ನವರಾತ್ರಿಯಲ್ಲಿ ಸುವರ್ಣ ಸಂಕಲ್ಪ; 2ನೇ ದಿನ ಬ್ರಹ್ಮಚಾರಿಣಿ ದೇವಿಗೆ ನಟಿ ಅಂಜಲಿ-ಬೃಂದಾರಿಂದ ಪೂಜೆ

ನವರಾತ್ರಿ ಹಬ್ಬದ ಸಂಭ್ರಮ ಆರಂಭ ಆಗಿದೆ. ದೇಶಾದ್ಯಂತ ಈ ಹಬ್ಬವನ್ನು ವಿಜೃಂಬಣೆಯಿಂದ ಆಚರಿಸಲಾಗುತ್ತಿದೆ. ಒಂಬತ್ತು ದಿನಗಳನ್ನೂ ಒಂದೊಂದು ದೇವಿಯನ್ನು ಜನರು ಆರಾಧಿಸುತ್ತಾರೆ. ಈ ಹಿನ್ನೆಲೆಯಲ್ಲಿ ಸ್ಟಾರ್ ಸುವರ್ಣ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ. 'ಸುವರ್ಣ ಸಂಕಲ್ಪದ' ಗುರೂಜಿಗಳೊಂದಿಗೆ ಒಂಬತ್ತು ದೇವಿ ದೇವಸ್ಥಾನಗಳಿಗೆ ಸುವರ್ಣ ಕಲಾವಿದರೊಂದಿಗೆ ಭೇಟಿಕೊಟ್ಟು ದೇವಿ ಪಾರಾಯಣವನ್ನು ನಡೆಸಲಾಗುತ್ತಿದೆ.

ನವರಾತ್ರಿಯ ಎರಡನೇ ದಿನ, ಅಂದರೆ ನಿನ್ನೆ (ಸೆಪ್ಟೆಂಬರ್ 23) ದುರ್ಗಾದೇವಿಯ 2ನೇ ರೂಪ ಬ್ರಹ್ಮಚಾರಿಣಿ ದೇವಿಯನ್ನು ಭಕ್ತಿಯಿಂದ ಪೂಜಿಸಲಾಗುತ್ತೆ. ಈ ದೇವಿ ಜ್ಞಾನ ಹಾಗೂ ತಪಸ್ಸಿನ ದೇವತೆ ಎಂಬುದು ಜನರ ನಂಬಿಕೆ. ಈ ದೇವಿಯ ಅನುಗ್ರಹವನ್ನು ಪಡೆಯುವುದರಿಂದ ಕಾಯಿಲೆಗಳು ಹಾಗೂ ರೋಗಗಳಿಂದ ಬಳಲುತ್ತಿರುವವರು ಮುಕ್ತಿಯನ್ನು ಹೊಂದುತ್ತಾರೆ. ಈ ಪೂಜೆಯಿಂದ ಮನುಷ್ಯ ಕೆಟ್ಟ ಗುಣಗಳಿಂದ ಮುಕ್ತಿ ಪಡೆಯುತ್ತಾನೆಂದು ನಂಬಲಾಗಿದೆ.

Navratri 2025 2nd day Brahmacharini Devi Puja done by Vasudeva Kutumba serial cast Anjali and Brunda

ನವರಾತ್ರಿಯ ಮೊದಲ ದಿನ ನಂದಿನಿ ಲೇಔಟ್‌ನ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ ಶೈಲ ಪುತ್ರಿ ದೇವಿಯ ಪೂಜೆ ಜರುಗಿತ್ತು. ಸ್ಟಾರ್ ಸುವರ್ಣ ವಾಹಿನಿಯ 'ಸ್ನೇಹದ ಕಡಲಲ್ಲಿ' ಧಾರಾವಾಹಿಯ ನಟಿ ನಿಸರ್ಗ ಈ ಪೂಜೆಯಲ್ಲಿ ಭಾಗಿಯಾಗಿದ್ದರು. ಎರಡನೇ ದಿನ 'ವಸುದೇವ ಕುಟುಂಬ' ಧಾರಾವಾಹಿಯ ನಟಿ ಅಂಜಲಿ ಹಾಗೂ ಬೃಂದಾ ಕಶ್ಯಪ್ ಭಾಗಿಯಾಗಿದ್ದರು.

ಬ್ರಹ್ಮಚಾರಿಣಿ ದೇವಿ ಪೂಜೆಯಲ್ಲಿ ಅಂಜಲಿ

ನಿನ್ನೆ ಅಂದರೆ, ಸೆಪ್ಟೆಂಬರ್ 23ರಂದು ರಾಜಾಜಿನಗರದ ಶ್ರೀ ಗಂಗಮ್ಮ ದೇವಿ, ಶ್ರೀ ಪಾತಾಳ ಪಂಚನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಬ್ರಹ್ಮಚಾರಿಣಿ ದೇವಿಯ ಪೂಜೆ ನೆರವೇರಿದೆ. 'ಸುವರ್ಣ ಸಂಕಲ್ಪದ' ಗುರೂಜಿಗಳೊಂದಿಗೆ ಸ್ಟಾರ್ ಸುವರ್ಣ ವಾಹಿನಿಯ 'ವಸುದೇವ ಕುಟುಂಬ' ಧಾರಾವಾಹಿಯಲ್ಲಿ ನಟಿಸುತ್ತಿರುವ ಹಿರಿಯ ನಟಿ ಅಂಜಲಿ ಹಾಗೂ ನಟಿ ಬೃಂದಾ ಕಶ್ಯಪ್ ಈ ವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ದಾರೆ.

ಬ್ರಹ್ಮಚಾರಿಣಿ ದೇವಿಯ ಪೂಜೆ ಯಾಕೆ ಮಾಡಬೇಕು?

ನವರಾತ್ರಿಯ ಎರಡನೇ ದಿನ ದೇವಿ ಪಾರ್ವತಿಯ ಬ್ರಹ್ಮಚಾರಿಣಿ ಅವತಾರದ ವಿಶೇಷತೆಯಿದೆ. ಸತಿದೇವಿ ಪಾರ್ವತಿಯಾಗಿ ಹುಟ್ಟಿ ಬಂದಾಗ ಅವಳಿಗೆ ತನ್ನ ಈ ಜೀವನದ ಉದ್ದೇಶ ಶಿವನನ್ನ ಮತ್ತೆ ಮದುವೆಯಾಗೋದು ಅನ್ನೋದು ಗೊತ್ತಿರೋದಿಲ್ಲ. ಆದರೆ, ನಾರದರ ಭೇಟಿಯಿಂದ ತನ್ನ ಜನ್ಮ ರಹಸ್ಯವನ್ನು ತಿಳಿದುಕೊಳ್ಳುತ್ತಾಳೆ. ಈ ವಿಷ್ಯ ಶಿವನಿಗೆ ಗೊತ್ತಾಗಬೇಕು ಅಂದ್ರೆ, ಸತಿ ದೇವಿ ಕಠಿಣ ತಪಸ್ಸು ಮಾಡಿ ಶಿವನನ್ನ ಒಲಿಸಿಕೊಳ್ಳಬೇಕು ಅಂತ ನಾರದರು ಹೇಳ್ತಾರೆ.

Navratri 2025 2nd day Brahmacharini Devi Puja done by Vasudeva Kutumba serial cast Anjali and Brunda

ಹೀಗಾಗಿ ಪರ್ವತ ರಾಜನ ಮಗಳಾಗಿದ್ರೂ ಪಾರ್ವತಿ ತನ್ನಆಡಂಬರ, ಸುಖ, ವೈಭೋಗದ ಜೀವನವನ್ನು ತ್ಯಜಿಸಿ ಘೋರವಾದ ತಪಸ್ಸಿಗೆ ಕೂರುತ್ತಾಳೆ. ಈ ಕಾರಣಕ್ಕೆ ದೇವಿಯನ್ನು ತಪಶ್ಚಾರಿಣೀ ಅಂದರೆ ಬ್ರಹ್ಮಚಾರಿಣಿ ಅಂತಾರೆ. ಇನ್ನು ದೇವಿ ಪಾರ್ವತಿಯ ಕಠಿಣ ತಪಸ್ಸಿಗೆ ಒಲಿದ ಶಿವನು ಅವಳನ್ನು ಮದುವೆಯಾಗೋಕೆ ಒಪ್ಪುತ್ತಾನೆ. ಈ ದೈವಿಕ ಕಾರಣಗಳನ್ನು ಹಿಂದೂ ಪುರಾಣದಲ್ಲಿ ಹೇಳಲಾಗಿದೆ. ಹೀಗಾಗಿ ಇದನ್ನು ತಲಾ ತಲಾಂತರಗಳಿಂದ ಹಿರಿಯರು ನಡೆಸಿಕೊಂಡು ಬರುತ್ತಿದ್ದಾರೆ.

2ನೇ ದಿನದ ಬಣ್ಣ ಕೆಂಪು

ನವರಾತ್ರಿಯ 2ನೇ ದಿನದ ಬಣ್ಣ ಕೆಂಪು. ಇದು ಜ್ಞಾನ, ಸಮೃದ್ಧಿಯನ್ನು ಸೂಚಿಸುತ್ತೆ. ಎರಡನೇ ದಿನ, ಬ್ರಹ್ಮಚಾರಿಣಿ ದೇವಿಯನ್ನು ಪೂಜೆ ನಡೆಯುತ್ತೆ. ಈ ದೇವಿಗೆ ಕೆಂಪು ಬಣ್ಣ ಅಂದರೆ ಬಲು ಇಷ್ಟ. ಹೀಗಾಗಿ 2ನೇ ದಿನ ಜನರು ಕೂಡ ಕೆಂಪು ಬಣ್ಣದ ವಸ್ತ್ರವನ್ನು ಧರಿಸುತ್ತಾರೆ. ಕೆಂಪು ಬಣ್ಣವು ಶಕ್ತಿ, ಉತ್ಸಾಹ ಮತ್ತು ಧೈರ್ಯದ ಸಂಕೇತವನ್ನು ಸೂಚಿಸುತ್ತದೆ. ನವರಾತ್ರಿಯ ವೇಳೆ ದಿನ ಕೆಂಪು ಬಣ್ಣ ವಸ್ತ್ರವನ್ನು ಧರಿಸುವುದರಿಂದ ದುರ್ಗುಣಗಳು ದೂರವಾಗುತ್ತವೆ. ಸೋಮಾರಿತನ, ಅಹಂಕಾರ, ದುರಾಸೆ, ಸುಳ್ಳು, ಸ್ವಾರ್ಥ ಮತ್ತು ಅಸೂಯೆ ತೊಲಗುತ್ತೆ ಎಂಬುದು ಹಿಂದೂಗಳ ನಂಬಿಕೆ.

More from Filmibeat

English summary
Navratri 2025 2nd day Brahmacharini Devi Puja done by Vasudeva Kutumba serial cast Anjali and Brunda.
Read more about: festival serial anjali
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X