ಹೊಸ ಕಥೆ, ಹೊಸ ಟೀಮ್, ಹೀರೋ-ಹೀರೋಯಿನ್ ಮಾತ್ರ ಅವರೇ; ಪ್ರೀತಿಯ ಹೊಸ ಅಧ್ಯಾಯದೊಂದಿಗೆ 'ನೀನಾದೆ ನಾ'

ಕರ್ನಾಟಕದಲ್ಲಿ ಸಿನಿಮಾಗಳಷ್ಟೇ ಕಾಂಪಿಟೇಷನ್ ಕೊಡುತ್ತಿರೋದು ಧಾರಾವಾಹಿಗಳು. ಅದಕ್ಕೆ ಮನರಂಜನಾ ವಾಹಿನಿಗಳು ಸೀರಿಯಲ್‌ಗಳ ಕಡೆಗೆ ಹೆಚ್ಚು ಗಮನ ಕೊಡುತ್ತಿವೆ. ದೊಡ್ಡ ಬಜೆಟ್‌ನಲ್ಲಿ ಧಾರಾವಾಹಿಗಳನ್ನು ನಿರ್ಮಾಣ ಮಾಡುವುದಕ್ಕೆ ಮುಂದಾಗಿದೆ. ಈ ಮಧ್ಯೆ ಎಂಟರ್‌ಟೈನ್ಮೆಂಟ್ ಚಾನೆಲ್‌ಗಳ ಮಧ್ಯೆ ಕಾಂಪಿಟೇಷನ್ ಕೂಡ ಜೋರಾಗಿದೆ. ಈ ಕಾರಣಕ್ಕೆ ಹೊಸ ಹೊಸ ಪ್ರಯತ್ನಗಳು ಶುರುವಾಗುತ್ತಲೇ ಇವೆ.

ಧಾರಾವಾಹಿಗಳ ವಿಷಯದಲ್ಲಿ ಕಾಂಪಿಟೇಷನ್‌ಗೆ ಬಿದ್ದಿರುವ ಕನ್ನಡದ ಎಂಟರ್‌ಟೈನ್ಮೆಂಟ್ ಚಾನೆಲ್‌ಗಳ ಪೈಕಿ ಸ್ಟಾರ್ ಸುವರ್ಣ ಕೂಡ ಒಂದು. ಆಗಾಗ ಕ್ರಿಯೇಟಿವ್ ಆಗಿ ಹೊಸ ಹೊಸ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತೆ. ಈಗ ಇಂತಹದ್ದೇ ಒಂದು ಪ್ರಯತ್ನಕ್ಕೆ ಮುಂದಾಗಿದೆ. ಕನ್ನಡ ಕಿರುತೆರೆ ವೀಕ್ಷಕರ ಆಸಕ್ತಿಯನ್ನು ಅರ್ಥೈಸಿಕೊಂಡ ಹೊಸ ಮುನ್ನುಡಿ ಬರೆಯುವುದಕ್ಕೆ ಮುಂದಾಗಿದೆ.

Star Suvarna Neenadhe Naa serial has entered Kannadigas homes with a new storyline

ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿದ್ದ 'ನೀನಾದೆ ನಾ' ಧಾರಾವಾಹಿಗೆ ಹೊಸ ರೂಪ ಕೊಟ್ಟಿದೆ. ಧಾರಾವಾಹಿ ಟೈಟಲ್ ಅದೇ ಹೀರೋ ಹೀರೋಯಿನ್ ಕೂಡ ಅವರೇ. ಆದರೆ, ಕಥೆ ಬೇರೆ, ಲೋಕೇಶನ್ ಬೇರೆ. ಈ ಬಾರಿ ಹಳೇ ಜೋಡಿಯನ್ನೇ ಇಟ್ಟುಕೊಂಡು ಪ್ರೀತಿಯ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ. ಹೊಸ ಕಥೆಯೊಂದಿಗೆ ಪ್ರಸಾರ ಆಗಲಿದೆ. ಹಾಗಿದ್ದರೆ, ಈ ಹೊಸ ಸೀರಿಯಲ್‌ನಲ್ಲಿ ಏನೆಲ್ಲ ಬದಲಾವಣೆಗಳು ಆಗಿವೆ? ತಿಳಿಯಲು ಮುಂದೆ ಓದಿ.

ಬದಲಾಗಿದೆ ಕಥೆ

'ನೀನಾದೆ ನಾ' ಹೊಸ ಅಧ್ಯಾಯದಲ್ಲಿ ಕಥೆ ಬದಲಾಗಿದೆ. ಕರ್ನಾಟಕದ ದೈವಾರಾಧನೆಯ ತವರೂರಾದ ತುಳುನಾಡಿನಲ್ಲಿ ಈ ಕಥೆ ಆರಂಭ ಆಗಿದೆ. ಉಡುಪಿ, ಕುಡ್ಲದ ಬ್ಯಾಕ್‌ಗ್ರೌಂಡ್‌ನಲ್ಲಿ 'ನೀನಾದೆ ನಾ' ಧಾರಾವಾಹಿಯ ಕಥೆ ಆರಂಭ ಆಗುತ್ತೆ. ಎರಡು ಬೇರೆ ಬೇರೆ ಮನಸ್ಥಿತಿಯ ಪಾತ್ರಗಳು ತೆರೆಮೇಲೆ ಹೇಗೆ ಒಂದಾಗುತ್ತವೆ ಅನ್ನೋದೇ ಒಂದೆಳೆ ಕಥೆ.

ಅದೇ ವಿಕ್ರಂ, ಅದೇ ವೇದ

'ನೀನಾದೆ ನಾ' ಧಾರಾವಾಹಿಯ ನಾಯಕ ವಿಕ್ರಂ ಹಾಗೂ ವೇದಾ ಇಬ್ಬರೂ ಈ ಧಾರಾವಾಹಿಯಲ್ಲಿ ಮುಂದುವರೆದಿದ್ದಾರೆ. ವಿಕ್ರಂ ರೌಡಿಸಂ ಮಾಡಿಕೊಂಡು, ಕುಡ್ಲದ ಕರುಣಾಕರ ಶೆಟ್ಟಿ ಎಂಬ ಡಾನ್‌ ಬಲಗೈ ಬಂಟನಾಗಿರುತ್ತಾನೆ. ಇತ್ತ ವೇದಾ ಸಂಪ್ರದಾಯಸ್ಥ ಮನೆತನದ ಹೆಣ್ಣು ಮಗಳು. ಉಡುಪಿ ಕೃಷ್ಣನ ಭಕ್ತೆ. ಜೊತೆ ಚಿಕ್ಕದೊಂದು ಉದ್ಯಮವನ್ನೂ ನಡೆಸುತ್ತಿರುತ್ತಾಳೆ. ಇವರಿಬ್ಬರ ನಡುವೆ ಪ್ರೀತಿ ಹುಟ್ಟುತ್ತಾ? ಹೇಗೆ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ.

Star Suvarna Neenadhe Naa serial has entered Kannadigas homes with a new storyline

ಪಾತ್ರಗಳು ಹೇಗಿದೆ?

ಈ ಧಾರಾವಾಹಿಯಲ್ಲಿ ವಿಕ್ರಂ ರೌಡಿಯಾಗಿ ಕಾಣಿಸಿಕೊಂಡರೂ, ಮನಸ್ಸು ಒಳ್ಳೆಯದು. ಒಳ್ಳೆಯವರಿಗೆ ಒಳ್ಳೆಯದನ್ನೇ ಮಾಡುವ ಮನಸ್ಸು. ಅದೇ ಇನ್ನೊಂದು ಕಡೆ ವೇದಾ ಸಖತ್ ಸ್ಟ್ರೈಟ್ ಫಾರ್ವರ್ಡ್. ಇದ್ದಿದ್ದನ್ನು ನೇರವಾಗಿಯೇ ಹೇಳುವ ಕ್ಯಾರೆಕ್ಟರ್. ಎಂತಹದ್ದೇ ಸವಾಲು ಎದುರಾದರೂ ಅದನ್ನು ಎದುರಿಸಿ ನಿಲ್ಲುವ ಪಾತ್ರ. ಇವರಿಬ್ಬರೂಹೇಗೆ ಒಂದಾಗುತ್ತಾರೆ? ಈ ಎರಡು ವಿರುದ್ಧ ಮನಸುಗಳ ಸೆಣಸಾಟ ವೀಕ್ಷಕರಿಗೆ ಖುಷಿ ಕೊಡುತ್ತೆ. ಇನ್ನು ನಾಯಕನಾಗಿ ದಿಲೀಪ್ ಶೆಟ್ಟಿ, ನಾಯಕಿಯಾಗಿ ಖುಷಿ ಶಿವು ಇಬ್ಬರೂ ವಿಕ್ರಂ-ವೇದಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಎಷ್ಟೊತ್ತಿಗೆ ? ಎಲ್ಲಿ ಪ್ರಸಾರ?

'ಕಾವೇರಿ ಕನ್ನಡ ಮೀಡಿಯಂ' ಧಾರಾವಾಹಿಯನ್ನು ನಿರ್ಮಿಸುತ್ತಿರುವ ಪ್ರೀತಮ್ ಶೆಟ್ಟಿ 'ನೀನಾದೆ ನಾ' ಸೀರಿಯಲ್‌ ನಿರ್ಮಾಣ ಮಾಡುತ್ತಿದ್ದಾರೆ. 'ಪಿಂಗಾರ ಪ್ರೊಡಕ್ಷನ್' ಸಂಸ್ಥೆ ಮೂಲಕ ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ವಿಕ್ರಂ-ವೇದಾರ ಸೆಣಸಾಟದೊಂದಿಗೆ 'ನೀನಾದೆ ನಾ' ಪ್ರೀತಿಯ ಹೊಸ ಅಧ್ಯಾಯ ಇದೇ ಸೋಮವಾರದಿಂದ (ಸೆಪ್ಟೆಂಬರ್ 8) ರಾತ್ರಿ 9.30ಕ್ಕೆ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದೆ.

More from Filmibeat

English summary
Star Suvarna's Neenadhe Naa serial has entered Kannadigas homes with a new storyline
Read more about: serial tv filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X