Nanda Gokula Serial: 'ನಂದಗೋಕುಲ'ದಲ್ಲಿ ಹನಿಮೂನ್ ಚರ್ಚೆ.. ಒಬ್ರಿಗೆ ಇಷ್ಟು, ಇನ್ನಿಬ್ರಿಗೆ ಕಷ್ಟ

ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ 'ನಂದಗೋಕುಲ' ಧಾರಾವಾಹಿ ಮನೆ ಮಂದಿಯನ್ನೆಲ್ಲ ಸೆಳೆಯುತ್ತಿದೆ. ತುಂಬು ಕುಟುಂಬದಲ್ಲಿ ಜರುಗುವ ಸನ್ನಿವೇಶಗಳನ್ನು ಇಟ್ಟುಕೊಂಡು ಕಥೆಯನ್ನು ಹೆಣೆಯಲಾಗುತ್ತಿದೆ. ಭಾವನಾತ್ಮಕ ಸನ್ನಿವೇಶಗಳ ಜೊತೆ ಜೊತೆಗೆ ಹಾಸ್ಯದ ಮೆರುಗು ಕೊಟ್ಟು ವೀಕ್ಷಕರನ್ನು ರಂಜಿಸುವಲ್ಲಿ 'ನಂದಗೋಕುಲ' ಟೀಮ್ ಯಶಸ್ವಿಯಾಗಿದೆ.

ಈಗ ವಾರಕ್ಕೆ ಒಂದೊಂದು ಥೀಮ್‌ನಲ್ಲಿ 'ನಂದಗೋಕುಲ' ಎಪಿಸೋಡ್‌ಗಳು ಮೂಡಿ ಬರುತ್ತಿದೆ. ಈ ವಾರ ಕೇಶವ ಹಾಗೂ ವಲ್ಲಭ ಕೆಲಸಕ್ಕೆ ಸೇರಿಕೊಳ್ಳುವ ಸೀಕ್ರೆಟ್ ಹೆಂಡತಿಯರ ಮುಂದೆ ರಟ್ಟಾದ ಸನ್ನಿವೇಶ ವೀಕ್ಷಕರಿಗೆ ಹಾಸ್ಯದ ಕಚಗುಳಿ ಇಟ್ಟಿದೆ. ಕೇಶವ-ಮೀನಾ, ವಲ್ಲಭ-ಅಮೂಲ್ಯ ಜೋಡಿಯ ಸನ್ನಿವೇಶಗಳನ್ನು ಸಖತ್ ಎಂಜಾಯ್ ಮಾಡಿದ್ದಾರೆ. ಮುಂದಿನ ವಾರಕ್ಕೆ ಮನೆಯಲ್ಲಿ ಹೊಸದೊಂದು ಸನ್ನಿವೇಶ ಕ್ರಿಯೇಟ್ ಆಗಿದೆ.

Nanda Gokul Serial Madhava Priya Keshava Meena Vallabha Amulya Honeymoon episode highlights

ಮಾಧವನನ್ನು ಪ್ರಿಯಾ ಮದುವೆ ಆದ ದಿನದಿಂದ 'ನಂದಗೋಕುಲ'ದಲ್ಲಿ ಏನಾದರೂ ಒಂದು ಕಿರಿಕಿರಿ ಆಗ್ತಾನೇ ಇದೆ. ಈಗಂತೂ ಮನೆಯ ಯಜಮಾನ ನಂದನನ್ನು ತನ್ನ ಹಾಗೂ ಮಾಧವನ ಕಡೆಗೆ ಎಳೆದುಕೊಂಡಿದ್ದಾಗಿದೆ. ನಂದನಿಗೆ ಮಾಧವ-ಪ್ರಿಯಾ ಮೇಲೆ ಸಾಫ್ಟ್ ಕಾರ್ನರ್ ಇದೆ. ಇನ್ನೊಂದು ಕಡೆ ಕೇಶವ-ಮೀನಾ, ವಲ್ಲಭ-ಅಮೂಲ್ಯ ಅಂದರೆ, ಏನೋ ಒಂಥರಾ ಅಸಡ್ಡೆ.

ಮಾಧವ ಹಾಗೂ ಪ್ರಿಯಾ ಇಬ್ಬರೂ ಹನಿಮೂನ್‌ಗೆ ಹೊರಟಿದ್ದಾರೆ. ಇದಕ್ಕೆ ನಂದ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾಗಿತ್ತು. ಆದರೆ, ಈ ವಿಷಯ ಗಿರಿಜಾಗೆ ಗೊತ್ತಾಗಿದೆ. ತನ್ನ ಇನ್ನಿಬ್ಬರು ಮಕ್ಕಳೂ ಹನಿಮೂನ್‌ಗೆ ಹೋಗಬೇಕು. ಇಲ್ಲಿ ಪಕ್ಷಪಾತ ನಡೆಯುತ್ತಿದೆ ಎಂದು ಗಂಡ ಮುಂದೆ ಗಿರಿಜಾ ರೇಗಾಡಿದ್ದಾರೆ. ಪತ್ನಿ ಗುಡುಗಿದ್ದಕ್ಕೆ ನಂದ ಕೂಡ ಕರಿಗಿದ್ದು ಆಗಿದೆ.

Also Read
Nanda Gokula Serial: ಹೆಣ್ಮಕ್ಕಳ ಬಾಯಲ್ಲಿ ಮಾತು ನಿಲ್ಲಲ್ಲ.. 'ನಂದಗೋಕುಲ'ದ ಸಹೋದರರ ಸವಾಲ್ ಏನಾಯ್ತು?
Nanda Gokula Serial: ಹೆಣ್ಮಕ್ಕಳ ಬಾಯಲ್ಲಿ ಮಾತು ನಿಲ್ಲಲ್ಲ.. 'ನಂದಗೋಕುಲ'ದ ಸಹೋದರರ ಸವಾಲ್ ಏನಾಯ್ತು?

"ಬರೀ ಮಾಧವ-ಪ್ರಿಯಾಗೆ ಮಾತ್ರ ಹನಿಮೂನ್‌ಗೆ ಕಳಿಸುತ್ತಿದ್ದೀರ. ಕೇಶವ-ಮೀನಾ, ವಲ್ಲಭ-ಅಮೂಲ್ಯ ಏನು ಮಾಡಿದ್ರು? ನೀವು ಪಕ್ಷಪಾತ ಮಾಡುತ್ತಿದ್ದೀರ ಎಂದು ಪತಿ ನಂದ ವಿರುದ್ಧ ಗಿರಿಜಾ ಗುಡುಗಿದ್ದಾರೆ. ಗಿರಿಜಾ ಆಕ್ರೋಶಕ್ಕೆ ನಂದ ಕೂಡ ಸಾಫ್ಟ್ ಆಗಿದ್ದು, "ಈ ನಾಲ್ಕು ಜನ ಕೂಡ ಹನಿಮೂನ್‌ಗೆ ಹೋಗ್ತಾರೆ" ಎಂದು ನಂದ ಹೇಳಿದಾಗ ಮನೆಯಲ್ಲಿ ಎಲ್ಲರೂ ಮುಖ ಮುಖ ನೋಡಿಕೊಳ್ಳುತ್ತಾರೆ.

Nanda Gokul Serial Madhava Priya Keshava Meena Vallabha Amulya Honeymoon episode highlights

ಮಾವ ಪ್ರಕಟಿಸಿದ ನಿರ್ಧಾರ ಪ್ರಿಯಾ ಇಷ್ಟ ಆಗಿಲ್ಲ. ಅದಕ್ಕೆ ಗಂಡ ಬಳಿ ಜಾಡಿ ಹೇಳುವುದಕ್ಕೆ ಶುರು ಮಾಡಿದ್ದಾಳೆ. "ನಾಲ್ಕೈದು ಜನ ಒಟ್ಟಿಗೆ ಹೋದರೆ, ಅದು ಫ್ಯಾಮಿಲಿ ಟ್ರಿಪ್ ಆಗೋದಿಲ್ವಾ" ಅಂತ ಪ್ರಿಯಾ ಕಿಡಿ ಹಚ್ಚುವುದಕ್ಕೆ ಟ್ರೈ ಮಾಡಿದ್ದಾಳೆ. ಅದಕ್ಕೆ ಮಾಧವ "ಫ್ಯಾಮಿಲಿ ಹನಿಮೂನ್ ಆಗುತ್ತೆ" ಎಂದು ಹೇಳುತ್ತಾನೆ. ಇಲ್ಲಿ ಈಗ ಅಸಮಧಾನ ಹೊಗೆಯಂತೂ ಹುಟ್ಟಿಕೊಂಡಿದೆ.

ನಂದ ಏನೋ ತನ್ನ ನಾಲ್ಕು ಜನ ಮಕ್ಕಳೂ ಹನಿಮೂನ್‌ಗೆ ಹೋಗ್ತಾರೆ ಅಂತ ಹೇಳಿದ್ದಾಗಿದೆ. ಆದರೆ, ಕೇಶವ-ಮೀನಾ, ವಲ್ಲಭ-ಅಮೂಲ್ಯಗೂ ದ್ವಂದ್ವ ಮೂಡಿದೆ. ಪ್ರಿಯಾ ಜೊತೆ ಹೇಗೆ ಅಂತ ಮೀನಾ, ವಲ್ಲಭನಿಗೆ ನಾವಿನ್ನೂ ಸರಿ ಹೋಗಿಲ್ಲ ಅನ್ನೋ ಭಾವ. ಹೀಗಾಗಿ ಈ ಎರಡು ಜೋಡಿ ಹನಿಮೂನ್‌ಗೆ ಹೋಗುವ ಬಗ್ಗೆ ಗೊಂದಲದಲ್ಲಂತೂ ಇದೆ.

"ಪ್ರಿಯಾ ಅಕ್ಕನ ಜೊತೆ ನನಗೆ ಏಗುವುದಕ್ಕೆ ಆಗುವುದಿಲ್ಲ" ಅಂತ ಮೀನಾ, ಕೇಶವನ ಬಳಿ ಹೇಳಿದ್ರೆ, ಅತ್ತ ವಲ್ಲಭ "ಇಷ್ಟ ಇಲ್ಲದೆ ಮದುವೆ ಆದ್ವಿ. ಜಗಳ ಆಡಿಕೊಂಡು ಬದುಕುತ್ತಿದ್ದೇವೆ. ಇದೆಲ್ಲದರ ಮಧ್ಯೆ ಹನಿಮೂನ್‌ಗೆ ಹೋಗುವ ಅರ್ಹತೆ ನಮಗೆ ಇದೆಯಾ?" ಎಂದು ಅಮೂಲ್ಯ ಬಳಿ ಕೇಳಿದ್ದಾನೆ. ಹೀಗಾಗಿ ಮುಂಬರುವ ಸೋಮವಾರದಿಂದ ಶುಕ್ರವಾರದವರೆಗೆ ಹನಿಮೂನ್ ಎಪಿಸೋಡ್ ಹಾಸ್ಯ ಹೊನಲನ್ನು ಸೃಷ್ಟಿಸಬಹುದು. 'ನಂದಗೋಕುಲ' ಧಾರಾವಾಹಿಯನ್ನು ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ ರಾತ್ರಿ 9ಕ್ಕೆ ಕಲರ್ಸ್ ಕನ್ನಡ ಮತ್ತು ಜಿಯೋಹಾಟ್‌ಸ್ಟಾರ್‌ನಲ್ಲಿ ಈ ಧಾರಾವಾಹಿಯನ್ನು ವೀಕ್ಷಿಸಬಹುದಾಗಿದೆ.

English summary
Nanda Gokul Serial Madhava Priya Keshava Meena Vallabha Amulya Honeymoon episode highlights.
Read more about: serial tv show colors kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X