Dr Rajkumar Birth Anniversary: ಅಣ್ಣಾವ್ರ ಹುಟ್ಟುಹಬ್ಬಕ್ಕೆ ಸ್ಟಾರ್‌ ಸುವರ್ಣದ 'ದೃಶ್ಯ ನಮನ'

ಅಣ್ಣಾವ್ರ ಹುಟ್ಟುಹಬ್ಬ ಬಂತು ಅಂದರೆ, ಇಡೀ ರಾಜ್ಯವೇ ಸಂಭ್ರಮಿಸುತ್ತೆ. ಇದೇ ಏಪ್ರಿಲ್ 24ರಂದು ಅಣ್ಣಾವ್ರ 94ನೇ ಜನ್ಮದಿನೋತ್ಸವವನ್ನು ಆಚರಿಸಲು ಅಭಿಮಾನಿಗಳು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈ ದಿನದಂದು ಸಮಾಜಮುಖಿ ಕೆಲಸಗಳಲ್ಲಿ ಅಭಿಮಾನಿಗಳು ಭಾಗಿಯಾಗಲಿದ್ದಾರೆ. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿದ ನೋವಿದ್ದರೂ, ಅಪ್ಪು ನೆನಪಿನಲ್ಲಿಯೇ ಡಾ.ರಾಜ್‌ಕುಮಾರ್ ಬರ್ತ್‌ಡೇ ಆಚರಿಸಲಿದ್ದಾರೆ.

ಅಣ್ಣಾವ್ರ ಹುಟ್ಟುಹಬ್ಬದಂದೇ ಸ್ಟಾರ್ ಸುವರ್ಣ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಡಾ. ರಾಜ್‌ಕುಮಾರ್ ನಮ್ಮೆಲ್ಲರನ್ನೂ ಅಗಲಿ ಒಂದೂವರೆ ದಶಕಗಳೇ ಆಗಿವೆ. ಆದರೂ ಅಣ್ಣಾವ್ರ ಸಿನಿಮಾಗಳು ಇಂದಿಗೂ ಜನಮಾನಸದಲ್ಲಿ ಉಳಿದಿವೆ. ನಟನೆ, ಗಾಯನ ಎರಡರಲ್ಲೂ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದ ಅಣ್ಣಾವ್ರ ಕನ್ನಡಿಗರ ಪಾಲಿಗೆ ವರನಟ. ಈ ಬಾರಿಯ ನಟಸಾರ್ವಭೌಮನ 94ನೇ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು ಸ್ಟಾರ್ ಸುವರ್ಣ ವಿಶೇಷವಾಗಿ ಸಜ್ಜಾಗಿದೆ.

ಡಾ.ರಾಜ್‌ಕುಮಾರ್ ಹುಟ್ಟುಹಬ್ಬದ ಅಂಗವಾಗಿ ಸ್ಟಾರ್ ಸುವರ್ಣ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಒಮದು ವಾರಗಳ ಕಾಲ ನಿರಂತರವಾಗಿ ತಮ್ಮ ಕಾರ್ಯಕ್ರಮಗಳಲ್ಲಿ ಅಣ್ಣಾವ್ರಿಗೆ ವಿಶೇಷ ನಮನ ಸಲ್ಲಿಸಲು 'ಮುತ್ತುರಾಜನಿಗೆ ದೃಶ್ಯ ನಮನ' ಎಂಬ ಕಾರ್ಯಕ್ರಮದ ಮೂಲಕ ರಾಜ್‌ ಅಭಿನಯದ ದೃಶ್ಯಗಳ ಮೆಲುಕು ಹಾಕಲಾಗುತ್ತಿದೆ.

ಅಣ್ಣಾವ್ರ ಹಾಡಿಗೆ ಕಿರುತೆರೆ ನಟರಿಂದ ಡ್ಯಾನ್ಸ್

ರಾಜ್‌ಕುಮಾರ್ ಅವರ ಜನಪ್ರಿಯ ಹಾಡುಗಳಿಗೆ ಸ್ಟಾರ್ ಸುವರ್ಣದ ಧಾರಾವಾಹಿಯ ಕಲಾವಿದರು ಹೆಜ್ಜೆ ಹಾಕಲಿದ್ದಾರೆ. ಏಪ್ರಿಲ್ 22 ರಂದು 'ಮುದ್ದುಮಣಿಗಳು' ಧಾರಾವಾಹಿಯ ಕಲಾವಿದರು 'ಜೀವ ಹೂವಾಗಿದೆ...' ಹಾಡಿಗೆ ಹೆಜ್ಜೆ ಹಾಕಲಿದ್ದಾರೆ. ಈ ಹಾಡಿಗೆ ದೃಷ್ಟಿ ಮತ್ತು ಶಿವು, ಭೂಮಿ ಮತ್ತು ಶ್ರವಣ್ ಜೋಡಿ ರೆಟ್ರೋ ಲುಕ್ ಕೊಟ್ಟು ಡ್ಯಾನ್ಸ್ ಮಾಡಿ ರಂಜಿಸಲಿದ್ದಾರೆ.

On the Occasion Of Dr Rajkumar Birthday Star Suvarna will telecast Drishya Namana

'ಬೆಟ್ಟದ ಹೂ' ಧಾರಾವಾಹಿಯ ಕಲಾವಿದರು ಕೂಡ ಡಾ.ರಾಜ್‌ಕುಮಾರ್ ಹಾಡುಗಳಿಗೆ ಹೆಜ್ಜೆ ಹಾಕಲಿದ್ದಾರೆ. ಏಪ್ರಿಲ್ 25ರಂದು ರಾಹುಲ್, ಹೂವಿ ಮತ್ತು ಮಾಲಿನಿ ಅಣ್ಣಾವ್ರ 'ಚಿನ್ನದ ಮಲ್ಲಿಗೆ ಹೂವೇ...' ಹಾಡಿಗೆ ನೃತ್ಯ ಮಾಡಲಿದ್ದಾರೆ.

On the Occasion Of Dr Rajkumar Birthday Star Suvarna will telecast Drishya Namana

ಏಪ್ರಿಲ್ 26ರಂದು 'ಮರಳಿ ಮನಸಾಗಿದೆ' ಧಾರಾವಾಹಿಯ ನಟರಾದ ವಿಕ್ರಾಂತ್ ಮತ್ತು ಸ್ಪಂದನ ಅಣ್ಣಾವ್ರ ಸಿನಿಮಾಗಳನ್ನು ನೆನಪಿಸಲಿದ್ದಾರೆ. 'ಚಂದಿರ ತಂದ ಹುಣ್ಣಿಮೆ ರಾತ್ರಿ' ಎಂಬ ಎವರ್‌ಗ್ರೀನ್ ರೆಟ್ರೋ ಲುಕ್‌ನಲ್ಲಿ ಡ್ಯಾನ್ಸ್ ಮಾಡಲಿದ್ದಾರೆ

On the Occasion Of Dr Rajkumar Birthday Star Suvarna will telecast Drishya Namana

ಏಪ್ರಿಲ್ 26ರಂದು ಸ್ಟಾರ್ ಸುವರ್ಣದ ಫೇಮಸ್ ಧಾರಾವಾಹಿ 'ಜೇನುಗೂಡು' ಪಾತ್ರಧಾರಿಗಳು ಶಶಾಂಕ್ ಮತ್ತು ದಿಯಾ ಪಾತ್ರಕ್ಕೆ ತಕ್ಕಂತೆ ಹಾಡನ್ನು ಆಯ್ಕೆ ಮಾಡಿಕೊಂಡಿದ್ದಾರೆ. 'ನನ್ನ ನೀನು ಗೆಲ್ಲಲ್ಲಾರೆ ' ಎನ್ನುತ್ತಾ ಪೈಪೋಟಿಗೆ ಇಳಿದಿದ್ದಾರೆ.

On the Occasion Of Dr Rajkumar Birthday Star Suvarna will telecast Drishya Namana

ಏಪ್ರಿಲ್ 27ಕ್ಕೆ ಸ್ಟಾರ್ ಸುವರ್ಣದ 'ಮನಸೆಲ್ಲಾ ನೀನೆ' ಧಾರಾವಾಹಿಯ ಕಲಾವಿದರಾದ ಆದಿತ್ಯ ಮತ್ತು ರಾಗ 'ಆ ರತಿಯೇ ಧರೆಗಿಳಿದಂತೆ' ಸಾಂಗ್‌ಗೆ ಹೆಜ್ಜೆ ಹಾಕಲಿದ್ದಾರೆ. ಏಪ್ರಿಲ್28ರಂದು 'ಸಂಫರ್ಷ' ಧಾರಾವಾಹಿಯ ರಾಜ , ಇಂದಿರಾ 'ಓ ನಲ್ಲೇ ಸವಿ ನುಡಿಯ ಹೇಳಿ' ಎಂದು ಹಾಡಲಿದ್ದಾರೆ.

More from Filmibeat

English summary
On the Occasion Of Dr Rajkumar Birthday Star Suvarna will telecast Drishya Namana. Know more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X