'ಮಹಾನಟಿ' ಫಿನಾಲೆಗೆ ಆಯ್ಕೆಯಾಗದ ದಾವಣಗೆರೆ ಟೀಚರ್; ಯಾರೀ ಬಿಂದು ಹೊನ್ನಾಳಿ?

ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿದ್ದ ರಿಯಾಲಿಟಿ ಶೋ 'ಮಹಾನಟಿ' ಕೊನೆಯ ಹಂತ ತಲುಪಿದೆ. ಕರ್ನಾಟಕದಲ್ಲಿರುವ ಮಹಿಳಾ ಪ್ರತಿಭೆಗಳನ್ನು ಗುರುತಿಸುವ ಈ ವಿಶೇಷ ಕಾರ್ಯಕ್ರಮವನ್ನು ಮೆಚ್ಚಿ ಪ್ರೇಕ್ಷಕರು ಹೊಗಳಿ ಅಟ್ಟಕ್ಕೇರಿಸಿದ್ದರು. ಹೀಗಾಗಿ ಟಿಆರ್‌ಪಿಯಲ್ಲೂ ಈ ಶೋ ಮುಂದಿತ್ತು. ಇದೇ ಶೋ ಈಗ ಫಿನಾಲೆಗೆ ಬಂತು ತಲುಪಿದೆ.

ಸ್ಪರ್ಧಿಗಳಂತೆ 'ಮಹಾನಟಿ'ಯ ತೀರ್ಪುಗಾರರು ಕೂಡ ಅಷ್ಟೇ ಗಮನ ಸೆಳೆದಿದ್ದರು. ರಮೇಶ್ ಅರವಿಂದ್, ಪ್ರೇಮಾ, ತರುಣ್ ಸುಧೀರ್, ನಿಶ್ವಿಕಾ ನಾಯ್ಡು ಈ ರಿಯಾಲಿಟಿ ಶೋನ ತೀರ್ಪುಗಾರರಾಗಿದ್ದರು. ಹೀಗಾಗಿ 'ಮಹಾನಟಿ' ಶೋಗೆ ಕರ್ನಾಟಕದಾದ್ಯಂತ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಹೊಸ ಹೊಸ ಪ್ರತಿಭೆಗಳನ್ನು ಗುರುತಿಸುವ 'ಮಹಾನಟಿ' ಶೋ ಪ್ರೇಕ್ಷಕರಿಗೆ ಭರಪೂರ ಮನರಂಜನೆಯನ್ನು ನೀಡಿತ್ತು.

Netizens comes in supporty of Bindu Honnali who is contestant of Mahanati reality show

ಫಿನಾಲೆ ಹಂತದಲ್ಲಿರುವ ಈ 'ಮಹಾನಟಿ' ಶೋಗೆ ಟಾಪ್ ಐದು ಮಂದಿಯನ್ನು ಆಯ್ಕೆ ಮಾಡಲಾಗಿದೆ. ಗಗನ, ಪ್ರಿಯಾಂಕಾ, ಶ್ವೇತಾ ಭಟ್, ಆರಾಧನಾ ಭಟ್ ಹಾಗೂ ಧನ್ಯಶ್ರೀ ಫಿನಾಲೆಗೆ ಆಯ್ಕೆಯಾಗಿದ್ದಾರೆ. ಈ ಬೆನ್ನಲ್ಲೇ ನೆಟ್ಟಿಗರು ಅಸಮಧಾನ ಹೊರಹಾಕುತ್ತಿದ್ದಾರೆ. ಅದಕ್ಕೆ ಕಾರಣ ಮತ್ತೊಬ್ಬ ಸ್ಪರ್ಧಿ ಬಿಂದು ಹೊನ್ನಾಳಿ. ಈ ಸ್ಪರ್ಧಿ ಫಿನಾಲೆಗೆ ಆಯ್ಕೆ ಆಗದೇ ಇದ್ದಿದ್ದಕ್ಕೆ ಜನರು ಬೇಸರಗೊಂಡಿದ್ದಾರೆ.

'ಮಹಾನಟಿ'ಯ ಸ್ಪರ್ಧಿ ಬಿಂದು ಹೊನ್ನಾಳಿ ಗ್ರಾಮೀಣ ಪ್ರತಿಭೆ. ಆರಂಭದಲ್ಲಿ ನಾಲ್ಕು ಮಂದಿ ಜಡ್ಜ್‌ಗಳ ಮನಗೆದ್ದಿದ್ದರು. ಇವರ ಪ್ರತಿಭೆಯನ್ನು ಕಂಡು ರಮೇಶ್ ಅರವಿಂದ್, ಪ್ರೇಮಾ, ತರುಣ್ ಸುಧೀರ್ ಹಾಗೂ ನಿಶ್ಚಿಕಾ ನಾಯ್ಡು ಮೆಚ್ಚುಗೆ ಗಳಿಸಿದ್ದರು. ಸೆಮಿ ಫೈನಲ್‌ವರೆಗೂ ಬಿಂದು ಹೊನ್ನಾಳಿ ಫಿನಾಲೆಗೆ ಪ್ರವೇಶ ಪಡೆಯುತ್ತಾರೆ ಎಂದೇ ನಂಬಿಕೆ ಇಟ್ಟುಕೊಂಡಿದ್ದರು. ಆದರೆ, ಕೊನೆಯ ಹಂತದಲ್ಲಿ ಅವರನ್ನು ಕೈ ಬಿಡಲಾಗಿದೆ.

ಬಿಂದು ಹೊನ್ನಾಳಿ ದಾವಣಗೆರೆ ಮೂಲದವರು. ವೃತ್ತಿಯಲ್ಲಿ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿದ್ದಾರೆ. ಹಾಗಂತ ಇವರು ಕೇವಲ ಶಿಕ್ಷಕಿಯಷ್ಟೇ ಅಲ್ಲ. ಇವರು ಕಲಾವಿದೆಯಾಗಿಯೂ ಗುರುತಿಸಿಕೊಂಡಿದ್ದಾರೆ. ಹಾಗೆಯೇ ಇವರು ದಾವಣಗೆರೆಯಲ್ಲಿ ಎಲ್‌ಐಸಿ ಎಜೆಂಟ್ ಕೂಡ ಆಗಿದ್ದಾರೆ. ಇದೀಗ ಜೀ ಕನ್ನಡದ 'ಮಹಾನಟಿ' ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೇಲೆ ಕಿರುತೆರೆಯಲ್ಲಿ ಜನಪ್ರಿಯತೆ ಹೆಚ್ಚಾಗಿದೆ.

Netizens comes in supporty of Bindu Honnali who is contestant of Mahanati reality show

'ಮಹಾನಟಿ' ಫಿನಾಲೆಗೆ ಇವರನ್ನು ಆಯ್ಕೆ ಮಾಡಲಾಗಿಲ್ಲ. ಈ ಕಾರಣಕ್ಕೆ ಬಿಂದು ಹೊನ್ನಾಳಿಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಈ ಮಟ್ಟಿಗೆ ಚರ್ಚೆಯಾಗುತ್ತಿದೆ. 'ಮಹಾನಟಿ' ಕಾರ್ಯಕ್ರಮದ ಉದ್ದಕ್ಕೂ ಬಿಂದು ಹೊನ್ನಾಳಿ ಪರ್ಫಾಮೆನ್ಸ್ ಅದ್ಭುತವಾಗಿತ್ತು. ಮೂರು ಬಾರಿ ಗೋಲ್ಡನ್ ಬಜಾರ್ ಅನ್ನು ಗಿಟ್ಟಿಸಿಕೊಂಡಿದ್ದರು. ಎಂದಿಗೂ ಡೇಂಜರ್ ಝೋನ್‌ಗೆ ಇವರು ಹೋಗಿರಲಿಲ್ಲ. ಹೀಗಿದ್ದರೂ ಬಿಂದು ಹೊನ್ನಾಳಿಯನ್ನು ಆಯ್ಕೆ ಮಾಡಿಲ್ಲ ಅನ್ನೋದು ಕಿರುತೆರೆ ವೀಕ್ಷಕರ ಬೇಸರಕ್ಕೆ ಕಾರಣ.

ಇಷ್ಟೇ ಅಲ್ಲದೆ ಬಿಂದು ಹೊನ್ನಾಳಿಗೆ ಓಟಿಂಗ್ ಕೂಡ ಹೆಚ್ಚು ಬಂದಿದ್ದು, ಆದರೂ, ಯಾಕೆ ಅವರನ್ನು ಫಿನಾಲೆಗೆ ಆಯ್ಕೆ ಮಾಡಿಲ್ಲ ಅಂತ ಆಕ್ರೋಶ ಹೊರಹಾಕುತ್ತಿದ್ದಾರೆ. ಟಿಆರ್‌ಪಿಗೆ ಬೆಲೆ ಕೊಡುವ ಬದಲು ಪ್ರತಿಭೆಗೆ ಬೆಲೆ ಕೊಡಬೇಕಿತ್ತು ಅಂತ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡಿದ್ದರು. ಇಷ್ಟೇ ಅಲ್ಲದೆ, ಟ್ರೋಲಿಗರು ಬಿಂದು ಹೊನ್ನಾಳಿಯೇ 'ಮಹಾನಟಿ' ಎಂದು ಹೇಳಿದ್ದರು. ಆದರೆ, ಅದೆಲ್ಲವೂ ಈಗ ತಲೆಕೆಳಗಾಗಿದೆ.

More from Filmibeat

English summary
Bindu Honnali out of Mahanati reality show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X