ಉಡುಪಿಯಲ್ಲಿ 'ಪುಟ್ಟಕ್ಕನ ಮಕ್ಕಳು' ಖ್ಯಾತಿಯ ನಟಿ ಸೌಮ್ಯಾ ಮೆಂಡನ್ ನಿಶ್ಚಿತಾರ್ಥ; ಕಿರುತೆರೆ ನಟನ ಜೊತೆ ಶೀಘ್ರದಲ್ಲೇ ಸಪ್ತಪದಿ

'ಪಾರು' ಹಾಗೂ ಪುಟ್ಟಕ್ಕನ ಮಕ್ಕಳು' ಧಾರಾವಾಹಿಯನ್ನು ನಿರಂತರವಾಗಿ ವೀಕ್ಷಣೆ ಮಾಡಿದವರಿಗೆ ಈ ನಟಯ ಮುಖ ಪರಿಚಯವಿದ್ದೇ ಇರುತ್ತೆ. ಉಮಾಶ್ರೀ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ವಸು ಪಾತ್ರದಲ್ಲಿ ನಟಿಸುತ್ತಿರುವ ಈ ನಟಿಯರ ಹೆಸರು ಸೌಮ್ಯಾ ಮೆಂಡನ್. ಇವರ ಇನ್ನೊಂದು ಹೆಸರು ಸಿರಿ ಆರ್ ಮೆಂಡನ್.

'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಮೂಲಕ ವೀಕ್ಷಕರ ಗಮನ ಸೆಳೆದಿರುವ ಸೌಮ್ಯಾ ಮೆಂಡನ್ ತಮ್ಮ ಅಭಿಮಾನಿಗಳು ಖುಷಿ ಸುದ್ದಿ ಕೊಟ್ಟಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ನಿಶ್ವಿತಾರ್ಥ ಮಾಡಿಕೊಂಡಿರುವ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಎಂಗೇಜ್‌ಮೆಂಟ್‌ ಪೋಟೊಗಳನ್ನು ಹಂಚಿಕೊಳ್ಳುತ್ತಿದ್ದಂತೆ ಸೌಮ್ಯಾ ಮೆಂಡನ್ ಭಾವಿ ಪತಿಯ ಬಗ್ಗೆ ನೆಟ್ಟಿಗರು ಮಾಹಿತಿ ಕಲೆ ಹಾಕುವುದರಲ್ಲಿ ಬ್ಯುಸಿಯಾಗಿದ್ದಾರೆ.

Paaru and Puttakkana Makkalu fame actress Sowmya Mendan engagement with Suved Das in Udupi

ನಟಿ ಸೌಮ್ಯಾ ಮೆಂಡನ್ ಮೂಲತ: ಉಡುಪಿಯವರು. ಹೀಗಾಗಿ ತಮ್ಮ ಊರಿನಲ್ಲಿಯೇ ಸಂಬಂಧಿಕರ ಸಮ್ಮುಖದಲ್ಲಿ ಸುದೇವ್ ದಾಸ್ ಎಂಬುವವರೊಂದಿಗೆ ನಿಶ್ವಿತಾರ್ಥ ಮಾಡಿಕೊಂಡಿದ್ದಾರೆ. ಹಾಗಿದ್ದರೆ, ನಟಿ ಸೌಮ್ಯಾ ಮೆಂಡನ್ ವಿವಾಹವಾಗಲಿರುವ ಭಾವಿ ಪತಿಯ ಹಿನ್ನೆಲೆಯೇನು? ಈ ಜೋಡಿ ಮದುವೆ ಯಾವಾಗ ನಡೆಯುತ್ತೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

ಸೌಮ್ಯಾ ಮೆಂಡನ್ ಈಗಾಗಲೇ ಕಿರುತೆರೆಯಲ್ಲಿ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 'ಪುಟ್ಟಕ್ಕನ ಮಕ್ಕಳು','ಗೀತಾ', 'ಕಾವೇರಿ ಕನ್ನಡ ಮೀಡಿಯಂ', 'ಪಾರು' ಅಂತಹ ಸೂಪರ್ ಹಿಟ್ ಧಾರಾವಾಹಿಯಲ್ಲಿ ನಟಿಸಿ ಕಿರುತೆರೆಯಲ್ಲಿ ಜನಪ್ರಿಯರಾಗಿದ್ದಾರೆ. ಹಾಗಂತ ಕೇವಲ ಧಾರಾವಾಹಿ ಅಷ್ಟೇ ಅಲ್ಲ, ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಹಾಗೇ ಉಡುಪಿಯವರಾಗಿದ್ದರಿಂದ ತುಳು ಚಿತ್ರರಂಗದಲ್ಲಿಯೂ ಇವರು ಸಕ್ರಿಯರಾಗಿದ್ದಾರೆ.

Paaru and Puttakkana Makkalu fame actress Sowmya Mendan engagement with Suved Das in Udupi

ಇನ್ನು ಸೌಮ್ಯಾ ಮೆಂಡನ್ ಸಪ್ತಪದಿ ತುಳಿಯುವುದಕ್ಕೆ ರೆಡಿಯಾಗಿರುವ ಸುದೇವ್ ದಾಸ್ ಕೂಡ ಉದಯೋನ್ಮುಖ ನಟ. ಕನ್ನಡ ಸಿನಿಮಾ ಹಾಗೂ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಉದಯ ಟಿವಿಯಲ್ಲಿ ಪ್ರಸಾರ ಆಗಿದ್ದ 'ಕಸ್ತೂರಿ ನಿವಾಸ' ಧಾರಾವಾಹಿಯಲ್ಲಿ ಸುದೇವ್ ದಾಸ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಹೀಗಾಗಿ ಸೌಮ್ಯಾ ಮೆಂಡನ್ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್.

ಸೌಮ್ಯಾ ಮೆಂಡನ್‌ ಹಾಗೂ ಸುವೇದ್‌ ದಾಸ್‌ ಇಬ್ಬರೂ ನಾಲ್ಕು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಇಬ್ಬರೂ ಒಂದೇ ಫೀಲ್ಡ್‌ನಲ್ಲಿ ಇರುವುದರಿಂದ ಬೆಂಗಳೂರಿನಲ್ಲಿ ಇಬ್ಬರ ಪರಿಚಯವಾಗಿ, ಅದು ಪ್ರೀತಿಗೆ ತಿರುಗಿತ್ತು. ಬಳಿಕ ಎರಡೂ ಕುಟುಂಬದವರು ಈ ಮದುವೆ ಒಪ್ಪಿಗೆ ನೀಡಿದ್ದರು. ಹೀಗಾಗಿ ಈಗ ಅದೇ ಕುಟುಂಬಸ್ಥರ ಸಮ್ಮುಖದಲ್ಲಿ ಸೌಮ್ಯಾ ಹಾಗೂ ಸುದೇವ್ ಇಬ್ಬರೂ ಉಂಗುರ ಬದಲಾಯಿಸಿಕೊಳ್ಳುವ ಮೂಲಕ ನಿಶ್ವಿತಾರ್ಥ ಮಾಡಿಕೊಂಡಿದ್ದಾರೆ. ಈ ಜೋಡಿಗೆ ಕಿರುತೆರೆ ವೀಕ್ಷಕರು ಶುಭ ಕೋರುತ್ತಿದ್ದಾರೆ.

ಈ ಜೋಡಿ ಎರಡು ವರ್ಷಗಳ ಹಿಂದೆನೇ ತಮ್ಮ ಪ್ರೀತಿಯ ಬಗ್ಗೆ ಪ್ರಸ್ತಾಪ ಮಾಡಿತ್ತು. ಈಗ ಕುಟುಂಬಸ್ಥರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ. ಇವರ ವಿವಾಹ ಇದೇ ವರ್ಷ ಡಿಸೆಂಬರ್‌ನಲ್ಲಿ ನಡೆಯಲಿದೆ ಎಂದು ವರದಿಯಾಗಿದೆ. ಈ ಜೋಡಿಯ ನಿಶ್ವಿತಾರ್ಥದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ಮೂಲಕ ಮತ್ತೊಬ್ಬ ಕಿರುತೆರೆ ನಟಿ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ.

More from Filmibeat

English summary
Paaru and Puttakkana Makkalu fame actress Sowmya Mendan engagement with Suved Das in Udupi;
Read more about: actress serial engagement
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X