..?

  'ನಾಗಿಣಿ' ಧಾರಾವಾಹಿಯಲ್ಲಿ ಶಿವಾನಿ ಇಚ್ಛಾಧಾರಿ ನಾಗಿಣಿಯಾಗಿ ಪಾತ್ರ ತಳೆದಿದ್ದಾರೆ. ಶಿವಾನಿಗೆ ಯಾವಾಗಲೂ ಕಾಟ ಕೊಡುವ ಪಾತ್ರದಲ್ಲಿ ಮಾಯಾಂಗನೆ ಇದ್ದಾಳೆ. ಇಬ್ಬರದ್ದು ಒಂದೇ ಗುರಿ ಆದಿಶೇಷನನ್ನು ಪಡೆಯುವುದು. ಅಷ್ಟೇ ಅಲ್ಲ ಯಾವ ವೇಷವನ್ನು ಬೇಕಾದರೂ ಹಾಕುವ ಮಾಯಾಂಗನೆ ಯಾವಾಗಲೂ ಶಿವಾನಿಗೆ ತೊಂದರೆ ಕೊಡುತ್ತಲೇ ಇರುತ್ತಾಳೆ. ನಾಗಮಣಿ ವಿಚಾರಕ್ಕೆ ಈಗ ಮಾಯಾಂಗನೆ ಕೊಂಚ ಬದಲಾಗಿದ್ದಾಳೆ.

  ಎಲ್ಲಿಯೇ ಹೋದರೂ ಜೊತೆಗಿರುವ ಫ್ರೆಂಡ್ಸ್

  ಎಲ್ಲಿಯೇ ಹೋದರೂ ಜೊತೆಗಿರುವ ಫ್ರೆಂಡ್ಸ್


  ಧಾರಾವಾಹಿಯಲ್ಲಿ ಮಾತ್ರ ನಮ್ರತಾ ಹಾಗೂ ಐಶ್ವರ್ಯಾ ಸಿಂಧೋಗಿ ಶತ್ರುಗಳಾಗಿರುತ್ತಾರೆ. ಆದರೆ ತೆರೆಯ ಹಿಂದೆ ಇಬ್ಬರದ್ದು ಬಿಟ್ಟಿರಲಾರದಷ್ಟು ಬಾಂಧವ್ಯವಿದೆ. ಎಲ್ಲಿಯೇ ಹೋದರೂ ಜೊತೆಗೆ ಹೋಗುತ್ತಾರೆ. ಇಬ್ಬರ ಸೋಶಿಯಲ್ ಮೀಡಿಯಾ ನೋಡಿದರೇನೆ ಗೊತ್ತಾಗುತ್ತೆ. ಇಬ್ಬರೂ ಎಷ್ಟು ಕ್ಲೋಸ್ ಎಂಬುದು. ಸೋಶಿಯಲ್ ಮೀಡಿಯಾದಲ್ಲಿ, ರೀಲ್ಸ್ ಆಗಿರಲಿ, ಫೋಟೊ ಆಗಿರಲಿ ಒಟ್ಟೊಟ್ಟಿಗೆ ಇರುವ ಫೋಟೊವನ್ನೇ ಹಂಚಿಕೊಳ್ಳುತ್ತಾರೆ. ಆ ಫೋಟೊಗಳನ್ನು ನೋಡಿದವರೆಲ್ಲ ಇಬ್ಬರ ಫ್ರೆಂಡ್‌ಶಿಪ್‌ ಬಗ್ಗೆ ಅದಾಗಲೇ ಅರ್ಥ ಮಾಡಿಕೊಂಡಿದ್ದಾರೆ. ಆದರೆ ನಮ್ರತಾ ಮೇಲೆ ಐಶ್ಚರ್ಯಾ ಸಿಂಧೋಗಿ ಕೋಪ ಮಾಡಿಕೊಂಡಿದ್ದಾರೆ. ಅದಕ್ಕೆ ಕಾರಣ ಒಂದೇ ಒಂದು ಫೋಟೊ.

  ಭವ್ಯ ಜೊತೆಗಿನ ಫೋಟೊ ಹಂಚಿಕೊಂಡ ನಮ್ರತಾ

  ಭವ್ಯ ಜೊತೆಗಿನ ಫೋಟೊ ಹಂಚಿಕೊಂಡ ನಮ್ರತಾ

  ನಮ್ರತಾ ಸದ್ಯಕ್ಕೆ ನಾಗಿಣಿ ಧಾರಾವಾಹಿ ಒಂದರಲ್ಲಿ ನಟಿಸುತ್ತಾ ಇದ್ದಾರೆ. ಅದನ್ನು ಹೊರತು ಪಡಿಸಿದರೆ ತಮ್ಮದೇ ಯೂಟ್ಯೂಬ್ ಚಾನೆಲ್‌ನಲ್ಲಿ ಆಕ್ಟೀವ್ ಆಗಿರುತ್ತಾರೆ. ಅದರ ಜೊತೆಗೆ ಶೂಟಿಂಗ್ ಇಲ್ಲ ಅಂದ್ರೆ, ಟ್ರಿಪ್ ಹೊಡೆಯೋದು ಜಾಸ್ತಿ. ಫ್ರೆಂಡ್ಸ್ ಜೊತೆಗೆ ಕೆಫೆಗಳಿಗಾದರೂ ಸರಿ, ದೂರದ ಸ್ಥಳಗಳಿಗಾದರೂ ಸರಿ ಹೊರಟು ಬಿಡುತ್ತಾರೆ. ಅದರಂತೆ ನಟಿ ಭವ್ಯಾ ಗೌಡ ಅವರನ್ನು ಭೇಟಿ ಮಾಡಿದ್ದಾರೆ. ಆ ಭೇಟಿಯ ಸುಂದರ ಗಳಿಗೆಯ ಫೋಟೊ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

  ನಾನಿನ್ನು ಬದುಕಿದ್ದೀನಿ ಎಂದ ಐಶ್ವರ್ಯಾ

  ನಾನಿನ್ನು ಬದುಕಿದ್ದೀನಿ ಎಂದ ಐಶ್ವರ್ಯಾ

  ಹೀಗೆ ಭೇಟಿ ಒಂದು ಫೋಟೊವನ್ನು ನಮ್ರತಾ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದೆ ತಡ, ಐಶ್ವರ್ಯಾ ಸಿಂಧೋಗಿಗೆ ಕೋಪ ಬಂದಿದೆ. ಅದಕ್ಕೆ ಆ ಫೋಟೊಗೆನೆ ಕಮೆಂಟ್ ಮಾಡಿದ್ದಾರೆ. ನಾನಿನ್ನೂ ಬದುಕಿದ್ದೀನಿ ಎಂದು ಕೋಪವೋ, ಚೇಷ್ಟೇಯನ್ನೋ ಹೊರ ಹಾಕಿದ್ದಾರೆ. ಅದಕ್ಕೆ ನಮ್ರತಾ ಕೂಡ ಉತ್ತರ ನೀಡಿದ್ದು, "ಸಡನ್ ಆಗಿ ಈ ಭೇಟಿ ಫಿಕ್ಸ್ ಆಯ್ತು. ಬಳಿಕ ಇಬ್ಬರು ನಮ್ಮ ಮುಂದಿನ ಪ್ರವಾಸ ಹೋಗುವ ಬಗ್ಗೆ ಚರ್ಚೆ ಮಾಡಿದ್ದೇವೆ" ಎಂದು ಉತ್ತರಿಸಿದ್ದಾರೆ.

  English summary
  Nagini 2 Serial Actress Namratha Gwoda New Photo With Bhavya Gowda, Know More.
  Sunday, January 8, 2023, 21:38
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X