»   » 'ಸೂಪರ್ ಮಿನಿಟ್' ಚಾಂಪಿಯನ್ ಶಿಪ್ ನಡೆಯುತ್ತಿರುವುದು ಈ ಪುಟಾಣಿಗಾಗಿ.!

'ಸೂಪರ್ ಮಿನಿಟ್' ಚಾಂಪಿಯನ್ ಶಿಪ್ ನಡೆಯುತ್ತಿರುವುದು ಈ ಪುಟಾಣಿಗಾಗಿ.!

Posted By:
Subscribe to Filmibeat Kannada
ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಟೈಮ್ ಜೊತೆ ಆಟವಾಡುವ ಟೈಮ್' ಶುರುವಾಗಿದೆ. ಮಿನಿಟ್ ನಲ್ಲಿ ಆಟ ಆಡುವ 'ಸೂಪರ್ ಮಿನಿಟ್' ಮೂರನೇ ಆವೃತ್ತಿಗೆ ಚಾಲನೆ ಸಿಕ್ಕಿದೆ. ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ 'ಸೂಪರ್ ಮಿನಿಟ್-3' ಪ್ರಸಾರ ಆಗಲಿದೆ.

ಅಂದ್ಹಾಗೆ, ಈ ಬಾರಿ 'ಸೂಪರ್ ಮಿನಿಟ್' ನಲ್ಲಿ ಕಲರ್ಸ್ ಕುಟುಂಬದ 16 ತಂಡಗಳು 'ಚಾಂಪಿಯನ್ ಶಿಪ್'ಗಾಗಿ ಸೆಣಸಾಡಲಿದೆ. ಅಸಲಿಗೆ, ಈ ಚಾಂಪಿಯನ್ ಶಿಪ್ ನಡೆಯುತ್ತಿರುವುದು ಓರ್ವ ಪುಟ್ಟ ಕಂದಮ್ಮನಿಗಾಗಿ.

ಯಾರು ಆ ಪುಟಾಣಿ.?

ಲುಕೇಮಿಯಾ (ಬ್ಲಡ್ ಕ್ಯಾನ್ಸರ್) ಕಾಯಿಲೆಯಿಂದ ಬಳಲುತ್ತಿರುವ ಮಧ್ಯಮ ವರ್ಗದ ಸುರೇಶ್-ರೇಖಾ ದಂಪತಿಯ ಐದುವರೆ ವರ್ಷದ ಕಂದಮ್ಮ ಪೀಯುಷ್ ಚಿಕಿತ್ಸೆ ವೆಚ್ಚಕ್ಕಾಗಿ ಈ ಬಾರಿಯ 'ಸೂಪರ್ ಮಿನಿಟ್-3' ಚಾಂಪಿಯನ್ ಶಿಪ್ ನಡೆಯಲಿದೆ. ಚಾಂಪಿಯನ್ ಶಿಪ್ ನಲ್ಲಿ ಗೆಲುವು ಸಾಧಿಸುವ ತಂಡದ ಬಹುಮಾನ ಹಣ ಪೀಯುಷ್ ಚಿಕಿತ್ಸೆ ವೆಚ್ಚಕ್ಕೆ ನೀಡಲಾಗುವುದು. ['ಬಿಗ್ ಬಾಸ್' ಸ್ಪರ್ಧಿಗಳ ಎದುರು ಈಟಿವಿ ನ್ಯೂಸ್ ಆಂಕರ್ಸ್ ಚಾಲೆಂಜ್.!]

ಕಲರ್ಸ್ ಕನ್ನಡ ಆಶಯ

ಜನರನ್ನು ರಂಜಿಸುವ ಕಾರ್ಯಕ್ರಮ 'ಸೂಪರ್ ಮಿನಿಟ್'. ರಂಜನೆ ಜೊತೆಗೆ ಅವಶ್ಯಕತೆ ಇರುವವರಿಗೆ ಸಹಾಯ ಮಾಡುವುದು ಕಲರ್ಸ್ ಕನ್ನಡ ವಾಹಿನಿ ಆಶಯ. ಹೀಗಾಗಿ ಈ ಬಾರಿ 'ಸೂಪರ್ ಮಿನಿಟ್' ಮೂಲಕ ಪೀಯುಷ್ ಕುಟುಂಬಕ್ಕೆ ಆರ್ಥಿಕ ನೆರವು ನೀಡಲು ಕಲರ್ಸ್ ವಾಹಿನಿ ಮುಂದಾಗಿದೆ.['ಮಿನಿಟ್' ಆಟ ಶುರು ಆಗೋಕೆ ಇನ್ನು ಮೂರೇ ದಿನ ಬಾಕಿ.!]

ಕಳೆದ ಬಾರಿ ಅಮೂಲ್ಯ ಗೆ ಸಹಾಯ

ಕಳೆದ ಬಾರಿ 'ಸೂಪರ್ ಮಿನಿಟ್' ಮೂಲಕ ಕಲರ್ಸ್ ಕನ್ನಡ ವಾಹಿನಿ ಪುಟ್ಟ ಹುಡುಗಿ ಅಮೂಲ್ಯಗೆ ಹದಿನಾಲ್ಕು ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಿದ್ದರು.

ಹದಿನಾರು ತಂಡಗಳು

ಒಂದೊಳ್ಳೆ ಆಶಯದೊಂದಿಗೆ ಶುರು ಆಗಿರುವ 'ಸೂಪರ್ ಮಿನಿಟ್-3' ಕಾರ್ಯಕ್ರಮದಲ್ಲಿ ಚಾಂಪಿಯನ್ ಶಿಪ್ ಗಾಗಿ ಒಟ್ಟು 16 ತಂಡಗಳು ಸೆಣಸಾಡಲಿವೆ. ಚಾಂಪಿಯನ್ ಶಿಪ್ ಗೆಲ್ಲುವ ತಂಡದ ಬಹುಮಾನ ಹಣ ಪೀಯುಷ್ ಕುಟುಂಬಕ್ಕೆ ಸೇರಲಿದೆ.

English summary
'Super Minute-3' Championship is conducted mainly to give Financial Assistance for 5 1/2 year old Piyush, who is suffering from Leukemia.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada