»   » 3ನೇ ಬಾರಿಗೂ 'ಸೂಪರ್ ಮಿನಿಟ್' ನಿರ್ಮಾಣ ಹೊಣೆ ಪಿಕ್ಸೆಲ್'ಗೆ

3ನೇ ಬಾರಿಗೂ 'ಸೂಪರ್ ಮಿನಿಟ್' ನಿರ್ಮಾಣ ಹೊಣೆ ಪಿಕ್ಸೆಲ್'ಗೆ

Posted By:
Subscribe to Filmibeat Kannada

ಫೆಬ್ರವರಿ 18 ರಿಂದ 'ಸೂಪರ್ ಮಿನಿಟ್' ಮೂರನೇ ಆವೃತ್ತಿ ಆರಂಭವಾಗಿರುವುದು ನಿಮಗೆಲ್ಲಾ ಗೊತ್ತೇ ಇದೆ. ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಮಿನಿಟ್ ನಲ್ಲಿ ಆಟ ಆಡುವ ಈ ಸೂಪರ್ ಮಿನಿಟ್ ಮೂರನೇ ಆವೃತ್ತಿ ನಡೆಯುತ್ತಿರುವುದು ಯಾರಿಗಾಗಿ ಅಂತಲೂ ನಾವು ಹೇಳಿದ್ದೇವೆ.['ಸೂಪರ್ ಮಿನಿಟ್' ಚಾಂಪಿಯನ್ ಶಿಪ್ ನಡೆಯುತ್ತಿರುವುದು ಈ ಪುಟಾಣಿಗಾಗಿ.!]

ಅಂದಹಾಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಸೂಪರ್ ಮಿನಿಟ್' ಕಾರ್ಯಕ್ರಮದ ಬಗ್ಗೆ ಲೇಟೆಸ್ಟ್ ಸುದ್ದಿ ಅಂದ್ರೆ, ಈ ಕಾರ್ಯಕ್ರಮದ ಮೂರನೇ ಆವೃತ್ತಿಯನ್ನು ನಿರ್ಮಿಸುವ ಜವಾಬ್ದಾರಿ ಪಿಕ್ಸೆಲ್ ಪಿಕ್ಚರ್ಸ್ ನಿರ್ಮಾಣ ಸಂಸ್ಥೆಗೆ ದೊರೆತಿದೆಯಂತೆ. ಇದರ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ ಓದಿ..

ಪಿಕ್ಸೆಲ್ ಪಿಕ್ಚರ್ಸ್ ನಿರ್ಮಾಣ ಸಂಸ್ಥೆ

ಪಿಕ್ಸೆಲ್ ಪಿಕ್ಚರ್ಸ್ ಸಂಸ್ಥೆಯು 2013 ರಲ್ಲಿ ಮನರಂಜನಾ ಕ್ಷೇತ್ರಕ್ಕೆ ಪ್ರೊಡಕ್ಷನ್ ಹೌಸ್ ಆಗಿ ಧಾಪುಗಾಲಿಟ್ಟಿತು. ಈ ಸಂಸ್ಥೆಯು ಅಂತರಾಷ್ಟ್ರೀಯ ಮಟ್ಟದ ಆಟಗಳ ಆಧಾರಿತ ರಿಯಾಲಿಟಿ ಶೋಗಳನ್ನು ಕರ್ನಾಟಕದ ಪ್ರಾದೇಶಿಕತೆಗೆ ತಕ್ಕಂತೆ ಪ್ರೇಕ್ಷಕರಿಗೆ ಉಣಬಡಿಸುತ್ತಿದೆ.

'ಸೂಪರ್ ಮಿನಿಟ್' 3 ನೇ ಆವೃತ್ತಿ

'ಸೂಪರ್ ಮಿನಿಟ್' ಸೀಸನ್ 2 ಜನಪ್ರಿಯತೆಯ ನಂತರ, ಪಿಕ್ಸೆಲ್ ಪಿಕ್ಚರ್ಸ್ ನಿರ್ಮಾಣ ಸಂಸ್ಥೆಯು 'ಸೂಪರ್ ಮಿನಿಟ್' 3 ನೇ ಆವೃತ್ತಿಯನ್ನು ನಿರ್ಮಿಸಲು ಜನಾದೇಶ ದೊರತಿದೆಯಂತೆ. ಸಾಮಾಜಿಕ ಕಾಳಜಿಯ ಉದ್ದೇಶದಿಂದ ಕಳೆದ ಬಾರಿ ಚಾಂಪಿಯನ್ಸ್ ಫಾರ್ ಮ್ಯಾಟ್ ನಲ್ಲಿ ಕಾರ್ಯಕ್ರಮ ನಿರ್ಮಾಣ ಮಾಡಿದ್ದ ಪಿಕ್ಸೆಲ್ ಪಿಕ್ಚರ್ಸ್, ಈ ಬಾರಿಯೂ ಸಾಮಾಜಿಕ ಕಾಳಜಿಯಿಂದಲೇ ಕಾರ್ಯಕ್ರಮ ಮೂಡಿಬರಲಿದೆ ಎಂದು ಹೇಳಿದೆ. ಅಲ್ಲದೇ ಮೂರನೇ ಬಾರಿಯು 'ಸೂಪರ್ ಮಿನಿಟ್' ಕಾರ್ಯಕ್ರಮ ನಿರ್ಮಿಸಲು ಅವಕಾಶ ಸಿಕ್ಕಿರುವುದಕ್ಕೆ ಸಂಸ್ಥೆಯ ಸಿಇಒ ಪ್ರಶಾಂತಿ ಮಲ್ಲಿಶೆಟ್ಟಿ ಸಂತೋಷ ವ್ಯಕ್ತಪಡಿಸಿದ್ದಾರೆ.

ಪಿಕ್ಸೆಲ್ ಪಿಕ್ಚರ್ಸ್ ನಿರ್ಮಾಣದ ಕಾರ್ಯಕ್ರಮಗಳು

ಪಿಕ್ಸೆಲ್ ಪಿಕ್ಚರ್ಸ್ ಪ್ರೊಡಕ್ಷನ್ ಹೌಸ್ 'ಸೂಪರ್ ಮಿನಿಟ್' ಮತ್ತು 'ಡ್ಯಾನ್ಸಿಂಗ್ ಸ್ಟಾರ್' ಕಾರ್ಯಕ್ರಮಗಳನ್ನು ಕಲರ್ಸ್ ಕನ್ನಡ ವಾಹಿನಿಗೆ ಮತ್ತು 'ಮಿನಿಟ್ ಟು ವಿನ್ ಇಟ್' ಕಾರ್ಯಕ್ರಮವನ್ನು ಮಲಯಾಳಂ ಚಾನೆಲ್ ಗಾಗಿ ನಿರ್ಮಾಣ ಮಾಡುತ್ತಿದೆ.

'ಸೂಪರ್ ಮಿನಿಟ್' ಕಾರ್ಯಕ್ರಮದ ಬಗ್ಗೆ..

ಗೋಲ್ಡನ್ ಸ್ಟಾರ್ ಗಣೇಶ್ ಅವರು ನಡೆಸಿಕೊಡುವ 'ಸೂಪರ್ ಮಿನಿಟ್' ಕಾರ್ಯಕ್ರಮವು ಶೈನ್ ಇಂಟರ್ ನ್ಯಾಷನಲ್ ಸಂಸ್ಥೆಯ 'ಮಿನಿಟ್ ಟು ವಿನ್ ಇಟ್' ಎಂಬ ಕಾರ್ಯಕ್ರಮದ ಸ್ಪೂರ್ತಿಯಾಗಿದೆ. 60 ಸೆಕೆಂಡ್ ಗಳಲ್ಲಿ ನಡೆಯುವ ಆಟಗಳಲ್ಲಿ, ಸ್ಪರ್ಧಿಗಳು ಮನೆಬಳಕೆಯ ವಸ್ತುಗಳನ್ನು ಬಳಸಿ ವಿಜೇತರಾಗಲು ಸೆಣಸಾಡುವುದು ಸ್ಪೆಷಲ್ ಆಗಿರುತ್ತದೆ.

'ಸೂಪರ್ ಮಿನಿಟ್' ಚಾಂಪಿಯನ್ ಶಿಪ್ ಈ ಪುಟಾಣಿಗಾಗಿ

ಸುರೇಶ್ ಮತ್ತು ರೇಖಾ ಎಂಬ ಮಧ್ಯಮ ವರ್ಗದ ದಂಪತಿಯ ಐದುವರೆ ವರ್ಷದ ಮಗು ಪೀಯುಷ್ ಲುಕೇಮಿಯಾ(ಬ್ಲಡ್ ಕ್ಯಾನ್ಸರ್) ಕಾಯಿಲೆಯಿಂದ ಬಳಲುತ್ತಿದ್ದು, 'ಸೂಪರ್ ಮಿಟ್' 3 ಆವೃತ್ತಿಯ ಚಾಂಪಿಯನ್ ಶಿಪ್ ಪೀಯುಷ್ ವೆಚ್ಚಕ್ಕಾಗಿ ನಡೆಯುತ್ತಿದೆ. ಚಾಂಪಿಯನ್ ಶಿಪ್ ನಲ್ಲಿ ಗೆಲುವು ಸಾಧಿಸುವ ತಂಡದ ಬಹುಮಾನ ಹಣ ಈ ಮಗುವಿನ ಚಿಕಿತ್ಸೆ ವೆಚ್ಚಕ್ಕೆ ನೀಡಲಾಗುತ್ತಿದೆ.

English summary
Pixel pictures, one of the leading media production house in the Kannada entertainment industry has been awarded the mandate to produce Super Minute for the 3rd season

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada